'ಕ್ರಾಂತಿ' Vs 'ಕಬ್ಜ' ನೆಕ್ ಟು ನೆಕ್ ಫೈಟ್.. ಅಖಾಡ ಸಿದ್ಧ.. ಡೇಟು, ಟೈಮು ಫಿಕ್ಸ್: ಗೆಲ್ಲೋದ್ಯಾರು?

ಹೊಸ ವರ್ಷದಲ್ಲಿ 6 ತಿಂಗಳು ಕಳೆದು ಹೋಗಿದೆ. ಈ ವರ್ಷ ದೊಡ್ಡ ಸಿನಿಮಾಗಳು ಪ್ರೇಕ್ಷಕರೆದರು ಬಂದಿದ್ದು ಕಮ್ಮಿ. 'ಕ್ರಾಂತಿ' ಹಾಗೂ 'ಕಬ್ಜ' ಚಿತ್ರಗಳು ಭಾರೀ ನಿರೀಕ್ಷೆ ಮೂಡಿಸಿದ್ದವು. ಆದರೆ 2 ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿದ್ದು ಗೊತ್ತೇಯಿದೆ. ಆದರೂ ಆಡಿಯೋ, ಡಿಜಿಟಲ್, ಸ್ಯಾಟಲೈಟ್ ರೈಟ್ಸ್‌ ಭರ್ಜರಿ ಬೆಲೆಗೆ ಮಾರಾಟವಾಗಿ ಒಳ್ಳೆ ಬ್ಯುಸಿನೆಸ್ ಆಗಿದ್ದು ಸುಳ್ಳಲ್ಲ.

ದರ್ಶನ್ ನಟನೆಯ 'ಕ್ರಾಂತಿ' ಚಿತ್ರಕ್ಕೆ ವಿ. ಹರಿಕೃಷ್ಣ ಆಕ್ಷನ್ ಕಟ್ ಹೇಳಿದ್ದರು. ಎಲ್ಲಾ ಕಮರ್ಷಿಯಲ್ ಅಂಶಗಳ ಜೊತೆ ಒಂದೊಳ್ಳೆ ಮೆಸೇಜ್ ಹೊತ್ತು ಬಂದಿದ್ದ ಸಿನಿಮಾ ದರ್ಶನ್ ಅಭಿಮಾನಿಗಳ ಮನಗೆದ್ದಿತ್ತು. ಇನ್ನು ಆರ್‌. ಚಂದ್ರು ನಿರ್ದೇಶನದ 'ಕಬ್ಜ' ಸಿನಿಮಾ ಕೂಡ ಭಾರೀ ಸದ್ದು ಮಾಡಿತ್ತು. ಆದರೆ ಬಾಕ್ಸಾಫೀಸ್‌ನಲ್ಲಿ ಸಿನಿಮಾ ಗಳಿಕೆ ಕಮ್ಮಿ ಎನ್ನುವ ವಾದ ಇದೆ. ಈ ಗ್ಯಾಂಗ್‌ಸ್ಟರ್ ಚಿತ್ರದಲ್ಲಿ ಉಪೇಂದ್ರಗೆ ಕಿಚ್ಚ ಸುದೀಪ್, ಶಿವಣ್ಣನ ಸಾಥ್ ಸಿಕ್ಕಿತ್ತು. ಎರಡು ಸಿನಿಮಾಗಳಿಗೆ ಪ್ರೇಕ್ಷಕರಿಂದ ಮಿಶ್ರಪ್ರತಿಕ್ರಿಯೆ ಸಿಕ್ಕಿತ್ತು. ತಿಂಗಳಿಗೂ ಮೊದ್ಲೆ 2 ಸಿನಿಮಾಗಳು ಓಟಿಟಿ ಕದ ತಟ್ಟಿದ್ದವು.

Kabzaa Versus Kranti: Which film will win the TRP battle?

ಇದೀಗ ಎರಡು ಸಿನಿಮಾಗಳ ನಡುವೆ ವಿಚಿತ್ರ ಕಾದಾಟ ನಡೀತಿದೆ. ಈಗಾಗಲೇ ಅದಕ್ಕೆ ಅಖಾಡ ಕೂಡ ಸಿದ್ಧವಾಗಿದೆ. ಈ ಸುದ್ದಿ ಕೇಳಿ ಅರೇ 2 ಸಿನಿಮಾಗಳು ರಿಲೀಸ್ ಆಗಿ ಬಹಳ ದಿನ ಆಯಿತು. ಮತ್ತೆ 'ಕಬ್ಜ' ಹಾಗೂ 'ಕ್ರಾಂತಿ' ಸಿನಿಮಾಗಳು ಒಟ್ಟಿಗೆ ಪ್ರೇಕ್ಷಕರ ಮುಂದೆ ಬರುತ್ತಾ? ಎನ್ನುವ ಪ್ರಶ್ನೆ ಮೂಡಬಹುದು. ಅದಕ್ಕೆ ಪ್ರಶ್ನೆಗೆ ಉತ್ತರ ಮುಂದೆ ಓದಿ.

ಟಿವಿಯಲ್ಲಿ 'ಕ್ರಾಂತಿ' Vs 'ಕಬ್ಜ'

ಹೌದು 'ಕ್ರಾಂತಿ' ವರ್ಸಸ್ 'ಕಬ್ಜ' ಫೈಟ್ ನಡೀತಿರೋದು ನಿಜ. ಆದರೆ ಬೆಳ್ಳಿಪರದೆಯಲ್ಲಿ ಅಲ್ಲ. ಬದಲಿಗೆ ಕಿರುತೆರೆಯಲ್ಲಿ. ಇದೇ ಭಾನುವಾರ ಸಂಜೆ 6 ಗಂಟೆಗೆ ಎರಡು ಸಿನಿಮಾ ಮೊದಲ ಬಾರಿಗೆ ಟಿವಿಯಲ್ಲಿ ಪ್ರಸಾರ ಆಗುತ್ತಿವೆ. ಈಗಾಗಲೇ ಈ ಸಂಬಂಧ ಸ್ಪೆಷಲ್ ಪ್ರೋಮೊಗಳು ರಿಲೀಸ್ ಆಗಿ ಸದ್ದು ಮಾಡ್ತಿದೆ. ಥಿಯೇಟರ್‌ ಹಾಗೂ ಓಟಿಟಿಯಲ್ಲಿ ಸಿನಿಮಾ ನೋಡದೇ ಇರುವವರಿಗೆ ಮನೆಯಲ್ಲೇ ಕೂತು ಟಿವಿಯಲ್ಲಿ ನೋಡುವ ಅವಕಾಶ ಸಿಗುತ್ತಿದೆ.

ಏಕಕಾಲಕ್ಕೆ ಸಿನಿಮಾ ಪ್ರಸಾರ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಉಪೇಂದ್ರ, ಸುದೀಪ್, ಶಿವಣ್ಣ ನಟನೆಯ 'ಕಬ್ಜ' ಸಿನಿಮಾ ಭಾನುವಾರ ಸಂಜೆ 6ಕ್ಕೆ ಪ್ರೀಮಿಯರ್ ಆಗ್ತಿದೆ. ಅದೇ ದಿನ ಅದೇ ಸಮಯಕ್ಕೆ ಉದಯ ಟಿವಿಯಲ್ಲಿ ದರ್ಶನ್ ನಟನೆಯ 'ಕ್ರಾಂತಿ' ಸಿನಿಮಾ ಮೂಡಿ ಬರಲಿದೆ. ಹಾಗಾಗಿ ಸಹಜವಾಗಿಯೇ ಯಾವ ಸಿನಿಮಾ ಗೆಲ್ಲುತ್ತದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಅಭಿಮಾನಿಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಈ ಎರಡು ಸಿನಿಮಾಗಳನ್ನು ತೆರೆಗೆ ತರಲಾಗಿತ್ತು. ಆದರೆ ಅಂದುಕೊಂಡ ಮಟ್ಟದಲ್ಲಿ 2 ಸಿನಿಮಾಗಳು ಗೆಲ್ಲಲಿಲ್ಲ.

Kabzaa Versus Kranti: Which film will win the TRP battle?

2 ಚಿತ್ರಗಳ ಮಧ್ಯೆ ಪೈಪೋಟಿ

ಈಗಾಗಲೇ 'ಕ್ರಾಂತಿ' ಹಾಗೂ 'ಕಬ್ಜ' ಸಿನಿಮಾಗಳು ಥಿಯೇಟರ್‌ ಹಾಗೂ ಓಟಿಟಿಯಲ್ಲಿ ಬಂದಿದ್ದರು ಕೂಡ ಟಿವಿಯಲ್ಲಿ ಒಳ್ಳೆ ರೆಸ್ಪಾನ್ಸ್ ಸಿಗುವ ಸಾಧ್ಯತೆಯಿದೆ. ಸೂಪರ್ ಸ್ಟಾರ್‌ಗಳ ಸಿನಿಮಾ ಆಗಿರೋದ್ರಿಂದ ಸಹಜವಾಗಿಯೇ ವೀಕ್ಷಕರು ಸಿನಿಮಾ ನೋಡಲು ಮುಗಿಬೀಳುತ್ತಾರೆ. 'ಕ್ರಾಂತಿ' ಚಿತ್ರದಲ್ಲಿ ಸರ್ಕಾರಿ ಶಾಲೆಗಳ ಸ್ಥಿತಿಗತಿ ಬಗ್ಗೆ ಚರ್ಚಿಸಲಾಗಿದೆ. ಹಾಗಾಗಿ ಮನೆಮಂದಿ ಕೂತು ಸಿನಿಮಾ ನೋಡುವ ಸಾಧ್ಯತೆಯಿದೆ. ಇನ್ನು 'ಕಬ್ಜ' ಪಕ್ಕಾ ಮಾಸ್ ಎಂಟರ್‌ಟೈನರ್ ಸಿನಿಮಾ. ಮೂವರು ಸ್ಟಾರ್‌ಗಳು ಚಿತ್ರದಲ್ಲಿದ್ದು ಅಭಿಮಾನಿಗಳು ಸಿನಿಮಾ ನೋಡಲು ಕಾಯುತ್ತಿದ್ದಾರೆ.

ಟಿಆರ್‌ಪಿ ಫೈಟ್‌ನಲ್ಲಿ ಗೆಲ್ಲೋದ್ಯಾರು?

ಕಿರುತೆರೆಯಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳ ರೆಸ್ಪಾನ್ಸ್ ಹೇಗಿತ್ತು ಅನ್ನೋದು ಟಿಆರ್‌ಪಿ ರೇಟಿಂಗ್‌ನಲ್ಲಿ ಗೊತ್ತಾಗುತ್ತದೆ. ಮುಂದಿನ ವಾರ ಎರಡೂ ಸಿನಿಮಾಗಳ ಮೊದಲ ಪ್ರೀಮಿಯರ್ ಟಿಆರ್‌ಪಿ ರೇಟಿಂಗ್ ಸಿಗಲಿದೆ. ಟಿಆರ್‌ಪಿ ಫೈಟ್‌ನಲ್ಲಿ ಗೆಲ್ಲೋದ್ಯಾರು? ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ಕನ್ನಡದಲ್ಲಿ ಪುನೀತ್ ರಾಜ್‌ಕುಮಾರ್ ಸಿನಿಮಾಗಳನ್ನು ಬಿಟ್ಟರೆ ಬಿಟ್ಟರೆ ದರ್ಶನ್ ಸಿನಿಮಾಗಳಿಗೆ ಟಿವಿಯಲ್ಲಿ ಒಳ್ಳೆ ಟಿಆರ್‌ಪಿ ಸಿಗುತ್ತದೆ. ಆದರೆ 'ಕಬ್ಜ' ಚಿತ್ರದಲ್ಲಿ ಉಪ್ಪಿ, ಕಿಚ್ಚ, ಶಿವಣ್ಣ ಇರೋದು ಪ್ಲಸ್ ಆಗುತ್ತಾ? ಕಾದು ನೋಡಬೇಕಿದೆ.

More from Filmibeat

English summary
Kabzaa Versus Kranti: Which film will win the TRP battle?. Darshan Starrer Kranti and Upendra, Sudeep, Shivanna's Kabzaa will Telecast in tv same time. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X