ಧಾರಾವಾಹಿಯಲ್ಲಿ ಶತ್ರುಗಳು : ರಿಯಲ್ ಲೈಫ್‌ನಲ್ಲಿ ಶಂಭು ಮತ್ತು ಅನಿಕಾ ಕಪಲ್ಸ್ !

By ಎಸ್ ಸುಮಂತ್

ಎಷ್ಟೋ ಧಾರಾವಾಹಿ ನಟ-ನಟಿಯರ ಜೀವನದಲ್ಲಿ ಈ ರೀತಿ ಆಗಿರುವುದು ಸಹಜ. ಧಾರಾವಾಹಿಯಲ್ಲಿ ಒಂದು ಪಾತ್ರ ಮಾಡಿದರೆ ಅದೇ ವ್ಯಕ್ತಿಗಳು ರಿಯಲ್ ಲೈಫ್‌ನಲ್ಲಿ ಬೇರೆಯದ್ದೇ ರೀತಿಯ ಸಂಬಂಧಗಳನ್ನು ಬೆಸೆದುಕೊಂಡಿರುತ್ತಾರೆ. ಇದೀಗ 'ಕಮಲಿ' ಧಾರಾವಾಹಿಯ ಅನಿಕಾ ಜೀವನದಲ್ಲೂ ಇದೇ ಆಗಿರುವುದು. ಕಮಲಿ ಧಾರಾವಾಹಿಯಲ್ಲಿ ಅನಿಕಾ ಮತ್ತು ಶಂಭು ಇಬ್ಬರು ಒಟ್ಟಿಗೆ ಅಭಿನಯಿಸುತ್ತಿದ್ದಾರೆ. ಆದರೆ ರಿಯಕ್ ಲೈಫ್‌ನಲ್ಲಿ ಇಬ್ಬರು ಮದುವೆಯಾಗುತ್ತಿದ್ದಾರೆ.

'ಕಮಲಿ' ಧಾರಾವಾಹಿ ಈಗ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಅನಿಕಾ ತನ್ನ ಕೆಡಕನ್ನು ಕಡಿಮೆ ಮಾಡಿಕೊಳ್ಳುತ್ತಿಲ್ಲ. ತನ್ನ ಸ್ವಾರ್ಥಕ್ಕೆ ಒಬ್ಬರ ಸಾವಾದರೂ ಅವಳಿಗೆ ಯಾವ ಚಿಂತೆಯೂ ಇಲ್ಲ. ಅಜ್ಜನನ್ನು ಕೊಂದವಳು ಅಮ್ಮನನ್ನು ಕೊಲ್ಲುವುದಕ್ಕೆ ಯತ್ನಿಸಿದಾಗ ಅವಳಿಗೆ ಶಿಕ್ಷೆ ಕೊಡಿಸಲೇಬೇಕೆಂದುಕೊಂಡಿದ್ದಾಳೆ ಊರ್ಮಿಳಾ. ಅದರ ಫಲವಾಗಿ ಇಂದು ಅನಿಕಾ ಜೈಲಿನಲ್ಲಿದ್ದಾಳೆ. ಇದೆಲ್ಲಾ ಧಾರಾವಾಹಿಯದ್ದಾದರೆ ನಿಜವಾದ ಜೀವನವೇ ಬೇರೆಯದ್ದಾಗಿದೆ.

'ಕಮಲಿ' ಧಾರಾವಾಹಿಯಲ್ಲಿ ಎಂತಹ ಪಾತ್ರ

'ಕಮಲಿ' ಧಾರಾವಾಹಿಯಲ್ಲಿ ಎಂತಹ ಪಾತ್ರ

ಕಮಲಿ ಧಾರಾವಾಹಿ ಒಂದು ಮುಗ್ಧ ಹಳ್ಳಿ ಹುಡುಗಿಯ ಜೀವನಾಗಾಥೆ ಇರುವಂತ ಸಿನಿಮಾ. ಈ ಧಾರಾವಾಹಿಯಲ್ಲಿ ಕಮಲಿಗೆ ಬೆಸ್ಟ್ ಫ್ರೆಂಡ್ಸ್ ಇದ್ದಾರೆ. ಹಾಗೇ ಪಕ್ಕಾ ದುಷ್ಮನ್ ಕೂಡ ಇದ್ದಾಳೆ. ಬೆಸ್ಟ್ ಫ್ರೆಂಡ್ ಲೀಸ್ಟ್‌ನಲ್ಲಿ ಶಂಭು ಅಲಿಯಾಸ್ ಸುಹಾಸ್ ಒಬ್ಬ. ಆದರೆ ಪಕ್ಕಾ ದುಷ್ಮನ್ ಲೀಸ್ಟ್ ನಲ್ಲಿ ಅನಿಕಾ ಅಲಿಯಾಸ್ ಸ್ಮಿತಾ ಒಬ್ಬಳೆ. ಧಾರಾವಾಹಿಯಲ್ಲಿ ಶಂಭು ಕಂಡರೂ ಅನಿಕಾಗೆ ಆಗುವುದಿಲ್ಲ. ಯಾಕಂದ್ರೆ ಕಮಲಿ ಜೊತೆಗೆ ಹೆಚ್ಚು ಆತ್ಮೀಯ ಅಂತ. ಇದೀಗ ಧಾರಾವಾಹಿಯಲ್ಲಿ ಶತ್ರುವಿನಂತೆ ಕಾಣುವ ಅನಿಕಾ ಇದೀಗ ಮದುವೆಯಾಗಿ, ಉತ್ತಮ ಜೀವನ ಕಟ್ಟುಕೊಳ್ಳಲು ಹೊರಟಿದ್ದಾಳೆ.

ಅನಿಕಾ ಎಂಗೇಜ್ ಆಗಿದ್ದು ಯಾರನ್ನು?

ಅನಿಕಾ ಎಂಗೇಜ್ ಆಗಿದ್ದು ಯಾರನ್ನು?

ಅನಿಕಾ ಅಲಿಯಾಸ್ ಸ್ಮಿತಾ ಹೊಸ ಜೀವನಕ್ಕೆ ಕಾಲಿಡಲು ಹೊರಟಿದ್ದಾರೆ. ಅದರ ಭಾಗವಾಗಿ ಈಗಾಗಲೇ ನಿಶ್ಚಿತಾರ್ಥ ಕೂಡ ನಡೆದಿದೆ. ಸುಹಾಸ್ ಜೊತೆ ಅನಿಕಾ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಈಗ ಸೋಶಿಯಲ್ ಮೀಡಿಯಾ ಮೂಲಕ ಬಹಿರಂಗ ಪಡಿಸಿದ್ದಾರೆ. ಸುಹಾಸ್ ಕೂಡ ಕಿರುತೆರೆಯಲ್ಲಿ ಬ್ಯುಸಿ ಇರುವ ನಟ. ಅನಿಕಾ ಅಲಿಯಾಸ್ ಸ್ಮಿತಾ ಕೂಡ ಕಿರುತೆರೆಯಲ್ಲಿ ಆಕ್ಟಿವ್ ಆಗಿದ್ದಾರೆ. ಅಲ್ಲದೆ ಇಬ್ಬರು ಪ್ರೀತಿಸಿ ಮದುವೆಯಾಗುತ್ತಿದ್ದಾರೆ.

ಬಿಳಿ ಬಣ್ಣದ ಡ್ರೆಸ್‌ನಲ್ಲಿ ಮಿಂಚಿಂಗ್

ಬಿಳಿ ಬಣ್ಣದ ಡ್ರೆಸ್‌ನಲ್ಲಿ ಮಿಂಚಿಂಗ್

ಅನಿಕಾ ಇಲ್ಲಿಯ ತನಕ ಈ ವಿಚಾರವನ್ನು ಎಲ್ಲಿಯೂ ಹೇಳಿರಲಿಲ್ಲ. ಸುಹಾಸ್ ಕೆಲವು ತಿಂಗಳುಗಳ ಹಿಂದೆಯೇ ಪ್ರೀತಿಯ ಹುಡುಗಿಯ ಫೋಟೊವನ್ನು ಸೋಶಿಯಲ್ ಮೀಡಿಯಾ ತುಂಬೆಲ್ಲಾ ಹಾಕಿಕೊಂಡಿದ್ದಾರೆ. ಸ್ಮಿತಾ ಇತ್ತೀಚೆಗೆ ಇಬ್ಬರ ಫೋಟೊ ಹಂಚಿಕೊಂಡಿದ್ದು, ಆ ಫೋಟೊದಲ್ಲಿ ಇಬ್ಬರು ಬಿಳಿ ಬಣ್ಣದ ಬಟ್ಟೆಯಲ್ಲಿ ಮಿಂಚಿದ್ದಾರೆ. ಅನಿಕಾ ಅಲಿಯಾಸ್ ಸ್ಮಿತಾ ಥೇಟ್ ಸಿಂಡ್ರೆಲಾ ರೀತಿ ಕಾಣುತ್ತಿದ್ದಾರೆ.

ಬಂದಿದ್ದೆಲ್ಲಾ ಶಾಕಿಂಗ್ ಕಮೆಂಟ್ಸ್

ಬಂದಿದ್ದೆಲ್ಲಾ ಶಾಕಿಂಗ್ ಕಮೆಂಟ್ಸ್

ಸ್ಮಿತಾ ಹಾಗೂ ಸುಹಾಸ್ ಇಬ್ಬರು ಕಮಲಿ ಧಾರಾವಾಹಿಯಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ. ಒಬ್ಬರನ್ನು ಕಂಡರೆ ಒಬ್ಬರಿಗೆ ಆಗಲ್ಲ. ಆದರೆ ದಿಢೀರನೆ ಎಂಗೇಜ್ಮೆಂಟ್ ಆಗಿರುವುದು ಶಾಕಿಂಗ್ ಎನಿಸಿದೆ. ಫೋಟೊ ನೋಡಿದ ಹಲವರು, ವಾಟ್ ಈಸ್ ದಿಸ್, ಓಮೈಗಾಡ್ ಶಾಕಿಂಗ್ ಅಂತೆಲ್ಲಾ ಕಮೆಂಟ್ ಹಾಕಿದ್ದಾರೆ. ಇನ್ನು ಹಲವರು ನವಜೋಡಿಗೆ ಶುಭಕೋರಿದ್ದಾರೆ. ಎಂಗೇಜ್ಮೆಂಟ್ ಆಗಿರುವುದಕ್ಕೆ ಆಲ್ ದಿ ಬೆಸ್ಟ್ ಹೇಳಿದ್ದಾರೆ. ಸದ್ಯಕ್ಕೆ ಸುಹಾಸ್ 'ಕಮಲಿ' ಧಾರಾವಾಹಿಯ ಜೊತೆಗೆ ಬೇರೆ ಬೇರೆ ವಾಹಿನಿಯ ಧಾರಾವಾಹಿಯಲ್ಲೂ ನಟಿಸುತ್ತಿದ್ದಾರೆ. ಅನಿಕಾ ಅಲಿಯಾಸ್ ಸ್ಮಿತಾ ಸದ್ಯ ಕಮಲಿಯಲ್ಲಿ ಮುಂದುವರೆದಿದ್ದಾರೆ.

More from Filmibeat

English summary
Kamali Serial Actress Anika Real Life And Biography. Here is the details about Shambu and Anika Love Story.Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X