KKD7: ಚಾಲೆಂಜ್ ಥೀಮ್‌ನಲ್ಲಿ ಭರ್ಜರಿ ಸ್ಟೆಪ್ಸ್ ಹಾಕಿದ ಸ್ಪರ್ಧಿಗಳು

By ಶೃತಿ ಹರೀಶ್ ಗೌಡ

'ಮನಸೇ ಮನಸೇ ಥ್ಯಾಂಕ್ಯು" ಎನ್ನುತ್ತಲೇ ರಿಂಗ್ ಒಳಗಡೆ ಡ್ಯಾನ್ಸ್ ಮಾಡುತ್ತಾ ಚಂದನ್ ಹಾಗೂ ರಾಣಿ ಇಬ್ಬರೂ ಸಹ ನೋಡುಗರ ಮನಸ್ಸು ಮುದಗೊಳಿಸಿದರು. ಬೇರೆ ಲೋಕಕ್ಕೆ ಕರೆದುಕೊಂಡು ಹೋಗಿದ್ದರು. ಇದೇ ವೇಳೆ ಅವರು ನೀಡಿದ ಅತ್ಯುತ್ತಮ ಫರ್ಪಾಮೆನ್ಸ್‌ಗೆ ಗೋಲ್ಡನ್ ಹ್ಯಾಟ್ ಪಡೆದುಕೊಂಡರು. ತೀರ್ಪುಗಾರರು ಸಹ ಚಂದನ್, ರಾಣಿ ಇಬ್ಬರ ಡ್ಯಾನ್ಸ್ ನೋಡಿ ಮೂಕ ವಿಸ್ಮಿತರಾದರು.

ಚಾಲೆಂಜ್ ಥೀಮ್‌ನಲ್ಲಿ ಶಿವಾನಿ ಹಾಗೂ ಶಿವಕುಮಾರ್ ಇಬ್ಬರೂ ಸೇರಿ ಶಶಿಕುಮಾರ್ ಅವರು ಅವರ ತಂದೆಯ ಜೊತೆಗೆ ಕಳೆದ ಕ್ಷಣಗಳನ್ನು ವೇದಿಕೆ ಮೇಲೆ ಡ್ಯಾನ್ಸ್ ಮಾಡುವ ತೋರಿಸಿದರು. 'ನನ್ನ ಪರಪಂಚ ನೀನೇ' ಎಂದು ಡ್ಯಾನ್ಸ್ ಮಾಡಿದರು. ಇದೇ ವೇಳೆ ಅವರ ತಾಯಿಯನ್ನ ವೇದಿಸಿಯ ಮೇಲೆ ಕರೆದುಕೊಂಡು ಬಂದು ಮಗನ ಡ್ಯಾನ್ಸ್ ನೋಡುವ ಅವಕಾಶ ಕಲ್ಪಿಸಿದರು. ಇದೇ ವೇಳೆ ಶಶಿಕುಮಾರ್ ಅವರ ತಾಯಿಯ ಮಾತಿಗೆ ವೇದಿಕೆಯಲ್ಲಿದ್ದವರು ಭಾವುಕರಾದರು.

 June weekend Its challenge Theme in Dance Karnataka Dance season 7
ಪರ್ಫಾರ್ಮೆನ್ಸ್ ಮೂಲಕ ತೀರ್ಪುಗಾರರ ಮನ ಗೆಲ್ಲುವ ಮೂಲಕ ಗೋಲ್ಡನ್ ಹ್ಯಾಟ್ ಪಡೆದುಕೊಂಡರು. 'ಕೇಳೋ ಮಹಾದೇವ ಮನುಷ್ಯನ ಜೀವ' ಎಂದು ಕುಣಿಯುವ ಮೂಲಕ ಧರೆಗೆ ಕೈಲಾಸವನ್ನೇ ಇಳಿಸಿದರು. ಅವರು ಹಾಕಿದ್ದ ಕಾಸ್ಟ್ಯೂಮ್ ಹಾಗೂ ವೇದಿಕೆಯ ಮೇಲೆ ತಂದು ನಿಲ್ಲಿಸಿದ್ದ ಶಿವಲಿಂಗ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
 June weekend Its challenge Theme in Dance Karnataka Dance season 7

ಜತಿನ್ -ಶಾರ್ವರಿ ಡ್ಯಾನ್ಸ್‌ಗೆ ಚಪ್ಪಾಳೆ

ಜತಿನ್ ಹಾಗೂ ಶಾರ್ವರಿ ಇಬ್ಬರು 'ಸಂತೆಯಲ್ಲಿ ನಿಂತರೂನು ನೋಡು ನೀನು ನನ್ನನ್ನೇ" ಹಾಡಿಗೆ ಮನಮೋಹಕವಾಗಿ ನೃತ್ಯವನ್ನು ಮಾಡಿದರು. ಭರತನಾಟ್ಯದ ಸ್ಟೈಲ್‌ನಲ್ಲಿ ನೃತ್ಯ ಮಾಡಿದ ಇಬ್ಬರಿಗೂ ಸಹ ಚಪ್ಪಾಳೆಯ ಸುರಿಮಳೆಯಾಯಿತು. ಶಿವಣ್ಣ, ರಕ್ಷಿತಾ ಮಾತ್ರ ಇಬ್ಬರ ನೃತ್ಯವನ್ನು ಕಣ್ಣು ಮಿಟುಕಿಸದೆ ನೋಡಿ ಮೆಚ್ಚುಗೆಯನ್ನ ವ್ಯಕ್ತಪಡಿಸಿದರು. ಗೋಲ್ಡನ್ ಹ್ಯಾಟ್ ಪಡೆದುಕೊಂಡು ಔಟ್ ಸ್ಟ್ಯಾಂಡಿಂಗ್ ಪರ್ಫಾಮೆನ್ಸ್ ಎಂಬ ಹೊಗಳಿಕೆಯ ಮಾತನ್ನ ಕೇಳಿದರು.‌

ಹಳೆ ಹಾಡಿಗೆ ಸಾತ್ವಿಕ್- ಸೌಮ್ಯ ಸ್ಟೆಪ್ಸ್

'ಜೀವಾ ಹೂವಾಗಿದೆ' ಹಾಡಿಗೆ ಓಲ್ಡ್ ಈಸ್ ಗೋಲ್ಡ್ ಎನ್ನುವ ರೀತಿಯಲ್ಲಿ ಸಾತ್ವಿಕ್ - ಸೌಮ್ಯ ಪ್ರದರ್ಶನ ನೀಡಿದರು. ಸಣ್ಣ ಮಕ್ಕಳಾದರೂ ದೊಡ್ಡವರಿಗೆ ಕಾಂಪೀಟೇಷನ್ ನೀಡುವ ನೃತ್ಯ ಪ್ರದರ್ಶಿಸಿದರು. ಇದೇ ವೇಳೆ ಮಕ್ಕಳ ಪರ್ಫಾನೆನ್ಸ್‌ಗೆ ಗೋಲ್ಡನ್ ಹ್ಯಾಟ್ ಸಿಕ್ತು.

ಪ್ರಜ್ವಲ್-ಚೈತನ್ಯ ಡ್ಯಾನ್ಸ್ ಮೋಡಿ

ಮೈಥಾಲಾಜಿ ಥೀಮ್‌ನಲ್ಲಿ ಪ್ರಜ್ವಲ್ ಹಾಗೂ ಚೈತನ್ಯ ಮಿಂಚಿದರು. ‌ಇದೇ ವೇಳೆ ಸುಂದರ ರಾಮಾಯಣಕ್ಕೆ ಹೆಜ್ಜೆಗಳ ಮೂಲಕ ಸ್ಪರ್ಶವನ್ನು ಕೊಟ್ಟರು. ‌ರಾಮನ ಜನನ, ಸೀತಾ ಮಾತೆ ಸಿಕ್ಕಿದ್ದು, ರಾಕ್ಷಸರ ಸಂಹಾರ ಮುಂತಾದ ಹಲವಾರು ವಿಚಾರಗಳನ್ನು ಡ್ಯಾನ್ಸ್ ಮೂಲಕ ವೇದಿಕೆ ಮೇಲೆ ತೋರಿಸಿದರು.

ಅಜಯ್ -ಅಂಜಲಿ ಡ್ಯಾನ್ಸ್ ಧಮಾಕ

ಇಂಟರ್‌ನ್ಯಾಷನಲ್ ಥೀಮ್‌ನಲ್ಲಿ ಅಜಯ್ ಹಾಗೂ ಅಂಜಲಿ ಅದ್ಭುತವಾದ ಪ್ರದರ್ಶನ ನೀಡಿದರು. 'ಇದು ನನ್ನ ನಿನ್ನ ಪ್ರೇಮಗೀತೆ ಚಿನ್ನ' ಹಾಡಿಗೆ ಹೆಜ್ಜೆ ಹಾಕಿದರು. ಡ್ಯಾನ್ ವೇದಿಕೆಯ ಮೇಲೆ ಎಲ್ಲ ತೀರ್ಪುಗಾರರನ್ನು ಕರೆತಂದ ಅನೀಶ್ ಹಾಗೂ ಲಿಪಿಕಾ ಪ್ರೀತಿಯನ್ನು ಹಂಚಿದರು. ಒಬ್ಬರಿಗಿಂತ ಒಬ್ಬರು ಉತ್ತಮವಾಗಿ ನೃತ್ಯವನ್ನು ಮಾಡುವ ಮೂಲಕ ತಮ್ಮ ಶಕ್ತಿಯನ್ನು ಪ್ರದರ್ಶನ ಮಾಡಿದರು.

More from Filmibeat

English summary
June weekend It's challenge Theme in Dance Karnataka Dance season 7. Every contestant on DKD7 has their sights set on the medal. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X