ಮಗು ಬಗ್ಗೆ ಹೇಳಿದ ಬಳಿಕ ಅನು ಮೇಲೆ ಮೂಡಿತು ಅನುಮಾನ!

ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಅನು ಸಿರಿಮನೆ ತಾನು ಗರ್ಭಿಣಿ ಎಂಬ ವಿಚಾರವನ್ನು ಎಲ್ಲರ ಮುಂದೆ ಹೇಳಿ ಖುಷಿಪಟ್ಟಿದ್ದಾಳೆ. ಮುಂದಿನ ವರ್ಷ ನಿಜವಾದ ಕೃಷ್ಣನನ್ನು ತೂಗುತ್ತೇನೆ ಎಂದು ಹೇಳಿದ್ದಾಳೆ.

ಅನು ಮಾತು ಕೇಳಿ ಎಲ್ಲರೂ ಖುಷಿ ಪಟ್ಟಿದ್ದಾರೆ. ಪುಷ್ಪಾ ಅಂತೂ ನೆಲದ ಮೇಲೆ ನಿಲ್ಲದೆ ಆಕಾಶದಲ್ಲೇ ಹಾರಾಡುತ್ತಿದ್ದಾಳೆ. ಆರ್ಯನಿಗೆ ಅನು ಎಂತಹ ಸಿಹಿ ಸುದ್ದಿ ಕೊಟ್ಟಳು ಎಂದು ಖುಷಿಯಾಗಿದೆ. ಆನಂದ ಬಾಷ್ಪವನ್ನು ಸುರಿಸಿದ್ದಾನೆ.

ಆದರೆ ಈ ಖುಷಿಯ ವಿಚಾರದಿಂದ ಮೀರಾ ಯೋಚನೆ ಬೇರೆ ಕಡೆ ಜಾರಿದೆ. ಆರ್ಯನ ಬಗ್ಗೆ ಏನೇನೋ ಹೇಳಿ, ಈಗ ತಾನು ಗರ್ಭಿಣಿಯಾಗಿದ್ದೀನಿ ಎನ್ನುತ್ತಿರುವುದು ಎಷ್ಟು ಸರಿ ಎಂದು ಯೋಚಿಸಿದ್ದಾಳೆ. ಇದೇ ಯೋಚನೆ ಮಾನ್ಸಿ ತಲೆಯಲ್ಲೂ ಹರಿದಾಡುತ್ತಿದೆ.

ಸಂಭ್ರಮದಲ್ಲಿ ವರ್ಧನ್ ಕುಟುಂಬ!

ಸಂಭ್ರಮದಲ್ಲಿ ವರ್ಧನ್ ಕುಟುಂಬ!

ಇದೇ ಖುಷಿಯಲ್ಲಿ ಅನು ಸಿರಿಮನೆ ಹಾಗೂ ಆರ್ಯವರ್ಧನ್ ಸೇರಿ ಶ್ರೀಕೃಷ್ಣನಿಗೆ ಪೂಜೆ ಮಾಡಿದ್ದಾರೆ. ಮನೆಯಲ್ಲಿ ವರ್ಧನ್ ಕುಟುಂಬ ಸಂಭ್ರಮದಿಂದ ಹಬ್ಬವನ್ನು ಆಚರಿಸಿದೆ. ಎಲ್ಲರೂ ಖುಷಿಯಾಗಿ ಸಿಹಿ ತಿಂದಿದ್ದಾರೆ. ಇನ್ನು ಈ ಖುಷಿಯ ಸಂದರ್ಭದಲ್ಲಿ ಆರ್ಯ ಝೇಂಡೇನನ್ನು ನೆನಪಿಸಿಕೊಂಡಿದ್ದಾನೆ. ಆದರೆ ಅವನು ಎಲ್ಲಿದ್ದಾನೆ ಎಂಬುದು ಯಾರಿಗೂ ಗೊತ್ತಿಲ್ಲ. ಪುಷ್ಪಾಳಿಗೆ ಅನುಳನ್ನು ಬಿಟ್ಟು ಹೋಗಲು ಮನಸೇ ಆಗುತ್ತಿಲ್ಲ. ಆದರೆ ವಿಧಿ ಇಲ್ಲದೆ ಮಗಳನ್ನು ಬಿಟ್ಟು ಹೊರಟಿದ್ದಾಳೆ. ಶಾರದಾ ದೇವಿಗೆ ಮಗುವಿನ ಆಗಮನ ಖುಷಿಯನ್ನು ತಂದಿದೆ. ಒಬ್ಬಳೇ ಸಂತೋಷದಲ್ಲಿ ತೇಲುತ್ತಿದ್ದಾಳೆ.

ಆರ್ಯನ ಜೊತೆ ಒಂದಾದ ಅನು!

ಆರ್ಯನ ಜೊತೆ ಒಂದಾದ ಅನು!

ಈಗ ಅನು ಮತ್ತು ಆರ್ಯ ಮತ್ತೆ ಒಂದಾಗಿದ್ದಾರೆ. ಆರ್ಯನಿಗೆ ಈ ಇಳಿವಯಸ್ಸಿನಲ್ಲಿ ನಾನು ಅಪ್ಪ ಆಗುತ್ತಿದ್ದೇನೆ. ಇದು ನನಗೆ ತುಂಬಾ ಖುಷಿ ಕೊಟ್ಟಿದೆ. ಮನೆಯವರೆಲ್ಲರ ಮುಂದೆ ಹೇಳಬೇಕೆಂದು ಈ ವಿಚಾರವನ್ನು ನನ್ನಿಂದ ಮುಚ್ಚಿಟ್ಟಿದ್ದ ಎಂದು ಆರ್ಯ ಅನುಳನ್ನು ಕೇಳಿದ್ದಾನೆ. ಇನ್ನು ಅನು ನಾಚಿಕೊಂಡಿದ್ದು, ಪತ್ರ ಬರೆದು ಅದೆಲ್ಲಿಗೋ ಹೊರಟಿದ್ದಿರಲ್ಲ. ಈಗಲೂ ಕಾಲ ಮಿಂಚಿಲ್ಲ ಹೊರಡಿ ಎಂದು ರೇಗಿಸಿದ್ದಾಳೆ. ಅನು ಮಾತಿಗೆ ಆರ್ಯ ತನ್ನ ಮನದಲ್ಲಾದ ಗೊಂದಲ ಹಾಗೂ ಹಿಂಸೆಯನ್ನು ಹೇಳಿಕೊಂಡಿದ್ದಾನೆ. ತಾನೇಕೆ ಮನೆಯಿಂದ ಹೊರಗೆ ಹೋಗುವ ನಿರ್ಧಾರ ಮಾಡಿದ ಎಂಬುದನ್ನು ತಿಳಿಸಿ ನಿರಾಳನಾಗಿದ್ದಾನೆ.

ಅನುಮಾನದಲ್ಲಿರುವ ಮಾನ್ಸಿ, ಮೀರಾ!

ಅನುಮಾನದಲ್ಲಿರುವ ಮಾನ್ಸಿ, ಮೀರಾ!

ಈಗ ಅನು ಗರ್ಭಿಣಿ ಎಂಬ ವಿಚಾರ ತಿಳಿದು ಮೀರಾಗೆ ಹೊಸ ಪ್ರಶ್ನೆ ಎದ್ದಿದೆ. ಆರ್ಯ ಸರ್ ಕಂಡರೆ ಆಗುವುದಿಲ್ಲ. ತನಗೆ ಏನೆಲ್ಲಾ ಮೋಸ ಮಾಡಿದ್ದಾರೆ. ರಾಜನಂದಿನಿ ಬದುಕನ್ನು ಕಿತ್ತುಕೊಂಡಿದ್ದಾರೆ, ಎಂದೆಲ್ಲಾ ಹೇಳುತ್ತಿದ್ದಳು. ನನಗೆ ಆರ್ಯ ಸರ್ ಮೇಲಿದ್ದ ಪ್ರೀತಿ, ನಂಬಿಕೆಯನ್ನು ಕೂಡ ಕಳೆದುಕೊಳ್ಳುವಂತೆ ಮಾಡಿದಳು. ಆದರೆ ಈಗ ತಾನು ಗರ್ಭಿಣಿ ಎಂದು ಹೇಳುತ್ತಿದ್ದಾಳೆ. ಇದೆಲ್ಲಾ ಹೇಗೆ ಸಾಧ್ಯ ಎಂದು ಯೋಚಿಸುತ್ತಿದ್ದಾಳೆ. ಇತ್ತ ಮಾನ್ಸಿ ಮನದಲ್ಲೂ ಇದೇ ಪ್ರಶ್ನೆ ಎದ್ದಿದೆ. ಅಷ್ಟೇ ಅಲ್ಲದೇ, ಆಸ್ತಿ ಭಾಗದ ವಿಚಾರ ಬಂದಾಗಲೇ ಈ ವಿಚಾರವನ್ನು ಹೇಳಿದ್ದಾಳೆ. ಎಲ್ಲಾ ಆಸ್ತಿಯನ್ನು ತನ್ನ ಮಗುವಿನ ಹೆಸರಿಗೆ ಮಾಡಿಕೊಳ್ಳುತ್ತಾಳೆ ಎಂದು ಯೋಚಿಸುತ್ತಿದ್ದಾಳೆ.

ಶಾರದಗೆ ಜೋಗ್ತವ್ವ ಎಚ್ಚರಿಕೆ!

ಶಾರದಗೆ ಜೋಗ್ತವ್ವ ಎಚ್ಚರಿಕೆ!

ಇತ್ತ ಹರ್ಷ ಕೂಡ ಮನೆಗೆ ಮುದ್ದಾದ ಮಗು ಬರುತ್ತಿದೆ ಎಂದು ಖುಷಿಯಲ್ಲಿದ್ದಾನೆ. ಶಾರದಾ ದೇವಿ ಕೂಡ ಮೊಮ್ಮಗ ಬರುತ್ತಾನೆ ಅನ್ನೋ ಸಂತಸದಲ್ಲೇ ಮುಳುಗಿದ್ದಾಳೆ. ಇದೇ ವೇಳೆಗೆ ಜೋಗ್ತವ್ವ ಮನೆಗೆ ಬಂದು ಶಾರದಾಳನ್ನು ಎಚ್ಚರಿಸಿದ್ದಾಳೆ. ಮಗನಂತಿರುವವನು ನಿನ್ನ ಮಗನಲ್ಲ. ಸಂಪತ್ತನ್ನು ಕಳೆದುಕೊಳ್ಳಬೇಡ. ನಿನಗೆ ಗೊತ್ತಿರುವ ಸತ್ಯದ ಬಗ್ಗೆ ಅರಿವಿರಲಿ. ಮಗು ಬರುತ್ತದೆ ಎಂಬ ಖುಷಿಯಲ್ಲಿ ಎಲ್ಲವನ್ನೂ ಮರೆಯಬೇಡ ಎಂದು ಹೇಳಿದ್ದಾಳೆ.

More from Filmibeat

English summary
Jothe Jotheyali Serial Writen Update On August 29th, New Hero Enty With Anu, KNow More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X