Don't Miss!
- News
ಬಿಜೆಪಿ ಕರ್ನಾಟಕ ಚುನಾವಣಾ ಉಸ್ತುವಾರಿಯಾಗಿ ಧರ್ಮೇಂದ್ರ ಪ್ರಧಾನ್ ನೇಮಕ, ಅಣ್ಣಾಮಲೈ ಸಹ-ಪ್ರಭಾರಿ!
- Sports
Ind Vs Aus Test: ಮಾರ್ನಸ್ ಲ್ಯಾಬುಸ್ಚಾಗ್ನೆಗೆ ಈ ಮೂವರು ಭಾರತದ ಬೌಲರ್ಗಳಿಂದಲೇ ತೊಂದರೆ!
- Finance
Sharekhan Suggestions: ಟಾಟಾ ಗ್ರೂಪ್ನ ಈ ಸ್ಟಾಕ್ ಖರೀದಿಸಲು ಶೇರ್ಖಾನ್ ಸಲಹೆ
- Automobiles
ಇಂಧನ ಬೆಲೆ ಏರಿಕೆಗೆ ಕಂಗೆಟ್ಟು ವಿಂಟೇಜ್ ಶೈಲಿಯ ಎಲೆಕ್ಟ್ರಿಕ್ ಕಾರು ಖರೀದಿ..ಪ್ರತಿ ಕಿ.ಮೀಗೆ 1ರೂ. ವೆಚ್ಚ
- Lifestyle
ಸಂಧಿವಾತ ಮತ್ತು ಉರಿಯೂತಕ್ಕೆ ಈ ಆಯುರ್ವೇದ ಮದ್ದುಗಳು ಪರಿಣಾಮಕಾರಿ
- Technology
ಇನ್ಸ್ಟಾಗ್ರಾಮ್ ಬಳಕೆದಾರರೇ ಗಮನಿಸಿ...ಇನ್ಮುಂದೆ ಈ ಸೇವೆಗೆ ಶುಲ್ಕ ಪಾವತಿ ಮಾಡಬೇಕು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮತ್ತೊಮ್ಮೆ ರಿಯಾಲಿಟಿ ಶೋವಿನಲ್ಲಿ ಮೋಡಿ ಮಾಡುತ್ತಿರೋ 'ಕಮಲಿ' ನಟಿ ಗೇಬ್ರಿಯೆಲಾ ಸ್ಮಿತ್
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ 'ಕಮಲಿ'ಯಲ್ಲಿ ಖಳನಾಯಕಿ ಅನಿಕಾ ಆಗಿ ನಟಿಸಿ ಕರುನಾಡಿನಾದ್ಯಂತ ಗುರುತಿಸಿಕೊಂಡ ಚೆಂದುಳ್ಳಿ ಚೆಲುವೆಯ ಹೆಸರು ಗೇಬ್ರಿಯೆಲಾ ಸ್ಮಿತ್.
ರಿಯಾಲಿಟಿ
ಶೋ
ಮೂಲಕ
ಕಿರುತೆರೆಗೆ
ಕಾಲಿಟ್ಟ
ಚಂದನ್
ನಟನೆಯಲ್ಲಿ
ಬ್ಯುಸಿ
ಸುಮಾರು ನಾಲ್ಕು ವರ್ಷಗಳ ಕಾಲ ಅನಿಕಾ ಆಗಿ ಅಭಿನಯಿಸಿದ್ದ ಗೇಬ್ರಿಯೆಲಾ ಸ್ಮಿತ್ ಮನೋಜ್ಞ ನಟನೆಯ ಮೂಲಕ ನಟನಾ ಜಗತ್ತಿನಲ್ಲಿ ಗುರುತಿಸಿಕೊಂಡ ಬೆಡಗಿ. 'ಕಮಲಿ' ಧಾರಾವಾಹಿಯ ನಂತರ ಸಣ್ಣ ಬ್ರೇಕ್ ಪಡೆದುಕೊಂಡಿದ್ದ ಗೇಬ್ರಿಯೆಲಾ ಇದೀಗ ಸೂಪರ್ ಕ್ವೀನ್ ಆಗಿ ಕಿರುತೆರೆಗೆ ಮರಳಿದ್ದಾರೆ. ಅರ್ಥಾತ್ ಜೀ ಕನ್ನಡ ವಾಹಿನಿಯಲ್ಲಿ ಶುರುವಾಗಿರುವ ಹೊಚ್ಚ ಹೊಸ ರಿಯಾಲಿಟಿ ಶೋ 'ಸೂಪರ್ ಕ್ವೀನ್'ನ ಭಾಗವಾಗಿದ್ದಾರೆ.

ಬಣ್ಣದ ಪಯಣ ಶುರು
ಮಾಡೆಲಿಂಗ್ ಮೂಲಕ ಬಣ್ಣದ ಲೋಕದ ನಂಟು ಬೆಳೆಸಿಕೊಂಡ ಗೇಬ್ರಿಯೆಲಾ ಸ್ಮಿತ್ ಮೊದಲ ಬಾರಿಗೆ ಬೆಕ್ಕಿನ ನಡಿಗೆ ಮಾಡಿ ಸೈ ಎನಿಸಿಕೊಂಡಾಗ ಕೇವಲ 17 ರ ಹರೆಯ. ಮಾಡೆಲಿಂಗ್ ಜಗತ್ತಿನಲ್ಲಿ ಸಕ್ರಿಯರಾಗಿ ಗುರುತಿಸಿಕೊಂಡ ಈಕೆ ನಂತರ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸವನ್ನು ಕೂಡಾ ಗಿಟ್ಟಿಸಿಕೊಂಡರು. ಒಂದಷ್ಟು ಸಮಯ ಕೆಲಸ ಮಾಡಿದ ಗೇಬ್ರಿಯಲಾ ಮುಂದೆ ನಟನೆಯ ಸಲುವಾಗಿ ಕೆಲಸಕ್ಕೆ ಬಾಯ್ ಹೇಳಿ ನಟನೆಗೆ ಹಾಯ್ ಹೇಳಿದರು.

ಸಿನಿಮಾ ಮೂಲಕ ನಟನೆಗೆ ಎಂಟ್ರಿ
ಯಾವಾಗ ನಟಿಯಾಗಬೇಕು, ಬಣ್ಣದ ಲೋಕದಲ್ಲಿ ಗುರುತಿಸಿಕೊಳ್ಳಬೇಕು ಎಂಬ ಕನಸು ಕಂಡರೋ, ಆಗ ಗೇಬ್ರಿಯೆಲಾ ಸ್ಮಿತ್ ಆಡಿಶನ್‌ಗಳನ್ನು ಅಟೆಂಡ್ ಮಾಡಲಾರಂಭಿಸಿದರು. ಕಿಚ್ಚ ಸುದೀಪ್ ಅಭಿನಯದ 'ವರದನಾಯಕ' ಸಿನಿಮಾದಲ್ಲಿ ಪುಟ್ಟ ಪಾತ್ರದಲ್ಲಿ ಕಾಣಿಸಿಕೊಂಡ ಗೇಬ್ರಿಯೆಲಾ ಸ್ಮಿತ್ ಮತ್ತೆ ಹಿಂತಿರುಗಿ ನೋಡಿದ್ದಿಲ್ಲ. ಮುಂದೆ 'ವಿಕ್ಟರಿ' ,'ಗೆಸ್ಟ್ ಹೌಸ್' ಸಿನಿಮಾಗಳಲ್ಲಿ ಬಣ್ಣ ಹಚ್ಚಿದ ಈ ಬೆಡಗಿ ಮತ್ತೆ ಮುಖ ಮಾಡಿದ್ದು ಕಿರುತೆರೆಯತ್ತ.

ರಿಯಾಲಿಟಿ ಶೋದಿಂದ ಕಿರುತೆರೆಗೆ ಎಂಟ್ರಿ
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಲೈಫ್ ಸೂಪರ್ ಗುರು' ರಿಯಾಲಿಟಿ ಶೋ ಮೂಲಕ ಕಿರುತೆರೆಯಲ್ಲಿ ಮೋಡಿ ಮಾಡಿದ ಗೇಬ್ರಿಯೆಲಾ ನಂತರ ಬದಲಾಗಿದ್ದು ಅನಿಕಾ ಆಗಿ. ಮೊದಲ ಧಾರಾವಾಹಿಯಲ್ಲಿಯೇ ಖಳನಾಯಕಿಯಾಗಿ ನಟಿಸುವ ಅವಕಾಶ ಪಡೆದುಕೊಂಡ ಈಕೆ ಜೀ ಕುಟುಂಬ ಅವಾರ್ಡ್ಸ್ ನಲ್ಲಿ 'ಬೆಸ್ಟ್ ವಿಲನ್' ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

'ಕಮಲಿ' ಮೂಲಕ ಫೇಮಸ್
"ನನ್ನ ಬಣ್ಣದ ಬದುಕನ್ನು ಬದಲಾಯಿಸಿದ್ದು 'ಕಮಲಿ' ಧಾರಾವಾಹಿ. ನಟನಾ ಕ್ಷೇತ್ರದಲ್ಲಿ ನನಗೊಂದು ನನ್ನದೇ ಆದ ಐಡೆಂಟಿಟಿಯನ್ನು ನೀಡಿದ್ದು ಅನಿಕಾ ಪಾತ್ರ. ಇಂದು ಎಲ್ಲರೂ ನನ್ನನ್ನು ಅನಿಕಾ ಮಹಾಜನ್ ಎಂದು ಗುರುತಿಸಿದ್ದು, ಖುಷಿಯಾಗುತ್ತಿದೆ. ಮಾತ್ರವಲ್ಲ ನನ್ನ ಕನಸಿನ ಪಾತ್ರಕ್ಕೆ ನಾನು ಜೀವ ತುಂಬಿದ್ದೇನೆ ಎಂದ ಸಂತಸವೂ ನನಗಿದೆ" ಎಂದು ಹೇಳುತ್ತಾರೆ ಗೇಬ್ರಿಯೆಲಾ ಸ್ಮಿತ್.

'ಸೂಪರ್ ಕ್ವೀನ್' ಶೋನಲ್ಲಿ ಬ್ಯುಸಿ
ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಸೂಪರ್ ಕ್ವೀನ್' ಶೋನಲ್ಲಿ ಬ್ಯುಸಿಯಾಗಿರುವ ಗೇಬ್ರಿಯಲಾ ಮುನಿಕೃಷ್ಣ ಆಲಿಯಾಸ್ ಮುರುಗ ನಿರ್ದೇಶಿಸಿ ನಟಿಸುತ್ತಿರುವ 'ಕೊಡೆಮುರುಗ' ಸಿನಿಮಾದಲ್ಲಿಯೂ ನಾಯಕಿಯಾಗಿ ಕಮಾಲ್ ಮಾಡಿದ್ದಾರೆ.