ಝೇಂಡೆಯನ್ನು ಮತ್ತೆ ನಂಬಿದ ಆರ್ಯವರ್ಧನ್!

By ಪ್ರಿಯಾ ದೊರೆ

ಜೊತೆ ಜೊತೆಯಲಿ ಧಾರವಾಹಿಯಲ್ಲಿ ಆರ್ಯವರ್ಧನ್‌ಗೆ ಝೇಂಡೆ ಬಗ್ಗೆ ಯೋಚನೆಯಾಗಿದೆ. ಊಟ ತಿಂಡಿಯೂ ಮಾಡಲಾಗದೇ, ಝೇಂಡೆ ಬಗ್ಗೆ ಯೋಚನೆ ಮಾಡುತ್ತಲೇ ಇದ್ದಾನೆ. ಝೇಂಡೆಗೆ ಅಪಾಯವಾಗಿದೆ. ಎಲ್ಲಿದ್ದಾನೋ ಏನೋ ಎಂಬ ಚಿಂತೆಯಲ್ಲಿ ಆತಂಕಕ್ಕೊಳಗಾಗಿದ್ದಾನೆ.

ಅನುಗೆ ಅಪ್ಪ-ಅಮ್ಮ ಮನೆಗೆ ಬಂದಿರುವ ಖುಷಿ ಡಬಲ್ ಆಗಿದೆ. ಅಪ್ಪ-ಅಮ್ಮ ಬಳಿ ಕೂತು ಮಾತನಾಡುತ್ತಿದ್ದಾಳೆ. ಪುಷ್ಪಾ ಮಗಳನ್ನು ಪದೇ ಪದೇ ಇಲ್ಲಿ ಸುಖವಾಗಿದ್ದೀಯಾ.? ಎಂದು ಕೇಳುತ್ತಲೇ ಇದ್ದಾಳೆ. ಆದರೆ, ಪುಷ್ಪಾ ಮಾತನ್ನು ಅನು ಸರಿಯಾಗಿ ಅರ್ಥ ಮಾಡಿಕೊಳ್ಳುವುದಿಲ್ಲ.

ಆಫೀಸಿನಲ್ಲಿ ಹರ್ಷ ಮೀರಾ ಜೊತೆಗೆ ಮಾತನಾಡುತ್ತಿದ್ದಾರೆ. ಝೇಂಡೆ ಬಗ್ಗೆ ಸುಳಿವು ಸಿಕ್ಕಿತಾ ಎಂದು ಕೇಳಿದ್ದಕ್ಕೆ ಮೀರಾ ಇಲ್ಲ ಎಂದಿದ್ದಾಳೆ. ಇನ್ನು ಮೀರಾಳನ್ನು ಹೊಗಳಿರುವ ಹರ್ಷ ನಿನ್ನ ರೀತಿ ಇರೋದಕ್ಕೆ ಬರೋದಿಲ್ಲ. ಎಲ್ಲಾ ಗೊತ್ತಿದ್ದು, ಕೂಲ್ ಆಗಿ ಇರುವುದನ್ನು ಈಗ ಕಲಿಯುತ್ತಿದ್ದೇನೆ ಎಂದು ಹೇಳಿದ್ದಾನೆ.

ಅನು ಮತ್ತೊಂದು ಯೋಜನೆ!

ಅನು ಮತ್ತೊಂದು ಯೋಜನೆ!

ಅನು ಜಲಂಧರ್‌ಗೆ ಕರೆ ಮಾಡಿ ಮೀಟ್ ಮಾಡೋಣ. ನಿಮ್ಮಿಂದ ನನಗೆ ಸಹಾಯವಾಗಬೇಕಿತ್ತು ಎಂದು ಹೇಳಿರುತ್ತಾಳೆ. ಆದರೆ, ಬೆಳಗ್ಗೆ ಅಷ್ಟೊತ್ತಿಗೆ ಅದನ್ನು ಮರೆತಿರುತ್ತಾಳೆ. ಜಲಂಧರ್ ಅನು ಹೇಳಿದ ಜಾಗಕ್ಕೆ ಬಂದು ಕಾಯುತ್ತಿರುತ್ತಾನೆ. ಅನು ಬರದಿದ್ದಾಗೆ ಫೋನ್ ಮಾಡಿ ಕೇಳುತ್ತಾನೆ. ಆಗ ಅನು ಕಾಲ್ ರಿಸೀವ್ ಮಾಡಿ ತನಗೇನು ಗೊತ್ತಿಲ್ಲ ಎಂಬಂತೆ ಮಾತನಾಡುತ್ತಾಳೆ. ಈ ವಿಚಾರಕ್ಕೆ ಜಲಂಧರ್ ಶಾಕ್ ಆಗುತ್ತಾರೆ. ಅನು ನೆನಪಿಸಿಕೊಳ್ಳಲು ಪ್ರಯತ್ನಿಸುತ್ತಾಳೆ. ಫೋನ್ ಚೆಕ್ ಮಾಡಿ ನೋಡುತ್ತಾಳೆ. ಆಗ ಅವಳೇ ಕಾಲ್ ಮಾಡಿರುವುದು ಗೊತ್ತಾಗುತ್ತದೆ. ನೆನಪು ಮಾಡಿಕೊಳ್ಳಲು ಪ್ರಯತ್ನಿಸಿದರೂ, ಅನುಗೆ ನೆನಪಾಗುವುದಿಲ್ಲ. ಇದೇ ಯೋಚನೆಯಲ್ಲಿ ಅನು ಮನೆಯಿಂದ ಹೊರಗೇ ನಿಂತಿರುತ್ತಾಳೆ.

ಸತ್ಯ ಹೇಳಿದ ಮಾನ್ಸಿ!

ಸತ್ಯ ಹೇಳಿದ ಮಾನ್ಸಿ!

ಶಾರದಾ ದೇವಿ, ಪುಷ್ಪಾ ಬಳಿ ಆರ್ಯನ ಬಗ್ಗೆ ಹೊಗಳುತ್ತಿರುತ್ತಾರೆ. ನೀವು ಮನೆಗೆ ಬಂದಿದ್ದಾರೆ ಎಂಬುದು ಗೊತ್ತಾದರೆ, ಈಗಲೇ ಮನೆಗೆ ಓಡಿ ಬರುತ್ತಾರೆ ಎಂದು ಹೇಳುತ್ತಿರುತ್ತಾಳೆ. ಮಾನ್ಸಿಗೆ ಈ ಮಾತುಗಳು ಇರಿಟೇಟ್ ಮಾಡುತ್ತಿರುತ್ತವೆ. ಮನೆಯಲ್ಲಿ ಇಷ್ಟೆಲ್ಲಾ ಸಮಸ್ಯೆ ಇದ್ದರೂ ಏನೂ ಇಲ್ಲ ಎಂಬಂತೆ ಮಾತನಾಡುತ್ತಿದ್ದಾರಲ್ಲ. ಸುಳ್ಳು ಹೇಳುತ್ತಿದ್ದಾರಲ್ಲ ಎಂದು ಒಳಗೊಳಗೇ ಬೈದುಕೊಳ್ಳುತ್ತಾಳೆ. ಅಷ್ಟಕ್ಕೆ ಸುಮ್ಮನಾಗದ ಮಾನ್ಸಿ ಇರೋ ಸತ್ಯವನ್ನು ಹೇಳುತ್ತಾಳೆ. ಅನುಳನ್ನು ಅಟ್ಯಾಕ್ ಮಾಡಿದ್ದು, ಆ ಗುಂಡು ಆರ್ಯನಿಗೆ ತಗುಲಿದ್ದು ಎಲ್ಲವನ್ನೂ ಹೇಳುತ್ತಾಳೆ. ಇದರಿಂದ ಪುಷ್ಪಾ ಮತ್ತು ಸುಬ್ಬು ಇಬ್ಬರೂ ಶಾಕ್ ಆಗುತ್ತಾರೆ.

ಝೇಂಡೆ ಮೇಲಿನ ಕೋಪ ಮರೆತ ಆರ್ಯ!

ಝೇಂಡೆ ಮೇಲಿನ ಕೋಪ ಮರೆತ ಆರ್ಯ!

ಮಾನ್ಸಿ ಮಾತನಾಡುತ್ತಿರುವಾಗಲೇ ಹೊರಗಿನಿಂದ ಗುಂಡಿನ ಶಬ್ದಗಳು ಕೇಳಿ ಬರುತ್ತವೆ. ಇದರಿಂದ ಭಯಗೊಳ್ಳುವ ಪುಷ್ಪಾ ಆಚೆ ಓಡಿ ಬರುತ್ತಾಳೆ. ಮನೆಯವರೆಲ್ಲಾ ಓಡಿ ಬಂದು ನೋಡಿದರೆ, ಆರ್ಯ ಶೂಟ್ ಮಾಡುತ್ತಿರುತ್ತಾರೆ. ಶಾರದಾ, ಮಾನ್ಸಿಯನ್ನು ಎಲ್ಲರನ್ನು ಒಳಗೆ ಕರೆದುಕೊಂಡು ಹೋಗು ಎನ್ನುತ್ತಾಳೆ. ಮಾನ್ಸಿ ಎಲ್ಲರನ್ನೂ ಒಳಗೆ ಕರೆದುಕೊಂಡು ಹೋಗುತ್ತಾಳೆ. ಶಾರದಾ ಆರ್ಯನನ್ನು ತಡೆಯುತ್ತಾಳೆ. ಆಗ ಆರ್ಯ ಫೋನ್ ಕೊಟ್ಟು ಆಡಿಯೋ ಒಂದನ್ನು ಕೇಳಲು ಹೇಳುತ್ತಾನೆ. ಅದರಲ್ಲಿ ಝೇಂಡೇ ಪೊಲೀಸ್‌ಗೆ ಕರೆ ಮಾಡಿ, ಆರ್ಯನಿಗೆ ಜೀವಬೆದರಿಕೆ ಇದೆ ನನ್ನ ಕೈಯಲ್ಲಿ ಆಗುತ್ತಿಲ್ಲ ನೀವು ಸೆಕ್ಯೂರಿಟಿ ಕೊಡಿ ಎಂದು ಹೇಳಿರುತ್ತಾನೆ. ಇದನ್ನು ಕೇಳಿದ ಆರ್ಯ ನಾನು ಝೇಂಡೇ ಮೇಲೆ ಅನುಮಾನ ಪಟ್ಟೆ ಎಂದು ಬೇಸರಗೊಳ್ಳುತ್ತಾನೆ.

ಆರ್ಯನ ವಿಚಾರಕ್ಕೆ ಹೆದರಿದ ಪುಷ್ಪಾ-ಸುಬ್ಬು

ಆರ್ಯನ ವಿಚಾರಕ್ಕೆ ಹೆದರಿದ ಪುಷ್ಪಾ-ಸುಬ್ಬು

ಇನ್ನು ಆರ್ಯನ ವರ್ತನೆ ಕಂಡು ಪುಷ್ಪಾ ಹಾಗೂ ಸುಬ್ಬು ಗಾಬರಿಗೊಂಡಿರುತ್ತಾರೆ. ಆಗ ಮಾನ್ಸಿ ಇದಕ್ಕೆಲ್ಲಾ ಹೆದರಬೇಡಿ. ಇದೆಲ್ಲಾ ಕಾಮನ್. ಇಂತಹ ಸದರ್ಭದಲ್ಲಿ ಅವರನ್ನು ತಡೆಯೋದಕ್ಕೆ ಹೋಗಿದ್ದರೆ, ನಮಗೆ ಗುಂಡು ಹಾರುತ್ತಿತ್ತು. ಇದು ತುಂಬಾ ಕಾಮನ್ ವಿಚಾರ. ಇಂತಹ ಹಲವು ಘಟನೆಗಳು ನಮ್ಮ ಮನೆಯಲ್ಲಿ ನಡೆಯುತ್ತಿರುತ್ತವೆ ಎಂದು ಹೇಳುತ್ತಾಳೆ. ಪುಷ್ಪಾ ಹಾಗೂ ಸುಬ್ಬು ಈ ಮಾತುಗಳನ್ನು ಕೇಳಿ ಮತ್ತಷ್ಟು ಶಾಕ್ ಆಗುತ್ತಾರೆ.

More from Filmibeat

English summary
Jothe Jotheyali Serial Written Update On July 22nd Episode, Anu Is In Confusion, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X