ಮನೆ ಬಿಟ್ಟು ಹೊರಟ ಆರ್ಯವರ್ಧನ್: ಅನಿರುದ್ಧ್ ಪಾತ್ರ ಮುಗಿಯಿತೆ?

By ಪ್ರಿಯಾ ದೊರೆ

ಜೊತೆ ಜೊತೆಯಲಿ ಧಾರಾವಾಹಿಯನ್ನು ನೋಡುತ್ತಿದ್ದರೆ, ಸೀರಿಯಲ್ ಮುಗಿಯುವುದು ಗ್ಯಾರೆಂಟಿ ಎಂಬಂತೆ ಕಾಣುತ್ತಿದೆ. ಯಾಕೆಂದರೆ ಈಗಾಗಲೇ ನಿನ್ನೆಯ ಎಪಿಸೋಡ್ ಪ್ರಕಾರ ಆರ್ಯವರ್ಧನ್ ಮನೆಯಿಂದ ಹೊರಗೆ ಹೊರಟಿದ್ದಾನೆ.

ಅಲ್ಲದೇ, ಅನು ಕೂಡ ತಾನು ಗರ್ಭಿಣಿ ಎಂಬ ವಿಚಾರವನ್ನು ಎಲ್ಲರಿಗೂ ಹೇಳಿ, ಮನೆಯಲ್ಲಿನ ಮೌನವನ್ನು ಹೋಗಲಾಡಿಸಲು ಮುಂದಾಗಿದ್ದಾಳೆ. ಆಫೀಸಿನ ಜವಾಬ್ದಾರಿ ಎಲ್ಲವೂ ಹರ್ಷವರ್ಧನ್ ಹೆಗಲಿಗೆ ಹೊರಿಸಲಾಗಿದೆ.

ಮೊನ್ನೆಯ ಎಪಿಸೋಡ್‌ಲ್ಲಿ ಮಾನ್ಸಿ ಜೊತೆಗೆ ಮಾತನಾಡಿದ ಅನು ಗೇಮ್ ಓವರ್, ಇನ್ನೇನು ಇಲ್ಲ. ಆರ್ಯ ಇನ್ಯಾವತ್ತಿಗೂ ಆಫೀಸಿಗೆ ಬರೋದಿಲ್ಲ ಎಂದು ಹೇಳಿದ್ದಾಳೆ. ಝೇಂಡೆ ನೋಡಿದರೆ, ಎಲ್ಲರಿಂದ ದೂರಾಗಿದ್ದಾನೆ ಎಂಬಂತೆ ಕಾಣುತ್ತಿದೆ.

ಆತಂಕದಲ್ಲಿರುವ ಆರ್ಯ!

ಆತಂಕದಲ್ಲಿರುವ ಆರ್ಯ!

ಆತಂಕದಲ್ಲಿರುವ ಆರ್ಯವರ್ಧನ್ ಅನು ಮುಂದೆ ಒಪ್ಪಿಕೊಳ್ಳುತ್ತಾಳಾ..? ಎಂಬ ಅನುಮಾನ, ಆತಂದಲ್ಲಿದ್ದಾನೆ. ಈ ವೇಳೆ ಹೊರಗಿನಿಂದ ಬಂದ ಅನು, ಆರ್ಯ ಸರ್ ಜೊತೆಗೆ ಸರಿಯಾಗಿ ಮಾತನಾಡುವುದಿಲ್ಲ. ಆರ್ಯವರ್ಧನ್ ಬಲವಂತವಾಗಿ ಅನುಳನ್ನು ಮಾತನಾಡಿಸುತ್ತಾನೆ. ಆದರೆ ಅನು ಕೊಡುವ ಉತ್ತರ ಮತ್ತೆ ಆರ್ಯನಿಗೆ ಬೇಸರವನ್ನುಂಟು ಮಾಡುತ್ತದೆ. ಎಲ್ಲಿಗೆ ಹೋಗಿದ್ದೆ ಅನು, ದೇವಸ್ಥಾನಕ್ಕೆ ಹೋಗಿದ್ಯಾ ಎಂದು ಕೇಳಿದ್ದಕ್ಕೆ, ಅನು ಇಲ್ಲ ದಾರಿಯಲ್ಲಿ ಜೋಗ್ತವ್ವ ಸಿಕ್ಕಿದರು ಎಂದು ಹೇಳುತ್ತಾಳೆ. ಆರ್ಯ ಅನುಳನ್ನು ಊಟಕ್ಕೆ ಕರೆದಿದ್ದಕ್ಕೆ, ಅನು ನನಗೆ ಈಗ ಹಸಿವಿಲ್ಲ. ನಾನು ಆಮೇಲೆ ಊಟ ಮಾಡುತ್ತೇನೆ. ನೀವು ಹೋಗಿ ಊಟ ಮಾಡಿ ಎನ್ನುತ್ತಾಳೆ.

ಮಾನ್ಸಿ ಜೊತೆಗೆ ಅನು ಮಾತು!

ಮಾನ್ಸಿ ಜೊತೆಗೆ ಅನು ಮಾತು!

ಇನ್ನು ಶಾರದಾ ದೇವಿ ಬಂದು ಊಟಕ್ಕೆ ಕರೆದರೂ ಹೋಗದ ಅನು, ಮಾನ್ಸಿಗಾಗಿ ಕಾಯುತ್ತಿರುತ್ತಾಳೆ. ಮಾನ್ಸಿ ಬಂದ ಕೂಡಲೇ, ಮಾನ್ಸಿ ಅಕ್ಕ, ನಮ್ಮ ನಿಮ್ಮ ನಡುವೆ ಏನೇ ಆಗಿರಬಹುದು. ಅದು ಮನೆಯಿಂದ ಹೊರಗಿನವರಿಗೆ ಗೊತ್ತಾಗುವುದು ಬೇಡ. ನಾಳೆ ಹಬ್ಬವಿದೆ. ಹಬ್ಬಕ್ಕೆ ಮೆನೆಗೆ ಜನ ಬರುತ್ತಾರೆ. ಅದರಲ್ಲೂ ನನ್ನ ಅಪ್ಪ-ಅಮ್ಮ ಅಂತೂ ಬರುತ್ತಾರೆ. ಅವರ ಮುಂದೆ ನಮ್ಮ ವೈಮನಸ್ಸನ್ನ ತೋರಿಸುವುದು ಬೇಡ. ಹಬ್ಬವನ್ನು ಒಟ್ಟಿಗೆ ಆಚರಿಸೋಣ ಎಂದು ಹೇಳುತ್ತಾಳೆ. ಅದಕ್ಕೆ ಮಾನ್ಸಿ ಈಗ ಊಟ ತಣ್ಣಗಾಗುತ್ತಿದೆ ಎಂದು ಹೇಳಿ ಹೊರಟು ಬಿಡುತ್ತಾಳೆ.

ಮನೆ ಬಿಟ್ಟು ಹೋದ ಆರ್ಯ!

ಮನೆ ಬಿಟ್ಟು ಹೋದ ಆರ್ಯ!

ಆರ್ಯ ಅನು ನಡವಳಿಕೆಯಿಂದಾಗಿ ನೊಂದಿದ್ದಾನೆ. ಅನು ತನ್ನನ್ನು ಅರ್ಥ ಮಾಡಿಕೊಳ್ಳುವುದಾಗಿದ್ದರೆ, ಇಷ್ಟೊತ್ತಿಗೆ ಅರ್ಥ ಮಾಡಿಕೊಳ್ಳಬೇಕಿತ್ತು. ಆದರೆ, ಅನುಗೆ ನಾನು ಅರ್ಥವಾಗಿಲ್ಲ. ನಾನೀಗ ಏನೇ ಮಾಡಿದರು, ಅದು ಸುಳ್ಳು-ಮೋಸ ಅನಿಸಿಕೊಳ್ಳುತ್ತಿದೆ. ಹಾಗಾಗಿ ನಾನು ಎಲ್ಲವನ್ನೂ ಬಿಟ್ಟು ಹೋಗುವುದೇ ಸರಿ. ನಾನು ಮೊದಲಿದ್ದಲ್ಲಿಗೆ ಹೋಗುತ್ತೇನೆ ಎಂದು ತೀರ್ಮಾನ ಮಾಡುತ್ತಾನೆ. ಪತ್ರ ಬರೆದಿಟ್ಟು ಆರ್ಯ ಮನೆಯಿಂದ ಹೊರಡುತ್ತಾನೆ. ಮನೆಯಿಂದ ಆಚೆ ಬಂದು ಝೇಂಡೇಗೆ ಕರೆ ಮಾಡಿ ಮಾತನಾಡುತ್ತಾನೆ. ಅಕಸ್ಮಾತ್ ಆಗಿ ಕರೆ ಬಂತು ಎಂದು ಹೇಳಿ ಫೋನ್ ಇಡುವ ಆರ್ಯ ಗುಡ್ ಬೈ ಎಂದು ಮನಸಿನಲ್ಲೇ ಹೇಳಿಕೊಳ್ಳುತ್ತಾನೆ.

ಬೆಳಗ್ಗೆ ಹಬ್ಬಕ್ಕೆ ಎದ್ದ ಅನುಗೆ ಶಾಕ್!

ಬೆಳಗ್ಗೆ ಹಬ್ಬಕ್ಕೆ ಎದ್ದ ಅನುಗೆ ಶಾಕ್!

ಮಲಗುವ ಮುನ್ನ ಅನು ಹಬ್ಬದ ದಿನ ತಾನು ಗರ್ಭಿಣಿ ಆಗಿರುವ ವಿಚಾರವನ್ನು ಎಲ್ಲರಿಗೂ ಹೇಳಬೇಕು. ಆಗ ಎಲ್ಲರೂ ಖುಷಿ ಪಡುತ್ತಾರೆ. ಮತ್ತೆ ಹೊಸ ಜೀವನ ಶುರುವಾಗುತ್ತದೆ. ಎಲ್ಲಾ ಸಮಸ್ಯೆಗಳು ಮರೆತು ಹೋಗಿ ಖುಷಿಯೇ ತುಂಬಿರುತ್ತದೆ. ಎಲ್ಲರೂ ಮತ್ತೆ ಒಂದಾಗುತ್ತಾರೆ ಎಂದು ಅಂದುಕೊಂಡು ಮಲಗುತ್ತಾಳೆ. ಬೆಳಗ್ಗೆ ಬೇಗನೇ ಇದ್ದು, ಆರ್ಯ ಸರ್ ಇಲ್ಲದಿರುವುದನ್ನು ನೋಡಿ, ಎಲ್ಲಿಗೆ ಹೋದರು ಎಂದು ಕೊಳ್ಳುತ್ತಲೇ ರೆಡಿಯಾಗುತ್ತಾಳೆ. ಮೊದಲು ಆರ್ಯ ಸರ್ ಜೊತೆಗೆ ಮಾತನಾಡಬೇಕು. ಎಲ್ಲವನ್ನೂ ಹೇಳಬೇಕು ಎಂದು ಕೊಳ್ಳುತ್ತಾಳೆ. ಆದರೆ ಆರ್ಯ ಬರೆದಿಟ್ಟ ಪತ್ರ ನೋಡಿ ಶಾಕ್ ಆಗುತ್ತಾಳೆ.

More from Filmibeat

English summary
Jothe Jotheyali Serial Writen Update On August 24th, Aryavardhan character ends, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X