Kalmali Serial: ತೆಲುಗಿಗೆ ಹಾರಿದ 'ಕಮಲಿ' ನಟಿ 'ಅಮೂಲ್ಯ'!
ಕಳೆದ ಮೂರು ವರ್ಷಗಳಿಂದ 'ಕಮಲಿ' ಅವತಾರದಲ್ಲಿ ಪ್ರೇಕ್ಷಕರನ್ನು ರಂಜಿಸಿದ್ದ ಅಮೂಲ್ಯ ಓಂಕಾರ, ಈಗ ಬೇರೆ ಭಾಷೆಯ ಧಾರಾವಾಹಿಗಳಲ್ಲೂ ನಟಿಸಲು ಮುಂದಾಗಿದ್ದಾರೆ. ಹಳ್ಳಿ ಹುಡುಗಿಯಾಗಿಯೂ, ಮಾರ್ಡನ್ ಲುಕ್‌ನಲ್ಲೂ ಎರಡೂ ಶೇಟ್‌ನಲ್ಲೂ ಮುದ್ದಾಗಿ ಕಾಣುವ ಅಮೂಲ್ಯ ಅವರ ಅಭಿನಯಕ್ಕೆ ಜನ ಫಿದಾ ಆಗಿದ್ದಾರೆ.
'ಕಮಲಿ' ಧಾರಾವಾಹಿ ಮೂಲಕ ಚಿರಪರಿಚಿತರಾದ ಅಮೂಲ್ಯ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಉದಯೋನ್ಮುಖ ನಟಿ. ಸದ್ಯ ಜೀ ಕನ್ನಡ ವಾಹಿಯಲ್ಲಿ ಪ್ರಸಾರವಾಗುತ್ತಿರುವ 'ಕಮಲಿ' ಧಾರಾವಾಹಿ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಮೂಲತಃ ಮೈಸೂರಿನವರಾಗಿರುವ ಅಮೂಲ್ಯ ಕಂಪ್ಯೂಟರ್ ಸೈನ್ಸ್‌ನಲ್ಲಿ ಡಿಪ್ಲೋಮಾ ಓದಿದ್ದಾರೆ. ಸದ್ಯ ನಟನೆಯನ್ನೇ ವೃತ್ತಿ ಜೀವನವನ್ನಾಗಿ ಆರಿಸಿಕೊಂಡಿದ್ದಾರೆ.
'ಕಮಲಿ' ಧಾರಾವಾಹಿ ಮೂಲಕ ಅಮೂಲ್ಯ ಪ್ರೇಕ್ಷಕರಿಗೆ ಹತ್ತಿರವಾಗಿದ್ದು, ಹಳ್ಳಿ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಿರುತೆರೆಯಲ್ಲಿ ಪಕ್ಕಾ ಹಳ್ಳಿ ಹುಡುಗಿಯಂತೆ ಕಾಣುವ ಅಮೂಲ್ಯ ವಾಸ್ತವದಲ್ಲಿ ಅಪ್ಪಟ್ಟ ಮಾರ್ಡನ್ ಆಗಿ ಇರುತ್ತಾರೆ. ಇವರ ಕೆಲ ಹಾಟ್ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಅಮೂಲ್ಯಗೆ ಆಫರ್‌ಗಳ ಸುರಿಮಳೆ!
7-8 ವರ್ಷದಿಂದ ಕಿರುತೆರೆಯಲ್ಲೇ ಇರುವ ಅಮೂಲ್ಯ ಎಂದಿಗೂ ಚಿತ್ರರಂಗದತ್ತ ಮುಖ ಮಾಡಿದವರಲ್ಲ. ಈ ಹಿಂದೆಯೂ ಅಮೂಲ್ಯ ಅವರಿಗೆ ಇತರೆ ಸೀರಿಯಲ್‌ಗಳಲ್ಲಿ ನಟಿಸುವ ಆಫರ್ ಬಂದಾಗಲೂ ಸೂಕ್ತ ಪಾತ್ರಕ್ಕಾಗಿ ಕಾದಿದ್ದರು. ಬೇರೆ ಭಾಷೆಗಳಲ್ಲಿ ನಟಿಸುವ ಅವಕಾಶ ಬಂದರೂ ಅನ್ನ ಹಾಕುತ್ತಿರುವ 'ಕಮಲಿ' ಧಾರಾವಾಹಿ ಬಿಡುವುದಕ್ಕೆ ಅಮೂಲ್ಯಗೆ ಮನಸ್ಸಿರಲಿಲ್ಲ. ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಕ್ಕರೂ 'ಕಮಲಿ' ಧಾರಾವಾಹಿಯನ್ನು ಅರ್ಧದಲ್ಲೇ ಬಿಟ್ಟು ಹೋಗಬಾರದು ಎಂಬ ಕಾರಣಕ್ಕೆ ಯಾವುದೇ ಸಿನಿಮಾಗಳಲ್ಲೂ ನಟಿಸಲಿಲ್ಲ. ಸದ್ಯ ಪರಭಾಷೆಯ ಧಾರಾವಾಹಿಯಲ್ಲಿ ಅಮೂಲ್ಯ ಕಾಣಿಸಿಕೊಂಡಿರುವುದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.

ತೆಲುಗಿನ ಧಾರಾವಾಹಿಯಲ್ಲಿ ಅಮೂಲ್ಯ!
ಮೊದಲಿನಿಂದಲೂ ಇತರೆ ಭಾಷೆಯ ಧಾರಾವಾಹಿಗಳಲ್ಲಿ ನಟಿಸುವ ಆಫರ್‌ಗಳು ಅಮೂಲ್ಯಗೆ ಬರುತ್ತಿತ್ತು. ಆದರೆ ಸಮಯ ಹೊಂದಾಣಿಕೆ ಆಗುತ್ತಿರಲಿಲ್ಲ. ಹಾಗಾಗಿ ಸುಮ್ಮನಿದ್ದ ಅಮೂಲ್ಯ ಈಗ ತೆಲುಗಿನ ಧಾರಾವಾಹಿ ಒಂದರಲ್ಲಿ ಕಾಣಿಸಿಕೊಂಡಿದ್ದಾರೆ. ತೆಲುಗಿನ 'ಕಾರ್ತಿಕ ದೀಪಂ' ಎಂಬ ಧಾರಾವಾಹಿಯಲ್ಲಿ ಅಮೂಲ್ಯ ನಟಿಸುತ್ತಿದ್ದಾರೆ. ಇದರಲ್ಲಿ ಲೀಡ್ ರೋಲ್‌ನಲ್ಲಿ ಕಾಣಿಸಿಕೊಂಡಿರುವ ಅಮೂಲ್ಯ ಆಟೋ ಚಾಲಕಿ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಅಮೂಲ್ಯ ನಟಿಸಿದ ಧಾರಾವಾಹಿಗಳು!
ಅಮೂಲ್ಯ 2014 ರಲ್ಲಿ ಬಂದ 'ಸ್ವಾತಿ ಮುತ್ತು' ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟರು. ಸುವರ್ಣ ವಾಹಿನಿಯಲ್ಲಿ 'ಸ್ವಾತಿ ಮುತ್ತು' ಧಾರಾವಾಹಿ ಮೂಡಿ ಬಂದಿತ್ತು. ಇದಾದ ಬಳಿಕ 'ಅರಮನೆ' ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ್ದರು. 2016ರಲ್ಲಿ ಜಯಶ್ರೀ ರಾಜ್ ನಿರ್ದೇಶನದ 'ಅರಮನೆ' ಧಾರಾವಾಹಿ ಉದಯ ಟಿವಿಯಲ್ಲಿ ಮೂಡಿ ಬಂದಿತ್ತು. ಇನ್ನು 'ಪುನರ್ ವಿವಾಹ' ಎಂಬ ಧಾರಾವಾಹಿಯಲ್ಲೂ ಅಮೂಲ್ಯ ನಟಿಸಿದ್ದರು.

ಕಿರುತೆರೆಯಲ್ಲಿ 4ನೇ ವರ್ಷ ಪೂರೈಸುತ್ತಿರುವ ಕಮಲಿ!
ಕಮಲಿ ಧಾರಾವಾಹಿ 2018 ರ ಮೇ ತಿಂಗಳಿನಲ್ಲಿ ಪ್ರಾರಂಭವಾಗಿತ್ತು. ಈಗ ಮೂರನೇ ವರ್ಷ ಪೂರೈಸಿ ನಾಲ್ಕನೇ ವರ್ಷದ ಸೆಲೆಬ್ರೆಷನ್‌ಗಾಗಿ ಕಾಯುತ್ತಿದೆ. ಕಮಲಿ ಧಾರಾವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು, ಅಮೂಲ್ಯ ಓಂಕಾರ ಗೌಡ ಲೀಡ್ ರೋಲ್ ನಲ್ಲಿ ನಟಿಸುತ್ತಿದ್ದಾರೆ. ಓದುವ ಕನಸು ಹೊತ್ತು ಹಳ್ಳಿಯಿಂದ ಬೆಂಗಳೂರಿಗೆ ಬಂದ 'ಕಮಲಿ' ಜೀವನದಲ್ಲಿ ಏನೇನು ಆಗುತ್ತೆ ಎಂದು ತೋರಿಸಲಾಗಿದೆ. ಪ್ರಸ್ತುತ ಕಮಲಿ ಧಾರಾವಾಹಿ ಮೂಲಕ ಅಮೂಲ್ಯ ಕರ್ನಾಟಕದ ಮನೆ ಮಾತಾಗಿದ್ದಾರೆ.


Click it and Unblock the Notifications