Jyothi Rai: 'ಜೋಗುಳ' ಧಾರಾವಾಹಿಯ ಜ್ಯೋತಿ ರೈ ಹಾಟ್ ಅವತಾರ; ಈಗ ಏನು ಮಾಡುತ್ತಿದ್ದಾರೆ ಈ ಕಿರುತೆರೆ ನಟಿ?

ಕನ್ನಡದ ಸೀರಿಯಲ್ ಇತಿಹಾಸದಲ್ಲಿ ದೊಡ್ಡ ಮಟ್ಟದಲ್ಲಿ ಮಿಂಚಿ ಹೆಸರು ಮಾಡಿದ ನಟಿಯರಲ್ಲಿ ನಟಿ ಜ್ಯೋತಿ ರೈ ( ಜಯಶ್ರೀ ರೈ ) ಕೂಡ ಒಬ್ಬರು. ಹಲವಾರು ಧಾರಾವಾಹಿಗಳಲ್ಲಿ ನಟಿಸಿದ್ದ ಜ್ಯೋತಿ ಅವರ ಹೆಸರನ್ನು ಕೇಳಿದರೆ ಕನ್ನಡ ಧಾರಾವಾಹಿ ರಸಿಕರಿಗೆ ನೆನಪಾಗದಿದ್ದರೂ ಅವರ ಫೋಟೊ ನೋಡಿದರೆ ಇವರು ನನಗೆ ಗೊತ್ತು ಫೇಮಸ್ ಸೀರಿಯಲ್ ನಟಿ ಎಂದು ಗುರುತಿಸುವವರು ಸಾಕಷ್ಟು ಮಂದಿ ಇದ್ದಾರೆ.

ಇನ್ನು ಜ್ಯೋತಿ ರೈ ಅವರು ಜೋಗುಳ, ಗೆಜ್ಜೆಪೂಜೆ, ಕನ್ಯಾದಾನ, ಅನುರಾಗ ಸಂಗಮ, ಪ್ರೇರಣಾ, ಲವಲವಿಕೆ, ಮೂರು ಗಂಟು, ಕಿನ್ನರಿ ಹಾಗೂ ಕಸ್ತೂರಿ ನಿವಾಸ ಸೇರಿದಂತೆ ಹಲವಾರು ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿರುವ ಜ್ಯೋತಿ ರೈ ನೆಗೆಟಿವ್ ಪಾತ್ರಗಳಿಗಿಂತ ಪಾಸಿಟಿವ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೇ ಹೆಚ್ಚು.

Jyothi Rai: Kannada veteren serial actress Jyothi Rai shares her glamorous photos on social media

ಅನೇಕ ಧಾರಾವಾಹಿಗಳಲ್ಲಿ ಲೀಡ್ ಪಾತ್ರಗಳನ್ನು ನಿರ್ವಹಿಸಿ ಸೈ ಎನಿಸಿಕೊಂಡಿರುವ ಜ್ಯೋತಿ ರೈ 18ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಸಹ ನಟಿಸಿದ್ದಾರೆ. ಹೀಗೆ ಕಿರುತೆರೆ ಹಾಗೂ ಹಿರಿತೆರೆ ಎರಡರಲ್ಲಿಯೂ ನಟಿಸಿರುವ ಈ ಚೆಲುವೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿದ್ದಾರೆ.

ಹೌದು, ಜ್ಯೋತಿ ರೈ ಇನ್‌ಸ್ಟಾಗ್ರಾಮ್‌ನಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿದ್ದಾರೆ. ತಮ್ಮ ಫೋಟೊಗಳನ್ನು ಹಂಚಿಕೊಳ್ಳುವ ಜ್ಯೋತಿ ರೈ ತಮ್ಮ ಮುಂದಿನ ಚಿತ್ರಗಳು ಹಾಗೂ ವೆಬ್ ಸರಣಿಯ ಬಗ್ಗೆಯೂ ಸಹ ಇಲ್ಲಿ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಇನ್ನು 15 ವರ್ಷಗಳ ಹಿಂದಿನ ಧಾರಾವಾಹಿಗಳಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದ ಜ್ಯೋತಿ ರೈ ಇಂದಿಗೂ ಸಹ ಯಾವದೇ ಗ್ಲಾಮರಸ್ ನಟಿಗೂ ಸಹ ಕಡಿಮೆ ಇಲ್ಲ ಎನ್ನುವಂತಹ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

ಸೀರೆಯಲ್ಲಿಯೇ ಹೆಚ್ಚಾಗಿ ನೋಡಿದ್ದ ಜ್ಯೋತಿ ರೈ ಅವರನ್ನು ಹಾಟ್ ಹಾಗೂ ಮಾಡರ್ನ್ ಡ್ರೆಸ್‌ಗಳಲ್ಲಿ ಕಂಡ ನೆಟ್ಟಿಗರು 'ಏನ್ ಮೇಡಂ ನೀವು ಇನ್ನೂ ಇಷ್ಟು ಗ್ಲಾಮರಸ್ ಆಗಿದ್ದೀರ. ನಿಮಗೇನು ವಯಸ್ಸೇ ಆಗಲ್ವಾ?' ಎಂದು ಕಾಮೆಂಟ್ ಮಾಡಿ ಜ್ಯೋತಿ ರೈ ಅವರ ಅಂದವನ್ನು ಹೊಗಳಿದ್ದಾರೆ.

ಕಪ್ಪು ಟಾಪ್, ಫ್ರಾಕ್, ಟೈಟ್ ಡ್ರೆಸ್‌ಗಳಲ್ಲಿ ಹೆಚ್ಚಿನ ಫೋಟೊಗಳನ್ನು ಹಂಚಿಕೊಂಡಿರುವ ನಟಿ ಜ್ಯೋತಿ ರೈ ಪಡ್ಡೆ ಹುಡುಗರ ಮನ ಗೆದ್ದಿದ್ದು, ಈಗಿನ ನಟಿಯರಿಗೂ ಕಷ್ಟವೆನಿಸುವ ರೀತಿಯ ಅಂದ ನಿಮ್ಮದು ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಹೀಗೆ ಸಾಲು ಸಾಲು ಬ್ಯೂಟಿಫುಲ್ ಫೋಟೊಗಳನ್ನು ಹಂಚಿಕೊಳ್ಳುತ್ತಿರುವ ನೆಟ್ಟಿಗರ ಹೃದಯ ಗೆದ್ದಿದ್ದು, ಈಗಲೂ ಸಹ ನಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಹಿಂದಿ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ತಯಾರಾಗುತ್ತಿರುವ ರೊಮ್ಯಾಂಟಿಕ್ ಕ್ರೈಮ್ ಡ್ರಾಮಾ ವೆಬ್ ಸರಣಿಯಾದ 'ಪ್ರೆಟಿ ಗರ್ಲ್'ನಲ್ಲಿ ಲೀಡ್ ಪಾತ್ರವೊಂದರಲ್ಲಿ ಜ್ಯೋತಿ ರೈ ನಟಿಸುತ್ತಿದ್ದಾರೆ. ಈ ವಿಷಯವನ್ನು ಸ್ವತಃ ಜ್ಯೋತಿ ರೈ ವೆಬ್ ಸರಣಿಯ ಪೋಸ್ಟರ್ ಹಂಚಿಕೊಳ್ಳುವ ಮೂಲಕ ತಿಳಿಸಿದ್ದಾರೆ.

ಇನ್ನು ಧಾರಾವಾಹಿಗಳಲ್ಲಿ ನಟಿಸಿ ಮಿಂಚಿದ್ದ ಜ್ಯೋತಿ ರೈ 'ಎ ಮಾಸ್ಟರ್ ಪೀಸ್' ಎಂಬ ತೆಲುಗು ಚಿತ್ರದಲ್ಲಿ ನಟಿಸುವ ಮೂಲಕ ಟಾಲಿವುಡ್ ಪ್ರವೇಶಕ್ಕೂ ಸಹ ಸಜ್ಜಾಗಿದ್ದಾರೆ. ಈ ಸಿನಿಮಾ ಮಾತ್ರವಲ್ಲದೇ ಕನ್ನಡದ 'ಅಪರಾಧಿ ನಾನಲ್ಲ' ಎಂಬ ಕನ್ನಡ ಚಿತ್ರದಲ್ಲಿಯೂ ಸಹ ಜ್ಯೋತಿ ರೈ ನಟಿಸಿದ್ದು, ಈ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಇದರ ಜತೆಗೆ 'ಅಂಡರ್‌ವರ್ಲ್ಡ್ ಬಿಲಿಯನೈರ್ಸ್' ಎಂಬ ವೆಬ್ ಸರಣಿಯಲ್ಲಿ ಜ್ಯೋತಿ ರೈ ಎಸಿಪಿ ಸಮರ್ದನ ಎಂಬ ಖಡಕ್ ಪೊಲೀಸ್ ಪಾತ್ರದಲ್ಲಿ ನಟಿಸಿದ್ದಾರೆ. ಹೀಗೆ ನಮ್ಮ ಬಾಲ್ಯದ ದಿನಗಳಲ್ಲಿ ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ನಟಿ ಜ್ಯೋತಿ ರೈ ಅವರು ಇದೀಗ ವಿಭಿನ್ನ ಪ್ರಯತ್ನಗಳಿಗೆ ಕೈ ಹಾಕಿದ್ದಾರೆ. ಜತೆಗೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಫೋಟೊಗಳ ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ.

More from Filmibeat

English summary
Jyothi Rai: Kannada veteren serial actress Jyothi Rai shares her glamorous photos on social media
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X