ಶಾನುಭೋಗರಿಗೆ ವಾರ್ನಿಂಗ್ ಕೊಟ್ಟ ಝೇಂಡೇ!

By ಪ್ರಿಯಾ ದೊರೆ

ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಈಗ ಮೀರಾ ಹಾಗೂ ಅನು ಒಂದಾಗಿದ್ದಾರೆ. ಇನ್ನೇನಿದ್ದರೂ ಆರ್ಯವರ್ಧನ್ ಬಣ್ಣವನ್ನು ಬಯಲಿಗೆಳೆಯುವುದೊಂದೇ ಬಾಕಿ ಇದೆ. ಇದಕ್ಕಾಗಿ ಕೆಲ ತಯಾರಿಗಳನ್ನು ಕೂಡ ಮಾಡಿಕೊಳ್ಳುತ್ತಿದ್ದಾರೆ.

ಆರ್ಯ ಹಾಗೂ ಹರ್ಷನ ಕ್ಯಾಬಿನ್ ಗೆ ಅನು ಮತ್ತು ಮೀರಾ ಸೇರಿಕೊಂಡು ವಾಯ್ಸ್ ರೆಕಾರ್ಡರ್ ಅಳವಡಿಸಿದ್ದಾರೆ. ಈ ಮೂಲಕ ಆರ್ಯನ ಪ್ಲಾನ್ ಗಳನ್ನು ಉಲ್ಟಾ ಮಾಡಲು ಹೊರಟಿದ್ದಾರೆ. ಆದರೆ ಈ ವಿಚಾರವನ್ನು ಇವರಿಬ್ಬರು ಶಾನುಭೋಗ ಸರ್ ಗೆ ಬಿಟ್ಟರೆ ಬೇರೆ ಯಾರಿಗೂ ಹೇಳಿಲ್ಲ.

ಇತ್ತ ಝೇಂಡೇಗೆ ಮೀರಾ ನಡವಳಿಕೆಯಲ್ಲಿ ವ್ಯತ್ಯಾಸ ಕಾಣುತ್ತಿದೆ. ಆದರೂ ಕೆಲ ಸೀಕ್ರೆಟ್ ಗಳನ್ನು ಬಿಟ್ಟುಕೊಟ್ಟಿದ್ದಾನೆ. ಮೀರಾ, ಆರ್ಯ ಮುಂದೆ ಸ್ವಲ್ಪವೂ ಅನುಮಾನ ಬಾರದಂತೆ ನಾಟಕವಾಡಲು ಶುರು ಮಾಡಿದ್ದಾಳೆ.

ಆರ್ಯನಿಗೆ ಆಕ್ಸಿಡೆಂಟ್ ಆಯ್ತು!

ಆರ್ಯನಿಗೆ ಆಕ್ಸಿಡೆಂಟ್ ಆಯ್ತು!

ಇತ್ತ ಆರ್ಯನಿಗೆ ಅಪಘಾತವಾಗಿದೆ. ಆತನನ್ನು ಮನೆಗೆ ಕರೆದುಕೊಂಡು ಬರಲಾಗಿದ್ದು, ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಆರ್ಯನ ತಲೆಗೆ ಜೋರಾಗಿ ಪೆಟ್ಟಾಗಿದ್ದು, ಆರ್ಯನಿಗೆ ಯಾವಾಗ ಎಚ್ಚರವಾಗುತ್ತೆ ಎಂಬುದು ಗೊತ್ತಿಲ್ಲ. ಈ ವಿಚಾರ ಕೇಳಿ ಹರ್ಷ ಹಾಗೂ ಅನು ಇಬ್ಬರೂ ಆಫಿಸಿನಿಂದ ಓಡಿ ಬಂದಿದ್ದಾರೆ. ಆಕ್ಸಿಡೆಂಟ್ ಹೇಗೆ ಆಯಿತು. ಮುಂದಿನ ಪರಿಸ್ಥಿತಿ ಏನು ಎಂಬುದನ್ನು ಇಬ್ಬರೂ ತಿಳಿದುಕೊಮಡಿದ್ದಾರೆ. ಶಾರದಾ ಶಾಕ್ ಆದರೂ, ಆರ್ಯನಿಗೆ ಏನೂ ಆಗುವುದಿಲ್ಲ ಎಂದು ಸಮಾಧಾನ ಮಾಡಿಕೊಂಡಿದ್ದಾಳೆ.

ಮತ್ತೆ ಗೊಂದಲಕ್ಕೆ ಸಿಲುಕಿದ ಅನು!

ಮತ್ತೆ ಗೊಂದಲಕ್ಕೆ ಸಿಲುಕಿದ ಅನು!

ಈಗ ಅನು ಫುಲ್ ಕನ್ಫ್ಯೂಸ್ ಆಗಿದ್ದಾಳೆ. ಮುಂದೇನು ಮಾಡಬೇಕು ಎಂಬುದೇ ಅರ್ಥವಾಗುತ್ತಿಲ್ಲ. ಇದೇ ವೇಳೆಗೆ ಜೋಗ್ತವ್ವ ಬಂದಿದ್ದು, ನೀನು ಕಂಡಿದ್ದನ್ನು ಪ್ರಮಾಣಿಸಿ ನೋಡು. ತಾಳ್ಮೆ ಮುಖ್ಯ. ಆತುರ ಪಟ್ಟು ಎಲ್ಲಾ ಕೆಲಸವನ್ನು ಹಾಳು ಮಾಡಿಕೊಳ್ಳಬೇಡ. ತಪ್ಪು ಮಾಡಿದವರು ಶಿಕ್ಷೆಯನ್ನು ಅನುಭವಿಸಲೇ ಬೇಕು ಎಂದು ಹೇಳಿ ಹೋಗುತ್ತಾಳೆ. ಆರ್ಯನ ಸೇವೆ ಮಾಡುತ್ತಿರುವಾಗಲೇ ಅವಳ ಮನಸ್ಸು ಅನು ಜೊತೆಗೆ ಮಾತನಾಡಿದೆ. ಶಿಕ್ಷೆ ಕೊಡಬೇಕಾದವರಿಗೆ ಸೇವೆ ಮಾಡುತ್ತಿದ್ದೀಯಾ ಎಂದು ವ್ಯಂಗ್ಯವಾಗಿ ಮಾತನಾಡಿದೆ.

ಹರ್ಷನಿಗೆ ಪರಿಸ್ಥಿತಿ ಅರ್ಥವಾಗುತ್ತಿಲ್ಲ!

ಹರ್ಷನಿಗೆ ಪರಿಸ್ಥಿತಿ ಅರ್ಥವಾಗುತ್ತಿಲ್ಲ!

ಹರ್ಷ ಬಿಕ್ಕಿ ಬಿಕ್ಕಿ ಅಳುತ್ತಿದ್ದಾನೆ. ಹರ್ಷನನ್ನು ಆತನ ಹೆಂಡತಿ ಸಮಾಧಾನ ಮಾಡುತ್ತಿದ್ದಾಳೆ. ರೂಮಿಗೆ ಕರೆದುಕೊಂಡು ಹೋಗಿ, ರೆಸ್ಟ್ ಮಾಡುವಂತೆ ಹೇಳುತ್ತಿದ್ದಾಳೆ. ಆದರೆ ಹರ್ಷ ಅಳುವುದನ್ನು ನಿಲ್ಲಿಸುತ್ತಿಲ್ಲ. ಅದಕ್ಕೆ ಕಾರಣ ಅನು ಹೇಳಿದ ಸತ್ಯದ ಮಾತುಗಳು. ಈಗ ಆರ್ಯನ ಬಳಿ ಹರ್ಷ ಅದೆಲ್ಲವನ್ನೂ ಕೇಳಬೇಕಿದೆ. ಆದರೆ, ಅಷ್ಟರಲ್ಲಿ ಆರ್ಯನಿಗೆ ಅಪಘಾತವಾಗಿದೆ. ಯಾಕೆ ಹೀಗೆಲ್ಲಾ ಆಯ್ತು. ನಿಜವಾಗಲೂ ತನಗೆ ಮೋಸವಾಗಿದೆಯಾ. ದಾದಾ ಎಚ್ಚರವಾಗುವವರೆಗೂ ಕಾಯುವುದಾಗಿ ನಿಶ್ಚಯ ಮಾಡಿದ್ದಾನೆ.

ಶಾನುಭೋಗರಿಗೆ ಝೇಂಡೇ ವಾರ್ನಿಂಗ್!

ಶಾನುಭೋಗರಿಗೆ ಝೇಂಡೇ ವಾರ್ನಿಂಗ್!

ಇತ್ತ ಮನೆಗೆ ಬಂದು ಆರ್ಯ ಸರ್ ನನ್ನು ನೋಡಿಕೊಂಡು ಹೋಗುತ್ತಿದ್ದ ಶಾನುಬೋಗರನ್ನು ಝೇಂಡೇ ಗದರಿಸಿದ್ದಾನೆ. ವಯಸ್ಸಾದ ಮೇಲೆ ಇದೆಲ್ಲಾ ಯಾಕೆ ಬೇಕು. ನಿಮ್ಮ ಪಾಡಿಗೆ ನೀವಿರಬಹುದು. ಕುಟುಂಬದ ಬಗ್ಗೆ ಯೋಚನೆ ಇರಲಿ ಎಂದು ಎಚ್ಚರಿಸಿದ್ದಾನೆ. ಆದರೆ ಇದಕ್ಕೆ ಹೆದರದ ಶಾನುಬೋಗರು, ಝೇಂಡೇಗೆ ಪ್ರತ್ಯುತ್ತರ ನೀಡಿದ್ದಾರೆ. ತಮ್ಮಂತೆಯೇ ಝೇಂಡೆಯೂ ಎಂಬುದನ್ನು ನೆನಪಿಸಿದ್ದಾರೆ. ಇದೇ ವೇಳೆಗೆ ಅನು ಬಂದಿದ್ದು ಝೇಂಡೆಗೆ ಹಿಂಸೆಯಾಗಿದೆ. ಅನು ಶಾನುಬೋಗರನ್ನು ಕಾರಿನ ಬಳಿ ವರೆಗೂ ಬಿಟ್ಟು ಬರುವುದಕ್ಕೆ ಹೋಗುತ್ತಾಳೆ. ಮುಂದೇನಾಗುತ್ತೆ ಎಂಬುದೇ ಈಗ ದೊಡ್ಡ ಪ್ರಶ್ನೆಯಾಗಿದೆ. ಆರ್ಯ ಈ ಧಾರಾವಾಹಿಯಲ್ಲಿ ನಿಜಕ್ಕೂ ವಿಲನ್ ಆ ಅಥವಾ ಹೀರೋನಾ ಎಂಬ ಪ್ರಶ್ನೆ ಎಲ್ಲರನ್ನೂ ಕಾಡಲು ಶುರು ಮಾಡಿದೆ.

More from Filmibeat

English summary
Jothe Jotheyali Serial Return Update On May 27th Episode, Rajanandini Father Refuse Her Marriege With Subhash Patil,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X