ಹೆದರಲ್ಲ..ಬೆದರಲ್ಲ..ವೈರಲ್ ವಿಡಿಯೋ ಬೆನ್ನಲ್ಲೇ ಸಂಗಾತಿ ಜೊತೆ ಕಾಣಿಸಿಕೊಂಡ ಜ್ಯೋತಿ ರೈ ..!

By ಫಿಲ್ಮಿ ಬೀಟ್ ಡೆಸ್ಕ್

ಸಾಮಾಜಿಕ ಜಾಲತಾಣದಲ್ಲಿ ಸದ್ಯಕ್ಕೆ ಇಬ್ಬರ ಹೆಸರು ಚಾಲ್ತಿಯಲ್ಲಿದೆ. ಒಬ್ಬರು ಪೆನ್ ಡ್ರೈವ್ ಪ್ರಜ್ವಲ್ ಅವರದ್ದಾದರೆ, ಮತ್ತೊಂದು ಜ್ಯೋತಿ ರೈ ಅವರದ್ದು. ವಿಶೇಷ ಅಂದರೆ ಇಷ್ಟೆಲ್ಲ ಚರ್ಚೆಯಲ್ಲಿದ್ದರು ಒಬ್ಬರು ಕೈಗೆ ಸಿಕ್ತಿಲ್ಲ. ಮತ್ತೊಬ್ಬರು ತಲೆ ಕೆಡಿಸಿಕೊಂಡಿಲ್ಲ.

ಇದಕ್ಕೆ ಮತ್ತೊಂದು ಪುರಾವೆ ಅನ್ನುವಂತೆ, ನಿನ್ನೆಯಿಂದ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗ್ತಿರುವ ಜ್ಯೋತಿ ರೈ , ತಮ್ಮ ಎರಡನೇ ಪತಿ ಸುಕು ಪೂರ್ವಜ್ ಅವರ ಜೊತೆ ನೆಮ್ಮದಿಯ ಬದುಕನ್ನ ಬದುಕುತ್ತಿದ್ದಾರೆ. ಸೆಲ್ಫೀ ಕ್ಲಿಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಳ್ಳುವ ಮೂಲಕ ನಾನು ಯಾವುದಕ್ಕೂ ಹೆದರಲಾರೆ, ಬೆದರಲಾರೆ ಎಂಬ ಸಂದೇಶವನ್ನೂ ಕೊಟ್ಟಿದ್ದಾರೆ.

Jyothi Rai shares photo with husband Suku Poorvaj post Obscene Video controversy

ಇನ್ಸ್‌ಟಾಗ್ರಾಮ್‌ ಪೇಜ್‌ನ ಸ್ಟೋರೀಸ್‌ ನಲ್ಲಿ ಲವ್‌ ಇಮೋಜಿ ಸಮೇತ ಜ್ಯೋತಿ ರೈ, ತಮ್ಮ ಹೊಸ ಫೋಟೋ ಹಂಚಿಕೊಂಡ ಬೆನ್ನಲ್ಲಿಯೇ.. ಜ್ಯೋತಿ ರೈ ಅವರ ಬಗ್ಗೆ ಮತ್ತೊಮ್ಮೆ ಚರ್ಚೆ ಆರಂಭವಾಗಿದೆ. ಜ್ಯೋತಿ ಅವರ ಧೈರ್ಯ, ಸ್ಥೈರ್ಯ ಮತ್ತು ಆತ್ಮವಿಶ್ವಾಸದ ಬಗ್ಗೆ ಕೂಡ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಇನ್ನೂ..ವೈರಲ್ ವಿಡಿಯೋ ಜ್ಯೋತಿ ರೈ ಅವರದ್ದೇ ಆಗಿದ್ದರೆ, ಜ್ಯೋತಿ ರೈ ಯಾವುದಾದರೂ ತಪ್ಪು ಮಾಡಿದ್ದರೆ.. ಜ್ಯೋತಿ ಮುಖದಲ್ಲಿ ಭಯ ಕಾಣಿಸಬೇಕಿತ್ತು ಆದರೆ ಜ್ಯೋತಿ ಮಾತ್ರ ಆರಾಮಾಗಿ ಇದ್ದಾರೆ. ಈ ಕಾರಣಕ್ಕೆ.. ವಿಡಿಯೋ ಅವರದ್ದಾಗಿರಲು ಸಾಧ್ಯ ಇಲ್ಲ ಅನ್ನುವ ಮಾತು ಕೂಡ ಕೇಳಿ ಬರುತ್ತಿದೆ.

Jyothi Rai shares photo with husband Suku Poorvaj post Obscene Video controversy

ಇನ್ನೂ ಈಗಾಗಲೇ ವೈರಲ್ ವಿಡಿಯೋ ವಿಚಾರಕ್ಕೆ ಸಂಬಂಧಿಸಿದಂತೆ ಜ್ಯೋತಿ ರೈ ಸೈಬರ್ ಕ್ರೈಂ ವಿಭಾಗಕ್ಕೆ ದೂರು ನೀಡಿದ್ದಾರೆ. ತಮಗೆ ಕಿರುಕುಳ ನೀಡುತ್ತಿದ್ದಾರೆಂದು ಬಹುಭಾಷಾ ಕಿರುತೆರೆ ನಟಿ ಜ್ಯೋತಿ ರೈ ಅಳಲು ತೋಡಿಕೊಂಡಿದ್ದಾರೆ.ಸರಿಯಾದ ಕ್ರಮ ತೆಗೆದುಕೊಳ್ಳದಿದ್ದರೆ ನನ್ನ ಜೀವನದಲ್ಲಿ ಸರಿಪಡಿಸಲಾಗದ ಹಾನಿ ಉಂಟಾಗುತ್ತದೆ ಎಂದು ದೂರಿನಲ್ಲಿ ನಟಿ ಕಳವಳವನ್ನೂ ವ್ಯಕ್ತಪಡಿಸಿದ್ದಾರೆ ಜ್ಯೋತಿ ರೈ

ಇದರ ನಡುವೆ ಇನ್ನು ಜ್ಯೋತಿ ರೈ ಅವರದ್ದು ಎನ್ನಲಾದ ವಿಡಿಯೋ ವೈರಲ್ ಆದ ಬೆನ್ನಲ್ಲಿಯೇ, ಇವರ ಅಸಂಖ್ಯಾತ ಮತ್ತು ಅಗಣಿತ ಅಭಿಮಾನಿ ಬಳಗ ಕೆರಳಿ ಕೆಂಡವಾಗಿದೆ. ಜ್ಯೋತಿ ರೈ ಅವರ ಹೆಸರಿಗೆ ಮಸಿ ಬಳಿಯುವ ಪ್ರಯತ್ನಕ್ಕೆ ಮುಂದಾಗಿರುವ ಕಿಡಿಗೇಡಿಗಳಿಗೆ ತಕ್ಕ ಶಿಕ್ಷೆಯಾಗಬೇಕೆಂದು ಆಗ್ರಹಿಸಿದೆ.

Jyothi Rai shares photo with husband Suku Poorvaj post Obscene Video controversy

ಅಂದ್ಹಾಗೇ ಅನುರಾಗ ಸಂಗಮ', 'ಜೋಗುಳ', 'ಗೆಜ್ಜೆಪೂಜೆ', 'ಲವಲವಿಕೆ', 'ಕನ್ಯಾದಾನ', 'ಗೆಜ್ಜೆಪೂಜೆ', 'ಪ್ರೇರಣಾ', 'ಕಿನ್ನರಿ', 'ಮೂರು ಗಂಟು', 'ಕಸ್ತೂರಿ ನಿವಾಸ' ಸೇರಿ 18ಕ್ಕೂ ಹೆಚ್ಚು ಕನ್ನಡದ ಧಾರಾವಾಹಿಯಲ್ಲಿ ಆಕ್ಟ್ ಮಾಡಿದ್ದ ಜ್ಯೋತಿ ರೈ ಸದ್ಯಕ್ಕೆ ತೆಲುಗು ಕಿರುತೆರೆ ಮತ್ತು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ.

ಒಟ್ನಲ್ಲಿ ಜ್ಯೋತಿ ರೈ ಸದ್ಯಕ್ಕೆ ವೈರಲ್ ವಿಡಿಯೋ ಬಗ್ಗೆ ನಾನು ತಲೆಕೆಡಿಸಿಕೊಂಡಿಲ್ಲ ಅನ್ನುವ ಸಂದೇಶವನ್ನ ಸೆಲ್ಫೀ ಮೂಲಕ ನೀಡಿದ್ದಾರೆ. ಕಿರಾತಕರ ವಿರುದ್ಧ ದೂರನ್ನು ದಾಖಲಿಸಿದ್ದಾರೆ. ಸಬ್‌ಸ್ಕ್ರೈಬರ್ಸ್‌ಗಳನ್ನ ಹೆಚ್ಚಿಸಿಕೊಳ್ಳಲು ಜ್ಯೋತು ರೈ ಅವರ ಹೆಸರನ್ನ ಬಳಿಸಿಕೊಂಡವರಿಗೆ ಶಿಕ್ಷೆಯಾಗುತ್ತಾ ಅನ್ನುವುದನ್ನ ಈಗ ಕಾದು ನೋಡಬೇಕಿದೆ.

More from Filmibeat

English summary
Jyothi Rai, also known as Jyothi Poorvaj, shares a stylish photo with her husband Suku Poorvaj following recent private Obscene Video controversy.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X