Jothe Jotheyali: ಅಯ್ಯಯ್ಯೋ ರಾಜನಂದಿನಿ ಮುಂದೆ ಸುಭಾಷ್ ಪಾಟೀಲ್ ಬಣ್ಣ ಬಯಲು?

By ಪ್ರಿಯಾ ದೊರೆ

'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಈಗ ರಾಜನಂದಿನಿ ಕಥೆಯನ್ನು ತೋರಿಸಲಾಗುತ್ತಿದೆ. ಅನು ಸಿರಿಮನೆಗೆ ರಾಜನಂದಿನಿ ಜೀವನದ ಒಂದೊಂದು ಘಟನೆಗಳು ಕೂಡ ಕಣ್ಣೆದುರಿಗೆ ಬರುತ್ತಿದೆ. ಸುಭಾಷ್ ಪಾಟೀಲ್ ಮಾಡಿದ ಮೋಸಗಳು ಅರ್ಥವಾಗುತ್ತಿದೆ.

ರಾಜನಂದಿನಿ, ಸುಭಾಷ್ ಪಾಟೀಲ್ ಅನ್ನು ಪ್ರೀತಿಸಿ, ನಂಬಿ ಮದುವೆಯಾಗಿದ್ದಾಳೆ. ರಾಜನಂದಿನಿ ತಂದೆಯ ಮಾತಿಗೆ ಬೆಲೆ ಕೊಟ್ಟು ಸುಭಾಷ್ ಅವರ ಮನೆಯಲ್ಲೇ ವಾಸ್ತವ್ಯವನ್ನೂ ಹೂಡಿದ್ದಾನೆ. ಆದರೆ ಸುಭಾಷ್ ಅನ್ನು ನಂಬಿರುವ ರಾಜನಂದಿನಿ ನಡೆಯಿಂದ ಅವರ ತಂದೆ ಬೇಸರದಲ್ಲಿದ್ದಾರೆ.

ಚಾರುಲತಾ ತನ್ನ ಮಗಳು ರಾಜನಂದಿನಿ ಮನೆ, ಆಫೀಸ್ ಎಲ್ಲಾ ಜವಾಬ್ದಾರಿಯನ್ನೂ ಹೊತ್ತಿದ್ದಾಳೆ ಎಂದು ಸುಭಾಷ್ ಬಳಿ ಹೇಳಿದ್ದು, ಇದಕ್ಕೆ ಸುಭಾಷ್ ತಾನಾಗಿಯೇ ಆಫೀಸ್ ಜವಾಬ್ದಾರಿಯನ್ನು ತಾನು ನಿಭಾಯಿಸುವ ಭರವಸೆ ನೀಡಿದ್ದಾನೆ. ಈ ಮೂಲಕ ಸುಭಾಷ್ ತನ್ನ ಲೆಕ್ಕಾಚಾರದ ಜೀವನವನ್ನು ಮುನ್ನೆಡೆಸುತ್ತಿದ್ದಾನೆ.

Jothe Jotheyali Serial Written Update On April 5 2022

ರಾಜನಂದಿನಿಗೆ ನಿಜ ಹೇಳಿದ ಜಲಂಧರ್!

ಇದೇ ವೇಳೆಗೆ ರಾಜನಂದಿನಿ ತಂದೆಗೆ ಜಲಂಧರ್ ಕರೆ ಮಾಡಿ ಭೇಟಿಯಾಗಲು ಸೂಚಿಸಿದ್ದಾನೆ. ಇಬ್ಬರು ಭೇಟಿಯಾದಾಗ ಜಲಂಧರ್ ತನ್ನ ಕಂಪನಿ ಹಾಗೂ ಯಶೋಧಾ ಕಂಪನಿ ಜೊತೆಗಿನ ಒಪ್ಪಂದ ಸುಳ್ಳು. ಫೋರ್ಜರಿ ಮಾಡಿ ಸುಭಾಷ್ ಈ ಕೆಲಸ ಮಾಡಿದ್ದಾನೆ ಎಂಬ ಸತ್ಯವನ್ನು ಸಾಕ್ಷಿ ಸಮೇತ ತೋರಿಸಿದ್ದಾನೆ. ಇದರಿಂದ ಶಾಕ್ ಆಗಿ ಜಲಂಧರ್‌ಗೆ ಒಂದು ದಿನ ಮುಂಚೆ ಹೇಳಬಾರದಿತ್ತಾ. ರಾಜನಂದಿನಿ ಹಾಗೂ ಸುಭಾಷ್ ನಿನ್ನೆಯಷ್ಟೇ ಮದುವೆಯಾಯ್ತು ಎಂದು ಹೇಳುತ್ತಾನೆ. ಆಗ ಜಲಂಧರ್ ಹೇಗೆ ಈ ಮದುವೆಗೆ ಒಪ್ಪದ್ರಿ, ನಾನು ಸಾಕ್ಷಿ ಸಮೇತ ತೋರಿಸೋದಕ್ಕಾಗಿ ಇಷ್ಟು ದಿನ ಕಾಯಬೇಕಾಯ್ತು. ಅವನು ಮಾತಲ್ಲೇ ಮರುಳು ಮಾಡುತ್ತಾನೆ ಹುಷಾರಾಗಿರಿ ಎಂದು ಜಲಂಧರ್ ಹೇಳುತ್ತಾನೆ. ಈಗ ಸುಭಾಷ್ ಪಾಟೀಲ್ ಲೆಕ್ಕಾಚಾರವನ್ನು ಅರಿತ ಜಲಂಧರ್ ಹಾಗೂ ರಾಜನಂದಿನಿ ತಂದೆ ಶಾಕ್‌ನಲ್ಲಿದ್ದಾರೆ.

Jothe Jotheyali Serial Written Update On April 5 2022

ಇತ್ತ ರಾಜನಂದಿನಿ ಸುಭಾಷ್ ಪಾಟೀಲ್ ಅನ್ನು ಆಫೀಸ್‌ಗೆ ಕರೆದುಕೊಂಡು ಹೋಗುತ್ತಾಳೆ. ಆಫೀಸ್‌ನಲ್ಲಿ ಎಲ್ಲರಿಗೂ ಸುಭಾಷ್ ಪಾಟೀಲ್ ಅನ್ನು ಆರ್ಯ ಅಂತಲೇ ಪರಿಚಯ ಮಾಡಿಸುತ್ತಾಳೆ. ಅಲ್ಲದೆ, ತಾವಿಬ್ಬರು ಮದುವೆಯಾಗಿದ್ದು, ಇಬ್ಬರೂ ಈಗ ಗಂಡ-ಹೆಂಡತಿ ಎಂದು ಹೇಳುತ್ತಾಳೆ. ಜೊತೆಗೆ ಇನ್ನು ಮುಂದೆ ನಮ್ಮ ಜೊತೆ ನಮ್ಮ ಕಂಪನಿಯಲ್ಲಿ ಕೆಲಸ ಮಾಡುತ್ತಾರೆ ಎಂದು ಹೇಳುತ್ತಾಳೆ. ನಂತರ ರಾಜನಂದಿನಿ ತನ್ನ ತಂದೆ ಬಗ್ಗೆ ಮಾತನಾಡುತ್ತಾಳೆ. ಅವಳ ಕ್ಯಾಬಿನ್‌ಗೆ ಹೋಗೋಣ ಎನ್ನುತ್ತಾಳೆ. ಕ್ಯಾಬಿನ್ ನೋಡಿ ಆಸೆಪಡುವ ಆರ್ಯವರ್ಧನ್, ರಾಜನಂದಿನಿ ಆಚೆ ಹೋಗುತ್ತಿದ್ದಂತೆ, ಆ ಚೇರ್ ಮೇಲೆ ಕೂರುತ್ತಾನೆ. ತಾನೇ ಕಂಪನಿಯ ಬಾಸ್ ಎಂಬಂತೆ ನಡೆದುಕೊಳ್ಳುತ್ತಾನೆ.

ಇತ್ತ ರಾಜನಂದಿನಿ ತಂದೆ ಸುಭಾಷ್ ಪಾಟೀಲ್ ಮೋಸದ ಬಗ್ಗೆ ಯೋಚನೆ ಮಾಡುತ್ತಿರುತ್ತಾನೆ. ಈಗೇನಾದರೂ ನಾನು ನಂದಿನಿಗೆ ಸುಭಾಷ್ ಪಾಟೀಲ್ ಮಾಡಿರುವ ಮೋಸದ ಬಗ್ಗೆ ಹೇಳಿದರೆ, ಅವಳು ಪ್ರೀತಿ ಮೇಲಿನ ನಂಬಿಕೆಯನ್ನೇ ಕಳೆದುಕೊಂಡು ಬಿಡುತ್ತಾಳೆ. ಇದರಿಂದ ನಂದಿನಿಗೆ ಅಪಾಯ ಎಂದು ಯೋಚಿಸುತ್ತಿರುತ್ತಾನೆ. ನಂದಿನಿಯನ್ನು ಕ್ಯಾಬಿನ್‌ಗೆ ಬರಲು ಹೇಳುತ್ತಾನೆ. ನಂದಿನಿ ಬಂದು ಏನಪ್ಪ ಎಂದು ಕೇಳಿದಾಗ, ನಾನು ಜಲಂಧರ್‌ನನ್ನು ಭೇಟಿ ಮಾಡಲು ಹೋಗಿದ್ದೆ ಎನ್ನುತ್ತಾನೆ. ಆಗ ರಾಜನಂದಿನಿ ಜಲಂಧರ್ ನನ್ನ ಏಕೆ ಮೀಟ್ ಮಾಡಿದಿರಿ ಎಂದು ಕೇಳುತ್ತಾಳೆ. ಇಲ್ಲ ಮಗಳೆ, ಜಲಂಧರ್ ನಮಗೆ ಮೋಸ ಮಾಡಿಲ್ಲ. ಅವನ ಆಫೀಸ್‌ನಲ್ಲಿರುವವರೇ ಯಾರೋ ಫೋರ್ಜರಿ ಮಾಡಿ ಯಶೋಧಾ ಇಂಡಸ್ಟ್ರಿಗೆ ಅಗ್ರಿಮೆಂಟ್ ಕಳಿಸಿದ್ದಾರೆ ಎಂದು ಹೇಳುತ್ತಾರೆ. ಆಗ ರಾಜನಂದಿನಿ ಅವರ ಆಫೀಸ್ ನಲ್ಲಿದ್ದವರೇನಾ ಎಂದು ಶಾಕ್ ಆಗುತ್ತಾಳೆ. ಈಗ ಅದು ಸುಭಾಷ್ ಪಾಟೀಲ್ ಮಾಡಿದ್ದು ಎಂದು ಹೇಳುತ್ತಾರಾ..? ಇಲ್ಲ ಸತ್ಯ ಮುಚ್ಚಿಡುತ್ತಾರಾ? ಎಂಬ ಪ್ರಶ್ನೆ ಪ್ರೇಕ್ಷಕರಲ್ಲಿ ಮೂಡಿದೆ. ‌

More from Filmibeat

English summary
Jothe Jotheyali Serial Return Update On April 5 2022, Rajanandini Father Refuse Her Marriege With Subhash Patil
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X