ಸಿಡಿದೆದ್ದ ಅನು ಸಿರಿಮನೆ, ಮುಂದೈತೆ ಮಾರಿ ಹಬ್ಬ!

By ಪ್ರಿಯಾ ದೊರೆ

'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಅನುಸಿರಿಮನೆಗೆ ಈಗ ಎಲ್ಲಾ ಸತ್ಯವೂ ಅರ್ಥವಾಗಿದೆ. ತಾನು ಹುಟ್ಟಿರುವುದೇ ರಾಜ ವರ್ಧರ್ನ್ ಹಾಗೂ ರಾಜನಂದಿನಿ ಸಾವಿಗೆ ನ್ಯಾಯ ಕೊಡಿಸುವುದಕ್ಕೆ ಎಂಬುದನ್ನು ಅರ್ಥ ಮಾಡಿಕೊಂಡಿದ್ದಾಳೆ.

ಈಗ ಆರ್ಯವರ್ಧನ್ ನಿಂದ ಎಲ್ಲಾ ಆಡಳಿತವನ್ನು ಹರ್ಷವರ್ಧನ್‌ಗೆ ಶಿಫ್ಟ್ ಮಾಡಲು ಮುಂದಾಗಿದ್ದಾಳೆ. ಈ ಬಗ್ಗೆ ಈಗಾಗಲೇ ಮೀರಾ ಪ್ರಶ್ನೆ ಮಾಡಿದ್ದಕ್ಕೆ ವಾರ್ನ್ ಕೂಡ ಮಾಡಿದ್ದಳು. ಆದರೆ ಮೀರಾ ಈ ಎಲ್ಲಾ ವಿಚಾರವನ್ನು ಆರ್ಯವರ್ಧನ್‌ಗೆ ಹೇಳಬೇಕು ಎಂದು ಅಂದುಕೊಂಡಿದ್ದಾಳೆ.

ಲಂಡನ್‌ನಿಂದ ಆರ್ಯವರ್ಧನ್ ಮನೆಗೆ ಬಂದಿದ್ದು, ಅನು ಸ್ವಾಗತಿಸಿದ್ದಾಳೆ. ಬೆಳಗೆದ್ದು ಆಫೀಸಿಗೆ ಹೋಗಲು ತಯಾರಾದ ಆರ್ಯನನ್ನು ತಡೆಯಲು ಮಾಸ್ಟರ್ ಪ್ಲಾನ್ ಮಾಡಿದ್ದಾಳೆ. ಆರ್ಯನ ಫೋನ್‌ಗೆ ಮೀರಾ ಕರೆ ಮಾಡಿದ್ದಾಳೆ. ಆದರೆ ಅನು ಫೋನ್ ಸ್ವಿಚ್ ಆಫ್ ಮಾಡಿದ್ದಾಳೆ.

Jothe Jotheyali Serial Update On May 18th 2022

ಆರ್ಯಗೆ ಹುಷಾರಿಲ್ಲ ಎಂದು ಹೇಳಿದ ಅನು ಕಷಾಯ ತಯಾರಿಸಿದ್ದಾಳೆ. ಶಾರದಾ ದೇವಿ ಬಳಿ ಆರ್ಯಗೆ ಹುಷಾರಿಲ್ಲಾದಿದ್ದರೂ ಸುಳ್ಳು ಹೇಳುತ್ತಾರೆ. ಅವರು ಇವತ್ತು ಮನೆಯಲ್ಲೇ ರೆಸ್ಟ್ ಮಾಡಲಿ ಎಂದು ಹೇಳಿದ್ದಾಳೆ. ಆಫೀಸಿಗೆ ಹೋಗಲೆಂದು ಹೊರಟು ಬಂದ ಆರ್ಯನನ್ನು ಎಲ್ಲರೂ ಸೇರಿ ತಡೆದಿದ್ದಾರೆ. ಅನು ಹಾಗೂ ಹರ್ಷ ಇಬ್ಬರು ಆಫೀಸಿಗೆ ಹೊರಟಿದ್ದು, ಅನು ದಾರಿ ಮಧ್ಯೆ ಮೀರಾ ಮನೆಗೆ ಹೋಗಿದ್ದಾಳೆ.

ಆಫೀಸಿಗೆ ಇವತ್ತು ನಿಮ್ಮ ಬಾಸ್ ಅಂದರೆ ಆರ್ಯ ಬರುತ್ತಿಲ್ಲ. ಅವರು ಬಂದ ಕೂಡಲೇ ಆಫೀಸಿನಲ್ಲಿ ಏನೆಲ್ಲಾ ಬದಲಾವಣೆಯಾಗಿದೆ ಎಂದು ವರದಿ ಒಪ್ಪಿಸಬೇಕು ಎಂದು ಕೊಂಡಿದ್ದೀಯಾ ಅಲ್ವಾ? ಆದರೆ ಅದನ್ನು ಮರೆತುಬಿಡು. ಯಾವುದೇ ಕಾರಣಕ್ಕೂ ಆಫೀಸ್‌ನಲ್ಲಿ ನಡೆದಿದ್ದನ್ನು ಆರ್ಯಗೆ ಹೇಳಬಾರದು. ಆಮೇಲೆ ಇವತ್ತು ಆರ್ಯ ಸರ್ ಆಫೀಸ್‌ಗೆ ಬರುತ್ತಿಲ್ಲ. ನೆನಪಿಟ್ಟುಕೊ. ಆರ್ಯವರ್ಧನ್ ಈ ಆಫೀಸಿಗೆ ಓನರ್ ಅಲ್ಲ. ಬದಲಿಗೆ ಕೇರ್ ಟೇಕರ್ ಅಷ್ಟೇ. ಆರ್ಯನಿಗೆ ಏನಾದರೂ ಹೇಳಬೇಕು ಎಂದುಕೊಂಡಿದ್ದರೆ. ಅದನ್ನು ಮರೆತು ಬಿಡು. ಇದು ನನ್ನ ಆರ್ಡರ್ ಅಂತಾನಾದರೂ ತಿಳಿದುಕೋ. ಇಲ್ಲವೇ ನನ್ನ ವಾರ್ನಿಂಗ್ ಅಂತನಾದರೂ ತಿಳಿದುಕೋ. ಬಟ್ ಹೇಳಿದ್ದನ್ನಷ್ಟೇ ಮಾಡು. ನಿನ್ನ ನೀಯತ್ತು, ನಿಷ್ಠೆಯನ್ನು ಆರ್ಯ ಸರ್‌ಗೆ ಮಾತ್ರ ತೋರಿಸುವುದಲ್ಲ. ಆಫೀಸಿನ ಮೇಲೂ ತೋರಿಸು ಎಂದು ಹೇಳುತ್ತಾಳೆ.

ಇತ್ತ ಆರ್ಯ ಮನೆಗೆ ಪುಷ್ಪ ಮತ್ತು ಸುಬ್ಬು ಬಂದಿದ್ದಾರೆ. ಅನು ವಿಚಿತ್ರವಾಗಿ ಮಾತನಾಡಿದ್ದು, ತಾನೇ ರಾಜನಂದಿನಿ ಎಂದು ಕೊಂಡಿರುವುದು ಎಲ್ಲವೂ ಪುಷ್ಪ ಹಾಗೂ ಸುಬ್ಬು ಮನದಲ್ಲಿ ಆತಂಕವನ್ನು ಸೃಷ್ಟಿ ಮಾಡಿದೆ. ಅನುಗೆ ಏನಾಗಿದೆ? ಯಾಕೆ ಹೀಗೆ ಮಾತನಾಡುತ್ತಿದ್ದಾಳೆ? ಅತ್ತೆ ಮನೆಯಲ್ಲೂ ಹೀಗೆ ನಡೆದುಕೊಳ್ಳುತ್ತಿದ್ದಾಳಾ ಅನ್ನೋ ಅನುಮಾನದಲ್ಲಿ ಇಬ್ಬರೂ ಆರ್ಯನ ಮನೆಗೆ ಬಂದಿದ್ದಾರೆ. ಆಫೀಸ್‌ಗೆ ಹೋಗದೆ ಮನೆಯಲ್ಲೇ ಕುಳಿತಿರುವ ಆರ್ಯ ಶಾರದಾ ದೇವಿ ಜೊತೆಗೆ ಮಾತನಾಡುತ್ತಿದ್ದಾನೆ. ಇತ್ತ ಪುಷ್ಪ ಹಾಗೂ ಸುಬ್ಬು ಬಂದಿದ್ದಕ್ಕೆ ಖುಷಿ ಪಟ್ಟಿದ್ದಾನೆ. ಆದರೆ ಇವರಿಬ್ಬರು ಬಂದಿರುವುದು ಅನುಗೆ ಗೊತ್ತಿಲ್ಲ.

ಆಫೀಸಿಗೆ ಬಂದ ಮೀರಾ ಶಾಕ್ ಆಗಿದ್ದಾಳೆ. ಝೇಂಡೇ ಬಳಿ ತನ್ನ ಮನದ ಗೊಂದಲವನ್ನು ಹೇಳಿಕೊಂಡಿದ್ದಾಳೆ. ಅನು ಮೊದಲಿನಂತಿಲ್ಲ. ಅವಳಿಗೆ ಏನಾಗಿದೆ.? ಯಾಕೆ ಹೀಗಾಡುತ್ತಿದ್ದಾಳೆ ಎಂದು ಮೀರಾ ಹೇಳಿದ್ದಾಳೆ. ಏನಾಯ್ತು ಎಂದು ಝೇಂಡೇ ಕೇಳಿದ್ದಕ್ಕೆ, ಅನು ಓನರ್ ರೀತಿ ಮಾತನಾಡುತ್ತಿದ್ದಾಳೆ. ಅವಳಿಗೆ ಇಷ್ಟು ಕಾನ್ಫಿಡೆನ್ಸ್, ಧೈರ್ಯ ಎಲ್ಲಿಂದ ಬಂತು ಎಂದು ಪ್ರಶ್ನಿಸಿದ್ದಾಳೆ. ಇದಕ್ಕೆ ಝೇಂಡೇ ಕೂಡ ಶಾಕ್ ಆಗಿದ್ದಾನೆ.

More from Filmibeat

English summary
Jothe Jotheyali Serial Return Update On May 18th 2022, Rajanandini Father Refuse Her Marriege With Subhash Patil,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X