ಆರ್ಯನ ಅಸಲಿ ಕಥೆ ಮೀರಾ ಮುಂದೆ ಬಯಲು!

By ಪ್ರಿಯಾ ದೊರೆ

ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಮುಂದೆ ಏನು ಮಾಡಬೇಕು ಎಂಬ ಬಗ್ಗೆ ರಮ್ಯಾ ಬಳಿ ಅನು ಸಿರಿಮನೆ ಹೇಳುತ್ತಿರುತ್ತಾಳೆ. ಆದರೆ ಅನು ಮಾತನ್ನು ನಂಬಲು ರಮ್ಯಾ ತಯಾರಿರುವುದಿಲ್ಲ. ಆಗ ಅನು ಸುಭಾಷ್ ಪಾಟೀಲ್‌ಗೆ ಶಿಕ್ಷೆ ಕೊಡುವುದಕ್ಕೆ ಸಹಕರಿಸುತ್ತೀರಾ ಎಂದು ಕೇಳಿದಾಗ ರಮ್ಯಾ ಹು ಎನ್ನುತ್ತಾಳೆ.

ಇತ್ತ ಝೇಂಡೇ ಹರ್ಷವರ್ಧನ್ ಬಳಿ ಹುಡುಗನೊಬ್ಬನನ್ನು ಕಳಿಸಿ ಪ್ರಾಜೆಕ್ಟ್ ಒಂದರ ಪ್ರೊಪೋಸಲ್ ಕೊಡುತ್ತಾನೆ. ಹರ್ಷವರ್ಧನ್ ಆತನನ್ನು ವೆಲ್ಕಂ ಮಾಡಿ ಪ್ರಾಜೆಕ್ಟ್ ಬಗ್ಗೆ ಕೇಳುತ್ತಾನೆ. ಫ್ಯಾಬ್ರಿಕ್ ಬಗ್ಗೆ ಹೇಳಿ, ಕೇವಲ ಹತ್ತು ಕೋಟಿ ಹಣ ಹೂಡುವಂತೆ ಹೇಳಿದಾಗ ಹರ್ಷ ಬೇಡ ಎನ್ನುತ್ತಾನೆ.

ಇದಕ್ಕೆ ಉತ್ತರಿಸುವ ಹರ್ಷವರ್ಧನ್, ನಾನು ಬಳಸುವ ಪೆನ್ ಬೆಲೆ ಕೇವಲ ಹತ್ತು ರೂಪಾಯಿ. ನನಗೆ ನನ್ನ ಅತ್ತಿಗೆ ಎರಡು ರೂಪಾಯಿಗೂ ಬೆಲೆ ಇದೆ ಎಂಬುದನ್ನು ತಿಳಿಸಿಕೊಟ್ಟಿದ್ದಾರೆ ಎಂದು ಹೇಳಿ ಕಳಿಸುತ್ತಾನೆ. ಆಗ ಝೇಂಡೇ ಆತನಿಗೆ ಹೆಳಿದ ಕೆಲಸ ಮಾಡೋದಕ್ಕೆ ಆಗಲಿಲ್ಲ ಎಂದು ಹೇಳಿ ಕಪಾಳಮೋಕ್ಷ ಮಾಡಿ ಕಳಿಸುತ್ತಾನೆ.

ಅನು ಮಾತು ಕೇಳುತ್ತಾಳಾ ಮೀರಾ..?

ಅನು ಮಾತು ಕೇಳುತ್ತಾಳಾ ಮೀರಾ..?

ಅಲ್ಲಿಂದ ಹೊರಟ ಅನು ಸೀದಾ ಆಫೀಸಿಗೆ ಬರುತ್ತಾಳೆ. ಆಫೀಸಿನಲ್ಲಿ ಮೀರಾ ಚೇಂಬರ್ ಗೆ ಬರುತ್ತಾಳೆ. ಇಂದು ಸಂಜೆ ನನ್ನ ಜೊತೆಗೆ ಡಿನ್ನರ್ ಗೆ ಬನ್ನಿ ಎಂದು ಆಹ್ವಾನ ನೀಡುತ್ತಾಳೆ. ಆಗ ಮೀರಾ ಇಲ್ಲ, ಆರ್ಯ ಸರ್ ಜೊತೆಗೆ ನಾನು ಮೀಟಿಂಗ್ ಅಟೆಂಡ್ ಮಾಡಬೇಕು. ನನ್ನ ಫೋರ್ಸ್ ಮಾಡಬೇಡ ಎಂದು ಹೇಳುತ್ತಾಳೆ. ಆಗ ಅನು ಮೀರಾಳನ್ನು ಕ್ಯಾಬಿನ್‌ಗೆ ಕರೆಯುತ್ತಾಳೆ. ನಂತರ ಆರ್ಯನಿಗೆ ಕರೆ ಮಾಡಿ ಕ್ಯಾಬಿನ್ ಗೆ ಕರೆಸಿಕೊಂಡು ಇವತ್ತು ಮೀಟಿಂಗ್ ಗೆ ನಿಮಗೆ ಮೀರಾ ಇರಲೇಬೇಕಾ ಎಂದು ಕೇಳುತ್ತಾಳೆ. ಆಗ ಆರ್ಯ ಅವಶ್ಯಕತೆ ಇಲ್ಲ ಎಂದು ಹೇಳುತ್ತಾರೆ. ಆಗ ಅನು ನಾನು ಲೊಕೇಶನ್ ಕಳಿಸುತ್ತೇನೆ. ಮಿಸ್ ಮಾಡದೇ ಡಿನ್ನರ್ ಗೆ ಬಂದು ಬಿಡಿ. ಇವತ್ತೇ ಸರಿಯಾದ ದಿನ ಎಂದು ಹೇಳಿ ಹೊರಡುತ್ತಾಳೆ.

ಅನು ಜೊತೆಗೆ ಡಿನ್ನರ್ ಗೆ ಹೋದ ಮೀರಾ!

ಅನು ಜೊತೆಗೆ ಡಿನ್ನರ್ ಗೆ ಹೋದ ಮೀರಾ!

ಇದು ಮುಚ್ಚಿರುವ ಬಾಗಿಲು ಎಂದು ಹೇಳುತ್ತಾಳೆ. ಆಗ ಅನು ನೀವು ಹೇಳಿದ್ದು ನಿಜ, ಸದ್ಯಕ್ಕೆ ನಿಮ್ಮ ಪರ್ಸ್, ವಾಚ್ ಎಲ್ಲವನ್ನು ಇಲ್ಲಿಡಿ ಎಂದು ಹೇಳಿ ರೂಮ್ ಬಾಗಿಲು ತೆಗೆದು ಒಳಗೆ ಕರೆದುಕೊಂಡು ಹೋಗುತ್ತಾಳೆ. ಮೀರಾ ಒಳಗಡೆ ಹೋಗಿ ಶಾಕ್ ನಿಂದ ಎಲ್ಲವನ್ನೂ ನೋಡುತ್ತಿರುತ್ತಾಳೆ. ಆಗ ಅನು ಆರ್ಯ ಸರ್ ಬಗ್ಗೆ ಎಲ್ಲಾ ಬಗ್ಗೆ ಗೊತ್ತು ಅಂತ ಹೇಳುತ್ತೀಯಲ್ಲ ಮೀರಾ, ಈ ರೂಮ್ ಇರೋದು ಗೊತ್ತಿತ್ತಾ.? ರಾಜನಂದಿನಿ ಅವರನ್ನ ನೋಡಿದ್ದೀಯಾ ಎಂದು ಕೇಳಿ ರಾಜನಂದಿನಿ ಫೋಟೋವನ್ನು ತೋರಿಸುತ್ತಾಳೆ.

ಮೀರಾಗೆ ಸತ್ಯ ಹೇಳಿದ ಅನು!

ಮೀರಾಗೆ ಸತ್ಯ ಹೇಳಿದ ಅನು!

ನಂತರ ಅವಳ ಕೈಯಲ್ಲಿ ಒಂದು ಫೈಲ್ ಕೊಡುತ್ತಾಳೆ. ಇದನ್ನು ಓದು ನಾನು ನಿನಗೆ ಏನನ್ನೂ ಹೇಳಬೇಕಾಗಿಲ್ಲ. ನಿನಗೇ ಎಲ್ಲಾ ಅರ್ಥವಾಗುತ್ತದೆ ಎಂದು ಹೇಳುತ್ತಾಳೆ. ಮೀರಾ ಫೈಲ್ ನೋಡಿ ಶಾಕ್ ಆಗುತ್ತಾಳೆ. ಇಲ್ಲೀಗಲ್ ಡಾಕ್ಯುಮೆಂಟ್ಸ್ ಗಳಲ್ಲಿ ಮೀರಾ ಸಹಿ ಇರುತ್ತದೆ. ಇದರಿಂದ ನನ್ನ ಕೈಯಲ್ಲಿ ನಂಬೋದಕ್ಕೇ ಆಗುತ್ತಿಲ್ಲ ಎನ್ನುತ್ತಾಳೆ.

ಆರ್ಯನ ಬಗ್ಗೆ ಮೀರಾಗೆ ಸತ್ಯ ತಿಳಿಯಿತು!

ಆರ್ಯನ ಬಗ್ಗೆ ಮೀರಾಗೆ ಸತ್ಯ ತಿಳಿಯಿತು!

ಆಗ ಅನು ನೀನು ಪ್ರೀತಿಸಿದ ಆರ್ಯ ಸರ್ ನಿನಗೆ ಮಾಡಿದ ಮೋಸ ಮೀರಾ. ನೀನು ಆರ್ಯ ಸರ್ ಸಹಿ ಬಗ್ಗೆ ನಿನಗೆ ಅನುಮಾನವೇ ಬರುತ್ತಿರಲಿಲ್ಲ ಅಲ್ವಾ.? ಆದರೆ ಅದ್ಯಾವುದಕ್ಕೂ ಬೆಲೆ ಇಲ್ಲ ಮೀರಾ, ಆರ್ಯ ಸರ್ ಸಹಿಗೆ ಯಾವ ಬೆಲೆಯೂ ಇಲ್ಲ. ಆದರೆ, ಕಂಪನಿ ವೈಸ್ ಪ್ರೆಸಿಡೆಂಟ್ ಆದ ನಿನ್ನ ಸಹಿಗೆ ಬೆಲೆ ಇದೆ. ಇದು ವ್ಯಾಲಿಡ್. ಇದು ಅನ್ಯಾಯ ಎಂದು ಮೀರಾ ಕಣ್ಣೀರು ಹಾಕುತ್ತಾಳೆ. ಅಲ್ಲಿಂದ ಹೊರಟು ಹೋಗುತ್ತಾಳೆ.

More from Filmibeat

English summary
Jothe Jotheyali Serial Return Update On May 23rd Episode, Rajanandini Father Refuse Her Marriege With Subhash Patil,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X