ಜೀ ಕನ್ನಡದಲ್ಲಿ ಹೊಸ ಗೇಮ್ ಶೋ ಕಾಸ್ ಗೆ ಟಾಸ್

ಆಟವೇನೋ ಸೆಲೆಬ್ರಿಟಿಗಳು ಆಡುತ್ತಾರೆ. ಆದರೆ ಗೆದ್ದ ಹಣ ಮಾತ್ರ ಕಷ್ಟದಲ್ಲಿರುವ ಶ್ರೀಸಾಮಾನ್ಯನ ಕೈಸೇರುತ್ತದೆ. ಅಂದರೆ ಗೆದ್ದ ಹಣವನ್ನು ಅವರು ಕಷ್ಟದಲ್ಲಿರುವ ಸಹಾಯಕ್ಕೆ ನೀಡಲಿದ್ದಾರೆ.
ಈಗಾಗಲೆ ಹಲವಾರು ಕಾರ್ಯಕ್ರಮಗಳನ್ನು ನಿರೂಪಿಸಿರುವ ನಟ ಸೃಜನ್ ಲೋಕೇಶ್ 'ಕಾಸ್ ಗೆ ಟಾಸ್' ಕಾರ್ಯಕ್ರಮದ ನಿರೂಪಕರು. ಸೃಜನ್ ಗೆ ಸಾಥ್ ನೀಡಲು ಪಾಪ ಪಾಂಡು ಖ್ಯಾತಿಯ ಜಹಂಗೀರ್ ಸಹ ಇರುತ್ತಾರೆ. ಆಟದ ಜೊತೆಗೆ ಮಜಾ ಕೂಡ ಇರುತ್ತದೆ.
ಪ್ರತಿ ಶನಿವಾರ ಹಾಗೂ ಭಾನುವಾರ ಈ ಕಾರ್ಯಕ್ರಮ ಪ್ರಸಾರವಾಗಲಿದೆ. ಆದರೆ ಕಾರ್ಯಕ್ರಮ ಕಣ್ತುಂಬಿಕೊಳ್ಳಬೇಕಾದರೆ ಮಾರ್ಚ್.2ರವರೆಗೆ ಕಾಯಬೇಕು. ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ 9ರಿಂದ 10ಗಂಟೆವರೆಗೆ 'ಕಾಸ್ ಗೆ ಟಾಸ್' ಮೂಡಿಬರಲಿದೆ.
ಈ ಗೇಮ್ ಶೋನಲ್ಲಿ ಯಾರು ಯಾರು ಸಿನಿಮಾ ತಾರೆಗಳು ಭಾಗವಹಿಸಲಿದ್ದಾರೆ ಎಂಬುದನ್ನು ಜೀ ಕನ್ನಡ ವಾಹಿನಿ ಇನ್ನೂ ಬಹಿರಂಗಪಡಿಸಿಲ್ಲ. ಸೆಲೆಬ್ರಿಟಿಗಳ ಗೇಮ್ ಶೋ ತನ್ನ ವೀಕ್ಷಕ ಬಳಗಕ್ಕೆ ಖಂಡಿತ ಇಷ್ಟವಾಗುತ್ತದೆ ಎಂಬ ವಿಶ್ವಾಸದಲ್ಲಿ ಜೀ ಕನ್ನಡ ವಾಹಿನಿ ಇದೆ. (ಒನ್ಇಂಡಿಯಾ ಕನ್ನಡ)
More from Filmibeat
English summary
Zee Kannada will start airing a new game show Kaas Ge Toss from 2nd March, 2013. It's celebrity game show. It will be telecast on every Saturday and Sunday at 9 to 10 pm.


Click it and Unblock the Notifications











