For Quick Alerts
  ALLOW NOTIFICATIONS  
  For Daily Alerts

  ವಿಶೇಷ ಅತಿಥಿಯೊಡನೆ ಕಿರುತೆರೆಗೆ ಬರುತ್ತಿದ್ದಾರೆ ಜೂ.ಎನ್‌ಟಿಆರ್

  By ಫಿಲ್ಮಿಬೀಟ್ ಡೆಸ್ಕ್
  |

  ನಟ ಜೂ.ಎನ್‌ಟಿಆರ್ ತೆಲುಗಿನ ಸ್ಟಾರ್ ನಟ. ಜೂ.ಎನ್‌ಟಿಆರ್ ಸಿನಿಮಾ ಬಿಡುಗಡೆ ಆದ ದಿನ ತೆಲುಗು ರಾಜ್ಯಗಳಲ್ಲಿ ಹಬ್ಬವೇ ಆದಂತೆ ಸಂಭ್ರಮ ಆಚರಿಸುತ್ತಾರೆ ಅವರ ಅಭಿಮಾನಿಗಳು.

  ಬಹುನಿರೀಕ್ಷಿತ 'ಆರ್‌ಆರ್ಆರ್' ಸಿನಿಮಾದ ಜೊತೆಗೆ ಹಲವು ಸಿನಿಮಾಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ನಟ ಜೂ.ಎನ್‌ಟಿಆರ್ ಇದೀಗ ಕಿರುತೆರೆಗೆ ಕಾಲಿಡುತ್ತಿದ್ದಾರೆ. ಈ ಸುದ್ದಿ ಅವರ ಅಭಿಮಾನಿಗಳು ಆಶ್ಚರ್ಯದ ಜೊತೆಗೆ ಖುಷಿ ಸಹ ತಂದಿದೆ.

  ಕಿರುತೆರೆಯಲ್ಲಿ ಜೂ.ಎನ್‌ಟಿಆರ್ ಇದೇ ಮೊದಲ ಬಾರಿಗೆ 'ಎವರು ಮೀಲೊ ಕೋಟಿಶ್ವರುಲು' ಶೋ ಅನ್ನು ತೆಲುಗಿನಲ್ಲಿ ನಡೆಸಿಕೊಡಲಿದ್ದಾರೆ. ತೆಲುಗಿನ ಈ ಕೋಟ್ಯಧಿಪತಿ ಕಾರ್ಯಕ್ರಮ ಪ್ರಸಾರವಾಗುವ ದಿನಾಂಕ ಈಗಾಗಲೇ ಘೋಷಣೆ ಆಗಿದ್ದು, ಮೊದಲ ದಿನದ ಎಪಿಸೋಡ್‌ಗೆ ಜೂ.ಎನ್‌ಟಿಆರ್ ಜೊತೆಗೆ ವಿಶೇಷ ಅತಿಥಿಯೊಬ್ಬರು ಆಗಮಿಸಲಿದ್ದಾರೆ.

  ಜೂ.ಎನ್‌ಟಿಆರ್ ನಿರೂಪಣೆ ಮಾಡಲಿರುವ 'ಎವರು ಮೀಲೊ ಕೋಟಿಶ್ವರುಲು' ಕಾರ್ಯಕ್ರಮವು ಆಗಸ್ಟ್ 22ರಿಂದ ಪ್ರಸಾರವಾಗಲಿದ್ದು, ಮೊದಲ ಎಪಿಸೋಡ್‌ನಲ್ಲಿ ಜೂ.ಎನ್‌ಟಿಆರ್ ಜೊತೆಗೆ ತೆಲುಗು ಸೂಪರ್ ಸ್ಟಾರ್ ನಟ ಮೆಗಾಸ್ಟಾರ್ ಚಿರಂಜೀವಿ ಭಾಗವಹಿಸಲಿರುವುದು ವಿಶೇಷ. ಚಿರಂಜೀವಿ ಮಾತ್ರವೇ ಅಲ್ಲದೆ ರಾಮ್ ಚರಣ್ ಸಹ ಮೊದಲ ಶೋನಲ್ಲಿ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎನ್ನಲಾಗುತ್ತಿದೆ. ಕಾರ್ಯಕ್ರಮದ ಪ್ರೊಮೊ ಈಗಾಗಲೇ ಬಿಡುಗಡೆ ಆಗಿದ್ದು, 'ಆಗಸ್ಟ್ 22ರಿಂದ ನಿಮ್ಮ ಪ್ರತಿ ಮನೆ-ಮನೆಗೆ ಬರುತ್ತಿದ್ದೇನೆ' ಎಂದಿದ್ದಾರೆ ಜೂ.ಎನ್‌ಟಿಆರ್.

  ಆಗಸ್ಟ್ 22ರಂದು ಮೊದಲ ಎಪಿಸೋಡ್ ಪ್ರಸಾರ

  ಆಗಸ್ಟ್ 22ರಂದು ಮೊದಲ ಎಪಿಸೋಡ್ ಪ್ರಸಾರ

  'ಎವರು ಮೀಲೊ ಕೊಟಿಶ್ವರುಲು' ಐದನೇ ಸೀಸನ್ ಇದಾಗಿದ್ದು, ಆಗಸ್ಟ್ 22 ರಂದು ಶೋ ಪ್ರಾರಂಭವಾಗಲಿದೆ. ಆಗಸ್ಟ್ 23ರಿಂದ ಪ್ರತಿ ಸೋಮವಾರಿಮದ ಗುರುವಾರದವರೆಗೆ ರಾತ್ರಿ 8:30 ಗಂಟೆಗೆ ಜೆಮಿನಿ ಟಿವಿಯಲ್ಲಿ ಪ್ರಸಾರವಾಗಲಿದೆ. ಇದೇ ಮೊದಲ ಬಾರಿಗೆ ಜೂ.ಎನ್‌ಟಿಆರ್ 'ಎವರು ಮೀಲೊ ಕೋಟೀಶ್ವರುಲು' ಶೋ ಅನ್ನು ನಿರೂಪಣೆ ಮಾಡಲಿದ್ದಾರೆ. ಈ ಹಿಂದಿನ ನಾಲ್ಕು ಶೋ ಅನ್ನು ಹಿರಿಯ ನಟರು ನಿರೂಪಣೆ ಮಾಡಿದ್ದರು.

  ನಾಗಾರ್ಜುನ, ಚಿರಂಜೀವಿ ನಿರೂಪಣೆ ಮಾಡಿದ್ದಾರೆ

  ನಾಗಾರ್ಜುನ, ಚಿರಂಜೀವಿ ನಿರೂಪಣೆ ಮಾಡಿದ್ದಾರೆ

  ಮೊದಲ ಮೂರು ಸೀಸನ್ ಅನ್ನು ಖ್ಯಾತ ನಟ ನಾಗಾರ್ಜುನ ನಿರೂಪಣೆ ಮಾಡಿದ್ದರು. ಈ ಮೂರು ಸೀಸನ್‌ ಮಾ ಟಿವಿಯಲ್ಲಿ ಪ್ರಸಾರವಾಗಿದ್ದವು. ನಾಲ್ಕನೇ ಸೀಸನ್ ಅನ್ನು ನಟ ಚಿರಂಜೀವಿ ನಿರೂಪಣೆ ಮಾಡಿದ್ದರು, ಇದು ಸ್ಟಾರ್ ಮಾ ನಲ್ಲಿ ಪ್ರಸಾರವಾಗಿತ್ತು. ಇದೀನ ಐದನೇ ಸೀಸನ್ ಅನ್ನು ಜೂ.ಎನ್‌ಟಿಆರ್ ನಿರೂಪಣೆ ಮಾಡುತ್ತಿದ್ದು ಇದು ಜೆಮಿನಿ ಟಿವಿಯಲ್ಲಿ ಪ್ರಸಾರವಾಗಲಿದೆ. 2014 ರ ಆಗಸ್ಟ್ 14ರಂದು 'ಎವರು ಮೀಲೊ ಕೋಟಿಶ್ವರುಲು' ಮೊದಲ ಶೋ ಪ್ರಸಾರವಾಗಿತ್ತು.

  ಜೂ.ಎನ್‌ಟಿಆರ್‌ಗೆ ಟಿವಿ ಹೊಸದೇನೂ ಅಲ್ಲ

  ಜೂ.ಎನ್‌ಟಿಆರ್‌ಗೆ ಟಿವಿ ಹೊಸದೇನೂ ಅಲ್ಲ

  ಜೂ.ಎನ್‌ಟಿಆರ್‌ಗೆ ಟಿವಿ ಹೊಸದೇನೂ ಅಲ್ಲ ಈ ಹಿಂದೆ ಅವರು ತೆಲುಗು ಬಿಗ್‌ಬಾಸ್ ನಿರೂಪಣೆ ಮಾಡಿ ಸೈ ಎನಿಸಿಕೊಂಡಿದ್ದಾರೆ. ಜೂ.ಎನ್‌ಟಿಆರ್ ಕೇವಲ 13ವರ್ಷ ವಯಸ್ಸಿನವರಿದ್ದಾಗ 'ಭಕ್ತ ಮಾರ್ಕಂಡೇಯ' ಧಾರಾವಾಹಿಯಲ್ಲಿ ನಟಿಸಿದ್ದರು. ಅದರ ಬಳಿಕ ಹಲವು ರಿಯಾಲಿಟಿ ಶೋಗಳಲ್ಲಿ ಅತಿಥಿಯಾಗಿ ಭಾಗವಹಿಸಿದ್ದರು. ಆದರೆ ಮೊದಲು ನಿರೂಪಣೆ ಮಾಡಿದ್ದು ಬಿಗ್‌ಬಾಸ್ ಶೋ ಅನ್ನು. ಆದರೆ ಈ ಬಾರಿ ಜೂ.ಎನ್‌ಟಿಆರ್‌ಗೆ ಕೆಲವು ಸವಾಲುಗಳು ಎದುರಾಗಲಿವೆ. 'ಎವರು ಮೀಲೊ ಕೋಟೀಶ್ವರುಲು' ಕಾರ್ಯಕ್ರಮ ಪ್ರಸಾರವಾಗುವ ವೇಳೆಗೆ ಸರಿಯಾಗಿ ತೆಲುಗು ಬಿಗ್‌ಬಾಸ್ ಸಹ ಆರಂಭವಾಗಿದ್ದು ಎರಡೂ ಶೋಗಳ ನಡುವೆ ಟಿಆರ್‌ಪಿ ಪೈಪೋಟಿ ನಡೆಯಲಿದೆ. ನಾಗಾರ್ಜುನ ಮತ್ತು ಜೂ.ಎನ್‌ಟಿಆರ್ ನಡುವೆ ಗೆಲುವು ಯಾರದ್ದಾಗಲಿದೆ ಎಂಬುದು ಕಾದು ನೋಡಬೇಕಿದೆ.

  ಪ್ರಶಾಂತ್ ನೀಲ್ ಜೊತೆ ಸಿನಿಮಾ ಮಾಡಲಿದ್ದಾರೆ

  ಪ್ರಶಾಂತ್ ನೀಲ್ ಜೊತೆ ಸಿನಿಮಾ ಮಾಡಲಿದ್ದಾರೆ

  ಸಿನಿಮಾಗಳ ವಿಷಯಕ್ಕೆ ಮರಳುವುದಾದರೆ ನಟ ಜೂ.ಎನ್‌ಟಿಆರ್ ಪ್ರಸ್ತುತ ರಾಜಮೌಳಿ ನಿರ್ದೇಶನದ 'ಆರ್‌ಆರ್ಆರ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಜೂ.ಎನ್‌ಟಿಆರ್ ಕೋಮರಂ ಭೀಮ್ ಪಾತ್ರ ನಿರ್ವಹಿಸುತ್ತಿದ್ದಾರೆ. 'ಆರ್‌ಆರ್‌ಆರ್‌' ಬಳಿಕ ಕೊರಟಾಲ ಶಿವ ನಿರ್ದೇಶನದ ಸಿನಿಮಾದಲ್ಲಿ ನಟಿಸಲಿದ್ದಾರೆ. ಅದರ ಬಳಿಕ ಕನ್ನಡದ ಪ್ರಶಾಂತ್ ನೀಲ್ ನಿರ್ದೇಶನದ ಇನ್ನೂ ಹೆಸರಿಡದ ಸಿನಿಮಾದಲ್ಲಿ ನಟಿಸಲಿದ್ದಾರೆ.

  English summary
  Jr NTR hosting Evaru meelo koteeswarulu tv program. The program will air from August 22 on Gemini Tv. Chiranjeevi will be first guest on the show.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X