For Quick Alerts
  ALLOW NOTIFICATIONS  
  For Daily Alerts

  Jothe Jotheyali Serial: ರಾಜ ನಂದಿನಿ ವಿರುದ್ಧ ಷಡ್ಯಂತ್ರ ಮಾಡ್ತಾನಾ ಆರ್ಯವರ್ಧನ್?

  By ಪೂರ್ವ
  |

  ಜೀ ಕನ್ನಡದ ಜನಪ್ರಿಯ ಧಾರಾವಾಹಿ ಜೊತೆ ಜೊತೆಯಲಿ. ಬೇರೆಲ್ಲ ಸೀರಿಯಲ್‌ಗಳಿಗೆ ಹೋಲಿಸಿದರೆ ಆರಂಭದಿಂದಲೂ ಈ ಸೀರಿಯಲ್ ವಿಭಿನ್ನವಾಗಿತ್ತು. ಇಂಟ್ರೆಸ್ಟಿಂಗ್ ಸ್ಕ್ರೀನ್ ಪ್ಲೇಯ ಕಾರಣಕ್ಕೇ ಸೀರಿಯಲ್ ಜನರ ಆಕರ್ಷಣೆಗೆ ಪಾತ್ರವಾಯಿತು. 20ರ ಹರೆಯದ ಹುಡುಗಿ ನಲವತ್ತೈದರ ಮಧ್ಯ ವಯಸ್ಕನ ಜೊತೆಗೆ ಪ್ರೀತಿಯಲ್ಲಿ ಸಿಲುಕುವ ಕಥೆ ಈ ಧಾರಾವಾಹಿಯದ್ದು. ಸೀರಿಯಲ್‌ನ ಮೊದಲ ಭಾಗ ಅನು ಸಿರಿಮನೆ ಎಂಬ ಹುಡುಗಿ ಹಾಗೂ ಆರ್ಯವರ್ಧನ್ ಎಂಬ ಮಧ್ಯ ವಯಸ್ಸಿನ ವ್ಯಕ್ತಿಯ ಪ್ರೀತಿ, ಪ್ರೇಮ, ಅವರಿಬ್ಬರ ಪ್ರೀತಿಗೆ ಅಡ್ಡಿಯಾಗುವ ಅನೇಕ ವಿಚಾರಗಳಿಗೆ ಸಾಕ್ಷಿಯಾಯಿತು.

  ಬಡತನದ ಕಷ್ಟದ ಹಿನ್ನೆಲೆಯಿಂದ ಬಂದ ಅನು ಸಿರಿಮನೆ ತಾನು ಕೆಲಸ ಮಾಡುವ ಕಂಪನಿಯ ಬಾಸ್ ಆರ್ಯವರ್ಧನ್ ಜೊತೆಗೇ ಪ್ರೀತಿಯಲ್ಲಿ ಬೀಳುವ ಕಥೆ. ಆರ್ಯವರ್ಧನ್ ಪಾತ್ರದಲ್ಲಿ ಅನಿರುದ್ಧ್ ಹಾಗೂ ಅನು ಸಿರಿಮನೆ ಪಾತ್ರದಲ್ಲಿ ಮೇಘಾ ಶೆಟ್ಟಿ ನಟನೆಗೆ ಜನ ಫಿದಾ ಆಗಿದ್ದರು.

  ಈ ಸೀರಿಯಲ್‌ನ ಮುಂದುವರಿದ ಭಾಗವಾಗಿ ಇವರಿಬ್ಬರ ಮದುವೆ ಆಯ್ತು. ಮದುವೆ ಆದ್ಮೇಲೆ ಇನ್ನೇನು, ಕಥೆ ಸುಖಾಂತ್ಯ ಹ್ಯಾಪಿ ಎಂಡಿಂಗ್ ಅಂದುಕೊಳ್ಳುವ ಹೊತ್ತಿಗೆ ಮತ್ತೊಂದು ತಿರುವು ಬಂತು. ಆರ್ಯವರ್ಧನ್ ಮೊದಲ ಹೆಂಡತಿ ರಾಜ ನಂದಿನಿ ಆಗಾಗ ಅನು ಸಿರಿಮನೆಗೆ ಕಾಡತೊಡಗಿದಳು. ಇದೊಂಥರ ವಿಭಿನ್ನ ರೀತಿಯಲ್ಲಿ ಬದಲಾಗಿ ಆರ್ಯವರ್ಧನ್ ಹಾಗೂ ಅನು ನಡುವೆ ರೊಮ್ಯಾಂಟಿಕ್ ದೃಶ್ಯಗಳು ಮೂಡಿಬಂದವು. ಜನ ಈ ಗುಂಗಲ್ಲೇ ಇರುವಾಗ ಇದೀಗ ಇಡೀ ಕಥೆ ಉಲ್ಟಾ ಹೊಡಿಯುವಂಥಾ ಸನ್ನಿವೇಶ ಸೀರಿಯಲ್‌ನಲ್ಲಿ ಬರ್ತಿದೆ.

  ಸುಭಾಷ್ ಪಾಟೀಲ್ ಹಣದ ವ್ಯಾಮೋಹ

  ಸುಭಾಷ್ ಪಾಟೀಲ್ ಹಣದ ವ್ಯಾಮೋಹ

  ಜನ ಈವರೆಗೆ ಹೀರೊ ಥರ ನೋಡಿ, ಆರಾಧಿಸಿದ ಆರ್ಯವರ್ಧನ್ ಇದೀಗ ವಿಲನ್ ಆಗಿದ್ದಾರೆ. ಈ ಟ್ವಿಸ್ಟ್ ಬಹುಶಃ ಕನ್ನಡ ಸೀರಿಯಲ್ ಇತಿಹಾಸದಲ್ಲೇ ಹೊಸತು. ಸಿನಿಮಾದಲ್ಲಿ ಈ ಟ್ರಿಕ್ ಕಾಮನ್. ಬಾಲಿವುಡ್ ಮಾತ್ರ ಅಲ್ಲ, ಅನೇಕ ಕನ್ನಡ ಸಿನಿಮಾಗಳೂ ಇದೇ ಕಾಂಸೆಪ್ಟ್‌ನಲ್ಲಿ ಬಂದಿವೆ. ಆದರೆ ಸೀರಿಯಲ್‌ನಲ್ಲಿ ಪೋಷಕ ಪಾತ್ರಗಳು ಈ ಥರ ಟರ್ನ್ ಪಡೆಯುತ್ತವೆ. ಆದರೆ ಬಹುಮುಖ್ಯ ಹೀರೊ ಪಾತ್ರವೇ ಸಡನ್ನಾಗಿ ನೆಗೆಟಿವ್ ಶೇಡ್ ಪಡೆದುಕೊಂಡು ವಿಲನ್ ಆಗೋದು ಮಾತ್ರ ಆಗಿಲ್ಲ. ಇಂಥಾ ಟ್ರಿಕ್ ಅನ್ನು ಸೀರಿಯಲ್ ವೀಕ್ಷಕರು ಒಪ್ಪಿಕೊಳ್ಳಲಿಕ್ಕಿಲ್ಲ ಅನ್ನೋದು ಒಂದು ವಾದ. ಇದರ ಪರಿಣಾಮ ಟಿಆರ್‌ಪಿ ಢಂ ಆದ್ರೆ ಸೀರಿಯಲ್‌ಅನ್ನೇ ನಿಲ್ಲಿಸಬೇಕಾಗುತ್ತೆ. ಈ ರಿಸ್ಕ್ ತಗೊಳ್ಳೋಕೆ ಯಾವ ಸೀರಿಯಲ್ ತಂಡಗಳೂ ರೆಡಿ ಇಲ್ಲ. ಆದರೆ ನಿರ್ದೇಶಕ ಆರೂರು ಜಗದೀಶ್ ಹೀಗೊಂದು ಹೊಸ ಹೆಜ್ಜೆ ತಗೊಂಡಿದ್ದಾರೆ.

  ಅನುಗೆ ರಾಜನಂದಿನಿ ನೆನಪು

  ಅನುಗೆ ರಾಜನಂದಿನಿ ನೆನಪು

  ಜನ ಇದನ್ನು ಒಪ್ಪಿಕೊಳ್ಳೋದಕ್ಕೆ ರೆಡಿ ಇಲ್ಲ. ಯಾಕೆಂದರೆ ಜನರು ಈ ಸೀರಿಯಲ್ ಜೊತೆಗೆ ಎಮೋಶನಲ್ ಆಗಿ ಕನೆಕ್ಟ್ ಆಗಿದ್ದಾರೆ. ಈ ಹಿಂದೆ ಅನು ಮದುವೆ ಸೂರ್ಯ ಜೊತೆಗೆ ನಡೆಯುತ್ತೆ ಅನ್ನುವಾಗಲೂ ಜನ ವಿರೋಧಿಸಿ ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯೆ ನೀಡಿದ್ದರು. ಆದರೆ ಅದು ಜಸ್ಟ್ ಒಂದು ಟ್ರಿಕ್ ಅಷ್ಟೇ ಅನ್ನೋದು ಜನಕ್ಕೆ ತಿಳಿದಿತ್ತು. ಆ ಬಳಿಕ ಅನು ಸಿರಿಮನೆ ಪಾತ್ರಧಾರಿ ಮೇಘಾ ಶೆಟ್ಟಿ ಸೀರಿಯಲ್‌ನಿಂದ ಹೊರ ಬರ್ತಿದ್ದಾರೆ ಅಂತ ಗೊತ್ತಾದಾಗಲೂ ಜನ ಸೋಶಿಯಲ್ ಮೀಡಿಯಾದಲ್ಲಿ ಕ್ಯಾಂಪೇನ್‌ ಶುರು ಮಾಡಿದ್ರು. ಆಮೇಲೆ ಅನು ಸಿರಿಮನೆ ಪಾತ್ರದಲ್ಲಿ ಮೇಘಾ ಶೆಟ್ಟಿ ಕಂಟಿನ್ಯೂ ಆದ್ರು. ಇನ್ನು ಹೀರೊನೇ ವಿಲನ್ ಆಗ್ತಾರೆ ಅಂದಾಗ ಜನ ಸುಮ್ಮನಿರ್ತಾರಾ? ಜನ ಸೀರಿಯಲ್ ಟೀಮ್ ವಿರುದ್ಧ ಸಿಟ್ಟಿಗೆದ್ದಿದ್ದರು. ಆದರೆ ಇದೀಗ ಧಾರಾವಾಹಿಯಲ್ಲಿ ಆರ್ಯವರ್ಧನ್ ಪಾತ್ರ ಬಹಳ ಕುತೂಹಲವನ್ನು ಸೃಷ್ಠಿ ಮಾಡುತ್ತಿರುವುದಂತು ಪಕ್ಕಾ.

  Recommended Video

  KGF 2 | ಬಾಲಿವುಡ್‌ನಲ್ಲಿ ಸೌತ್ ಸಿನಿಮಾಗಳ ಹವಾ, 'KGF 2' 200 ಕೋಟಿ ಕಲೆಕ್ಷನ್ | Yash | Prashanth Neel |
  ಆರ್ಯವರ್ಧನ್ ವಿರುದ್ಧ ಗರಂ

  ಆರ್ಯವರ್ಧನ್ ವಿರುದ್ಧ ಗರಂ

  ಆರ್ಯವರ್ಧನ್ ಪಾತ್ರಧಾರಿ ಅನಿರುದ್ಧ್ ಈ ಬಗ್ಗೆ ಜನರನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದ್ದಾರೆ. ಹೊಸದನ್ನು ಒಪ್ಪಿಕೊಳ್ಳಲು ಸಿದ್ಧರಿರಬೇಕು ಅಂತ ತಿಳಿ ಹೇಳಿದ್ದಾರೆ. ಇದೀಗ ಕಥೆಯಲ್ಲಿ ಆಸ್ತಿ ಆಸೆಗಾಗಿ ತನ್ನ ಸ್ವಂತ ಮಾವನನ್ನೇ ಕೊಲೆ ಮಾಡಿದಾಗ ಆರ್ಯವರ್ಧನ್ ನಿಜವಾದ ಮುಖ ಕಳಚಿದಂತಾಗಿದೆ. ಅನ್ನ ನೀಡಿದಾತನಿಗೆ ಎರಡು ಬಗೆದ ಆರ್ಯವರ್ಧನ್ ಮುಖವಾಡ ಇನ್ನೊಂದು ಸ್ವಲ್ಪ ದಿನದಲ್ಲಿ ಕಳಚೋದು ಗ್ಯಾರಂಟಿ. ರಾಜನಂದಿನಿ ತನ್ನ ತಂದೆಯನ್ನು ಕಳೆದುಕೊಂಡ ದುಃಖದಲ್ಲಿದ್ದಾರೆ. ಆಸ್ತಿಯ ವ್ಯಾಮೋಹ ಆರ್ಯನಿಗೆ ಇನ್ನೂ ಹೆಚ್ಚಾಗುತ್ತಿದೆ. ಅನು ನೆನಪಿನ ಬುತ್ತಿಯಲ್ಲಿ ರಾಜ ನಂದಿನಿ ಕಾಡುತ್ತಿದ್ದಾಳೆ. ಇಷ್ಟೆಲ್ಲಾ ಆದ್ರು ಸುಭಾಷ್ ಪಾಟೀಲ್ ತನ್ನ ವರಸೆಯನ್ನು ಬದಲಾಯಿಸುವುದಿಲ್ಲ. ಆತನ ವಕ್ರ ದೃಷ್ಟಿ ಇಡೀ ರಾಜವರ್ಧನ್ ಆಸ್ತಿಯ ಮೇಲೆ ಬಿದ್ದಿರುವುದಂತು ಕಟು ಸತ್ಯ. ಆ ನೆಪದಲ್ಲಿಯೇ ರಾಜ ನಂದಿನಿಯನ್ನು ಮದುವೆ ಆಗಿರುವುದಂತು ಜನರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

  ರಾಜನಂದಿ ವಿರುದ್ಧ ಸಿಡುಕಿದ ಸುಭಾಷ್

  ರಾಜನಂದಿ ವಿರುದ್ಧ ಸಿಡುಕಿದ ಸುಭಾಷ್

  ಆಸ್ತಿಯ ವ್ಯಾಮೋಹಕ್ಕೆ ಒಳಾಗಾದ ಸುಭಾಷ್ ಪಾಟೀಲ್ ಅಡ್ಡ ಬಂದವರನ್ನು ಯಾರನ್ನು ಸುಮ್ಮನೇ ಬಿಡುತ್ತಿಲ್ಲ. ಆರ್ಯವರ್ಧನ್ ಬಳಿ ರಾಜ ನಂದಿನಿ ಆಸ್ತಿ ಏನು ಬೇಡ , ಆರ್ಯ ನೀನು ಒಬ್ಬ ಇದ್ದರೆ ಸಾಕು ಎಂದಾಗಂತು ಆರ್ಯವರ್ಧನ್ ಕೋಪದಲ್ಲಿ ಕುದಿಯುತ್ತಿರುತ್ತಾನೆ. ಜೆಂಡೆ ಬಳಿ ತನಗಿರುವ ಸಿಟ್ಟನ್ನು ತೋರ್ಪಡಿಸಿಕೊಳ್ಳುತ್ತಾನೆ. ರಾರ್ಜವರ್ಧನ್ ಮಾತ್ರ ಅಳಿಯನಿಂದಲೇ ಇಹಲೋಕ ತ್ಯಜಿಸಿರುವುದನ್ನು ನೋಡಿ ವೀಕ್ಷಕರು ಅಯ್ಯೋ ಇದೆಂತಹ ದುರ್ವಿಧಿ ಎಂದು ಬೈದು ಗೋಳಾಡಿದ್ದಾರೆ. ಇನ್ನೂ ಈ ಧಾರಾವಾಹಿಯ ಕಥೆ ಬಹಳ ರೋಚಕವಾಗಿದೆ.

  English summary
  Jothe Jotheyali Serial Written Update on April 15th . Hear is More Details.
  Saturday, April 16, 2022, 22:12
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X