For Quick Alerts
  ALLOW NOTIFICATIONS  
  For Daily Alerts

  ತೆಲುಗು 'ಬಿಗ್ ಬಾಸ್'ನಲ್ಲಿ ಕನ್ನಡ ಪ್ರೇಮ ಮೆರೆದ ಜೂನಿಯರ್ NTR..!

  By Naveen
  |

  ನಟ ಜೂನಿಯರ್ NTR ರವರ ಕನ್ನಡದ ಪ್ರೇಮ ಪದೇ ಪದೇ ಸಾಬೀತು ಆಗುತ್ತಿದೆ. ಸದ್ಯ ತೆಲುಗು 'ಬಿಗ್ ಬಾಸ್' ಕಾರ್ಯಕ್ರಮ ಕೂಡ ಅದನ್ನು ನಿರೂಪಿಸಿದೆ.

  ನಟ ಜೂನಿಯರ್ ಎನ್.ಟಿ.ಆರ್ ತೆಲುಗು 'ಬಿಗ್ ಬಾಸ್' ಕಾರ್ಯಕ್ರಮದ ನಿರೂಪಕರಾಗಿದ್ದಾರೆ. ಹೀಗಿರುವಾಗ ಕಾರ್ಯಕ್ರಮದ ಇತ್ತೀಚಿನ ಸಂಚಿಕೆಯೊಂದಲ್ಲಿ ಜೂನಿಯರ್ ಎನ್ ಟಿ ಆರ್ ಕನ್ನಡ ಮಾತನಾಡಿದ್ದಾರೆ.

  'ರಾಜಕುಮಾರ' ಸಿನಿಮಾದ ತೆಲುಗು ರಿಮೇಕ್ ಗೆ ಹೀರೋ ಇವರಾ..?'ರಾಜಕುಮಾರ' ಸಿನಿಮಾದ ತೆಲುಗು ರಿಮೇಕ್ ಗೆ ಹೀರೋ ಇವರಾ..?

  ಜೂನಿಯರ್ ಎನ್ ಟಿ ಆರ್ ರವರ ಕನ್ನಡ ಪ್ರೇಮ ನೋಡಿ ಕನ್ನಡಿಗರು ಕೂಡ ಹೆಮ್ಮೆ ಪಡುತ್ತಿದ್ದಾರೆ. ಮುಂದೆ ಓದಿ...

  ತೆಲುಗು 'ಬಿಗ್ ಬಾಸ್' ನಲ್ಲಿ ಕನ್ನಡ

  ತೆಲುಗು 'ಬಿಗ್ ಬಾಸ್' ನಲ್ಲಿ ಕನ್ನಡ

  ತೆಲುಗು ಬಿಗ್ ಬಾಸ್ ಕಾರ್ಯಕ್ರಮದಲ್ಲಿ ನಟ ಜೂನಿಯರ್ ಎನ್ ಟಿ ಆರ್ ಕನ್ನಡ ಮಾತನಾಡಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

  ನಮ್ಮ ಅಮ್ಮ ಕನ್ನಡದವರು

  ನಮ್ಮ ಅಮ್ಮ ಕನ್ನಡದವರು

  ತೆಲುಗು 'ಬಿಗ್ ಬಾಸ್' ನಲ್ಲಿ ಕರ್ನಾಟಕ ಸ್ಪರ್ಧಿಯೊಬ್ಬರು ಕನ್ನಡ ಮಾತನಾಡಿದ್ದರು. ಆಗ ಜೂನಿಯರ್ ಎನ್ ಟಿ ಆರ್ ''ನೀವು ಕನ್ನಡದವರಾ.. ನನ್ನ ತಾಯಿ ಕೂಡ ಕುಂದಾಪುರದವರು'' ಅಂತ ಕನ್ನಡದಲ್ಲೇ ಹೇಳಿದ್ದಾರೆ.

  'ಬಿಗ್ ಬಾಸ್' ಪ್ರೋಮೋದಲ್ಲಿ ಎನ್.ಟಿ.ಆರ್ ಸಖತ್ ಸ್ಟೈಲಿಶ್'ಬಿಗ್ ಬಾಸ್' ಪ್ರೋಮೋದಲ್ಲಿ ಎನ್.ಟಿ.ಆರ್ ಸಖತ್ ಸ್ಟೈಲಿಶ್

  ಫಿಲ್ಮ್ ಫೇರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ...

  ಫಿಲ್ಮ್ ಫೇರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ...

  ಕಳೆದ ಬಾರಿಯ 'ಫಿಲ್ಮ್ ಫೇರ್ ಪ್ರಶಸ್ತಿ' ಕಾರ್ಯಕ್ರಮದಲ್ಲಿಯೂ ಜೂನಿಯರ್ ಎನ್ ಟಿ ಆರ್ ಕನ್ನಡ ಮಾತನಾಡಿ 'ನನಗೆ ಚೆನ್ನಾಗಿ ಕನ್ನಡ ಬರುತ್ತದೆ' ಅಂತ ಹೇಳಿದ್ದರು.

  ಗೆಳೆಯ... ಗೆಳೆಯ...

  ಗೆಳೆಯ... ಗೆಳೆಯ...

  ಗಾಯಕನಾಗಿ ಜೂನಿಯರ್ ಎನ್ ಟಿ ಆರ್ ಕನ್ನಡಕ್ಕೆ ಈಗಾಗಲೇ ಕಾಲಿಟ್ಟಿದ್ದಾರೆ. ಪುನೀತ್ ಅಭಿನಯದ 'ಚಕ್ರವ್ಯೂಹ' ಚಿತ್ರದ 'ಗೆಳೆಯ... ಗೆಳೆಯ...' ಹಾಡನ್ನು ಜೂನಿಯರ್ ಎನ್ ಟಿ ಆರ್ ಹಾಡಿದ್ದರು.

  ಪವರ್ ಸ್ಟಾರ್ ಚಿತ್ರಕ್ಕೆ ಧ್ವನಿ ನೀಡಿದ ಯಂಗ್ ಟೈಗರ್ NTRಪವರ್ ಸ್ಟಾರ್ ಚಿತ್ರಕ್ಕೆ ಧ್ವನಿ ನೀಡಿದ ಯಂಗ್ ಟೈಗರ್ NTR

  ಟಾಲಿವುಡ್ 'ರಾಜಕುಮಾರ'

  ಟಾಲಿವುಡ್ 'ರಾಜಕುಮಾರ'

  ಸದ್ಯ ಕನ್ನಡದ ರಾಜಕುಮಾರ ಸಿನಿಮಾದ ರೀಮೇಕ್ ತೆಲುಗಿನಲ್ಲಿ ಬರಲಿದ್ದು, ಪುನೀತ್ ಪಾತ್ರದಲ್ಲಿ ಜೂನಿಯರ್ ಎನ್ ಟಿ ಆರ್ ನಟಿಸುವ ಸಾಧ್ಯತೆ ಕೂಡ ಇದೆ.

  English summary
  Tollywood Actor Junior NTR spoke Kannada in Telugu Bigg Boss Show.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X