For Quick Alerts
  ALLOW NOTIFICATIONS  
  For Daily Alerts

  ಇದೇ ಸೋಮವಾರದಿಂದ ನಿಮ್ಮ ಮನೆಗೆ ಕಾಲಿಡುತ್ತಾಳೆ 'ಕಮಲಿ'

  By Naveen
  |

  'ಕಮಲಿ' ಕನ್ನಡದಲ್ಲಿ ಬರುತ್ತಿರುವ ಹೊಸ ಧಾರಾವಾಹಿ. ಈಗಾಗಲೇ ಈ ಸೀರಿಯಲ್ ಪ್ರೋಮೊಗಳು ಸಾಮಾಜಿಕ ಜಾಲತಾಣಗಳಲ್ಲಿ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ. ಹಳ್ಳಿ ಹುಡುಗಿ 'ಕಮಲಿ'ಯನ್ನು ಸ್ವಾಗತಿಸಲು ಪ್ರೇಕ್ಷಕರು ಸಿದ್ಧರಾಗಿದ್ದಾರೆ.

  ಖ್ಯಾತ ನಿರ್ದೇಶಕ ಅರವಿಂದ್ ಕೌಶಿಕ್ ಈ ಧಾರಾವಾಹಿಯ ಸಾರಥಿ ಆಗಿದ್ದಾರೆ. ನಿರ್ದೇಶನದ ಜೊತೆಗೆ ನಿರ್ಮಾಣವನ್ನು ಕೂಡ ಅವರೇ ಮಾಡಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 7 ರಿಂದ 7.30ರವರೆಗೆ ಈ ಧಾರಾವಾಹಿ ಪ್ರಸಾರವಾಗಲಿದೆ. ಮೇ 28 ರಿಂದ ಧಾರಾವಾಹಿ ಶುರು ಆಗಲಿದೆ.

  ಹಳ್ಳಿ ಹುಡುಗಿ ಕಮಲಿ ಓದಿ ವಿದ್ಯಾವಂತೆಯಾಗಬೇಕೆಂಬ ಕನಸು ಹೊಂದಿರುತ್ತಾಳೆ. ಪಿಯುಸಿ ಮುಗಿದ ಬಳಿಕ ಪಟ್ಟಣಕ್ಕೆ ಹೋಗಿ ಓದಬೇಕೆಂಬ ಹಂಬಲ. ಆದ್ರೆ ಅಮ್ಮನೇ ಈಕೆಗೆ ಓದಿನ ವಿಚಾರದಲ್ಲಿ ಶತೃ. ಮಗಳು ಹಳ್ಳಿ ಬಿಟ್ಟು ಪಟ್ಟಣಕ್ಕೆ ಹೋಗಲು ಅಮ್ಮ ಬಿಡುವುದಿಲ್ಲ. ಅಮ್ಮ ಮಗಳನ್ನು ಹಳ್ಳಿಯಲ್ಲೇ ಉಳಿಸಿಕೊಳ್ಳುವ ಯತ್ನದ ಹಿಂದೊಂದು ರಹಸ್ಯವಿದೆ.

  ಹಳ್ಳಿಯಿಂದ ಬಂದ ಕಮಲಿ ಪಟ್ಟಣದಲ್ಲಿ ಅನುಭವಿಸುವ ನೋವು, ನಲಿವಿನ ಗೊಂಚಲುಗಳು ಇಲ್ಲಿವೆ. ಪಟ್ಟಣದ ಪಯಣದಲ್ಲಿ ಕಮಲಿಗೆ ನಾಯಕ ಸಿಗುತ್ತಾನೆ. ಅವನಿಂದ ಈಕೆಯ ಬದುಕಿನಲ್ಲಿ ಎಂಥ ತಿರುವು ಸಿಗುತ್ತದೆ ಎಂಬ ಸುತ್ತ ಕಥೆ ಸಾಗುತ್ತದೆ.

  English summary
  Zee Kannada is all set to expand its fiction band with the launch of its new show, Kamali. The story of Kamali, a young girl hailing from a village who wishes to pursue her dreams of becoming a professional Kabaddi player.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X