17ರ ಪ್ರಾಯದಲ್ಲಿಯೇ ನನಗೆ ಕಾಸ್ಟಿಂಗ್ ಕೌಚ್ ಅನುಭವವಾಗಿತ್ತು ಎಂದ ಕಿರುತೆರೆಯ ಖ್ಯಾತ ನಟಿ..!
ಬಣ್ಣದ ಪ್ರಪಂಚದಲ್ಲಿ ನಡೆದ ಲೈಂಗಿಕ ಪ್ರಕರಣ.. ಕಿರುಕುಳ.. ದೌರ್ಜನ್ಯದ ಕುರಿತು ವಾರಕ್ಕೊಮ್ಮೆಯಾದರು ನಾವೆಲ್ಲರೂ ಸುದ್ದಿಯನ್ನ ಕೇಳುತ್ತಲೇ ಇರುತ್ತೇವೆ. ಅದರಲ್ಲಿಯೂ ಕಳೆದ ಐದಾರು ವರ್ಷದಲ್ಲಿ ಅನೇಕ ಪ್ರಜ್ಞಾವಂತ ನಟಿಯರು ದಿಟ್ಟತನದಿಂದ ಸಾಕಷ್ಟು ತೆರೆ ಮರೆಯ ಕಳ್ಳಾಟಗಳನ್ನು ಇಲ್ಲಿಯವರೆಗೆ ಬಹಿರಂಗಪಡಿಸಿದ್ದಾರೆ. ಕಾಮುಕರ ಮುಖವಾಡವನ್ನು ಕಳಚಿದ್ದಾರೆ.
ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ ಸೇರಿದಂತೆ ಎಲ್ಲ ಇಂಡಸ್ಟ್ರಿಯಲ್ಲೂ ಇದೂ ಕಾಮನ್ನೂ ಕೂಡ. ಇನ್ನು ಮೀಟೂ ಅಭಿಯಾನದ ಸ್ಟ್ರಾಂಗ್ ಆದ ಮೇಲಂತೂ ಹಳ್ಳ ಹಿಡಿದಿದ್ದ ಎಷ್ಟೋ ಪ್ರಕರಣಗಳು ಬೆಳಕಿಗೆ ಬಂದು ಪ್ರೇಕ್ಷಕರಿಗೂ ಪ್ರತಿಷ್ಠಿತರ ಅಸಲಿಯತ್ತು ಪರಿಚಯವಾಗಿದೆ. ಸದ್ಯ ಮಹಾರಾಷ್ಟ್ರದವರಿಂದ ಕುಂಕುಮ್ ಎಂದೇ ಕರೆಯಲ್ಪಡುವ ಹಿಂದಿ ಕಿರುತೆರೆ ನಟಿ ಜೂಹಿ ಪರ್ಮಾರ್ ತಮಗಾದ ಕಹಿ ಅನುಭವವನ್ನ ಹಂಚಿಕೊಂಡಿದ್ದಾರೆ.

ಹೌದು. ಸಂದರ್ಶನವೊಂದರಲ್ಲಿ ಮಾತನಾಡಿರುವ ಜೂಹಿ, ನನಗೆ ಆಗಿನ್ನೂ 17ರ ಹರೆಯ. ಹುಚ್ಚು ಖೋಡಿ ಮನಸು ಹೊಂದಿದ್ದ ನನಗೆ ಅವತ್ತು ಚಾನೆಲ್‌ನ ಮುಖ್ಯಸ್ಥರೊಬ್ಬರು ಕರೆದು ಮ್ಯೂಸಿಕ್ ಆಲ್ಬಂನಲ್ಲಿ ಹೆಜ್ಜೆ ಹಾಕುವ ಅವಕಾಶವನ್ನ ನೀಡಿದ್ದರು. ಆದರೆ ಅದಕ್ಕೆ ಬಿಕಿನಿ ಹಾಕಬೇಕೆಂಬ ಷರತ್ತನ್ನು ಹಾಕಿದ್ದರು ಎಂದಿರುವ ಜೂಹಿ, ಆ ವ್ಯಕ್ತಿಯ ಮಾತು ಕೇಳಿ ನಾನು ತಬ್ಬಿಬ್ಬು ಆದೆ ಎಂದಿದ್ದಾರೆ.
ಆ ನಂತರ ಆ ಅವಕಾಶವನ್ನ ನಾನು ನಿರಾಕರಿಸಿದೆ ಇದರಿಂದ ಸಿಟ್ಟಾದ ಆ ವ್ಯಕ್ತಿ ನನಗೆ ಅವಮಾನಿಸಿದ, ಹೊಂದಾಣಿಕೆ ಮಾಡಿಕೊಳ್ಳದಿದ್ದರೆ ಇಲ್ಲಿ ಬದುಕಲು ನೆಲೆಯೂರಲು ಸಾಧ್ಯವೇ ಇಲ್ಲ ಎಂದು ಹೇಳಿದ್ದ ಎಂದಿದ್ದಾರೆ ಜೂಹಿ.

ಮುಂದುವರೆದು ಹೊಂದಾಣಿಕೆ ಶಬ್ದ ಮತ್ತು ಆ ವ್ಯಕ್ತಿಯ ಮಾತು ಕೇಳಿ ನನಗೆ ದಿಗ್ಭ್ರಾಂತಿ ಆಯಿತು, ಆದರೂ ಕೂಡ ನಾನು ನನ್ನ ಆತ್ಮ ಸಾಕ್ಷಿಯನ್ನ ಮಾರಿಕೊಳ್ಳಲಿಲ್ಲ ಪಾತ್ರಕ್ಕಾಗಿ ಇಲ್ಲಿಯವರೆಗೆ ಯಾರ ಜೊತೆಯೂ ಹೊಂದಾಣಿಕೆಯನ್ನೂ ಮಾಡಿಕೊಂಡಿಲ್ಲ ಅಂದಿದ್ದಾರೆ ಜೂಹಿ ಪರ್ಮಾರ್.
ಇನ್ನೂ ಯಾವುದೇ ಹೊಂದಾಣಿಕೆಯನ್ನ ಮಾಡಿಕೊಳ್ಳದೇ ಬದುಕು ಕಟ್ಟಿಕೊಳ್ಳುವ ಪ್ರಯತ್ನದಲ್ಲಿದ್ದ ನಾನು ಆಗಷ್ಟೇ ಸೆಕೆಂಡ್ ಹ್ಯಾಂಡ್ ಮಾರುತಿ ಕಾರನ್ನ ಖರೀದಿಸಿದ್ದೆ ಎಂದಿರುವ ಜೂಹಿ ಈ ಘಟನೆ ನಡೆದು ಎರಡು ವರ್ಷದ ನಂತರ ಪುನ: ಆ ವ್ಯಕ್ತಿ ನನಗೆ ಅವನ ಕಛೇರಿಯ ಮುಂಭಾಗ ಸಿಕ್ಕಿದ್ದ.

ಅವನನ್ನ ನೋಡಿದ ನಾನು ಸೀದಾ ನನ್ನ ಕಾರಿನಲ್ಲಿಯೇ ಆ ವ್ಯಕ್ತಿಯ ಮುಂದೆ ತೆರಳಿ ನಾನು ಯಾರ ಜೊತೆಯೂ ರಾಜಿ ಮಾಡಿಕೊಂಡಿಲ್ಲ ಆದರೂ ನಾನು ಇನ್ನೂ ಇಂಡಸ್ಟ್ರೀಯಲ್ಲಿ ಇದ್ದೇನೆ ಎಂದು ಹೆಮ್ಮೆಯಿಂದ ಅವನಿಗೆ ಹೇಳಿದ್ದೇ ಅಂದಿದ್ದಾರೆ.
ಸದ್ಯಕ್ಕೆ ಜೂಹಿ ಪರ್ಮಾರ್ ಅವರ ಈ ಮಾತು ಹಿಂದಿ ಕಿರುತೆರೆಯ ವಲಯದಲ್ಲಿ ವ್ಯಾಪಕವಾಗಿ ಚರ್ಚೆಗೀಡಾಗುತ್ತಿದೆ. ಆ ಚಾನೆಲ್ ಯಾವುದು.. ಆ ಮುಖ್ಯಸ್ಥ ಯಾರು ಅನ್ನುವ ಪ್ರಶ್ನೆ ಕೂಡ ಮಾಯಾನಗರಿ ಮುಂಬೈನಲ್ಲಿ ಅನೇಕರಿಗೆ ಕಾಡುತ್ತಿದೆ.

ಅಂದ್ಹಾಗೇ ಕಳೆದ 25 ವರ್ಷಗಳಿಂದ ಕಿರುತೆರೆಯಲ್ಲಿ ಸಕ್ರಿಯರಾಗಿರುವ ಜೂಹಿ ನಾಲ್ಕೈದು ಹಿಂದಿ ಸಿನಿಮಾದಲ್ಲಿಯೂ ಅಭಿನಯಿಸಿದ್ದಾರೆ. ನಚ್ ಬಲಿಯೇ.. ಬಿಗ್ ಬಾಸ್ ಸೀಸನ್ 5.. ಪತಿ, ಪತ್ನಿ ಔರ್ ವೋ ನಂತಹ ರಿಯಾಲಿಟಿ ಶೋಗಳಲ್ಲಿ ಕೂಡ ಕಾಣಿಸಿಕೊಂಡು ಪ್ರೇಕ್ಷಕರ ಹೃದಯವನ್ನ ಗೆದ್ದಿದ್ದಾರೆ ಜೂಹಿ ಪರ್ಮಾರ್.


Click it and Unblock the Notifications











