Megha Shetty: ಸಿನಿಮಾಗಳಲ್ಲಿ ಬ್ಯುಸಿ ಆಗುತ್ತಿರುವ ಮೇಘಾ, ದಿನೇ ದಿನೇ ಬದಲಾಗುತ್ತಿದ್ದಾರಾ ಅನು ಸಿರಿಮನೆ!?

By Poorva

ಒಂದಲ್ಲ ಒಂದು ರೀತಿಯಲ್ಲಿ ಮೇಘಾ ಶೆಟ್ಟಿ ಸದಾ ಸುದ್ದಿ ಮಾಡುತ್ತಾ ಇರುತ್ತಾರೆ. ಮೇಘಾ ಶೆಟ್ಟಿ ಇದೀಗ ಮತ್ತೊಮ್ಮೆ ತಮ್ಮ ಫೋಟೋಗಳಿಂದ ಸುದ್ದಿಯಲ್ಲಿ ಇದ್ದಾರೆ . ದಿನೇ ದಿನೇ ಮೇಘಾ ಶೆಟ್ಟಿ ಬದಲಾಗುತ್ತಾ ಇದ್ದಾರೆ. ಸಖತ್ ಸ್ಟೈಲಿಶ್ ಆಗಿ ಮಿಂಚುತ್ತಿರುವ ಇವರು ಫೋಟೋಶೂಟ್‌ಗಳನ್ನ ಮಾಡಿಸುತ್ತಾ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ.

ಬೇರೆ ಭಾಷೆಗಳಲ್ಲಿ ಕೂಡ ನಟನೆ ಮಾಡಿ ತಮ್ಮದೇ ಆದ ಹವಾ ಕ್ರಿಯೇಟ್ ಮಾಡಿದ ನಟಿ ಮೇಘಾ ಶೆಟ್ಟಿ. ಸ್ಟೈಲಿಶ್ ಲುಕ್‌ನಿಂದಾ ಎಲ್ಲರ ಮನೆ ಮಾತಾಗಿರುವ ನಟಿಯ ನಟನೆಗೆ ಫಿದಾ ಆಗದವರೆ ಇಲ್ಲ. ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಎಲ್ಲರ ಮನೆ ಮಾತಾಗಿರುವ ನಟಿ ಅನು ಸಿರಿಮನೆ ಎಂದೇ ಖ್ಯಾತಿ ಗಳಿಸಿದರು. ತಮ್ಮ ಅದ್ಭುತವಾದ ನಟನೆಯಿಂದ ಬಹಳ ಖ್ಯಾತಿಯನ್ನು ಪಡೆದುಕೊಂಡಿದ್ದಾರೆ.

Kaiva Actress Megha Shetty new photoshoot

ನಟಿ ಮೇಘಾ ಶೆಟ್ಟಿ ಇದೀಗ ಹೊಸ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಬ್ಲ್ಯಾಕ್ ಕಲರ್ ಪುಲ್ ಒವರ್ ಕೋಟ್ ಹಾಗೂ ಟೋನ್ ಜೀನ್ಸ್ ಧರಿಸಿ ಸಿಂಪಲ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ನಟಿಯ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಮೂಗುತಿ ಹಾಕಿದ ಬಳಿಕ ಮತ್ತಷ್ಟು ಕ್ಯೂಟ್ ಆಗಿ ಮೇಘಾ ಶೆಟ್ಟಿ ಕಾಣಿಸಿಕೊಂಡಿದ್ದಾರೆ.

ಮತ್ತೊಂದು ಫೋಟೋಶೂಟ್ ಮಾಡಿಸಿಕೊಂಡ ಮೇಘಾ ಶೆಟ್ಟಿ

ಮೇಘಾ ಶೆಟ್ಟಿ ಫೋಟೋ ನೋಡಿದ ಅಭಿಮಾನಿಗಳು ಸೋ ಕ್ಯೂಟ್, ಬರುತ್ತಾ ಬರುತ್ತಾ ಬಹಳ ಚೇಂಜ್ ಆಗುತ್ತಾ ಇದ್ದೀರಿ, ಮಿಲ್ಕಿ ಬ್ಯೂಟಿ, ಎಂದೆಲ್ಲ ಕಾಮೆಂಟ್ ಮಾಡುತ್ತಾ ಇದ್ದಾರೆ. ಮೇಘಾ ಶೆಟ್ಟಿ ಫೋಟೋಗೆ ಏನೇ ಕಾಮೆಂಟ್ ಮಾಡಿದರು ಆಕೆ ಮಾತ್ರ ಎಲ್ಲೂ ಎಕ್ಸೈಟ್ ಆಗದೆ ಹಾಗೆಯೇ ಕೆಟ್ಟ ಮೆಸೇಜ್‌ಗಳಿಗೆ ತಲೆ ಕೆಡಿಸಿಕೊಳ್ಳದೆ ಆರಾಮಾವಾಗಿ ಇರುತ್ತಾರೆ.

Kaiva Actress Megha Shetty new photoshoot

ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವ ನಟಿ

ಮೇಘಾ ಶೆಟ್ಟಿ ಇದೀಗ ಸಾಲು ಸಾಲಿ ಸಿನಿಮಾಗಳಲ್ಲಿ ಬಹಳ ಬ್ಯುಸಿ ಆಗಿದ್ದಾರೆ. ತ್ರಿಬಲ್ ರೈಡಿಂಗ್ ಮೂಲಕ ಹಿರಿತೆರೆಗೆ ಕಾಲಿಟ್ಟ ನಟಿಯ ನಟನೆಗೆ ಅಭಿಮಾನಿಗಳು ಕ್ಲೀನ್ ಬೌಲ್ಡ್ ಆಗಿದ್ದಾರೆ. ಇತ್ತೀಚೆಗೆ ಅವರು 'ಕೈವ' ಚಿತ್ರದಲ್ಲಿ ಸಲ್ಮಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇನ್ನು ಗ್ರಾಮಾಯಣ ಸಿನಿಮಾದಲ್ಲಿ ವಿನಯ್ ರಾಜ್ ಕುಮಾರ್ ಜೊತೆ ನಟನೆ ಮಾಡಲಿದ್ದು ಅಭಿಮಾನಿಗಳು ಮಾತ್ರ ಮೇಘಾ ಶೆಟ್ಟಿ ಬೆಳವಣಿಗೆ ಕಂಡು ಮನದಲ್ಲಿ ಬಹಳ ಖುಷಿ ಪಡುತ್ತಾ ಇದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿರುವ ನಟಿ

ಮೇಘಾ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಬಹಳ ಆಕ್ಟಿವ್ ಆಗಿರುವ ನಟಿ . ಈಕೆಗೆ ಸುಮಾರು 11 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಇದ್ದಾರೆ. ಮೇಘಾ ಶೆಟ್ಟಿ ನೋಟಕ್ಕೆ ಫಿದಾ ಆಗದವರೆ ಇಲ್ಲ. ಬಹಳ ಕ್ಯೂಟ್ ಆಗಿ ಕಾಣಿಸಿಕೊಂಡಿರುವ ನಟಿಯ ಲುಕ್ ಗೆ ಅಭಿಮಾನಿಗಳು ಮಾರು ಹೋಗಿದ್ದಾರೆ. ಹಲವಾರು ಅಭಿಮಾನಿಗಳು ಮೇಘಾ ಶೆಟ್ಟಿಯ ಮುಂದಿನ ಸಿನಿಮಾಗಳಿಗೆ ಆಲ್ ದೀ ಬೆಸ್ಟ್ ಹೇಳುತ್ತಿದ್ದಾರೆ.

More from Filmibeat

English summary
Actress Megha shetty photoshoot.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X