ಅನು ಪರ ನಿಲ್ಲುತ್ತಾಳಾ ಮೀರಾ: ಜೊತೆ ಜೊತೆಯಲಿ ಧಾರಾವಾಹಿ ಅಂತ್ಯವಾಗಲಿದೆಯಾ..?

By ಪ್ರಿಯಾ ದೊರೆ

'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಈಗ ಮೀರಾ ಆರ್ಯನಿಂದ ಮೋಸ ಹೋಗಿದ್ದಾಳೆ. ಈ ವಿಚಾರ ತಿಳಿದು ಶಾಕ್ ಆಗಿದ್ದಾಳೆ ಮೀರಾ. ಸೀಕ್ರೆಟ್ ರೂಮಿನಿಂದ ನಾನು ಒಂದು ಕ್ಷಣವೂ ಇಲ್ಲಿ ಇರಲಾರೆ ಎಂದು ಆಚೆ ಓಡಿ ಬಂದು ಬಿಕ್ಕಿ ಬಿಕ್ಕಿ ಅಳುತ್ತಾಳೆ.

ಆರ್ಯ ಸರ್ ಹೀಗೆ ಮಾಡಿರಲು ಸಾಧ್ಯವೇ ಇಲ್ಲ ಎಂದು ಮೀರಾ ಹೇಳುತ್ತಾಳೆ. ಆಗ ಅನು ನಿನಗೇ ಹೀಗೆ ಆಗಿರುವಾಗ ನನಗೆ ಹೇಗೆ ಆಗಿರಬೇಡ. ನಂಬಿಕೆ ಎಂಬ ಹೆಸರಲ್ಲಿ ಎಲ್ಲರಿಗೂ ಮೋಸ ಮಾಡಿದ್ದಾರೆ. ಈಗ ಇವರ ಬಗ್ಗೆ ನನಗೆ ಬಿಟ್ಟರೆ, ನಿನಗೆ ಮಾತ್ರವೇ ಗೊತ್ತಿರುವುದು ಎಂದು ಹೇಳುತ್ತಾಳೆ.

ಮಾತು ಮುಂದುವರೆಸುವ ಅನು, ಇಪ್ಪತ್ತು ವರ್ಷಗಳಿಂದ ಬೇರೂರಿರುವ ನಂಬಿಕೆಯನ್ನು ಸುಳ್ಳು ಮಾಡಲು ನನ್ನೊಬ್ಬಳಿಂದ ಸಾಧ್ಯವಿಲ್ಲ. ಹಾಗಾಗಿ ನೀನು ನನಗೆ ಸಪೋರ್ಟ್ ಮಾಡಬೇಕು. ನನಗೀಗ ನಿನ್ನ ಸಹಾಯ ತುಂಬಾ ಅಗತ್ಯವಿದೆ ಎಂದು ಹೇಳುತ್ತಾಳೆ.

ಅನುಗೆ ಮಾತು ಕೊಟ್ಟ ಮೀರಾ!

ಅನುಗೆ ಮಾತು ಕೊಟ್ಟ ಮೀರಾ!

ಅಳುತ್ತಿರುವ ಮೀರಾಳನ್ನು ಬಾ ಊಟ ಮಾಡು ಎಂದು ಡೈನಿಂಗ್ ಟೇಬಲ್ ಗೆ ಕರೆದುಕೊಂಡು ಹೋಗುತ್ತಾಳೆ. ಪ್ಲೀಸ್ ಅನು ಇದ್ಯಾವುದನ್ನು ನಂಬುವುದಕ್ಕೆ ನನ್ನ ಕೈಯಲ್ಲಿ ಆಗುತ್ತಿಲ್ಲ. ನಾನಿದ್ದ ಲೋಕವೇ ಚೆನ್ನಾಗಿತ್ತು. ಯಾಕೆ ಈ ಸತ್ಯವನ್ನೆಲ್ಲಾ ನನಗೆ ಹೇಳಿದೆ. ನನಗೆ ಇದ್ಯಾವುದೂ ಗೊತ್ತಾಗಬಾರದಿತ್ತು ಎಂದು ಹೇಳುತ್ತಾಳೆ. ಅಲ್ಲದೇ, ಈ ಎಲ್ಲಾ ಸತ್ಯವನ್ನು ಆರ್ಯ ಸರ್ ಎಲ್ಲರ ಮುಂದೆ ಒಪ್ಪಿಕೊಳ್ಳಬೇಕು. ಮಾತು ಮಾತಿಗೂ ನಂಬಿಕೆ ಎನ್ನುವವರು ಹೀಗೆ ಮಾಡಿದರೆ, ಇದನ್ನೆಲ್ಲಾ ಅವರು ಒಪ್ಪಿಕೊಂಡಿಲ್ಲ ಎಂದರೆ ಆ ನಂಬಿಕೆ ಪದಕ್ಕೆ ಅರ್ಥವೇ ಇರುವುದಿಲ್ಲ ಎಂದು ಹೇಳುತ್ತಾಳೆ. ಆಮೇಲೆ ನಾನು ನಿನ್ನ ಜೊತೆ ಸದಾ ಇರುತ್ತೇನೆ ಎಂದು ಹೇಳುತ್ತಾಳೆ.

ಆರ್ಯನ ಅಸಲಿ ಕಥೆ ಮೀರಾ ಮುಂದೆ ಬಯಲು!

ಮೀರಾಗೆ ಊಟ ಮಾಡಿಸಿದ ಅನು!

ಮೀರಾಗೆ ಊಟ ಮಾಡಿಸಿದ ಅನು!

ಮಾತು ಮುಂದುವರಿಸಿ, ಕ್ಷಮಿಸು ಅನು ನನಗೆ ಇದ್ಯಾವುದೂ ಗೊತ್ತಿರಲಿಲ್ಲ. ನಾನು ನಿನಗೆ ಏನೆಲ್ಲಾ ಮಾಡಿದೆ. ನಿನ್ನ ಬಗ್ಗೆ ತುಂಬಾ ತಪ್ಪಾಗಿ ಅರ್ಥ ಮಾಡಿಕೊಂಡು ಬಿಟ್ಟಿದ್ದೆ. ಇನ್ಮೇಲೆ ನಿನ್ನ ಜೊತೆಗೆ ನಾನು ಸದಾ ಇರುತ್ತೇನೆ ಎಂದು ಹೇಳುತ್ತಾಳೆ. ಆಗ ಅನು ನಾನೇ ನಿನಗೆ ಊಟ ಮಾಡಿಸುತ್ತೇನೆ ಎಂದು ಹೇಳಿ ಊಟ ಮಾಡಿಸುತ್ತಾಳೆ. ಮನೆಗೆ ಹೋದ ಮೀರಾ ಆರ್ಯ ಫೋಟೋಗಳನ್ನೆಲ್ಲಾ ತೆಗೆದು ಬಿಡುತ್ತಾಳೆ. ಅಳುತ್ತಾ ಕುತಿರುತ್ತಾಳೆ. ಆಗ ಅನು ಕಾಲ್ ಮಾಡಿ ಆಫಿಸಿಗೆ ಬರೆದೇ ಇದ್ದರೆ, ನಿನ್ನ ಬಿಹೇವಿಯರ್ ನಲ್ಲಿ ಬದಲಾದರೆ ಕಷ್ಟವಾಗುತ್ತೆ ಆಫೀಸಿಗೆ ಹೊರಡು ಎಂದು ಹೇಳುತ್ತಾಳೆ.

ಮೀರಾಳನ್ನು ಪ್ರಶ್ನೆ ಮಾಡಿದ ಝೇಂಡೆ!

ಮೀರಾಳನ್ನು ಪ್ರಶ್ನೆ ಮಾಡಿದ ಝೇಂಡೆ!

ಇತ್ತ ಝೇಂಡೇ ಮೀಟಿಂಗ್ ಗೆ ಹೋಗುತ್ತಿರುವ ಆರ್ಯನನ್ನು ತಡೆಯುತ್ತಾನೆ. ಆಗ ಆರ್ಯ ಮೀಟಿಂಗ್ ಗೆ ಹೋಗುತ್ತಿದ್ದೀನಿ. ಈ ಟೈಮ್ ನಲ್ಲಿ ಏನೋ ನಿಂದು ಎಂದು ಹೇಳುತ್ತಾನೆ. ಆಗ ಝೇಂಡೇ ಎಲ್ಲಾ ಬದಲಾಗುತ್ತಿದೆ ಆರ್ಯ. ನಿನ್ನ ಟೈಮ್ ಮುಗಿಯುತ್ತಾ ಇದೆ. ಮೊದಲಿನಂತೆ ಈಗ ಯಾವುದು ಇಲ್ಲ ಎನ್ನುತ್ತಾನೆ. ಆಗ ಆರ್ಯ ಅದೇನು ಸರಿಯಾಗಿ ಹೇಳೋ ಎಂದಾಗ ನಿನ್ನ ಹೆಂಡತಿ ಮತ್ತೆ ತಮ್ಮ ಹರ್ಷ ಸೇರಿಕೊಂಡು ಇದನ್ನೆಲ್ಲಾ ಬದಲಾಯಿಸುತ್ತಿದ್ದಾರೆ. ನಿನಗೆ ಏನೂ ಸಿಗುವುದಿಲ್ಲ. ಇಷ್ಟು ವರ್ಷ ಮಾಡಿದ ತಪಸ್ಸಿಗೆ ಬೆಲೆ ಸಿಗೋದಿಲ್ಲ ಎನ್ನುತ್ತಾನೆ.

ಮರುಜನ್ಮದ ಬಗ್ಗೆ ತಮಾಷೆ ಮಾಡಿದ ಆರ್ಯ!

ಮರುಜನ್ಮದ ಬಗ್ಗೆ ತಮಾಷೆ ಮಾಡಿದ ಆರ್ಯ!

ಆಗ ಇದ್ಯಾವುದೂ ನನ್ನ ಹೆಸರಲ್ಲಿ ಇಲ್ಲ ಅನ್ನೋದ ನನಗೆ ಗೊತ್ತಿದೆ. ಒಂದು ದಿನ ನನ್ನ ಹೆಂಡತಿ ಹೆಸರಿಗೆ ಮಾಡಿಸುತ್ತೇನೆ. ಆಗ ಎಲ್ಲವೂ ನನ್ನದಾಗುತ್ತೆ ಅನ್ನೋ ಬಲವಾದ ನಂಬಿಕೆ ಇದೆ ಎನ್ನುತ್ತಾನೆ. ಹಾಗೊಂದು ವೇಳೆ ಅದೆಲ್ಲಾ ಸಿಗಬಾರದು ಎಂದರೆ ರಾಜನಂದಿನಿ ಮರುಜನ್ಮ ತಾಳಬೇಕಷ್ಟೇ ಎನ್ನುತ್ತಾನೆ. ಇದಕ್ಕೆ ಝೇಂಡೇ ರಾಜನಂದಿನಿ ಮರುಜನ್ಮ ತೆಗೆದುಕೊಂಡು ಬಂದರೆ ಏನು ಮಾಡುತ್ತೀಯಾ ಎಂದಾಗ ಅದು ನಾನೇ ಕಟ್ಟಿದ ಕಥೆ ನನ್ನ ಹೆಂಡತಿ ಅನು ರಾಜನಂದಿನಿ ಅನ್ನೋದನ್ನ ನಾನೇ ಹೇಳಿರುವ ಸುಳ್ಳು ಕಥೆ ಎಂದು ಹೇಳಿ ಅಲ್ಲಿಂದ ಹೊರಡುತ್ತಾನೆ.

ಮೀರಾ ನಡವಳಿಕೆ ಕಂಡು ಝೇಂಡೇ ಶಾಕ್!

ಮೀರಾ ನಡವಳಿಕೆ ಕಂಡು ಝೇಂಡೇ ಶಾಕ್!

ಇತ್ತ ಮನೆಯಲ್ಲಿ ಆರ್ಯ ಗೆ ಹರ್ಷ ಫ್ಯಾಬ್ರಿಕ್ ಕಂಪನಿಯ ಪ್ರಾಜೆಕ್ಟ್ ಬಗ್ಗೆ ಹೇಳುತ್ತಿರುತ್ತಾನೆ. ಆಗ ಅನು ಯಾರದು ಅವರ ಹೆಸರೇನು ಎಂದು ಕೇಳಿ, ಪ್ರಾಜೆಕ್ಟ್ ರಿಜೆಕ್ಟ್ ಮಾಡಿದ್ದು ಒಳ್ಳೆಯದು ಎನ್ನುತ್ತಾಳೆ. ಇದಕ್ಕೆ ಆರ್ಯ ಕೂಡ ತಲೆದೂಗುತ್ತಾನೆ. ಅನು ಈ ಬಿಸಿನೆಸ್ ಡೀಲ್ ಸುಳ್ಳು ಎಂದು ಅರ್ಥ ಮಾಡಿಕೊಳ್ಳುತ್ತಾಳೆ. ಇನ್ನು ಮೀರಾ ಆಫೀಸಿಗೆ ಬರುತ್ತಿದ್ದಂತೆಯೇ ಝೇಂಡೇ ಮಾತನಾಡಿಸುತ್ತಾನೆ. ರಾಜನಂದಿನಿ ವಿಲಾಸದಲ್ಲಿ ಅನು ಜೊತೆ ಡಿನ್ನರ್ ಹೇಗಿತ್ತು ಎಂದು ಕೇಳುತ್ತಾನೆ. ಆಗ ಮೀರಾ ನಾನು ಡಿನ್ನರ್ ಗೆ ಹೋಗುತ್ತಿರುವುದು ನಿಮಗೆ ಹೇಳಿದ್ದೆ. ಆದರೆ ರಾಜನಂದಿನಿ ವಿಲಾಸಕ್ಕೆ ಹೋಗಿದ್ದು ನಿಮಗೆ ಹೇಗೆ ಗೊತ್ತಾಯ್ತು ಎಂದು ಪ್ರಶ್ನೆ ಮಾಡಿ ಶಾಕ್ ಕೊಡುತ್ತಾಳೆ.

More from Filmibeat

English summary
Jothe Jotheyali Serial Return Update On May 24th Episode, Rajanandini Father Refuse Her Marriege With Subhash Patil,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X