Don't Miss!
- News
ಹಾಸನ ಜಿಲ್ಲೆಯಲ್ಲಿ ಮುಂದುವರೆದ ಕಾಡಾನೆ ದಾಳಿ: ಕಾಫಿ, ಮೆಣಸು, ಭತ್ತ ಬೆಳೆ ನಾಶ
- Sports
ಟಿ20 ವಿಶ್ವಕಪ್ನ ಭಾರತ ತಂಡಕ್ಕೆ ಆಯ್ಕೆಯಾಗುವ ಮೂವರು ಕ್ರಿಕೆಟಿಗರನ್ನು ಹೆಸರಿಸಿದ ಕೈಫ್
- Technology
ಒಪ್ಪೋ ರೆನೋ 8 ಸ್ಮಾರ್ಟ್ಫೋನ್ ಬಿಡುಗಡೆ! 33W ಚಾರ್ಜಿಂಗ್ ವಿಶೇಷ!
- Lifestyle
ಆ. 17ಕ್ಕೆ ಸಿಂಹ ರಾಶಿಯಲ್ಲಿ ಸೂರ್ಯ ಸಂಚಾರ: 4 ರಾಶಿಗಳಿಗೆ ಅದೃಷ್ಟ, 3 ರಾಶಿಯವರು ಹುಷಾರು
- Automobiles
ಆಕರ್ಷಕ ವಿನ್ಯಾಸದ 2022ರ ಹ್ಯುಂಡೈ ಟ್ಯೂಸಾನ್ ಎಸ್ಯುವಿಯ ವಿಶೇಷತೆಗಳು
- Education
Distance Education Courses And Colleges : ದೂರ ಶಿಕ್ಷಣ ಮೂಲಕ ಅಧ್ಯಯನಕ್ಕೆ ಉತ್ತಮ ಕೋರ್ಸ್ ಮತ್ತು ಕಾಲೇಜುಗಳ ವಿವರ
- Finance
5 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿದ ಸಗಟು ಹಣದುಬ್ಬರ: ಜುಲೈನಲ್ಲಿ ಶೇ. 13.93 ದಾಖಲು
- Travel
ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲ್ ಆನೆಗಳ ಶಿಬಿರಕ್ಕೆ ಭೇಟಿ ಕೊಡಿ
ಹಾಸಿಗೆಯಿಂದ ಎದ್ದು ಓಡಿದ ಆರ್ಯನ ಹೊಸ ಪ್ಲ್ಯಾನ್ ಏನು?
'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಆರ್ಯವರ್ಧನ್ಗೆ ಗುಂಡೇಟು ಬಿದ್ದು ಪ್ರಜ್ಞೆ ಇಲ್ಲದೇ ಮಲಗಿದ್ದಾನೆ. ಆರ್ಯನ ಸ್ಥಿತಿಕಂಡು ಅನು ಸಿರಿಮನೆ ಮರುಗುತ್ತಿದ್ದಾಳೆ. ಮುಂದೇನು ಮಾಡುವುದು? ಯಾಕೆ ಹೀಗೆಲ್ಲಾ ಆಗುತ್ತಿದೆ.? ಎಂದು ಯೋಚಿಸುತ್ತಿದ್ದಾಳೆ.
ಇತ್ತ ಹರ್ಷವರ್ಧನ್ ಕೋಪದಿಂದ ಕುದಿಯುತ್ತಿದ್ದಾನೆ. ಆರ್ಯವರ್ಧನ್ ತನ್ನ ಮನೆಗೆ ಮೋಸ ಮಾಡಿದವನು. ಅತ್ತಿಗೆಯ ಪ್ಲಾನ್ ಪ್ರಕಾರ ಆರ್ಯವರ್ಧನ್ ಬಾಯಲ್ಲಿ ಸತ್ಯ ಹೇಳಿಸಬೇಕು. ಅಕ್ಕ ಹಾಗೂ ಅಪ್ಪನಿಗೆ ಆದ ಅನ್ಯಾಯವನ್ನು ಆದಷ್ಟು ಬೇಗ ಸರಿಪಡಿಸಬೇಕು ಎಂದು ಕಾತುರನಾಗಿದ್ದಾನೆ.
ಸತ್ಯ
ಏರಿಯಾದಲ್ಲಿ
ಜಾತ್ರೆ:
ಕಾರ್ತಿಕ್
ಗೆ
ತಡೆಯಲಾರದ
ಸಿಟ್ಟು
ಇನ್ನು ಝೇಂಡೆಗೆ ಇಬ್ಬಂದಿ ಸ್ಥಿತಿ ಬಂದೊದಗಿದೆ. ಅನುಳನ್ನು ಕೊಲೆ ಮಾಡಲು ಹೋಗಿ ಆರ್ಯವರ್ಧನ್ಗೆ ತೊಂದರೆಯಾಗಿದೆ. ಈಗ ಆರ್ಯ ಹೇಗಿದ್ದಾನೆ.? ಅವನ ಪರಿಸ್ಥಿತಿ ಏನು ಎಂದು ತಿಳಿದುಕೊಳ್ಳಲಾಗದೇ ಒದ್ದಾಡುತ್ತಿದ್ದಾನೆ. ಆರ್ಯನ ಬಗ್ಗೆಯ ಯೋಚನೆಯಲ್ಲಿ ಏನು ಮಾಡಬೇಕೆಂದು ತಿಳಿಯದೇ ಒಬ್ಬನೇ ಗೋಳಾಡುತ್ತಿದ್ದಾನೆ.

ಶಾರದಾ ದೇವಿ ಕಾಲಿಡಿದ ಮಂದ!
ಶಾರದಾ, ಮನೆಯಲ್ಲಿ ಅನಾಹುತವಾಗಿರುವುದಕ್ಕೆ ಆತಂಕಗೊಂಡಿದ್ದಾಳೆ. ತನ್ನ ಬದುಕಿನಲ್ಲಿ ನಡೆದ ಘಟನೆಗಳನ್ನೆಲ್ಲಾ ನೆನೆದು ದೇವರ ಬಳಿ ಪ್ರಾರ್ಥಿಸುತ್ತಿದ್ದಾಳೆ. ನೀನೇ ದಾರಿ ತೊರು ತಾಯಿ ಎಂದು ದೇವರಿಗೆ ಕೈ ಮುಗಿದಾಗ ದೀಪ ಆರಿ ಹೋಗಿದೆ. ಹೀಗಾಗಿ ಮಂದಗೆ ಎಣ್ಣೆ ತರಲು ಹೇಳಿದರೆ ಅವರು ಅಡುಗೆ ಎಣ್ಣೆಯನ್ನು ತಂದು ಎಡವಟ್ಟು ಮಾಡಿದ್ದಾಳೆ. ಶಾರದಾ ದೇವಿ ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದಾಳೆ. ಎಲ್ಲಾ ವಿಚಾರವನ್ನು ಹೇಳುತ್ತೀನಿ ಕ್ಷಮಿಸಿಬಿಡಿ ಎಂದಿದ್ದಾಳೆ. ಆದರೆ ಮಂದ ಮಾತು ಶಾರದಾಗೆ ಅರ್ಥವಾಗಿಲ್ಲ.
ಗಟ್ಟಿಮೇಳ:
ವೈದೇಹಿ
ತಾಯಿಯ
ಕರುಳು
ಮಕ್ಕಳಿಗಾಗಿ
ಮಿಡಿಯುತ್ತಿದೆ..!

ಕದ್ದು ಬಂದ ಝೇಂಡೆ!
ಅಷ್ಟರಲ್ಲಿ ಪೊಲೀಸರು ಮನೆಗೆ ಬಂದಿದ್ದಾರೆ. ವಿಚಾರದ ಬಗ್ಗೆ ಕೇಳಿದ್ದಕ್ಕೆ ಶಾರದಾ ಸುಳ್ಳು ಹೇಳಿದ್ದಾಳೆ. ಯಾರಿಗೂ ಯಾವ ತೊಂದರೆಯೂ ಆಗಿಲ್ಲ. ಎಲ್ಲರೂ ಅರಾಮವಾಗಿದ್ದೀವಿ ಎಂದು ಸುಳ್ಳು ಹೇಳಿ ಕಳಿಸುತ್ತಾಳೆ. ಆದರೆ ಈ ನಡುವೆ ಆರ್ಯನ ಸ್ಥಿತಿ ತಿಳಿಯಲು ಕಾಂಪೌಂಡ್ ಹಾರಿ ಝೇಂಡೆ ಬಂದಿದ್ದಾನೆ. ಕಾಂಪೌಂಡ್ ಒಳಗೆ ಪೊಲೀಸರ ಜೀಪ್ ಕಂಡು, ಮಂದ ಎಲ್ಲಾ ಹೇಳಿದ್ದಾಳಾ ಎಂಬ ಅನುಮಾನ ಹಾಗೂ ಭಯದಲ್ಲಿ ಝೇಂಡೆ ವಾಪಸ್ ಕದ್ದು ಓಡಿ ಹೋಗಿದ್ದಾನೆ.

ಮಾನ್ಸಿ ಪ್ರಶ್ನೆಗೆ ಉತ್ತರಿಸಿದ ಅನು!
ಪೊಲೀಸರ ಬಳಿ ಏನೂ ನಡೆದೇ ಇಲ್ಲ ಎಂದಿದ್ದಕ್ಕೆ ಮಾನ್ಸಿ ಕೋಪಗೊಂಡಿದ್ದಾಳೆ. ಯಾಕೆ ಹೀಗೆ ಗುಟ್ಟು ಮಾಡುತ್ತಿದ್ದೀರಾ ಎಂದು ಪ್ರಶ್ನಿಸುತ್ತಾಳೆ. ಅದಕ್ಕೆ ಶಾರದಾ, ಹೀಗೆಲ್ಲಾ ಮುಚ್ಚಿಡುವುದಕ್ಕೆ ಒಂದು ಕಾರಣ ಇದೆ ಮಾನ್ಸಿ. ಅದಕ್ಕೋಸ್ಕರವೆ ಏನೂ ಹೇಳಿಲ್ಲ. ಆ ಕಾರಣ ಅನುಗೂ ಗೊತ್ತಿದೆ ಎನ್ನುತ್ತಾಳೆ. ಆಗ ಅನು ರಾಜನಂದಿನಿ ಸತ್ತ ಸ್ಥಿತಿ ನೆನೆದು, ನ್ಯಾಯಕ್ಕೊಸ್ಕರ ತಾಳ್ಮೆಯಿಂದ ಕಾಯಬೇಕು. ಇಷ್ಟು ವರ್ಷ ಕಾದ್ದೀನಿ, ಇನ್ನೂ ಸ್ವಲ್ಪ ದಿನ ಕಾಯಬೇಕು. ಇದಕ್ಕೆಲ್ಲಾ ಯಾರು ಕಾರಣ ಅನ್ನೋದನ್ನ ತಿಳಿದುಕೊಳ್ಳಲೆಬೇಕು ಎಂದು ಹೇಳುತ್ತಾಳೆ. ಅನು ಮಾತುಗಳನ್ನು ಕೇಳಿ ಖುಷಿಯಾಯ್ತು ಎಂದು ಹರ್ಷವರ್ಧನ್ ಹೇಳುತ್ತಾನೆ.

ಸತ್ಯ ಹೇಳಿದ ಮಂದ!
ಅಷ್ಟರಲ್ಲಿ ಎಚ್ಚರಗೊಳ್ಳುವ ಆರ್ಯವರ್ಧನ್, ಝೇಂಡೆ ಎಂದು ಕೂಗುತ್ತಾ ಕೆಳಗೆ ಇಳಿದು ಬರುತ್ತಾನೆ. ಈ ಶೂಟೌಟ್ ಬಗ್ಗೆ ಗೊತ್ತಿತ್ತ ಎಂದು ಕೇಳಿದ್ದಕ್ಕೆ, ಇಲ್ಲ ಆದರೆ ಝೇಂಡೆಗೆ ಗೊತ್ತಿರುತ್ತೆ. ಅದಕ್ಕೆ ಅವನು ಕಾಣಿಸುತ್ತಿಲ್ಲ. ಅವನಿಗೆ ಯಾರೋ ಏನೋ ಮಾಡಿದ್ದಾರೆ ಎಂದು ಝೇಂಡೆಯನ್ನು ಹುಡುಕಿಕೊಂಡು ಹೋಗಿದ್ದಾನೆ. ಆಗ ಮಂದ ಆರ್ಯ ಸರ್ನ ಕಳಿಸಬಾರದಿತ್ತು ಅಮ್ಮ, ಇದಕ್ಕೆಲ್ಲಾ ಝೇಂಡೆನೇ ಕಾರಣ ಎಂದು ಹೇಳುತ್ತಾಳೆ. ಝೇಂಡೆ ಹೆದರಿಸಿದ ವಿಚಾರ, ಮನೆಯ ಬಗ್ಗೆ ಹೇಳುತ್ತಿದ್ದ ವಿಚಾರವನ್ನೆಲ್ಲಾ ಹೇಳಿ ಅಳುತ್ತಾಳೆ. ಆಗ ಮನೆಯವರೆಲ್ಲರೂ ಶಾಕ್ ಆಗುತ್ತಾರೆ. ಮುಂದೆ ಧಾರಾವಾಹಿ ಯಾವ ತಿರುವು ಪಡೆದುಕೊಳ್ಳುತ್ತದೋ ಕಾದು ನೋಡಬೇಕಿದೆ.