Yashaswini Ravindra: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಯಶಸ್ವಿನಿ ರವೀಂದ್ರ.. ಮದುವೆ ಫೋಟೊ ವೈರಲ್

By ಪೂರ್ವ

ಕಿರುತೆರೆಯ ಫೇಮಸ್ ಧಾರಾವಾಹಿಗಳಲ್ಲಿ ಒಂದಾಗಿದ್ದ ಧಾರಾವಾಹಿ 'ಕಮಲಿ'. ಈ ಧಾರಾವಾಹಿಯ ಮೂಲಕ ಕಿರುತೆರೆ ವೀಕ್ಷಕರ ಮನದಲ್ಲಿ ಅಚ್ಚಳಿಯಂತೆ ಉಳಿದಿರೋ ನಟಿನೇ ಯಶಸ್ವಿನಿ ರವೀಂದ್ರ. ಈ ಧಾರಾವಾಹಿಯಲ್ಲಿ ರಿಷಿಯ ತಂಗಿಯ ಪಾತ್ರಕ್ಕೆ ಜೀವ ತುಂಬಿದ ಯಶಸ್ವಿನಿ ವೀಕ್ಷಕರ ಫೇವರಿಟ್ ನಟಿಯರಲ್ಲಿ ಒಬ್ಬರು.

'ಸಾಕ್ಷಿ' ಧಾರಾವಾಹಿಯ ಮೂಲಕ ಯಶಸ್ವಿನಿ ಮೊದಲ ಬಾರಿಗೆ ಕಿರುತೆರೆಗೆ ಕಾಲಿಟ್ಟಿದ್ದರು. ಆದರೆ, ಆ ಧಾರಾವಾಹಿಯಲ್ಲಿ ಈ ನಟಗೆ ಅಷ್ಟೊಂದು ಜನಪ್ರಿಯತೆ ಸಿಕ್ಕಿರಲಿಲ್ಲ. ಹೀಗಾಗಿ ಈ ನಟಿ 'ಕಮಲಿ' ಧಾರಾವಾಹಿಯ ಮೂಲಕ ದೊಡ್ಡ ಹೆಸರು ಗಳಿಸಿದ್ದಾರೆ. ಇದೀಗ ರಚನಾ ಎಂದೇ ಕರ್ನಾಟಕ ವೀಕ್ಷಕರ ಮನದಲ್ಲಿ ಅಚ್ಚೊತ್ತಿದ್ದಾರೆ.

Kamali Serial actress Yashaswini Ravindra Marriage with Chethan Raj Photos Goes Viral

ಇನ್ನು 'ಮನೆ ದೇವರು' ಎನ್ನುವ ಧಾರಾವಾಹಿಯಲ್ಲಿ ಯಶಸ್ವಿನಿ ರವೀಂದ್ರ ವಿಲನ್ ಪಾತ್ರದಲ್ಲಿ ಮಿಂಚಿದ್ದಾರೆ. ಅಂದ್ಹಾಗೆ, ಯಶಸ್ವಿನಿ ರವೀಂದ್ರ ಮೂಲತಃ ತೀರ್ಥಹಳ್ಳಿಯವರು. ತೀರ್ಥಹಳ್ಳಿಯಲ್ಲಿ ತನ್ನ ವಿದ್ಯಾಭ್ಯಾಸವನ್ನು ಮುಗಿಸಿ ಬೆಂಗಳೂರಿಗೆ ಬಂದಿದ್ದರು. ಆ ಬಳಿಕ ಸ್ವಲ್ಪ ದಿನ ಒಂದು ಕಂಪನಿಯಲ್ಲಿ ಕೆಲಸ ಮಾಡಿದ್ದರು. ಇವರಿಗೆ ನೃತ್ಯದತ್ತ ಒಲವು ಮೂಡಿದ್ದರಿಂದ ಆ ಕಡೆಗೆ ಹೆಚ್ಚು ಗಮನ ಹರಿಸಿದ್ದರು.

ಬಣ್ಣದ ಲೋಕದಲ್ಲಿ ಮಿಂಚಿದ ನಟಿ

ತಾನು ಬಣ್ಣದ ಲೋಕದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದು ಹಂಬಲಿಸುತ್ತಿದ್ದರು. ಕೊನೆಗೂ ಅವರಿಗೆ ಕಲಾ ಸರಸ್ವತಿ ಒಲಿದಿದ್ದರು. ರಚನಾ ಏನೇ ಕೆಲಸ ಮಾಡಿದರೂ ಅವರ ಬೆಂಬಲಕ್ಕೆ ಸದಾ ಕುಟುಂಬದವರು ಇರುತ್ತಿದ್ದರು. ಆದೇ ಈಕೆಗೆ ದೊಡ್ಡ ಶಕ್ತಿ. ರಚನಾ ಎಂದೇ ಫೇಮಸ್ ಆದ ನಟಿ ಯಶಸ್ವಿನಿ ರವೀಂದ್ರ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಮೆಚ್ಚಿದ ಹುಡುಗನ ಕೈ ಹಿಡಿದ ಯಶಸ್ವಿನಿ

ತಾನು ಮೆಚ್ಚಿದ ಹುಡುಗನನ್ನು ಮದುವೆ ಆಗಿ ಬಹಳ ಖುಷಿಯಲ್ಲಿ ಇದ್ದಾರೆ. ಈ ಇಬ್ಬರು ಜೋಡಿಗಳು ಮಾತ್ರ ಸಖತ್ ಕ್ಯೂಟ್ ಆಗಿ ಕಾಣಿಸುತ್ತ ಇದ್ದಾರೆ. ಇಬ್ಬರು ಬಿಳಿ ಬಣ್ಣದ ವಸ್ತ್ರ ತೊಟ್ಟು ಹಸೆಮಣೆ ಏರಿದ್ದಾರೆ. ಇವರಿಬ್ಬರ ಜೋಡಿ ನೋಡಿದ ಅಭಿಮಾನಿಗಳಂತೂ ಸಖತ್ ಖುಷಿ ಪಟ್ಟಿದ್ದಾರೆ. ಹಾಗೆಯೇ ಇವರಿಬ್ಬರ ಜೋಡಿ ಶುಭಾಶಯದ ಮಹಾಪೂರವೇ ಹರಿದು ಬರುತ್ತಿದೆ.

ಕುಟುಂಬದವರ ಸಮ್ಮುಖದಲ್ಲಿ ಮದುವೆ

ಇನ್ನು ಯಶಸ್ವಿನಿ ಮದುವೆಗೆ ಬಂಧು ಬಳಗದ ಜೊತೆ ಸ್ನೇಹಿತರ ದಂಡೆ ಹರಿದು ಬಂದಿದೆ. ಇನ್ನು ಯಶಸ್ವಿನಿ ಮದುವೆ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ಫೋಟೊಗೆ ಸಖತ್ ಲೈಕ್ಸ್ ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯ ಆಗಿರುವ ಯಶಸ್ವಿನಿ ಆಗಾಗ ಫೋಟೊವನ್ನು ಹಾಗೆಯೇ ವಿಡಿಯೋವನ್ನು ಅಪ್ಲೋಡ್ ಮಾಡಿ ಅಭಿಮಾನಿಗಳಿಗೆ ಖುಷಿ ನೀಡುತ್ತಾರೆ.

ಅಭಿಮಾನಿಗಳಿಂದ ಶುಭಾಶಯ

ಇನ್ನು ಯಶಸ್ವಿನಿ, ಚೇತನ್ ರಾಜ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಬ್ಬರ ಜೋಡಿ ನೋಡೋಕೆ ತುಂಬಾ ಕ್ಯೂಟ್ ಆಗಿ ಕಾಣ್ತಿದೆ. ಅಭಿಮಾನಿಗಳು ಸಹ ಮೆಚ್ಚಿಕೊಂಡು ಶುಭ ಹಾರೈಸಿದ್ದಾರೆ. ಇನ್ನು ಜೀ ಕನ್ನಡದಲ್ಲಿ ಪ್ರಸಾರ ಆಗಿ ಮುಕ್ತಾಯ ಆಗಿರುವ ಧಾರಾವಾಹಿ 'ಕಮಲಿ'. ವೃತ್ತಿ ಜೀವನಕ್ಕೆ ಹೊಸ ತಿರುವು ಕೊಟ್ಟು ಯಶಸ್ಸು ಸಿಕ್ಕಿತ್ತು. ಈಗ ವಿವಾಹದ ಬಳಿಕ ಯಶಸ್ವಿನಿ ಕಿರುತೆರೆಗೆ ಮರಳುತ್ತಾರಾ? ಅನ್ನೋ ಕುತೂಹಲ ಅಭಿಮಾನಿಗಳಲ್ಲಿ ಇದೆ.

More from Filmibeat

English summary
Kamali Serial actress Yashaswini Ravindra Marriage with Chethan Raj Photos Goes Viral,know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X