ಆರ್ಯವರ್ಧನ್ ಕುಟುಂಬದ ಅಸಲಿ ಕಥೆ ಶುರು!
ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಪ್ರೇಕ್ಷಕರ ಗನಸೆಲ್ಲಾ, ಆರ್ಯವರ್ಧನ್ ಮೇಲೆ ಸರಿದಿದೆ. ಆರ್ಯವರ್ಧನ್ ಪಾತ್ರ ಮಾಡುತ್ತಿದ್ದ ಅನಿರುದ್ಧ್ ಸೀರಿಯಲ್ ನಿಂದ ಹೊರ ನಡೆದಿದ್ದಾರೆ. ಹೀಗಾಗಿ ಮುಂದೆ ಯಾರು ಬರುತ್ತಾರೆ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಮೂಡಿದೆ.
ಈಗ ಪ್ರಸಾರವಾಗಿರುವ ಎಪಿಸೋಡ್‌ಗಳಲ್ಲಿ ಅನಿರುದ್ಧ್ ಅವರೇ ಕಾಣುತ್ತಿದ್ದಾರೆ. ಹೀಗಾಗಿ ಅನಿರುದ್ಧ್ ಬದಲು ಬೇರೆ ಯಾರು ಬರಬಹುದು.? ಅವರು ಆರ್ಯನ ಪಾತ್ರಕ್ಕೆ ಸೂಟ್ ಆಗುತ್ತಾರಾ ಎಂದು ತಿಳಿಯಲು ಅಭಿಮಾನಿಗಳು ಕಾಯುತ್ತಿದ್ದಾರೆ.
ಇನ್ನು ಧಾರಾವಾಹಿಯಲ್ಲಿ ಮತ್ತೊಂದು ಹೊಸ ಕಥೆ ಶುರುವಾಗಿದೆ. ಆರ್ಯವರ್ಧನ್ ಅವರ ನಿಜವಾದ ತಾಯಿಯ ಕಥೆ ಮುನ್ನೆಲೆಗೆ ಬಂದಿದೆ. ಆರ್ಯ ಸಹೋದರ ಫಾರಿನ್‌ನಿಂದ ಭಾರತಕ್ಕೆ ಮರಳಿದ್ದು, ಅವರು ಕಥೆ ಶುರುವಾಗುತ್ತಿದೆ.

ಮಗನ ಬಗ್ಗೆ ಮಾತನಾಡಿದ ಪ್ರಿಯಾ!
ಆರ್ಯವರ್ಧನ್ ನಿಜವಾದ ತಾಯಿ ಮತ್ತೊಂದು ಮದುವೆಯಾಗಿ ಸುಖವಾಗಿದ್ದಾರೆ. ಈ ಬಗ್ಗೆ ಅನು ಮದುವೆಗೂ ಮುನ್ನ ಹುಡುಕಿ ಪ್ರಿಯಾ ತಮ್ಮ ಎಂಗೇಜ್ ಮೆಂಟ್ ಗೆ ಕರೆಸಿದ್ದಳು. ಇದೀಗ ಮತ್ತೆ ಈ ಪಾತ್ರ ಮುನ್ನೆಲೆಗೆ ಬಂದಿದೆ. ಆರ್ಯನಿಗೆ ಪ್ರಿಯಾ ಕರೆ ಮಾಡಿದ್ದಾರೆ. ಆದರೆ ಸ್ವೀಕರಿಸಿಲ್ಲ, ತನಗೆ ಆರ್ಯ ಸಹಾಯ ಮಾಡುತ್ತಾನಾ ಎಂದು ಯೋಚಿಸುತ್ತಿದ್ದಾಳೆ.

ಆರ್ಯ ಅನು ಪ್ರೀತಿ ಮಾತು!
ಇತ್ತ ಆರ್ಯ ಆಫೀಸಿಗೆ ಹೋಗದೇ ಮನೆಯಲ್ಲೇ ಇದ್ದಾನೆ. ಪುಷ್ಪಾಗೆ ಕರೆ ಮಾಡಿ ಕೇಸರಿ ಹಾಲು ಮಾಡುವುದು ಹೇಗೆ ಎಂದು ತಿಳಿದುಕೊಂಡಿದ್ದಾನೆ. ಅನುಗೋಸ್ಕರ ಕೇಸರಿ ಹಾಲು ಮಾಡಿ ತಂದುಕೊಟ್ಟಿದ್ದಾನೆ. ಆದರೆ, ಅನು ಕೊಂಚ ಸ್ಕೋಪ್ ತೆಗೆದುಕೊಳ್ಳಲು ಮತ್ತೆ ಆರ್ಯನನ್ನು ರೇಗಿಸಿದ್ದಾಳೆ. ಎಲ್ಲಾ ಬಿಟ್ಟು ಹೊರಟವರು, ಈಗ ಅದು ಹೇಗೆ ನನ್ನ ಮೇಲೆ ಇಷ್ಟೋಂದು ಕಾಳಜಿ ಶುರುವಾಗಿದೆ ಎನ್ನುತ್ತಾಳೆ. ಆರ್ಯ ಅದಕ್ಕೆ ಪದೇ ಪದೇ ಹೀಗೆ ಚುಚ್ಚಬೇಡ ಅನು. ಇದಕ್ಕೆ ನಾನು ಏನು ಹೇಳಲಿ ಎಂದು ಬೇಸರದಲ್ಲೇ ಮಾತನಾಡುತ್ತಾನೆ. ನಂತರ ಅನು ಹಾಲು ತೆಗೆದುಕೊಂಡು ಹೋಗುತ್ತಾಳೆ.

ಆರ್ಯನಿಗೆ ಶಾರದ ಬುದ್ದಿ ಮಾತು!
ಇದೇ ವೇಳೆಗೆ ಶಾರದಾ ಅಲ್ಲಿಗೆ ಬರುತ್ತಾಳೆ. ಅನು ಮತ್ತು ಆರ್ಯ ಮಾತನಾಡಿದ್ದನ್ನು ಕೇಳಿಸಿಕೊಂಡು ಬೇಸರಗೊಳ್ಳುತ್ತಾಳೆ. ಈ ಬಗ್ಗೆ ಆರ್ಯನನ್ನು ನೇರವಾಗಿ ಪ್ರಶ್ನೆ ಮಾಡುತ್ತಾಳೆ. ನಿನ್ನ ಜವಾಬ್ದಾರಿಯನ್ನು ಮರೆತು ನಡೆದುಕೊಳ್ಳುತ್ತಿದ್ದೀಯಾ. ಆಫೀಸಿಗೆ ಹೋಗೋದಿಲ್ವಾ ಎಂದು ಕೇಳಿದ್ದಾಳೆ. ಅದಕ್ಕೆ ಆರ್ಯ ಹರ್ಷ-ಅತ್ತಿಗೆ ಬೆಳವಣಿಗೆ ಸುಗಮವಾಗಿರಲಿ ಎಂದು ನಾನು ಆಫೀಸಿಗೆ ಹೋಗುತ್ತಿಲ್ಲ ಎನ್ನುತ್ತಾನೆ. ಆದ ಶಾರದ ಅವನ ಜವಾಬ್ದಾರಿ ಬಗ್ಗೆ ಮಾತನಾಡುತ್ತಾಳೆ.

ಚಿಕ್ಕ ಮಗನಿಂದ ಪ್ರಿಯಾಗೆ ಸಂಕಷ್ಟ!
ಇನ್ನು ಫಾರಿನ್‌ನಿಂದ ಪ್ರಿಯಾ ಮಗ ಮನೆಗೆ ಬಂದಿದ್ದಾನೆ. ಈ ಪಾತ್ರವನ್ನು ಹರೀಶ್ ರಾಜ್ ಮಾಡುತ್ತಿದ್ದಾರೆ. ಮಗ ಮನೆಗೆ ಬಂದ ಖುಷಿಯಲ್ಲಿ ಪ್ರಿಯಾ ಮಗನನ್ನು ಬರ ಮಾಡಿಕೊಳ್ಳುತ್ತಾನೆ. ಸೋತು ಬಂದಿರುವ ಮಗನಿಗೆ ಅಪ್ಪ-ಅಮ್ಮನಿಗೆ ಮುಖ ತೋರಿಸಲೂ ಆಗುತ್ತಿಲ್ಲ. ಸ್ವಲ್ಪ ಸಮಯದ ಬಳಿಕ ಮಗ ತಾಯಿಯ ಬಳಿ ತನ್ನ ಕಷ್ಟವನ್ನು ಹೇಳಿಕೊಳ್ಳುತ್ತಾನೆ. ತನ್ನ ಕಂಪನಿ ಲಾಸ್ ಆಗಿದೆ. ಬರೋಬ್ಬರಿ 700 ಕೋಟಿ ರೂಪಾಯಿ ಸಾಲ ತೀರಿಸಬೇಕಿದೆ ಎಂದು ಹೇಳುತ್ತಾನೆ. ಸಾಧಿಸಲು ಹೋದವನು ಸೋತು ಬಂದಿದ್ದೇನೆ ಎಂದು ನೊಂದುಕೊಳ್ಳುತ್ತಾನೆ. ಮಗನ ಮಾತುಗಳನ್ನು ಕೇಳಿದ ಪ್ರಿಯಾ ಅಷ್ಟೋಂದು ಸಾಲ ಇದೆಯಾ ಎಂದು ಶಾಕ್ ಆಗಿದ್ದಾಳೆ.


Click it and Unblock the Notifications











