For Quick Alerts
  ALLOW NOTIFICATIONS  
  For Daily Alerts

  ಬಿಗ್‌ಬಾಸ್‌ ನಿರೂಪಣೆಗೆ ಯುವನಟನ ಹೆಸರು, 'ನಾನೇ ಮಾಡ್ತೀನಿ' ಎಂದ ಕಮಲ್

  |

  ಬಿಗ್ ಬಾಸ್ ತಮಿಳು ನಾಲ್ಕು ಆವೃತ್ತಿಯನ್ನು ಯಶಸ್ವಿಯಾಗಿ ಮುಗಿಸಿದೆ. ಈಗ ಐದನೇ ಆವೃತ್ತಿಗೆ ಸದ್ದಿಲ್ಲದೇ ತಯಾರಿ ನಡೆಸಿದೆ. ಐದನೇ ಸೀಸನ್ ಬಿಗ್ ಬಾಸ್‌ನಿಂದ ನಿರೂಪಕ ಕಮಲ್ ಹಾಸನ್ ಹಿಂದೆ ಸರಿಯಲಿದ್ದಾರೆ ಎಂಬ ಸುದ್ದಿ ಈ ಹಿಂದೆ ಚರ್ಚೆಗೆ ಬಂದಿತ್ತು.

  ತಮಿಳು ಚುನಾವಣೆಯ ಸಮಯದಿಂದಲೂ ಇಂತಹದೊಂದು ಸುದ್ದಿ ಕೇಳಿ ಬರ್ತಿತ್ತು. ಹಾಗಾಗಿ, ಕಮಲ್ ಹಾಸನ್‌ಗೆ ಪರ್ಯಾಯ ನಿರೂಪಕನನ್ನು ಹುಡುಕುತ್ತಿದ್ದ ವಾಹಿನಿಗೆ ಯುವ ನಟ ಸಿಂಬು ಆಯ್ಕೆಯಾಗಿದ್ದರಂತೆ. ಒಂದು ವೇಳೆ ಕಮಲ್ ಹಿಂದೆ ಸರಿದರೆ ಆ ಜಾಗಕ್ಕೆ ಸಿಂಬು ಅವರನ್ನು ಕರೆತರುವ ಚಿಂತನೆ ನಡೆದಿತ್ತು.

  ಬಿಗ್ ಬಾಸ್ 5ನೇ ಆವೃತ್ತಿಗೆ ಕಮಲ್ ಹಾಸನ್ ಸಂಭಾವನೆ ಏರಿಕೆ?ಬಿಗ್ ಬಾಸ್ 5ನೇ ಆವೃತ್ತಿಗೆ ಕಮಲ್ ಹಾಸನ್ ಸಂಭಾವನೆ ಏರಿಕೆ?

  ಆದ್ರೀಗ, ಬಿಗ್ ಬಾಸ್ ಐದನೇ ಆವೃತ್ತಿಯ ನಿರೂಪಣೆ ನಾನೇ ಮಾಡ್ತೇನೆ ಎಂದು ಕಮಲ್ ಹಾಸನ್ ಆಯೋಜಕರಿಗೆ ಖಚಿತಪಡಿಸಿದ್ದಾರೆ. ಹಾಗಾಗಿ, ಸೂಪರ್ ಸ್ಟಾರ್ ಸಾರಥ್ಯದಲ್ಲಿ ಸೀಸನ್ 5 ಮುಂದುವರಿಯಲಿದೆ.

  ಕಳೆದ ಆವೃತ್ತಿಗಳಿಗೆ ಹೋಲಿಸಿಕೊಂಡರೆ ಐದನೇ ಆವೃತ್ತಿಯಲ್ಲಿ ಕಮಲ್ ಹಾಸನ್ ಸಂಭಾವನೆ ಏರಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ವಾರಾಂತ್ಯದ ಎಪಿಸೋಡ್‌ಗೆ 3 ಕೋಟಿ ಪಡೆಯುತ್ತಿದ್ದ ಕಮಲ್ ಈಗ 50 ಲಕ್ಷ ಏರಿಕೆ ಮಾಡಿದ್ದು, ಐದನೇ ಸೀಸನ್‌ನಲ್ಲಿ ವಾರಾಂತ್ಯದ ಎಪಿಸೋಡ್‌ಗೆ 3.5 ಕೋಟಿ ನಿಗದಿ ಮಾಡಿದ್ದಾರೆ ಎನ್ನಲಾಗಿದೆ.

  ಇನ್ನು 'ಮಾಸ್ಟರ್' ಖ್ಯಾತಿಯ ಲೋಕೇಶ್ ಕನಕರಾಜ್ ನಿರ್ದೇಶನ ಮಾಡುತ್ತಿರುವ 'ವಿಕ್ರಮ್' ಸಿನಿಮಾದಲ್ಲಿ ಕಮಲ್ ಹಾಸನ್ ನಟಿಸುತ್ತಿದ್ದಾರೆ. ಈಗಾಗಲೇ ಮೊದಲ ಹಂತದ ಚಿತ್ರೀಕರಣ ಮುಗಿದಿದೆ. ಲಾಕ್‌ಡೌನ್‌ನಿಂದ ರಿಲೀಫ್ ಸಿಕ್ಕಿದ ಕೂಡಲೇ ಎರಡನೇ ಹಂತದ ಶೂಟಿಂಗ್ ಆರಂಭಿಸಲಿದ್ದಾರೆ.

  English summary
  Senior Actor Kamal Hassan will continue Bigg boss tamil season 5.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X