ಜೊತೆ ಜೊತೆಯಲಿ: ಸೀಕ್ರೆಟ್ ರೂಮ್ ರಹಸ್ಯ ಬಯಲು ಮಾಡಿದ ಅನು!

By ಪ್ರಿಯಾ ದೊರೆ

'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಹರ್ಷವರ್ಧನ್ ತುಂಬಾ ಗೊಂದಲದಲ್ಲಿದ್ದಾನೆ. ದಾದ ತನಗೆ ಮೋಸ ಮಾಡಿದ್ದಾರಾ..? ಇಲ್ಲ ಇದರ ಹಿಂದಿನ ಸತ್ಯವೇನು ಎಂಬ ಗೊಂದಲದಲ್ಲಿದ್ದಾನೆ. ಆದರೆ ಈ ಯಾವ ವಿಚಾರವೂ ಮಾನ್ಸಿಗೆ ಗೊತ್ತಿಲ್ಲ.

ಇತ್ತ ಶಾರದಾ ತುಂಬಾ ಕುಗ್ಗಿ ಹೋಗಿದ್ದಾಳೆ. ಮೇಲ್ನೋಟಕ್ಕೆ ಶಾರದಾ ಕೊಂಚ ಆರಾಮಾಗಿರುವಂತೆ ಕಾಣುತ್ತಿದ್ದರೂ ಕೂಡ, ಒಳಗೊಳಗೆ ತುಂಬಾ ಯೋಚಿಸುತ್ತಿದ್ದಾಳೆ. ಮಗನಿಗೆ ಹೀಗಾಯಿತಲ್ಲ ಎಂಬ ಚಿಂತೆಗೀಡಾಗಿದ್ದಾರೆ. ಆದರೆ ಅನು ಮಾತ್ರ ಆರ್ಯವರ್ಧನ್ ಬಗ್ಗೆ ಎಲ್ಲರಿಗೂ, ಎಲ್ಲವನ್ನೂ ಹೇಳಲು ಮುಂದಾಗಿದ್ದಾಳೆ.

ಅನು ಸಿರಿಮನೆ ಸದ್ಯ ಪ್ರಜ್ಞೆ ಇಲ್ಲದೆ ಮಲಗಿರುವ ಆರ್ಯನ ಸೇವೆ ಮಾಡುತ್ತಿದ್ದಾಳೆ. ಇದನ್ನು ನೋಡಿದ ರಾಜನಂದಿನಿ ಕೋಪಗೊಂಡಿದ್ದಾಳೆ. ಇಲ್ಲಿ ರಾಜನಂದಿನಿ ಅನು ಆತ್ಮದಂತೆ ನಡೆದುಕೊಳ್ಳುತ್ತಿದ್ದು, ನೀನು ಮಾಡುತ್ತಿರುವುದು ಸರಿಯಿಲ್ಲ ಎಂದು ಹೇಳಿದೆ ಎನ್ನುತ್ತಿದ್ದಾಳೆ ರಾಜನಂದಿನಿ.

Recommended Video

'ಜೊತೆ ಜೊತೆಯಲಿ' ನಟಿ ಮೇಘಾ ಶೆಟ್ಟಿ ಹೊಸ ಸಿನಿಮಾ ಹೇಗಿರುತ್ತೆ? | #meghashetty

ಅನು ಸಿರಿಮನೆ ಬೆನ್ನತ್ತಿದ ರಾಜನಂದಿನಿ!

ಅನು ಸಿರಿಮನೆ ಬೆನ್ನತ್ತಿದ ರಾಜನಂದಿನಿ!

ರಾಜನಂದಿನಿ ಅನುಗೆ ಕಾಣಿಸಿಕೊಂಡು ಮುಂದೇನು ಮಾಡಬೇಕು ಎನ್ನುವುದನ್ನು ಹೇಳುತ್ತಿದ್ದಾಳೆ. ಆದರೆ, ಅನು ತಾನು ಏನು ಮಾಡಬೇಕು ಎಂಬುದನ್ನು ತಿಳಿಯದೇ ಸುಮ್ಮನಿದ್ದಾಳೆ. ರಾಜನಂದಿನಿ ಮಾತ್ರ ಆರ್ಯವರ್ಧನ್ ಮೇಲೆ ಕೆಂಡಕಾರುತ್ತಿದ್ದಾಳೆ. ಹೇಗಾದರೂ ಮಾಡಿ ತನ್ನ ಹಗೆ ಸಾಧಿಸಿಕೊಳ್ಳಬೇಕು ಎಂದು ಪಣ ತೊಟ್ಟಿದ್ದಾಳೆ. ಮುಂದೆ ಏನಾಗುತ್ತದೆ ಎಂಬ ಕುತೂಹಲ ಧಾರಾವಾಹಿಯಲ್ಲಿ ಮೂಡಿದೆ.

ಅನು ಜೊತೆಗೆ ವಾದಕ್ಕಿಳಿದ ರಾಜನಂದಿನಿ!

ಅನು ಜೊತೆಗೆ ವಾದಕ್ಕಿಳಿದ ರಾಜನಂದಿನಿ!

ಅನು ಜೊತೆಗೆ ರೂಮಿನಲ್ಲಿ ರಾಜನಂದಿನಿ ಆತ್ಮ ವಾದಕ್ಕಿಳಿಯುತ್ತದೆ. ಅನು ಏನೇ ಹೇಳಿದರೂ ನಂಬುವುದಿಲ್ಲ. ಪದೇ ಪದೆ ಸೇಡು.. ಸೇಡು ಎಂದು ರಾಜನಂದಿನಿ ಹೇಳುತ್ತಾಳೆ. ಆರ್ಯ ನನ್ನಿಂದ ಕೇವಲ ದುಡ್ಡು, ಆಸ್ತಿ, ಅಧಿಕಾರವನ್ನು ಕಿತ್ತುಕೊಂಡಿದ್ದರೆ ಯೋಚಿಸುತ್ತಿರಲಿಲ್ಲ. ಆದರೆ, ಆರ್ಯ ನನ್ನ ಪ್ರೀತಿಗೆ ಮೋಸ ಮಾಡಿದ್ದಾನೆ ಎಂದು ಹೇಳುತ್ತಾಳೆ. ಏನೇ ಆಗಲಿ ನನಗಾದ ಅನ್ಯಾಯಕ್ಕೆ ನ್ಯಾಯ ಸಿಗಲೇಬೇಕು ಎಂದು ಹೇಳಿ ಹೋಗುತ್ತಾಳೆ.

ಒಳಗೊಳಗೆ ಕೊರಗುತ್ತಿರುವ ಸಂಪತ್ !

ಒಳಗೊಳಗೆ ಕೊರಗುತ್ತಿರುವ ಸಂಪತ್ !

ಇತ್ತ ಸಂಪತ್ ತುಂಬಾ ಕೊರಗುತ್ತಿದ್ದಾನೆ. ಯಾಕೆ ಎಂದು ರಮ್ಯಾ ಕೇಳಿದಾಗ, "ನಾನು ಅನು ಬಗ್ಗೆ ಯೋಚಿಸುತ್ತಿದ್ದೀನಿ. ಪಾಪ ಅನು ಅಲ್ಲಿ ಎಷ್ಟು ಹಿಂಸೆ ಅನುಭವಿಸುತ್ತಿದ್ದಾಳೋ ಏನೋ. ತನಗೆ ಮೋಸ ಮಾಡಿದ ಆರ್ಯನಿಗೆ ಈಗ ಅನು ಸೇವೆ ಮಾಡಬೇಕು. ನನಗೆ ಅಧಿಕಾರವಿದ್ದಿದ್ದರೆ ಅವಳನ್ನು ಕರೆದುಕೊಂಡು ಬರುತ್ತಿದ್ದೆ. ನಮ್ಮ ಅಪ್ಪ ಆರ್ಯನ ಜೊತೆಗೆ ಮದುವೆ ನಿಲ್ಲಿಸಲು ಪ್ರಯತ್ನಿಸಿದ್ದು ಸಕ್ಸಸ್ ಆಗಬೇಕಿತ್ತು. ಅವಳ ಮದುವೆ ನಿಂತು ಹೋಗಬೇಕಿತ್ತು. ಈಗಲೂ ಅನು ಆರ್ಯನನ್ನು ಬಿಟ್ಟು ಬರಬಹುದು. ಈ ಸಮಾಜಕ್ಕೆ ಹೆದರಿಕೊಳ್ಳುವ ಅಗತ್ಯವಿಲ್ಲ. ಹಾಗೊಂದು ವೇಳೆ, ಗಂಡ ಅನ್ನುವವನೊಬ್ಬ ಇರಲೇಬೇಕು ಎಂದರೆ, ನಾನೇ ಅನು ಗಂಡ ಆಗುತ್ತೇನೆ ಎಂದು ಹೇಳುತ್ತಾನೆ." ಆಗ ರಮ್ಯಾ, ಸಂಪತ್ ಕಪಾಳಕ್ಕೆ ಹೊಡೆಯುತ್ತಾಳೆ.

ಸೀಕ್ರೆಟ್ ರೂಮ್‌ನಲ್ಲಿ ಮಾನ್ಸಿ, ಹರ್ಷ!

ಸೀಕ್ರೆಟ್ ರೂಮ್‌ನಲ್ಲಿ ಮಾನ್ಸಿ, ಹರ್ಷ!

ಹರ್ಷ ಬೆಳಗ್ಗೆ ಎಷ್ಟೊತ್ತಾದರು ಎದ್ದಿರುವುದಿಲ್ಲ. ಹೀಗಾಗಿ ಮಾನ್ಸಿ ಬೈಯುತ್ತಿರುತ್ತಾಳೆ. ದಾದಾ ವಿಚಾರ ಹೇಳಿದ ಕೂಡಲೇ ಹರ್ಷ ಎದ್ದು ಗಲಾಟೆ ಮಾಡುತ್ತಾನೆ. ಅಷ್ಟರಲ್ಲಿ ಮಂಗಳಾರತಿ ತಂದ ಅನು ರಾಜನಂದಿನಿ ರೀತಿಯಲ್ಲಿ ಮಾತನಾಡುತ್ತಾಳೆ. ಮಾನ್ಸಿ ಕನ್‌ಫ್ಯೂಸ್ ಆದಾಗ, ಅನು, ಹರ್ಷ ಹಾಗೂ ಮಾನ್ಸಿ ಇಬ್ಬರನ್ನೂ ಸೀಕ್ರೆಟ್ ರೂಮಿಗೆ ಕರೆದುಕೊಂಡು ಹೋಗುತ್ತಾಳೆ. ಮಾನ್ಸಿಗೆ ಏನು ಅನಿಸುವುದಿಲ್ಲ. ಆದರೆ, ಹರ್ಷನಿಗೆ ದುಃಖ ಉಮ್ಮಳಿಸಿ ಬರುತ್ತದೆ. ರಾಜನಂದಿನಿ ಫೋಟೊ ನೋಡಿ ಖುಷಿ ಪಡುತ್ತಾನೆ. ಜೊತೆಗೆ ಅಪ್ಪನ ಫೋಟೊ ನೋಡಿ ಅಳುತ್ತಾನೆ. ಅನು ಸಿರಿಮನೆ ಇನ್ಮುಂದೆ ಇದ್ಯಾವುದೂ ಸೀಕ್ರೆಟ್ ಆಗಿರುವುದಿಲ್ಲ. ಎಲ್ಲವೂ ಎಲ್ಲರಿಗೂ ಗೊತ್ತಾಗುತ್ತದೆ ಎಂದು ಹೇಳುತ್ತಾಳೆ.

More from Filmibeat

English summary
Jothe Jotheyali Serial Return Update On May 30th Episode,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X