ಆರ್ಯನ ಬಗ್ಗೆ ಸತ್ಯ ತಿಳಿದ ಅನು ಈಗ ಗೊಂದಲದಲ್ಲಿ!
ಜೊತೆ ಜೊತೆಯಲಿ ಸೀರಿಯಲ್ ನಲ್ಲಿ ಈಗ ರಾಜನಂದಿನಿ ಕಥೆ ಶೇ. 90% ಭಾಗ ಮುಕ್ತಾಯಗೊಂಡಿದೆ. ಈಗ ಅನು ಗೆ ಆರ್ಯವರ್ಧನ್ ಬಗ್ಗೆ ಸಂಪೂರ್ಣವಾಗಿ ಅರ್ಥವಾಗಿದ್ದು, ಈ ವಿಚಾರವನ್ನು ಎಲ್ಲರಿಗೂ ತಿಳಿಯುವಂತೆ ಮಾಡಬೇಕು. ರಾಜವರ್ಧನ್ ಹಾಗೂ ರಾಜನಂದಿನಿ ಸಾವಿಗೆ ನ್ಯಾಯ ಒದಗಿಸಬೇಕು ಎಂದು ತೀರ್ಮಾನಿಸಿದ್ದಾಳೆ.
ಅನು ಸೀದಾ ವರ್ಧನ್ ಗ್ರೂಪ್ಸ್ ಆಫೀಸಿಗೆ ಹೋದವರೇ ಅಲ್ಲಿನ ನೌಕರರ ಜೊತೆಗೆ ಮಾತನಾಡಿದ್ದಾಳೆ. ಅನು ಮಾತು ಕೇಳಿದ ಸ್ಟಾಫ್ಸ್ ಶಾಕ್ ಆಗಿದ್ದಾರೆ. ಅನು ಕಾನ್ಫಿಡೆಂಟ್ ನಿಂದ ಇಷ್ಟು ಖಡಕ್ ಆಗಿ ಮಾತನಾಡಿದ್ದನ್ನು ನೋಡಿ ಶಾನುಭೋಗರು ರಾಜನಂದಿನಿ ಅವರನ್ನು ನೆನಪು ಮಾಡಿಕೊಂಡಿದ್ದಾರೆ.
ಇನ್ನು ಮೀರಾ, ಆರ್ಯ ಸರ್‌ಗೆ ಅಪ್ ಡೇಟ್ ಮಾಡದೇ ಯಾವ ನಿರ್ಧಾರವನ್ನು ತೆಗೆದುಕೊಳ್ಳಲು ಆಗುವುದಿಲ್ಲ ಎಂದು ಅನುಗೆ ವಾರ್ನ್ ಮಾಡುತ್ತಾಳೆ. ಅದಕ್ಕೆ ಅನು ವಾಪಸ್ ಮೀರಾಗೆ ವಾರ್ನಿಂಗ್ ಕೊಡುತ್ತಾಳೆ. ನಾನು ಅನು ಆರ್ಯವರ್ಧನ್. ನನ್ನ ಹೆಸರೇ ಎಲ್ಲಾ ಹೇಳುತ್ತೆ ಎಂದಾಗ, ಮೀರಾ, ಆರ್ಯ ಸರ್ ಈ ಕಂಪನಿ ಓನರ್ ಎಂದು ಹೇಳುತ್ತಾಳೆ. ಆಗ ಅನು, ಆರ್ಯವರ್ಧನ್ ಈ ಕಂಪನಿಯ ಕೇರ್ ಟೇಕರ್ ಅಷ್ಟೇ. ಹರ್ಷವರ್ಧನ್ ಹಾಗೂ ಶಾರದಾ ದೇವಿ ಈ ಕಂಪನಿಯ ಓನರ್ ಈಗ ತೀಳಿತಲ್ಲ ಎಂದು ತರಾಟೆಗೆ ತೆಗೆದುಕೊಳ್ಳುತ್ತಾಳೆ.

ದಾರಿ ಕಾಣದೆ ಕಂಗಾಲಾಗಿರುವ ಝೇಂಡೆ!
ಇದನ್ನೆಲ್ಲಾ ಗಮನಿಸುವ ಝೇಂಡೆ ಶಾಕ್ ಆಗುತ್ತಾನೆ. ಹೇಗಾದರೂ ಮಾಡಿ ಅನುನಾ ಮಟ್ಟ ಹಾಕಬೇಕು ಎಂದು ಬಾಬಾ ಬಳಿ ಹೋಗುತ್ತಾನೆ. ಆದರೆ ಬಾಬಾ ಹಿಂದೆ ಮಾಡಿದ ಪಾಪಗಳೆಲ್ಲವೂ ಈಗ ಕಾಡದೇ ಬಿಡದು ಎನ್ನುತ್ತಾರೆ. ಆಗ ಝೇಂಡೇ ಹೇಗಾದರೂ ಮಾಡಿ ಇದರಿಂದ ತಪ್ಪಿಸಿಕೊಳ್ಳಲು ಆಗುವುದಿಲ್ಲವೆ ಎಂದು ಕೇಳುತ್ತಾನೆ. ಆದರೆ ಬಾಬಾ ಅದು ಸಾಧ್ಯವೇ ಇಲ್ಲ. ಮಾಡಿದ ಕರ್ಮಗಳಿಗೆ ಬೆಲೆ ತೆರಲೇಬೇಕು ಎಂದು ಹೇಳಿದಾಗ ಝೇಂಡೆ ಇದೇ ಟೈಮ್ ನಲ್ಲಿ ಆರ್ಯ ಬೇರೆ ಲಂಡನ್‌ಗೆ ಹೋಗಿ ಕೂತಿದ್ದಾನೆ. ಏನು ಮಾಡೋದು ಎಂದು ಯೋಚಿಸುತ್ತಿರುತ್ತಾನೆ.

ಅಮ್ಮನ ಬಳಿ ಹಳೆ ವಿಚಾರ ಕೆದಕಿದ ಅನು!
ಇತ್ತ ಅನು ಸಿರಿಮನೆ ಶಾರದಾ ದೇವಿ ರೂಮಿಗೆ ಬರುತ್ತಾಳೆ. ನಿಮ್ಮ ಬಳಿ ಸ್ವಲ್ಪ ಮಾತನಾಡಬೇಕು ಎಂದು ಕೇಳುತ್ತಾಳೆ. ಶಾರದಾ ದೇವಿ ಸರಿ ಎಂದಾಗ, ರಾಜ ವರ್ಧನ್ ಹಾಗೂ ರಾಜನಂದಿನಿ ಅವರು ಹೋದಾಗ ಮನೆ ವಾತಾವರಣ ಹೇಗಿತ್ತು ಎಂದು ಕೇಳುತ್ತಾಳೆ. ಆಗ ಶಾರದಾ ಅಳುತ್ತಾ, ಅದೊಂದನ್ನ ಮಾತ್ರ ಕೇಳಬೇಡ ಮಗಳೇ ನಾನು ಅದನ್ನೆಲ್ಲಾ ಮರೆತು ಬುದುಕುತ್ತಿದ್ದೇನೆ. ಮತ್ತೆ ಅವನ್ನೆಲ್ಲಾ ನೆನಪಿಸಿಕೊಳ್ಳಲು ಮಾತ್ರ ನನ್ನಿಂದ ಸಾಧ್ಯವಿಲ್ಲ ಎಂದು ಹೇಳುತ್ತಾಳೆ. ಆಗ ಅನು ಸರಿ ಅಮ್ಮ ನಾನೇನು ಕೇಳುವುದಿಲ್ಲ. ಆದರೆ ನನ್ನ ಜೊತೆ ಬನ್ನಿ ಎಂದು ಸೀಕ್ರೆಟ್ ರೂಮಿಗೆ ಕರೆದುಕೊಂಡು ಹೋಗುತ್ತಾಳೆ.

ಸೀಕ್ರೇಟ್ ರೂಮಿಗೆ ಬಂದ ಶಾರದಾ ದೇವಿ!
ಆಗ ಶಾರದಾ ಅಲ್ಲಿನ ವಸ್ತುಗಳನ್ನೆಲ್ಲಾ ನೋಡಿ ಕಣ್ಣೀರಿಡುತ್ತಾಳೆ. ರಾಜವರ್ಧನ್ ಅವರ ಫೋಟೋ ನೋಡಿ ನೀವಿನ್ನೂ ಬದುಕಿರಬೇಕಿತ್ತು ಎಂದು ಅಳುತ್ತಾ ಹೊರಗೆ ಬರುತ್ತಾಳೆ. ಆಗ ಮತ್ತೆ ಶಾರಾದಾ ಹಿಂದಿನದ್ದನ್ನು ನಾನು ನೆನಪು ಮಾಡಿಕೊಳ್ಳಲು ಸಾಧ್ಯವಿಲ್ಲ ಎನ್ನುತ್ತಾಳೆ. ಆಗ ಅನು ಶಾರದಾಳನ್ನು ಕ್ಷಮೆ ಕೇಳಿ ಕೊನೆಯದಾಗಿ ಒಂದು ಪ್ರಶ್ನೆ ಕೇಳುತ್ತೇನೆ. ನನ್ನನ್ನು ನಿಮ್ಮ ಮಗಳು ರಾಜನಂದಿನಿ ಎಂದು ಒಪ್ಪುತ್ತೀರಾ ಎಂದು ಕೇಳುತ್ತಾಳೆ. ಅದಕ್ಕೆ ಶಾರದಾ ಖಂಡಿತವಾಗಿಯೂ. ನನ್ನ ಮಗಳೇ ಅನು ಆಗಿ ಬಂದಿರುವುದು. ಆದರೆ ಈ ವಿಚಾರವನ್ನು ಆರ್ಯ ಹತ್ತಿರ ಮಾತ್ರ ಹೇಳಬೇಡ. ಅವನಿಗೆ ಸಹಿಸಿಕೊಳ್ಳಲು ಆಗುವುದಿಲ್ಲ. ರಾಜನಂದಿನಿ ಹೋದಾಗ ತಿಂಗಳಾನುಗಟ್ಟಲೆ ಈ ರೂಮ್ ನಲ್ಲಿ ಸೆರೆಯಾಗಿದ್ದ. ಒಂದಿನ ಮನೆ ಬಿಟ್ಟು ಹೊರಟಿದ್ದ. ಕೊನೆಗೆ ನನ್ನ ಮಾತಿಗೆ ಬೆಲೆ ಕೊಟ್ಟು ನನ್ನ ಮಗನಾದ ಎಂದು ಹೇಳುತ್ತಾಳೆ.

ಆರ್ಯನ ಬಗ್ಗೆ ತಲೆಕೆಡಿಸಿಕೊಂಡ ಅನು!
ಆದರೆ ಅನು ಸಿರಿಮನೆ, ಆರ್ಯನಿಂದಲೇ ಹೀಗೆಲ್ಲಾ ಆಗಿದ್ದು ಎಂದು ಅಮ್ಮನಿಗೆ ಹೇಗೆ ಅರ್ಥ ಮಾಡಿಸುವುದು. ಸಾಕ್ಷಿ ಸಮೇತ ಆರ್ಯ ಸರ್ ಬಣ್ಣ ಬಯಲು ಮಾಡಬೇಕು ಎಂದು ಯೋಚಿಸುತ್ತಾಳೆ. ಅಷ್ಟರಲ್ಲಿ ಆರ್ಯ ಮನೆಗೆ ಬರುತ್ತಾನೆ. ಆಗ ರಾಜನಂದಿನಿ ಬಂದಂತೆ ಮೆಟ್ಟಿಲು ಇಳಿದು ಅನು ಬರುತ್ತಾಳೆ. ಮುಂದೇನಾಗುತ್ತೆ ಎಂದು ಮುಂದಿನ ಸಂಚಿಕೆಯಲ್ಲಿ ನೋಡಬೇಕು.


Click it and Unblock the Notifications











