Jothe Jotheyali: ರಾಜ ನಂದಿನಿ ಮದುಗೆ ಅಪ್ಪನೇ ಅಡ್ಡಿ, ಸುಭಾಷ್ ಪಾಟೀಲ್ ಮಾಡೋ ಪ್ಲ್ಯಾನ್ ಏನು?
ಪ್ರೀತಿಯ ಬಲೆಯಲ್ಲಿ ಬಿದ್ದಿರುವ ರಾಜನಂದಿನಿ ಈಗ ಮತ್ತೆ ಗೊಂದಲದಲ್ಲಿದ್ದಾಳೆ. ಸುಭಾಷ್ ಪಾಟೀಲ್ ಮಾತು ಕೇಳಿ ಕನ್ಫ್ಯೂಸ್ ಆಗಿದ್ದಾರೆ. ಅಮ್ಮನ ಮಾತು ಕೇಳಿ ಸುಭಾಷ್ ಪಾಟೀಲ್ ಅನ್ನು ಮದುವೆಯಾಗಬೇಕು ಎಂದುಕೊಂಡಿದ್ದಾಳೆ. ಆದರೆ, ಏನಾಗುತ್ತೆ ಅನ್ನೋದೇ ಮುಂದಿನ ಕುತೂಹಲ.
ರಾಜನಂದಿನಿ ಮದುವೆ ಬಗ್ಗೆ ಮಾತನಾಡಿದ್ದು, ಮನೆಯವರಿಗೆ ಖುಷಿ ತಂದಿದ್ದರೂ, ಸುಭಾಷ್ ಪಾಟೀಲ್ ಹೆಸರು ಕೇಳಿ ಅವರ ತಂದೆ ಸಿಡಿಮಿಡಿಗೊಂಡಿದ್ದಾರೆ. ಇತ್ತ ಸುಭಾಷ್ ಪಾಟೀಲ್ ಹೇಗಾದರೂ ಮಾಡಿ ರಾಜನಂದಿನಿಯನ್ನು ಮದುವೆಯಾಗಲೇಬೇಕು ಎಂದು ಪಟ್ಟು ಹಿಡಿದಿದ್ದಾನೆ. ಇವನ ವರ್ತನೆ ನೋಡುತ್ತಿರುವ ಕೇಶವ ಏನೂ ಅರ್ಥವಾಗದೇ, ಏನಾದರೂ ಆದ್ರೆ ಏನಪ್ಪ ಮಾಡೋದು ಅನ್ನೋ ಚಿಂತೆಯಲ್ಲಿದ್ದಾನೆ.
ಸುಭಾಷ್ ಪಾಟೀಲ್ ಮೇಡಂ, ಮೇಡಂ ಎಂದು ಕರೆಯುತ್ತಿರುತ್ತಾನೆ ಅದಕ್ಕೆ ಬೇಸರಗೊಂಡ ರಾಜನಂದಿನಿ, ಸಾಕು ನಿಲ್ಲಿಸಿ ರೈಲ್ವೇ ಸ್ಟೇಷನ್, ಬಸ್ ಸ್ಟ್ಯಾಂಡ್ ನಲ್ಲಿ ಲಾಟರಿ ಟಿಕೆಟ್ ಅವರು ಕೂಗೋ ಹಾಗೆ ಮೇಡಂ ಮೇಡಂ ಅಂತೀರಾ ಅಂತಾಳೆ. ಇದಕ್ಕೆ ಸುಭಾಷ್ ಪಾಟೀಲ್ ಪರವಾಗಿಲ್ವೇ ನಿಮಗೂ ರೈಲ್ವೇ ಸ್ಟೇಷನ್ ಎಲ್ಲಾ ಗೊತ್ತಾ ಅಂತ ತಮಾಷೆ ಮಾಡಿದಾಗ, ರಾಜನಂದಿನಿ ಯಾಕೆ ನಾನು ಇದೇ ಊರಿನವಳೆ ಎನ್ನುತ್ತಾಳೆ.

ಮನೆಗೆ ಬರಲು ಸುಭಾಷ್‌ಗೆ ರಾಜನಂದಿಗೆ ಆಹ್ವಾನ!
ನಮ್ಮ ವಿಷಯಕ್ಕೆ ಬರೋಣ ಅಂತಾಳೆ. ಇದಕ್ಕೆ ಸುಭಾಷ್, ಏನು ನಮ್ಮ ವಿಷಯ? ಆರ್ಡರ್ ಕಾಪಿ ಕೊಟ್ಮೇಲೂ ಕೇಳೋಕೆ ಪ್ರಶ್ನೆಗಳಿದೆಯಾ ಎನ್ನುತ್ತಾನೆ. ಆಗ ರಾಜನಂದಿನಿ ನಮ್ಮ ವಿಷ್ಯ ಎಂದು ಹೇಳುತ್ತಾಳೆ. ಆಗ ಸುಭಾಷ್ ಏನೂ ಗೊತ್ತಿಲ್ಲದವನಂತೆ ನಡೆದುಕೊಳ್ಳುತ್ತಾನೆ. ಆದ ರಾಜನಂದಿನಿ ನೀನು ಕೇಳಿರೋ ಪ್ರಶ್ನೆಗೆ ಮೌನವಾಗಿ ಉತ್ತರ ಕೊಡೋಕೆ ಆಗಲ್ಲ. ನಾನು ಮನೆಯಲ್ಲಿ ಮದುವೆ ವಿಷಯ ಮಾತಾಡಿದ್ದೀನಿ. ನೀನು ಒಂದು ಸಲ ಬಂದು ಮಾತಾಡುತ್ತೀಯ ಎಂದು ಕೇಳುತ್ತಾಳೆ. ಆಗ ಸುಭಾಷ್, ಖಂಡಿತವಾಗಿಯೂ ಬರ್ತೀನಿ ಇದು ನನ್ನ ಕರ್ತವ್ಯ ಎಂದು ಹೇಳುತ್ತಾನೆ.

ಸುಭಾಷ್ ಪಾಟೀಲ್ ಹೊಸ ಆಟ ಶುರು!
ಆದರೆ ಮನಸ್ಸಾಗದೆ ರಾಜನಂದಿನಿ ಮತ್ತೆ ಸುಭಾಷ್ ಬಳಿ ಹೋಗಿ ನನಗೆ ಈ ಫೀಲ್ ಇಷ್ಟ ಆಗ್ತಿದೆ. ಎಲ್ಲವೂ ನಡೆದಂತೆ ಅನಿಸ್ತಿದೆ ಎಂದು ಹೇಳುತ್ತಾಳೆ. ಅಪ್ಪ-ಅಮ್ಮನ ಬಳಿ ಬಂದು ಮಾತಾಡು ಎಂದಾಗ, ಸುಭಾಷ್ ಪಾಟೀಲ್ ಕೂಡ ಇದೂ ಮುಂಚೆನೇ ನಡೆದು ಹೋಗಿದ್ದಿದ್ದರೆ ಚೆನ್ನಾಗಿರುತ್ತಿತ್ತು. ಫಲಿತಾಂಶ ಗೊತ್ತಾಗುತ್ತಿತ್ತು ಎಂದು ಹೇಳುತ್ತಾನೆ. ಅದಕ್ಕೆ ರಾಜನಂದಿನಿ ಸಿಗಬೇಕು ಅಂದ್ರೆ ಕಂಪನಿ ಮೆಟ್ಟಿಲು ಹತ್ತಿ ಇಳಿದಂತೆ, ರಾಜನಂದಿನಿ ವಿಲಾಸವನ್ನು ಹತ್ತಿ ಇಳಿಯಬೇಕು ಎನ್ನುತ್ತಾಳೆ. ಆಗ ಸುಭಾಷ್ ಏನೋ ನಾನು ಅಳಿಯನಾದರೆ ಸಾಕು ಎನ್ನುತ್ತಾನೆ. ಅದಕ್ಕೆ ರಾಜನಂದಿನಿ ಕೇವಲ ಅಳಿಯ ಅಲ್ಲ, ನನ್ನ ಗೆಳೆಯ, ಜೊತೆಗಾರ ಎಲ್ಲವೂ. ಈ ಜನ್ಮದಲ್ಲೂ ಪ್ರತೀ ಜನ್ಮದಲ್ಲೂ ನಾವಿಬ್ಬರೂ ಜೊತೆ ಜೊತೆಯಲಿ ಎನ್ನುತ್ತಾಳೆ.

ಮದುವೆ ಒಪ್ಪಿದ ರಾಜನಂದಿನಿ ತಾಯಿ!
ಸಂಜೆ ವೇಳೆಗೆ ಸುಭಾಷ್ ಪಾಟೀಲ್ ರಾಜನಂದಿನಿ ಮನೆಗೆ ಬರುತ್ತಾನೆ. ಬರುತ್ತಲೇ ರಾಜನಂದಿನಿ ಅವರ ತಂದೆ-ತಾಯಿಯನ್ನು ಇಂಪ್ರೆಸ್ ಮಾಡಲು ಟ್ರೈ ಮಾಡುತ್ತಾನೆ. ರಾಜನಂದಿನಿ ಅವರ ತಾಯಿ ಇಂಪ್ರೆಸ್ ಆಗುತ್ತಾಳೆ. ಆದರೆ ಅವರ ತಂದೆ ಸಿಟ್ಟಿನಲ್ಲೇ ಇರುತ್ತಾನೆ. ಮೊದಲು ಸುಭಾಷ್ ಪಾಟೀಲ್ ಮಾತು ಶುರು ಮಾಡಿದ್ರೂ, ಖಡಕ್ ಧ್ವನಿಯಲ್ಲಿ ಮಾತನಾಡುವ ರಾಜನಂದಿನಿ ಅವರ ತಂದೆ, ಕೇವಲ ಕನಸಿನಿಂದ ನನ್ನ ಮಗಳನ್ನು ನೋಡಿಕೊಳ್ಳೊಕೆ ಆಗುತ್ತಾ ಎಂದು ಕೇಳ್ತಾನೆ.

ರಾಜನಂದಿನಿಯನ್ನು ವರಿಸಲು ಬಂದ ಸುಭಾಷ್!
ಸುಭಾಷ್ ಮಾತು ಮುಂದುವರೆಸಿ ಈಗಲೂ ಹೇಳ್ತಿದ್ದೀನಿ ಶುಕ್ರವಾರ ಬೆಳಗ್ಗೆ 11: 03ಕ್ಕೆ ಮುಹೂರ್ತ ಇದೆ. ನಿಮಗೆ ನಾನು ಒಪ್ಪಿಗೆ ಅಂತ ಅಂದರೆ ಅಮ್ಮನವರ ದೇವಸ್ಥಾನಕ್ಕೆ ಬನ್ನಿ. ನಾನು ಕಾಯುತ್ತಿರುತ್ತೇನೆ ಎನ್ನುತ್ತಾನೆ. ರಾಜನಂದಿನಿಗೆ ಈ ಮದುವೆ ಅಸಾಧ್ಯ ಎಂದು ಆಕೆಯ ತಂದೆ ಖಡಕ್ ಆಗಿ ಹೇಳುತ್ತಾನೆ. ಅದಕ್ಕೆ ರಾಜನಂದಿನಿ, ಸುಭಾಷ್ ಬಿಟ್ಟು ನಾನು ಬೇರೆಯಾರನ್ನೂ ಮದುವೆಯಾಗಲ್ಲ. ಸಾಯೋವರೆಗೂ ಹೀಗೆ ಇರುತ್ತೀನಿ ಅಂತಾಳೆ. ಇತ್ತ ಸುಭಾಷ್ ಪಾಟೀಲ್ ಮಾತ್ರ ರಾಜನಂದಿನಿ ಬಂದೇ ಬರುತ್ತಾಳೆ ಅಂತ ಕಾನ್ಫಿಡೆಂಟ್ ಆಗಿ ಇರುತ್ತಾನೆ. ಅಪ್ಪನ ವಿರುದ್ಧವಾಗಿ ಸುಭಾಷ್ ಪಾಟೀಲ್ ಅನ್ನು ರಾಜನಂದಿನಿ ಮದುವೆಯಾಗುತ್ತಾಳಾ..? ಇಲ್ಲವಾ ಎನ್ನುವ ಕುತೂಹಲ ಮೂಡಿದೆ.


Click it and Unblock the Notifications











