Jyothi Rai: ಕಾಮೆಂಟ್ ಬಾಕ್ಸ್ ಆಫ್ ಮಾಡಿ ಎಂಗೇಜ್‌ಮೆಂಟ್ ಸುದ್ದಿ ಹಂಚಿಕೊಂಡ ಜ್ಯೋತಿ ರೈ
ಕನ್ನಡ ಕಿರುತೆರೆ ನಟಿ ಜ್ಯೋತಿರೈ ಸದ್ದಿಲ್ಲದೇ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಈ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಗುಡ್ ನ್ಯೂಸ್ ಕೊಡುವುದಾಗಿ ಹೇಳಿದ್ದ ಚೆಲುವೆ ಇದೀಗ 2ನೇ ಮದುವೆಗೆ ಸಿದ್ಧವಾಗಿದ್ದಾರೆ ಎನ್ನಲಾಗ್ತಿದೆ.
ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಹಾಟ್ ಫೋಟೊ, ವಿಡಿಯೋ ಶೇರ್ ಮಾಡುತ್ತ ಗಮನ ಸೆಳೆಯುತ್ತಿರುವ ಚೆಲುವೆ ಇತ್ತೀಚೆಗೆ ವೈಯಕ್ತಿಕ ವಿಚಾರಗಳಿಂದ ಬಹಳ ಸುದ್ದಿಯಲ್ಲಿದ್ದಾರೆ. ಈಗಾಗಲೇ ಒಂದು ಮದುವೆ ಆಗಿರುವ ಜ್ಯೋತಿ ರೈ ತೆಲುಗಿನ ಯುವ ನಿರ್ದೇಶಕ ಸುಕು ಪುರ್ವಜ್ ಜೊತೆ ಸಹಜೀವನ ನಡೆಸುತ್ತಿದ್ದಾರೆ. ಈ ವಿಚಾರವನ್ನು ಪರೋಕ್ಷವಾಗಿ ಹೇಳುವ ಪ್ರಯತ್ನ ಮಾಡುತ್ತಿದ್ದಾರೆ. ಇದೀಗ ಎಂಗೇಜ್‌ಮೆಂಟ್ ವಿಚಾರದಲ್ಲೂ ಅದನ್ನೇ ಮಾಡಿದ್ದಾರೆ.

ಮಡಿಕೇರಿ ಮೂಲಕ ಜ್ಯೋತಿ ರೈ ಮೊದಲು ಕನ್ನಡ ಕಿರುತೆರೆಯಲ್ಲಿ ಮಿಂಚಿದರು. ಬಳಿಕ ತೆಲುಗು, ತಮಿಳು ಕಿರುತೆರೆಯತ್ತ ಮುಖ ಮಾಡಿದ್ದರು. ತೆಲುಗಿನಲ್ಲಿ 'ಗುಪ್ಪೆಡಂತ ಮನಸು' ಧಾರಾವಾಹಿ ದೊಡ್ಡ ಬ್ರೇಕ್ ಕೊಡ್ತು. ಆ ಧಾರಾವಾಹಿಯಲ್ಲಿ ಜಗತಿ ಎನ್ನುವ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡರು. ತೆಲುಗು ವೀಕ್ಷಕರಿಗೆ ಜಗತಿ ಅಂತ್ಲೇ ಜ್ಯೋತಿ ರೈ ಚಿರಪರಿಚಿತರಾಗಿಬಿಟ್ಟಿದ್ದಾರೆ. ಬಹಳ ವರ್ಷಗಳ ಹಿಂದೆ ಪದ್ಮನಾಭ್ ಎಂಬುವವರನ್ನು ಜ್ಯೋತಿ ರೈ ಮದುವೆ ಆಗಿದ್ದರು. ಈಗ ನಿರ್ದೇಶಕ ಸುಕು ಪೂರ್ವಜ್ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನುವ ಊಹಾಪೋಹ ಶುರುವಾಗಿದೆ.
ಅಧಿಕೃತವಾಗಿ ಸುಕು ಪೂರ್ವಜ್ ಜೊತೆಗಿನ ಸಹಜೀವನದ ಬಗ್ಗೆ ಜ್ಯೋತಿ ರೈ ಮಾತನಾಡಿಲ್ಲ. ಆದರೆ ಸದಾ ಆತನ ಜೊತೆಗಿರುವ ರೊಮ್ಯಾಂಟಿಕ್ ಫೋಟೊಗಳನ್ನು ಹಂಚಿಕೊಳ್ಳುತ್ತಾರೆ. ಜ್ಯೋತಿ ಸುಕು ಪೂರ್ವಜ್ ಹೆಸರಿನಲ್ಲಿ ಟ್ವಿಟ್ಟರ್ ಖಾತೆ ತೆರೆದಿದ್ದಾರೆ. ಇದೆಲ್ಲದರ ನಡುವೆ ಈಗ ಎಂಗೇಜ್‌ಮೆಂಟ್ ಆಗಿರುವ ವಿಚಾರವನ್ನು ಪರೋಕ್ಷವಾಗಿ ಹೇಳಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಸುಕು ಪೂರ್ವಜ್ ಜೊತೆಗಿನ ಫೋಟೊಗಳನ್ನು ಶೇರ್ ಮಾಡಿ ಉಂಗುರ ಎಮೋಜಿ ಹಾಕಿದ್ದಾರೆ. ಆದರೆ ಕಾಮೆಂಟ್ ಬಾಕ್ಸ್ ಆಫ್ ಮಾಡಿದ್ದಾರೆ.
ಜ್ಯೋತಿ ರೈ ಸದ್ಯ 'ಪ್ರೆಟಿ ಗರ್ಲ್' ಎನ್ನುವ ವೆಬ್ ಸೀರಿಸ್‌ನಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ತಮ್ಮ ಬೋಲ್ಡ್ ಫೋಟೊಶೂಟ್‌ಗಳಿಂದ ಚೆಲುವೆ ಸುದ್ದಿಯಲ್ಲಿದ್ದಾರೆ. ಸ್ವಿಮ್ಮಿಂಗ್ ಸೂಟ್‌ನಲ್ಲಿ ಫೋಟೊಗಳನ್ನು ಕ್ಲಿಕ್ಕಿಸಿ ಶೇರ್ ಮಾಡಿದ್ದಾರೆ. ವಿನು ಬಳಂಜ ಅವರ 'ಬಂದೇ ಬರತಾವ ಕಾಲ' ಎಂಬ ಧಾರಾವಾಹಿ ಮೂಲಕ ಜ್ಯೋತಿ ರೈ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟರು. ಇನ್ನು ಈಗಾಗಲೇ ಒಂದು ಮದುವೆ ಆಗಿರುವ ಜ್ಯೋತಿ ರೈಗೆ 11 ವರ್ಷದ ಒಬ್ಬ ಮಗ ಕೂಡ ಇದ್ದಾನೆ.
ಇನ್ನು ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಹಾಟ್ ಹಾಟ್ ಫೋಟೊಗಳನ್ನು ಹಂಚಿಕೊಳ್ಳುವ ಜ್ಯೋತಿರೈ ಕಾಮೆಂಟ್ ಸೆಕ್ಷನ್ ಆಫ್ ಮಾಡುತ್ತಾರೆ. ಇದೀಗ ಎಂಗೇಜ್‌ಮೆಂಟ್ ಬಗ್ಗೆ ಹೇಳಿಕೊಂಡಿರುವ ಪೋಸ್ಟ್‌ಗೂ ಯಾರೂ ಕಾಮೆಂಟ್ ಮಾಡದಂತೆ ಮಾಡಿದ್ದಾರೆ. ಆದರೆ ಅಭಿಮಾನಿಗಳು ಮಾತ್ರ ಈ ಸುದ್ದಿ ಕೇಳಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ.
'ಜೋಗುಳ', 'ಕಿನ್ನರಿ', 'ಗೆಜ್ಜೆ ಪೂಜೆ', 'ಮೂರುಗಂಟು', 'ಲವಲವಿಕೆ', 'ಅನುರಾಗ ಸಂಗಮ', 'ಕನ್ಯಾದಾನ', 'ಪ್ರೇರಣ', 'ಕಸ್ತೂರಿ ನಿವಾಸ' ಸೇರಿದಂತೆ ಕನ್ನಡ ಹಲವು ಧಾರಾವಾಹಿಗಳಲ್ಲಿ ಜ್ಯೋತಿ ರೈ ನಟಿಸಿದ್ದಾರೆ. ಈಗಾಗಲೇ ಒಂದು ಮಗುವಿನ ತಾಯಿಯಾಗಿದ್ದರೂ ಆಕೆ ಯುವ ನಟಿಯರಿಗೆ ಸವಾಲು ಹಾಕುವಂತೆ ಸೌಂದರ್ಯ ಕಾಪಾಡಿಕೊಂಡು ಮೋಡಿ ಮಾಡುತ್ತಿದ್ದಾರೆ. ತೆಲುಗಿನಲ್ಲಿ 15ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಸುಕು ಪುರ್ವಜ್ ನಿರ್ದೇಶಕನಾಗಿ ತೆಲುಗು ಚಿತ್ರರಂಗದಲ್ಲಿ ಗುರ್ತಿಸಿಕೊಂಡಿದ್ದಾರೆ.
ಮಡಿಕೇರಿಯಲ್ಲಿ ಹುಟ್ಟಿದ ಜ್ಯೋತಿ ರೈ ಪುತ್ತೂರಿನಲ್ಲಿ ಓದಿ ಬೆಳೆದರು. ಸದ್ಯ ಈಗ ಹೈದರಾಬಾದ್‌ನಲ್ಲೇ ಸೆಟ್ಲ್ ಆಗಿಬಿಟ್ಟಿದ್ದಾರೆ. ಅಲ್ಲೇ ಹೆಚ್ಚು ಹೆಚ್ಚು ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ. ಆಕೆಯ 'ಪ್ರೆಟಿ ಗರ್ಲ್' ವೆಬ್ ಸೀರಿಸ್ ಪೋಸ್ಟರ್ ಸಖತ್ ವೈರಲ್ ಆಗ್ತಿದೆ.


Click it and Unblock the Notifications











