Jothe Jotheyali: ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ರಾಜನಂದಿನಿಗೆ ಸುಳಿವು ಏನು?
'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಈಗ ಕಳೆದೊಂದು ವಾರದಿಂದ ರಾಜನಂದಿನಿ ಹಾಗೂ ಸುಭಾಷ್ ಪಾಟೀಲ್ ಕಥೆ ಮೂಡಿ ಬರುತ್ತಿದೆ. ನಡುನಡುವೆ ಅನು ಸಿರಿಮನೆ ಹಾಗೂ ಆರ್ಯವರ್ಧನ್ ಕಥೆಯನ್ನೂ ಸೀರಿಯಲ್ ತಂಡ ಮುಂದುವರಿಸಿದೆ. 'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಹೀರೊನೇ ವಿಲನ್. ಆರ್ಯವರ್ಧನ್ ಮೋಸ ಮಾಡಿ ವರ್ಧನ್ ಗ್ರೂಪ್ಸ್‌ನ ಆಡಳಿತವನ್ನು ನಡೆಸುತ್ತಿರುತ್ತಾನೆ.
ಆದರೆ ಆರ್ಯವರ್ಧನ್ ಮಾಡುತ್ತಿರುವ ಮೋಸದ ಬಗ್ಗೆ ಜಲಂಧರ್ ಹಾಗೂ ಝೇಂಡೇ ಇವರಿಬ್ಬರಿಗೆ ಬಿಟ್ಟರೆ ಮತ್ತೆ ಇನ್ಯಾರಿಗೂ ಗೊತ್ತಿರುವುದಿಲ್ಲ. ಆದರೆ ಆರ್ಯವರ್ಧನ್ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವ ಅನು ಸಿರಿಮನೆಗೆ ಈಗೀಗ ಎಲ್ಲಾ ಸತ್ಯಗಳೂ ಗೊತ್ತಾಗುತ್ತಿವೆ. ಜಲಂಧರ್‌ನನ್ನು ಭೇಟಿ ಮಾಡಿದ ಅನು ಸಿರಿಮನೆ ಕೆಲ ಕಟು ಸತ್ಯಗಳನ್ನು ತಿಳಿಸಿದ್ದಾಳೆ. ಆದರೆ ಆರ್ಯವರ್ಧನ್ ಹೇಗೆ ಮೋಸ ಮಾಡಿ ಆ ಸ್ಥಾನಕ್ಕೆ ಬಂದ ಅನ್ನೋದು ಮಾತ್ರ ಗೊತ್ತಿಲ್ಲ.
ಇದರ ಜೊತೆಗೆ ಸುಭಾಷ್ ಪಾಟೀಲ್ ಹೇಗೆ ಆರ್ಯವರ್ಧನ್ ಆದ ಅನ್ನೋ ಪ್ರಶ್ನೆ ಕೂಡ ಅನು ಸಿರಿಮನೆಯನ್ನು ಕಾಡುತ್ತಿದೆ. ಇದರ ಮಧ್ಯೆ ಆರ್ಯವರ್ಧನ್ ಅನುಳನ್ನು ಸೀದಾ ತನ್ನ ಸೀಕ್ರೆಟ್ ರೂಮಿಗೆ ಕರೆದುಕೊಂಡು ಹೋಗಿದ್ದ. ಆಗಿನಿಂದ ಅನುಗೆ ತನ್ನಲ್ಲಿ ಏನಾಗುತ್ತಿದೆ ಅನ್ನೋದೇ ಗೊತ್ತಾಗುತ್ತಿಲ್ಲ. ಆದರೆ, ಅನು ರಾಜನಂದಿನಿಯ ಸ್ವರೂಪ ಎಂದು ರಾಜನಂದಿನಿ ಹೇಳಿದ್ದಾಳೆ. ಇದೇ ಗೊಂದಲದಲ್ಲಿ ಅನು ಸಿರಿಮನೆ ಅಮ್ಮನ ಮನೆಗೆ ಹೋಗಿದ್ದಾಳೆ.

ಸುಭಾಷ್ ಖತರ್ನಾಕ್ ಐಡಿಯಾ ಏನು?
ಇತ್ತ ರಾಜನಂದಿನಿಯನ್ನು ಆಕಸ್ಮಿಕವಾಗಿ ಸುಭಾಷ್ ಪಾಟೀಲ್ ಭೇಟಿ ಮಾಡಿದ್ದಾಳೆ. ಈಗ ಸುಭಾಷ್ ಪಾಟೀಲ್ ರಾಜನಂದಿನಿಗೆ ಕಾಳು ಹಾಕುತ್ತಿದ್ದು, ಇಂಪ್ರೆಸ್ ಮಾಡಲು ಕತರ್ನಾಕ್ ಐಡಿಯಾ ಮಾಡಿದ್ದಾನೆ. ಜಲಂಧರ್ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡಿರುವ ಸುಭಾಷ್ ಪಾಟೀಲ್ ಯಶೋದಾ ಪ್ರೈವೇಟ್ ಲಿಮಿಟೆಡ್ ಫೈಲ್‌ನಲ್ಲಿ ಜಲಂಧರ್ ಸಹಿಯನ್ನು ಫೋರ್ಜರಿ ಮಾಡಿದ್ದಾನೆ. ವರ್ಧನ್ ಗ್ರೂಪ್ಸ್ ಜೊತೆ ಜೆ ಕಂಪನಿ ಈಗಾಗಲೇ ಟೈ ಅಪ್ ಮಾಡಿಕೊಂಡಿದೆ. ಈ ವಿಚಾರ ಗೊತ್ತಿರುವ ಸುಭಾಷ್ ಪಾಟೀಲ್ ವೇಸ್ಟ್ ಫೈಲ್‌ನಲ್ಲಿದ್ದ ಯಶೋದಾ ಕಂಪನಿಯ ಹಳೆಯ ಒಪ್ಪಂದದ ಪೇಪರ್ಸ್‌ಗಳಿಗೆ ಸಹಿ ಹಾಕಿದ್ದಾನೆ. ಈ ವಿಚಾರನ್ನು ರಾಜನಂದಿನಿ ಕರೆ ಮಾಡಿ ಭೇಟಿ ಮಾಡುವಂತೆ ಸೂಚಿಸಿದ್ದಾನೆ.

ರಾಜನಂದಿನಿಗೆ ಸುಭಾಷ್ ಪಾಟೀಲ್ ಕರೆ
ಸುಭಾಷ್ ಪಾಟೀಲ್ ಮಾತನ್ನು ನಂಬಿ ಬಂದ ರಾಜನಂದಿನಿ ವಿಚಾರ ಏನು ಎಂದು ಕೇಳಿದರೆ, ಸುಭಾಷ್ ಪಾಟೀಲ್ ಟೀ ಕುಡಿಯೋಣ ಅಂತ ಕೂರಿಸಿದ್ದಾನೆ. ಆದರೆ ಸುಭಾಷ್ ಪಾಟೀಲ್‌ನ ಈ ನಡವಳಿಕೆಯನ್ನು ಕಂಡು ರಾಜನಂದಿನಿ ಗೊಂದಲಗೊಂಡಿದ್ದಾಳೆ. ಆಗ ಸುಭಾಷ್ ಪಾಟೀಲ್ ಯಶೋದಾ ಕಂಪನಿ ಜೊತೆಯೂ ಜಲಂಧರ್ ಟೈ ಅಪ್ ಮಾಡಿಕೊಂಡಿದ್ದಾರೆ ಎಂದು ಹೇಳುತ್ತಾನೆ. ಈ ಮಾತು ಕೇಳಿ ಶಾಕ್ ಆದ ರಾಜನಂದಿನಿ, ಮನೆಗೆ ಬಂದು ಅಪ್ಪನ ಬಳಿ ಎಲ್ಲವನ್ನೂ ಹೇಳಿಕೊಂಡಿದ್ದಾಳೆ.

ಸುಭಾಷ್ ಪಾಟೀಲ್ ಕತೆ ಮುಂದೇನಾಗುತ್ತೆ..?
ರಾಜನಂದಿನಿ ಮಾತನ್ನು ನಂಬದ ಅವರ ತಂದೆ ಗೊಂದಲಕ್ಕೊಳಗಾಗಿದ್ದಾರೆ. ಇದನ್ನೆಲ್ಲಾ ಹೇಳಿದ್ದು ಯಾರು ಎಂದು ರಾಜನಂದಿನಿಯನ್ನು ಕೇಳಿದಾಗ ಸುಭಾಷ್ ಪಾಟೀಲ್ ಹೆಸರು ಹೇಳಿದ್ದಾಳೆ. ಅಲ್ಲಿಗೆ ಸೀರಿಯಲ್ ನಿಂತಿದ್ದು, ಇಂದು ಏನಾಗುತ್ತೆ ಎಂದು ಕಾದು ನೋಡಬೇಕಿದೆ. ಸುಭಾಷ್ ಪಾಟೀಲ್ ಮಾಡಿದ ಮೋಸದ ಬಗ್ಗೆ ರಾಜನಂದಿನಿಗೆ ಗೊತ್ತಾಗುತ್ತಾ..? ಅಕಸ್ಮಾತ್ ಸುಭಾಷ್ ಪಾಟೀಲ್ ಖತರ್ನಾಕ್ ಕೆಲಸ ರಾಜನಂದಿನಿಗೆ ಗೊತ್ತಾದರೆ ಏನಾಗುತ್ತೆ? ಎಂದು ಪ್ರೇಕ್ಷಕರು ಕುತೂಹಲಗೊಂಡಿದ್ದಾರೆ.

ಅನುಗೆ ಸತ್ಯದ ಅರಿವು ಅಗೋದು ಹೇಗೆ?
ಆದರೆ ಇದೆಲ್ಲದರ ನಡುವೆ ಅನುಗೆ ಸತ್ಯದ ಅರಿವಾಗುವ ಸೂಚನೆ ಕೂಡ ಇದೆ. ಆದರೆ ಅನುಗೆ ಯಾವುದೇ ವಿಚಾರದ ಬಗ್ಗೆ ಸ್ಪಷ್ಟ ಚಿತ್ರಣ ಸಿಗುತ್ತಾ ಇಲ್ಲ. ಗೊಂದಲದಲ್ಲೇ ಅನು ಸತ್ಯದ ಹಿಂದೆ ಬಿದ್ದಿದ್ದಾಳೆ. ಒಂದು ವೇಳೆ ಅನುಗೆ ಎಲ್ಲಾ ಸತ್ಯ ಗೊತ್ತಾದರೆ ಮುಂದೇನು ಮಾಡುತ್ತಾಳೆ ಎನ್ನುವುದೇ ಸದ್ಯದ ಕುತೂಹಲ.


Click it and Unblock the Notifications











