Jyothi Rai: ಗುಡ್ ನ್ಯೂಸ್ ಎಂದ ಜ್ಯೋತಿ ರೈ ಪೋಸ್ಟ್ ಏನು ಹೇಳುತ್ತಿದೆ ಗೊತ್ತೇ..?

By ಪ್ರಿಯಾ ದೊರೆ

ಇತ್ತೀಚೆಗೆ ನಟಿ ಜ್ಯೋತಿ ರೈ ಸೋಶಿಯಲ್ ಮೀಡಿಯಾದಲ್ಲಿ ಸಕತ್ ಸದ್ದು ಮಾಡುತ್ತಿದ್ದಾರೆ. ದಶಕಗಳ ಹಿಂದೆ ದೇವಕಿ ಪಾತ್ರದಲ್ಲಿ ಛಾಪು ಮೂಡಿಸಿದ ನಟಿ ಈಗ ಸಿನಿರಂಗದಲ್ಲಿ ಬ್ಯುಸಿ ಆಗಿದ್ದಾರೆ. ತೆಲುಗು ಕಿರುತೆರೆಯಲ್ಲೂ ಮಿಂಚುತ್ತಿದ್ದಾರೆ.

ಬ್ಯುಸಿ ಶೆಡ್ಯೂಲ್‌ ನಡುವೆಯೂ ಕೊಂಚ ಬಿಡುವು ಮಾಡಿಕೊಂಡು ಸೋಶಿಯಲ್ ಮೀಡಿಯಾದಲ್ಲೂ ಹೆಚ್ಚೆಚ್ಚು ಆಕ್ಟೀವ್ ಆಗುತ್ತಿದ್ದಾರೆ. ಇತ್ತೀಚೆಗೆ ಹಾಟ್ ಹಾಟ್ ಲುಕ್‌ನಲ್ಲಿ ಆಕೆ ಪೋಸ್ಟ್ ಮಾಡುವ ಫೋಟೊ, ವಿಡಿಯೋ ಸಖತ್ ಸದ್ದು ಮಾಡುತ್ತಿವೆ.

Jyothi Rai latest Post with Suku Purvaj Goes Viral

ಹೊಸ ಅವತಾರದಲ್ಲಿ ಜ್ಯೋತಿ

ಜ್ಯೋತಿ ರೈ ತಮ್ಮ ಸ್ಟೈಲ್ ಬದಲಾಯಿಸಿಕೊಂಡಿದ್ದರೆ, ಮತ್ತೊಂದು ಕಡೆ ತಮ್ಮ ಬದುಕಿನ ದಿಕ್ಕನ್ನೇ ಬದಲಿಸಿರುವುದು ಅಭಿಮಾನಿಗಳಿಗೆ ಹಾಟ್ ಸುದ್ದಿಯಾಗಿದೆ. ದಶಕಗಳಿಂದ ಕನ್ನಡ ಕಿರುತೆರೆಯಲ್ಲಿರುವ ಜ್ಯೋತಿ ಅವರು ಬಹಳ ಸಿಂಪಲ್ ಆಗಿ, ಕಾಣಿಸಿಕೊಳ್ಳುತ್ತಿದ್ದರು. ಸಲ್ವಾರ್, ಸೀರೆಯಿಂದಲೇ ಫೇಮಸ್ ಆಗಿದ್ದರು. 'ದೇವಕಿ', 'ಜೋಗುಳ', 'ಗೆಜ್ಜೆ ಪೂಜೆ'ಯಂತಹ ಧಾರಾವಾಹಿಗಳಲ್ಲಿ ಅದ್ಭುತವಾಗಿ ನಟಿಸಿ ಕನ್ನಡಿಗರ ಮನ ಗೆದ್ದವರು ಜ್ಯೋತಿ. ಕನ್ನಡ ಹಾಗೂ ತೆಲುಗು ಧಾರಾವಾಹಿಗಳಲ್ಲಿ ನಟಿಸುತ್ತಾ ಒಂದೇ ತೆರನಾಗಿ ಕಾಣುತ್ತಿದ್ದರು. ಆದರೆ, ಈಗ ಜ್ಯೋತಿ ರೈ ಅವರು ಬದಲಾಗಿದ್ದಾರೆ.

ಬದಲಾವಣೆ ಬಯಸಿದ ನಟಿ ಜ್ಯೋತಿ ರೈ

ದಶಕಗಳಿಂದ ಒಂದೇ ರೀತಿಯಲ್ಲಿ ಕಾಣಿಸಿಕೊಂಡಿದ್ದ ಜ್ಯೋತಿ ರೈ ಅವರು ದಿಢೀರನೆ ಬದಲಾವಣೆ ಬಯಸಿದ್ದರು. ಹೀಗಾಗಿ ತಮ್ಮ ಉಡುಗೆಯ ಶೈಲಿಯನ್ನೇ ಏಕಾಏಕಿ ಬದಲಾಯಿಸಿಕೊಂಡಿದ್ದರು. ತುಂಬಾನೇ ಬೋಲ್ಡ್ ಆಗಿ 20ರ ಹರೆಯದ ಹುಡುಗಿಯಂತೆ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಅಭಿಮಾನಿಗಳಿಗೆ ಒಂದು ಕಡೆ ಜ್ಯೋತಿ ಅವರ ಲುಕ್ ಖುಷಿ ಕೊಟ್ಟಿದ್ದರೆ, ಮತ್ತೊಂದು ಕಡೆ, ಯಾಕೀ ಬದಲಾವಣೆ ಎಂಬ ಪ್ರಶ್ನೆಗಳು ಹುಟ್ಟುಕೊಂಡವು. ಸಂದರ್ಶನ ಒಂದರಲ್ಲಿ ಮಾತನಾಡಿದ ನಟಿ ಜ್ಯೋತಿ ರೈ ಒಂದೇ ತೆರನಾಗಿ ಇದ್ದು ಬೋರ್ ಆಗಿತ್ತು. ಹಾಗಾಗಿ ಈ ಬದಲಾವಣೆ ಎಂದು ಹೇಳಿದ್ದರು.

ಕುತೂಹಲ ಮೂಡಿಸಿದ ಜ್ಯೋತಿ ನಡೆ

ಅಭಿಮಾನಿಗಳಿಗೆ 38ರ ಜ್ಯೋತಿ 25 ವರ್ಷಕ್ಕೆ ತಿರುಗಿದ್ದರ ಹಿಂದಿನ ಕಾರಣವನ್ನು ಕೆದಕಲು ಶುರು ಮಾಡಿದರು. ಧಾರಾವಾಹಿಗಳಿಗೆ ಸೀಮಿತವಾಗಿದ್ದ ಜ್ಯೋತಿ ಅವರು ಕೂಡ ವೆಬ್ ಸಿರೀಸ್ ಹಾಗೂ ಸಿನಿಮಾಗಳಲ್ಲಿ ಯಂಗ್ ಆಗಿ ನಟಿಸಲು ಪ್ರಾರಂಭಿಸಿದರು. ಇದು ಅಭಿಮಾನಿಗಳು ಒಳ್ಳೆಯ ಬೆಳವಣಿಗೆ ಎಂದು ಖುಷಿ ಪಡುವಂತೆ ಮಾಡಿತು.

ಹೆಸರು ಬದಲಿಸಿಕೊಂಡ ಜ್ಯೋತಿ

ಜ್ಯೋತಿ ರೈ ತೆಲುಗಿನ ಸಿನಿಮಾಗಳಲ್ಲಿ ನಟಿಸುತ್ತಾ ನಿರ್ದೇಶಕ ಸುಕು ಪೂರ್ವಜ್ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಹಾಕುತ್ತಿದ್ದರು. ಚಿಕ್ಕ ವಯಸ್ಸಿಗೆ ಮದುವೆಯಾಗಿ ಅದಾಗಲೇ 11 ವರ್ಷದ ಮಗನಿರುವಾಗ ಈ ಫೋಟೊಗಳು ಭಾರೀ ಚರ್ಚೆಗೆ ದಾರಿ ಮಾಡಿಕೊಟ್ಟಿತು. ಜ್ಯೋತಿ ಅವರು ಸುಕು ಜೊತೆಗೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನು ಗುಸುಗುಸು ಟಾಲಿವುಡ್‌ನಲ್ಲಿ ಶುರುವಾಗಿದೆ. ಜ್ಯೋತಿ ಪೂರ್ವಜ್ ಹೆಸರಿನಲ್ಲೇ ಟ್ವಿಟರ್ ಖಾತೆಯನ್ನು ತೆರೆದರು.

ಗುಡ್ ನ್ಯೂಸ್ ಎಂದ ಜ್ಯೋತಿ ರೈ

ಜ್ಯೋತಿ- ಸುಕು ಪೂರ್ವಜ್ ಡೇಟಿಂಗ್ ನಡೆಸುತ್ತಿರುವುದು ನಿಜ ಎಂದು ಟಾಲಿವುಡ್‌ನಲ್ಲಿ ಗುಲ್ಲಾಗಿದೆ. ಇಬ್ಬರೂ ರಹಸ್ಯವಾಗಿ ಮದುವೆಯಾಗಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿತ್ತು. ಆದರೆ, ಈಗ ಜ್ಯೋತಿ ಹಾಗೂ ಸುಕು ಇಬ್ಬರೂ ಕೂಡ ತಮ್ಮ ಇನ್ ಸ್ಟಾಗ್ರಾಂ ಪೇಜ್‌ನಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡು ಸರ್ಪ್ರೈಸ್ ಕೊಡಲು ಮುಂದಾಗಿದ್ದಾರೆ. ಆದಷ್ಟು ಬೇಗ ಸಿಹಿ ಸುದ್ದಿ ಹಂಚಿಕೊಳ್ಳಲು ಬಾಕಿ ಇದೆ ಎಂದು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ನೋಡಿ ಅಭಿಮಾನಿಗಳು ಏನೇನೋ ಗೆಸ್ ಮಾಡುತ್ತಿದ್ದಾರೆ. ಮದುವೆ ಸುದ್ದಿ ಎಂದು ಕೆಲವರು ಗೆಸ್ ಮಾಡಿದ್ದರೆ, ಮತ್ತೆ ಕೆಲವರು ಬಿಗ್ ಬಾಸ್ ಕಂಟೆಸ್ಟೆಂಟ್ ಎಂದು ತಿಳಿದು ಕೊಂಡಿದ್ದಾರೆ. ಇನ್ನು ಕೆಲವರು ಜ್ಯೋತಿ ರೈ ಪ್ರೆಗ್ನೆಂಟ್ ಎಂದು ಹೇಳುತ್ತಿದ್ದಾರೆ. ಗುಡ್ ನ್ಯೂಸ್ ಏನೇ ಇದ್ದರೂ ನಿಮ್ಮ ಜೋಡಿ ಸೂಪರ್ ಎನ್ನುತ್ತಿದ್ದಾರೆ ಕೆಲವರು.

More from Filmibeat

English summary
Jyothi Rai's latest post hints she is in a relationship.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X