For Quick Alerts
  ALLOW NOTIFICATIONS  
  For Daily Alerts

  ಜೊತೆ ಜೊತೆಯಲಿ: ಅನು ಸಾಯಿಸಲು ಝೇಂಡೆ ಪಣ.. ಕಾಪಾಡಲು ಆರ್ಯ ಸಿದ್ಧ..!

  By ಎಸ್ ಸುಮಂತ್
  |

  'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಝೇಂಡೆಗೆ ಪ್ರಾಣ ಸಂಕಟ ಶುರುವಾಗಿದೆ. ಇಷ್ಟು ವರ್ಷ ಎಷ್ಟೆಲ್ಲಾ ಅನ್ಯಾಯ ಮಾಡಿಕೊಂಡು ಒಂದು ಅಂತಸ್ತು, ಒಂದು ನಂಬಿಕೆ, ಒಂದು ಕಂಟ್ರೋಲ್ ಕಾಪಾಡಿಕೊಂಡು ಬಂದಿದ್ದರೋ ಈಗ ಎಲ್ಲವೂ ಉಲ್ಟಾ ಆಗುತ್ತಿದೆ. ಝೇಂಡೆ ಎಂದರೆ ತಂದೆಯಷ್ಟೇ ಗೌರವ ಕೊಡುತ್ತಿದ್ದ ಅನು ಈಗ ತಿರುಗಿ ಬಿದ್ದಿದ್ದಾಳೆ. ಝೇಂಡೆಗೆ ಇದೆಲ್ಲವೂ ಗೊತ್ತಾಗಿದೆ‌. ಅನು, ರಾಜನಂದಿನಿಯ ಪುನರ್ಜನ್ಮ ಎಂಬುದು ತಿಳಿದ ಮೇಲೆ ಆರ್ಯನನ್ನು ಬದಲಾಯಿಸಲು ಯತ್ನಿಸುತ್ತಿದ್ದಾನೆ. ಆದರೆ ಯಾವುದೂ ಆಗದೆ ಇದ್ದಾಗ ಅನುನಾ ಕೊಲೆ ಮಾಡುವ ಹಂತಕ್ಕೆ ತಲುಪಿದ್ದಾನೆ.

  ಅನು ಈಗ ಗರ್ಭಿಣಿ. ಇದನ್ನು ಮನೆಯವರಿಗೂ ಸಹ ತಿಳಿಸಿಲ್ಲ. ಆದರೆ ಮಗುವನ್ನು ಕಾಪಾಡಿಕೊಂಡು ಹೋಗುವ ಜವಾಬ್ದಾರಿಯನ್ನು ತನ್ನಲ್ಲಿಯೇ ತಂದುಕೊಂಡಿದ್ದಾಳೆ. ಈಗ ಝೇಂಡೆ ಮಾಡಿದ ಅವಾಂತರ ಒಂದಿಷ್ಟಲ್ಲ. ಈ ವಿಚಾರ ಆರ್ಯನಿಗೆ ತಿಳಿದರೆ ಝೇಂಡೆಯನ್ನು ಕೊಂದೆ ಹಾಕಿ ಬಿಡುತ್ತಾನೆ. ಯಾಕೆಂದರೆ ಆರ್ಯನಿಗೆ ಅನು ಎಂದರೆ ಅಷ್ಟು ಪ್ರೀತಿ. ಹೀಗಾಗಿ ಝೇಂಡೆ ಏನೇ ಹೇಳಿದರೂ, ಯಾವುದನ್ನು ನಂಬುವ ಸ್ಥಿತಿಯಲ್ಲಿ ಆರ್ಯ ಇಲ್ಲ.

  'ಜೊತೆ ಜೊತೆಯಲಿ' ಧಾರಾವಾಹಿ ಅಂತ್ಯ ಆಗುತ್ತಾ? ಗೊಂದಲ ಮೂಡಿಸಿದ ಆ ಒಂದು ವಿಡಿಯೋ!'ಜೊತೆ ಜೊತೆಯಲಿ' ಧಾರಾವಾಹಿ ಅಂತ್ಯ ಆಗುತ್ತಾ? ಗೊಂದಲ ಮೂಡಿಸಿದ ಆ ಒಂದು ವಿಡಿಯೋ!

  ಅನು ಕಿಡ್ನ್ಯಾಪ್ ಮಾಡಿಸಿದ ಝೇಂಡೆ

  ಅನು ಕಿಡ್ನ್ಯಾಪ್ ಮಾಡಿಸಿದ ಝೇಂಡೆ

  ಝೇಂಡೆಗೆ ಅನು ಮೇಲೆ ಇರುವುದು ಸಣ್ಣ ಮಟ್ಟದ ಕೋಪ ಅಲ್ಲ‌ ತಾವೂ ಕಟ್ಟಿದ ಸಾಮ್ರಾಜ್ಯವನ್ನೆಲ್ಲಾ ಪುಡಿ ಪುಡಿ ಮಾಡಿ ಬಿಟ್ಟಳಲ್ಲ. ಹಾಕಿಕೊಂಡಿದ್ದ ಫ್ಲ್ಯಾನ್ ಎಲ್ಲಾ ಉಲ್ಟಾ ಪಲ್ಟಾ ಮಾಡಿದಳಲ್ಲಾ ಎಂಬ ಆಕ್ರೋಶದ ಹೊಗೆ ಝೇಂಡೆ ಎದೆಯಲ್ಲಿ ಕೆಣಕುತ್ತಲೇ ಇದೆ. ಹೀಗಾಗಿ ತಮ್ಮ ಯಾವ ಪ್ಲ್ಯಾನ್ ಕೂಡ ಉಲ್ಟಾ ಆಗಬಾರದು ಎಂಬ ಕಾರಣಕ್ಕೆ ಝೇಂಡೆ ಸ್ವತಃ ಅಖಾಡಕ್ಕಿಳಿದಿದ್ದಾನೆ. ಅನು ದೇವಸ್ಥಾನಕ್ಕೆ ಹೋಗಿದ್ದನ್ನು ಕಂಡು ತಮ್ಮ ಬಳಗವನ್ನು ಕಳುಹಿಸಿದ್ದಾನೆ. ಅನುಗೆ ಪ್ರಜ್ಞೆ ತಪ್ಪಿಸಿ, ಕಿಡ್ನ್ಯಾಪ್ ಮಾಡಿದ್ದಾರೆ. ಇದು ಝೇಂಡೆಯೇ ಮಾಡಿರುವ ಫ್ಲ್ಯಾನ್ ಎಂದು ಗೊತ್ತಾದರೆ ಮುಗೀತು ಕಥೆ. ಆರ್ಯ ತನ್ನ ಸ್ನೇಹಿತ ಎಂಬುದನ್ನು ನೋಡಲ್ಲ. ಶಿಕ್ಷೆ ಕೊಟ್ಟಿಯೇ ಕೊಡ್ತಾನೆ.

  ಆರ್ಯನಿಗೆ ತಿಳಿಸದೆ ಪ್ಲ್ಯಾನ್

  ಆರ್ಯನಿಗೆ ತಿಳಿಸದೆ ಪ್ಲ್ಯಾನ್

  ಈ ಮುಂಚೆ ಅನುಳನ್ನು ಕೊಲೆ ಮಾಡುವ ಐಡಿಯಾ ಕೊಟ್ಟಿದ್ದೆ ಝೇಂಡೆ. ಅನು ಈಗ ಅನು ಆಗಿ ಉಳಿದಿಲ್ಲ. ತೆರೆ ಮರೆಯಲ್ಲಿ ನಮಗೆ ತಿಳಿಯದೇನೆ ಏನೇನೋ ನಡೆಸುತ್ತಿದ್ದಾಳೆ. ಹೀಗೆ ಬಿಟ್ಟರೆ ನಾವೂ ಕಟ್ಟಿದ ಕೋಟೆ ಧ್ವಂಸವಾಗುತ್ತೆ. ಮತ್ತೆ ಬೀದಿಗೆ ಬರುತ್ತೇವೆ ಅಂತ ಆರ್ಯನಿಗೆ ತಿಳಿಸಿ ಹೇಳಲು ಯತ್ನಿಸಿದ. ಆದರೆ ಆರ್ಯ ಅದೆಲ್ಲವನ್ನು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಝೇಂಡೆ ಅನು ಮೇಲೆ ಮಾಡಿದ ಎಲ್ಲಾ ಆರೋಪವೂ ಅವನ ನಂಬಿಕೆಗೆ ವಿರುದ್ಧವಾಗಿದ್ದವು. ಹೀಗಾಗಿ ಝೇಂಡೆ ಬಾಯಿಯನ್ನೇ ಮುಚ್ಚಿಸಿದ. ಆದರೆ ಕೊನೆಗೆ ಕೊಲೆ ಮಾಡುವಂತೆ ಪಿಸ್ತೂಲನ್ನೇ ಕೊಟ್ಟ. ಆದರೆ ಝೇಂಡೆಯ ಹುಚ್ಚು ಆಟಕ್ಕೆ ಆರ್ಯ ಬುದ್ಧಿ ಮಾತು ಹೇಳಿ ಸುಮ್ಮನಾಗಿಸಿದ್ದ. ಆದರೆ ಝೇಂಡೆ ತೆರೆಮರೆಯಲ್ಲಿಯೇ ತನ್ನ ಆಟ ಪ್ರದರ್ಶಿಸುತ್ತಿದ್ದಾನೆ.

  ಅನುಳನ್ನು ಕಾಪಾಡಿಕೊಳ್ಳುತ್ತಾನಾ?

  ಅನುಳನ್ನು ಕಾಪಾಡಿಕೊಳ್ಳುತ್ತಾನಾ?

  ಅನು ದೇವಸ್ಥಾನಕ್ಕೆ ಬಂದಿದ್ದಳು. ಝೇಂಡೆ ಎಷ್ಟು ಅದ್ಭುತವಾಗಿ ಫ್ಲ್ಯಾನ್ ಮಾಡಿದ್ದ ಎಂದರೆ ಪೂಜಾರಿ ವೇಷದಲ್ಲಿದ್ದವನು ಕಿಡ್ನ್ಯಾಪರ್ ಆಗಿದ್ದ. ಹೀಗಾಗಿ ಅಲ್ಲಿ ಯಾರಿಗೂ ಅನುಮಾನವೇ ಬರಲಿಲ್ಲ. ಅನುಗೆ ಪ್ರಜ್ಞೆ ತಪ್ಪಿಸಿ ಎತ್ತಿಕೊಂಡು ಹೋಗುವಾಗ ಅದೃಷ್ಟವಶಾತ್ ಆರ್ಯನಿಗೆ ವಿಚಾರ ತಿಳಿದಿತ್ತು. ದೇವಸ್ಥಾನಕ್ಕೆ ಬಂದ ಆರ್ಯನ ಕಣ್ಣಿಗೂ ಆ ದೃಶ್ಯ ಗೋಚರಿಸಿತ್ತು. ಗಾಬರಿಯಿಂದ ವಿಲನ್‌ಗಳ ಕಡೆಗೆ ಆರ್ಯ ಓಡೋಡಿ ಬಂದಿದ್ದಾನೆ. ಆದರೆ ಕಿಡ್ನ್ಯಾಪರ್‌ಗಳು ತನ್ನ ಕೆಲಸವನ್ನು ಮುಂದುವರೆಸಿ, ಅನುಳನ್ನು ಹೆಗಲ ಮೇಲೆ ಹೊತ್ತು, ರಹಸ್ಯ ಸ್ಥಳಕ್ಕೆ ಸಾಗಿಸಲು ಯತ್ನಿಸಿದ್ದಾರೆ.

  ಗೌತಮಿ ಜಾದವ್: ಪರ್ಪಲ್ ಲೆಹೆಂಗಾದಲ್ಲಿ ಮಿಂಚಿದ ಸತ್ಯಗೌತಮಿ ಜಾದವ್: ಪರ್ಪಲ್ ಲೆಹೆಂಗಾದಲ್ಲಿ ಮಿಂಚಿದ ಸತ್ಯ

  ಅನುಗಾಗಿ ಆರ್ಯನ ಫೈಟ್

  ಇತ್ತೀಚೆಗೆ ಎಲ್ಲಾ ಧಾರಾವಾಹಿಗಳು ಯಾವ ಸಿನಿಮಾಗೇನು ಕಡಿಮೆಯಿಲ್ಲ. ವೈಭವೀಕರಣದಲ್ಲಾದರೂ ಸರಿ, ಹೀರೋಯಿಸಂ ತೋರಿಸುವುದರಲ್ಲಾದರೂ ಸರಿ. ಇದೀಗ 'ಜೊತೆ ಜೊತೆಯಲಿ' ಧಾರಾವಾಹಿಯಲ್ಲೂ ಅಷ್ಟೆ. ಸಿನಿಮಾ ರೇಂಜಿಗೆ ಫೈಟ್ ನಡೆದಿದೆ. ಅನುಳನ್ನು ಕಿಡ್ನ್ಯಾಪರ್‌ಗಳಿಂದ ಕಾಪಾಡಲು ಆರ್ಯ ತನ್ನ ಶಕ್ತಿ ಪ್ರದರ್ಶನ ಮಾಡಿದ್ದಾನೆ. ಆರ್ಯನ ಫೈಟ್‌ಗೆ ಕಮೆಂಟ್ ಮಾಡಿ, ಸೂಪರೋ ಸೂಪರ್ ಅಂತ ಹೊಗಳುತ್ತಿದ್ದಾರೆ. ನಮ್ಮ ಬಾಸ್ ಅನುನಾ ಕಾಪಾಡಿಯೇ ಕಾಪಾಡ್ತಾರೆ ಅಂತ ವಿಶ್ವಾಸ ತೋರಿಸುತ್ತಿದ್ದಾರೆ.

  English summary
  zee kannada serial Jothe Jotheyali Written Update on July 1st episode. Here is the details.
  Saturday, July 2, 2022, 19:33
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X