ರಾಜನಂದಿನಿಯೇ ಅನು ಸಿರಿಮನೆ ಮರುಜನ್ಮ: ಆರ್ಯವರ್ಧನ್‌ಗೆ ಮುಂದೈತೆ ಮಾರಿ ಹಬ್ಬ!
ಜೊತೆ ಜೊತೆಯಲಿ ಧಾರಾವಾಯಲ್ಲಿ ಸತ್ಯ ಹೇಳೋಕೆ ಅಂತ ಬಂದ ಅನು, ಆರ್ಯವರ್ಧನ್‌ಗೆ ಏನೂ ಹೇಳೋಕೆ ಆಗದೆ ಒದ್ದಾಡುತ್ತಿದ್ದಾಳೆ. ವಠಾರದ ಟೆರೆಸ್ ಮೇಲೆ ನಿಂತು ಒಬ್ಬಳೆ ಮಾತನಾಡುತ್ತಿರುತ್ತಾಳೆ. ಅಪ್ಪ ಅಮ್ಮನಿಗೆ ಆರ್ಯವರ್ಧನ್ ನಿಜ ರೂಪದ ಬಗ್ಗೆ ಹೇಳೋದು ಹೇಗೆ..? ಹೇಳಿದರೆ, ಅಪ್ಪ-ಅಮ್ಮನಿಗೆ ಹೇಗಾಗಬೇಡ..? ಅಳಿಯನ ಬಗ್ಗೆ ತುಂಬಾ ವಿಶ್ವಾಸ ಇಟ್ಟುಕೊಂಡಿದ್ದಾರೆ ಎಂದು ಮಾತನಾಡಿಕೊಳ್ಳುತ್ತಾಳೆ.
ಅಷ್ಟರಲ್ಲಿ ಅನು ಸ್ನೇಹಿತೆ ರಮ್ಯ ಬಂದು ಮಾತನಾಡಿಸಿದ್ದಾಳೆ. ರಮ್ಯಾ ಬಳಿಯೂ ಅನು ಗೊಂದಲದ ಮಾತುಗಳನ್ನೇ ಆಡುತ್ತಿರುತ್ತಾಳೆ. ಆಗ ಅನು, ರಮ್ಯಾಗೆ ರಾಜನಂದಿನಿ ಕಥೆಯನ್ನೆಲ್ಲಾ ಬಿಡಿಸಿ ಹೇಳುತ್ತಾಳೆ. ಹುಟ್ಟಿನ ಸತ್ಯ ಹಾಗೂ ಸಾವಿನ ಸತ್ಯ ಅಂತ ಮಾತನಾಡುತ್ತಿರುತ್ತಾಳೆ. ಆದರೆ ಇದ್ಯಾವುದೂ ರಮ್ಯಾಗೆ ಅರ್ಥವೇ ಆಗುವುದಿಲ್ಲ.
ಅಷ್ಟೊತ್ತಿಗೆ ಪುಷ್ಪ ಬರುತ್ತಾಳೆ. ಅನು ಮಾತುಗಳನ್ನು ಕೇಳಿಸಿಕೊಂಡು, ಅನು ಏನೇ ಅಂತ ಹೇಳುತ್ತಾಳೆ. ಆಗ ಪುಷ್ಪ ಅವಳೇನೋ ಮಾತನಾಡುತ್ತಿದ್ದಾಳೆ ಎಂದು ಮನಸಿನಲ್ಲೇ ಹೇಳಿಕೊಳ್ಳುತ್ತಾಳೆ. ಅನುಗೆ ಏನೋ ಆಗಿದೆ ಎಂದು ಪುಷ್ಪ ಕೂಡ ತಲೆ ಕೆಡಿಸಿಕೊಳ್ಳುತ್ತಾಳೆ.

ಇತ್ತ ರಮ್ಯಾಗೆ ಬೆಕ್ಕು ಅಳಿಲು ಸಾಕಿದ ವಿಚಾರವನ್ನು ನೆನಪಿಸುತ್ತಾಳೆ. ಬೆಕ್ಕು, ಅಳಿಲನ್ನು ಕೊಂದಿದ್ದು, ಆ ವಿಚಾರ ತಡವಾಗಿ ಗೊತ್ತಾಗಿದ್ದು ಎಲ್ಲ ವಿಚಾರವನ್ನೂ ಹೇಳುತ್ತಾಳೆ. ಅಲ್ಲದೇ ತಾನೇ ಅನು ಹಾಗೂ ರಾಜನಂದಿನಿ ಇಬ್ಬರೂ ಕೂಡ ಒಂದೇ ಎಂದು ಹೇಳುತ್ತಾಳೆ. ಈ ಮಾತಿಗೆ ರಮ್ಯ ಶಾಕ್ ಆಗುತ್ತಾಳೆ. ರಾಜನಂದಿನಿಯೇ ತಾನು. ತನ್ನನ್ನು ಆರ್ಯವರ್ಧನ್ ಕೊಂದ ವಿಚಾರ ಎಲ್ಲಾ ಗೊತ್ತಾಗಿದೆ. ಆದರೆ ನಾನು ಮುಂದೇನು ಮಾಡಬೇಕು ಅನ್ನೊದು ಗೊತ್ತಾಗುತ್ತಿಲ್ಲ ಎಂದು ಹೇಳುತ್ತಾಳೆ. ಆಗ ರಮ್ಯಾಗೆ ಶಾಕ್ ಆಗುತ್ತೆ. ರಮ್ಯಾ ಮಾತನ್ನು ಕೇಳಿದ ಅನು, ನನಗೆ ಈ ವಿಚಾರವನ್ನು ಅರಗಿಸಿಕೊಳ್ಳಲು ಸಮಯ ಬೇಕಾಯ್ತು. ಇನ್ನು ನಿನಗೂ ಟೈಂ ಬೇಕಾಗುತ್ತೆ ಎಂದು ಹೇಳಿ ಅನು ಅಲ್ಲಿಂದ ಹೋಗುತ್ತಾಳೆ.
ಪುಷ್ಪ, ಸುಬ್ಬು ಹತ್ತಿರ ಬಂದು ಅನು ಏನೇನೋ ಮಾತನಾಡುತ್ತಿದ್ದಳು. ಸತ್ಯ, ಸಾವು ಅಂತೆಲ್ಲಾ ಹೇಳುತ್ತಿದ್ದಳು ಭಯ ಆಗುತ್ತಿದೆ ಎನ್ನುತ್ತಾಳೆ. ಅಷ್ಟರಲ್ಲಿ ಅನು ಬಂದು ಎಲ್ಲಾ ನಾನೇ ಹೇಳುತ್ತೀನಿ ಎಂದು ಹೇಳುತ್ತಾಳೆ. ರಾಜನಂದಿನಿ ಸಾವಿನ ದಿನವೇ ನಾನು ಹುಟ್ಟಿದ್ದು, ಅದಕ್ಕೆ ಕಾರಣ ಅವರೇ, ಮತ್ತೆ ಅನು ಆಗಿ ಜನಿಸಿದರು ಎಂದು ಹೇಳುತ್ತಾಳೆ. ಆಗ ದಮ್ಮಯ್ಯ ಅಂತೀನಿ ಕಣೇ ಹೀಗೆಲ್ಲಾ ಮಾತನಾಡಬೇಡ. ಇದನ್ನೆಲ್ಲಾ ಆರ್ಯ ಕೇಳಿಸಿಕೊಂಡರೆ ಏನೆಲ್ಲಾ ಆಗುತ್ತೆ. ಯಾಕೇ ಹೀಗೆಲ್ಲಾ ಮಾತನಾಡುತ್ತಿದ್ದೀಯಾ ಎಂದು ಕೇಳುತ್ತಾಳೆ ಪುಷ್ಪ.
ಇತ್ತ ಆರ್ಯವರ್ಧನ್ ಅನು ನಡೆದುಕೊಂಡ ರೀತಿಯ ಬಗ್ಗೆಯೇ ಯೋಚಿಸುತ್ತಿರುತ್ತಾನೆ. ಲಂಡನ್‌ಗೆ ಹೊರಟಿರುವ ಆರ್ಯನ ಮನಸಲ್ಲಿ ಅನುಳದ್ದೇ ಯೋಚನೆ ಇರುತ್ತದೆ. ಆಗ ಝೇಂಡೇ ಬೇರೆ ದೇಶಕ್ಕೆ ಹೋಗುವಾಗ ಇರುವ ಹುಮ್ಮಸಿಲ್ಲ. ಏನಾಗಿದೆಯೋ ಗೊತ್ತಿಲ್ಲ ಕಾಲ ಬದಲಾದಂತೆಯೇ, ಸ್ನೇಹಿತನು ಬದಲಾಗುತ್ತಾನೆ ಎಂದು ಹೇಳಿದಾಗ ಆರ್ಯ ಮಾತನಾಡಲು ಶುರು ಮಾಡುತ್ತಾನೆ. ಯಾಕೋ ಜೀವನದಲ್ಲಿ ಮೊದಲ ಬಾರಿಗೆ ಕೆಲಸವನ್ನೆಲ್ಲಾ ಪಕ್ಕಕ್ಕಿಟ್ಟು ಇಲ್ಲೇ ಕೂರಬೇಕು ಎನಿಸುತ್ತಿದೆ. ಒಂದು ಕ್ಷಣವೂ ಆಕೆಯನ್ನ ಬಿಟ್ಟು ಇರೋದಕ್ಕೆ ಆಗೋದಿಲ್ಲ ಅನಿಸುತ್ತಿದೆ. ನಾನು ಲಂಡನ್‌ಗೆ ಹೋದರೆ ಏನೋ ಆಗುತ್ತೆ ಅನಿಸುತ್ತಿದೆ. ಕೊನೆಪಕ್ಷ ದ್ವೇಷವನ್ನ ಬೇಕಿದ್ದರೂ ಸಹಿಸಿಕೊಳ್ಳುತ್ತೀನಿ. ಆದರೆ, ತಿರಸ್ಕಾರವನ್ನ ಸಹಿಸೋದಿಲ್ಲ. ಅನು ನನ್ನ ತಿರಸ್ಕರಿಸುತ್ತಿದ್ದಾಳೆ ಎಂದು ಕೊರಗುತ್ತಾನೆ.

ಇನ್ನು ಅನು ಟೆರೆಸ್ ಮೇಲೆ ಒಬ್ಬಳೇ ಮಾತನಾಡುತ್ತಿರುವುದನ್ನು ನೋಡಿದ ರಮ್ಯಾ, ಪುಷ್ಪ, ಸುಬ್ಬು ಶಾಕ್ ಆಗುತ್ತಾರೆ. ಪುಷ್ಪ ರಮ್ಯ ಬಳಿ ಜೋರಾಗಿ ಕೇಳುತ್ತಾಳೆ. ಏನಾಗಿದೆ ಅನುಗೆ ಅಂತ ಹೇಳೇ ಅಂದಾಗ, ರಮ್ಯ ಅನು ಅವಳೇ ರಾಜನಂದಿನಿ ಎಂದು ಹೇಳಿದಳು. ಈ ಮಾತಿಗೆ ಪುಷ್ಪ, ಸುಬ್ಬು ಶಾಕ್ ಆಗಿ ಮುಂದೇನು ಮಾಡುತ್ತಾಳೆ ಎಂದು ನೋಡೋಣ ಬಾ ಎಂದು ಕರೆದುಕೊಂಡು ಹೋಗುತ್ತಾನೆ.


Click it and Unblock the Notifications











