ಸ್ವಲ್ಪ ತಾಳ್ಮೆಯಿಂದ ಕಾಯ್ತಾ ಇರಿ ಎಂದ 'ಪ್ರೆಟಿ ಗರ್ಲ್' ಜ್ಯೋತಿ ರೈ; ಪೋಸ್ಟ್ ವೈರಲ್
ಮಡಿಕೇರಿಯಲ್ಲಿ ಹುಟ್ಟಿ ಬೆಳೆದ ನಟಿ ಜ್ಯೋತಿ ರೈ ಕನ್ನಡ ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿ ಗೆದ್ದರು. ಚಿಕ್ಕ ವಯಸ್ಸಿನಲ್ಲೇ ಮದುವೆಯಾಗಿ ಒಂದು ಮಗುವಿನ ತಾಯಿಯಾದರೂ ಸಾಲು ಸಾಲು ಧಾರಾವಾಹಿಗಳಲ್ಲಿ ನಟಿಸಿ ಮನೆ ಮಾತಾದರು. ಇದೀಗ ತೆಲುಗು ಕಿರುತೆರೆಯಲ್ಲಿ ಜ್ಯೋತಿ ಗುರ್ತಿಸಿಕೊಂಡಿದ್ದಾರೆ.
ತೆಲುಗಿನ 'ಗುಪ್ಪೆಡಂತ ಮನಸು' ಧಾರಾವಾಹಿ ಆಕೆಗೆ ಅಲ್ಲಿ ಭಾರೀ ಜನಪ್ರಿಯತೆ ತಂದುಕೊಟ್ಟಿತ್ತು. ಜಗತಿ ಎನ್ನುವ ಪಾತ್ರದಲ್ಲಿ ಜ್ಯೋತಿ ರೈ ತೆಲುಗು ವೀಕ್ಷಕರ ಮನಗೆದ್ದಿದ್ದಾರೆ. ಕಿರುತೆರೆಯಲ್ಲಿ ಸೀರೆಯಲ್ಲಿ ಕಂಗೊಳಿಸುವ ಚೆಲುವೆ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಹಾಟ್ ಶೋ ಮೂಲಕ ಹುಬ್ಬೇರಿಸುತ್ತಿರುತ್ತಾರೆ. ಆಕೆಯ ಪೋಸ್ಟ್‌ಗಳಿಗೆ ಭಾರೀ ಟೀಕೆ ಕೂಡ ವ್ಯಕ್ತವಾಗುತ್ತಿರುತ್ತದೆ.

ಈಗಾಗಲೇ ಮದುವೆಯಾಗಿ ಒಂದು ಮಗುವಿನ ತಾಯಿಯಾಗಿರುವ ಜ್ಯೋತಿ ರೈ ನಿರ್ದೇಶಕರೊಬ್ಬರ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ. ಸುಕು ಪೂರ್ವಜ್ ಎನ್ನುವ ನಿರ್ದೇಶಕರ ಜೊತೆ ಲವ್ವಿ ಡವ್ವಿ ನಡೆಸುತ್ತಿರುವುದಾಗಿ ಪದೇ ಪದೆ ಸುದ್ದಿ ಆಗುತ್ತದೆ. ಆತನೊಟ್ಟಿಗೆ ಇರುವ ಫೋಟೊಗಳನ್ನು ಆಕೆ ಆಗಿಂದಾಗ್ಗೆ ಹಂಚಿಕೊಳ್ಳುತ್ತಿರುತ್ತಾರೆ. ಎಂಗೇಜ್‌ಮೆಂಟ್ ಆಗಿರುವುದಾಗಿಯೂ ಹಿಂಟ್ ಕೊಡುವ ಕೆಲಸ ಮಾಡುತ್ತಿರುತ್ತಾರೆ.
ಧಾರಾವಾಹಿಗಳ ಜೊತೆಗೆ ಇತ್ತೀಚೆಗೆ ಸಿನಿಮಾ ಹಾಗೂ ವೆಬ್ ಸೀರಿಸ್‌ಗಳಲ್ಲಿ ಕೂಡ ಜ್ಯೋತಿ ರೈ ನಟಿಸುತ್ತಿದ್ದಾರೆ. 'ಪ್ರೆಟಿ ಗರ್ಲ್' ಎನ್ನುವ ವೆಬ್ ಸೀರಿಸ್‌ನಲ್ಲಿ ಸಖತ್ ಬೋಲ್ಡ್ ಲುಕ್‌ನಲ್ಲಿ ಜ್ಯೋತಿ ರೈ ನಟಿಸುತ್ತಿದ್ದಾರೆ. ಸೀರಿಸ್ ಪೋಸ್ಟರ್‌ಗಳನ್ನು ಆಗಾಗ್ಗೆ ಹಂಚಿಕೊಳ್ಳುತ್ತಿರುತ್ತಾರೆ. ಬರೀ ಪೋಸ್ಟರ್‌ಗಳಿಂದಲೇ ಕ್ರೈಂ ಥ್ರಿಲ್ಲರ್ ಸೀರಿಸ್ ಬಗ್ಗೆ ಕುತೂಹಲ ಕೆರಳುವಂತೆ ಮಾಡುತ್ತಿದ್ದಾರೆ.
'ಪ್ರೆಟಿ ಗರ್ಲ್' ವೆಬ್ ಸೀರಿಸ್ ಬಗ್ಗೆ ಜ್ಯೋತಿ ರೈ ಹೊಸ ಪೋಸ್ಟ್ ಸಖತ್ ವೈರಲ್ ಆಗ್ತಿದೆ. "ಶೀಘ್ರದಲ್ಲೇ ಅತ್ಯಂತ ಭಯಾನಕ, ವಿಲಕ್ಷಣವಾದ, ರೋಚಕವಾದ, ಗ್ಲಾಮರ್ ಡೋಸ್ಡ್ ಬ್ಲಡ್ ಬಾತ್ ಥ್ರಿಲ್ಲರ್‌ಗಾಗಿ ಸೀಟ್ ಬೆಲ್ಡ್ ಧರಿಸಿ ಕಾಯುತ್ತಿರಿ. ಸದ್ಯಕ್ಕೆ ಚಿತ್ರೀಕರಣ ನಡೆಯುತ್ತಿದೆ. ಇನ್ನೂ 3 ಶೆಡ್ಯೂಲ್‌ಗಳು ಬಾಕಿ ಇವೆ. ವೆಬ್ ಸೀರಿಸ್ ಗ್ಲಿಂಪ್ಸ್ ಸರಿಯಾದ ಸಮಯದಲ್ಲಿ ಬಿಡುಗಡೆ ಆಗುತ್ತದೆ. ಅದಕ್ಕಾಗಿ ದಯವಿಟ್ಟು ತಾಳ್ಮೆಯಿಂದಿರಿ. ಇಂತಾದೊಂದು ಮಲ್ಟಿಲೇಯರ್ಡ್ ರೋಲ್ ಡಿಸೈನ್ ಮಾಡಿದ್ದಕ್ಕಾಗಿ ನನ್ನ ತಂಡಕ್ಕೆ ಧನ್ಯವಾದ. ವಿಭಿನ್ನ ರೀತಿಯಲ್ ಕಾಣಿಸಿಕೊಳ್ಳುವುದನ್ನು ನಾನು ಸವಾಲಾಗಿ ಸ್ವೀಕರಿಸಿದೆ. ನೀವು ಶೀಘ್ರದಲ್ಲೇ ಅದನ್ನು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ" ಎಂದು ಬರೆದುಕೊಂಡಿದ್ದಾರೆ.
ಸದ್ಯ ಹೊಸ ಪೋಸ್ಟರ್ ವೈರಲ್ ಆಗುತ್ತಿದೆ. ಇದಕ್ಕೆ ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಪೋಸ್ಟರ್‌ನಲ್ಲಿ ಕೂಡ ಸಿಕ್ಕಾಪಟ್ಟೆ ಹಾಟ್ ಲುಕ್‌ನಲ್ಲಿ ಜ್ಯೋತಿ ರೈ ಕಾಣಿಸಿಕೊಂಡಿದ್ದಾರೆ. ಕೆಂಪು ಬಣ್ಣದ ಕ್ರಾಪ್ ಟಾಪ್ ಮೇಲೆ ತೊಟ್ಟಿರುವ ಶರ್ಟ್ ಬಟನ್ ಬಿಚ್ಚಿ ಜ್ಯೋತಿ ಬಿಂದಾಸ್ ಪೋಸ್ ಕೊಟ್ಟಿದ್ದಾರೆ. ಆಕೆಯ ಬೋಲ್ಡ್ ಅವತಾರಕ್ಕೆ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ.
ಇತ್ತೀಚೆಗೆ ನಟಿ ಜ್ಯೋತಿರೈ ತಮ್ಮ ವಯಸ್ಸು ಹೇಳಿ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದರು. ಇನ್‌ಸ್ಟಾಗ್ರಾಂನಲ್ಲಿ ಅಭಿಮಾನಿಯೊಬ್ಬರು ನಿಮ್ಮ ವಯಸ್ಸು ಎಷ್ಟು ಎಂದು ಕೇಳಿದ್ದಕ್ಕೆ ಪ್ಯಾನ್ ಕಾರ್ಡ್ ಸ್ಕ್ರೀನ್ ಶಾಟ್ ಪೋಸ್ಟ್ ಮಾಡಿದ್ದರು. ಅದರಲ್ಲಿದ್ದ ಡೇಟ್ ಆಫ್ ಬರ್ತ್ ಪ್ರಕಾರ ಆಕೆಯ ವಯಸ್ಸು ಇನ್ನು 30 ವರ್ಷ ಎಂದು ಗೊತ್ತಾಗಿ ಕೆಲವರು ಹುಬ್ಬೇರಿಸಿದ್ದರು.
'ಬಂದೇ ಬರತಾವ ಕಾಲ' ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಜ್ಯೋತಿ ರೈ ಮುಂದೆ ಹಲವು ಕನ್ನಡ ಧಾರಾವಾಹಿಗಳಲ್ಲಿ ಮಿಂಚಿದರು. 'ಜೋಗುಳ' ಧಾರಾವಾಹಿ ಪಾತ್ರ ಬಹಳ ಮೆಚ್ಚುಗೆ ಪಡೆದಿತ್ತು. 'ಪ್ರೇರಣಾ', 'ರಥಸಪ್ತಮಿ', 'ಗೆಜ್ಜೆಪೂಜೆ', 'ಅನುರಾಗ ಸಂಗಮ;', 'ಲವಲವಿಕೆ' ಸೇರಿ ಹಲವು ಕನ್ನಡ ಧಾರಾವಾಹಿಗಳಲ್ಲಿ ಮಿಂಚಿದ್ದಾರೆ. ಆಕೆಯ ಗ್ಲಾಮರ್ ನೋಡಿ ಇತ್ತೀಚೆಗೆ ಸಿನಿಮಾಗಳಲ್ಲಿ ನಟಿಸುವಂತೆ ಅಭಿಮಾನಿಗಳು ಸಲಹೆ ನೀಡುತ್ತಿದ್ದಾರೆ.


Click it and Unblock the Notifications











