ರಿಸೆಪ್ಷನ್ ಪಾರ್ಟಿಯಲ್ಲಿ ಮಿಂಚಿದ ನಟಿ ಗ್ಯಾಬಿ ಎಲಾ ಸ್ಮಿತ್ ಹಾಗೂ ನಟ ಸುಹಾಸ್

By ಪ್ರಿಯಾ ದೊರೆ

ರಚನಾ ಸ್ಮಿತ್ ಅಲಿಯಾಸ್ ಗ್ಯಾಬಿ ಎಲಾ ಸ್ಮಿತ್ ಎಂದ ಕೂಡಲೇ ಎಲ್ಲರಿಗೂ ತಿಳಿಯುವುದಿಲ್ಲ. ಬದಲಿಗೆ ಅನಿಕಾ ಎಂದರೆ ಎಲ್ಲರೂ ಗೊತ್ತು ಎನ್ನುತ್ತಾರೆ. 'ಕಮಲಿ' ಧಾರಾವಾಹಿಯಲ್ಲಿ ಅನಿಕಾ ಎಂಬ ಪಾತ್ರದಿಂದಲೇ ಹೆಸರಾಗಿರುವ ಗ್ಯಾಬಿ ಎಲಾ ಸ್ಮಿತ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಜನಪ್ರಿಯ 'ಕಮಲಿ' ಧಾರಾವಾಹಿಯಲ್ಲಿ ಗುಂಡು ಮುಖದ ವಿಲನ್ ಅನಿಕಾ ಆಗಿ ಅಭಿನಯಿಸಿ ರಚನಾ ವೀಕ್ಷಕರ ಮನ ಗೆದ್ದಿದ್ದಾರೆ. ಮಾಡೆಲಿಂಗ್ ಮೂಲಕ ಬಣ್ಣದ ಜಗತ್ತಿಗೆ ಪರಿಚಿತರಾದ ಈ ಚೆಂದುಳ್ಳಿ ಚೆಲುವೆ, ಕಮಲಿ ಧಾರಾವಾಹಿಯಲ್ಲಿ ಖಡಕ್ ಖಳನಾಯಕಿ. ಅನಿಕಾ ಪಾತ್ರದಲ್ಲಿ ಮಿಂಚುತ್ತಿರುವ ರಚನಾಗೆ ಬಾಲ್ಯದಿಂದಲೂ ಮಾಡೆಲಿಂಗ್ ಎಂದರೆ ಅಪಾರ ಆಸಕ್ತಿ.

ರಚನಾ ಅವರು ತಮ್ಮ ಹದಿನೇಳನೇ ವಯಸ್ಸಿಗೆ ಮಾಡೆಲಿಂಗ್ ಜಗತ್ತಿಗೆ ಕಾಲಿಟ್ಟರು. ಹಿಂದಿಯ ಖಾಸಗಿ ಸಂಸ್ಥೆ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಬೆಂಗಳೂರಿನಿಂದ ಆಯ್ಕೆಯಾಗಿದ್ದರು. ಕನ್ನಡ ಕಿರುತೆರೆಯಲ್ಲಿ ಹೊಸ ಹವಾ ಸೃಷ್ಟಿ ಮಾಡಿದ್ದರು. ಈಗಲೂ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಬಂದಿದ್ದಾರೆ.

'ವರದನಾಯಕ' ಸಿನಿಮಾ ಮೂಲಕ ಎಂಟ್ರಿ

'ವರದನಾಯಕ' ಸಿನಿಮಾ ಮೂಲಕ ಎಂಟ್ರಿ

ರಚನಾ ಸ್ಮಿತ್ ಅಲಿಯಾಸ್ ಗ್ಯಾಬಿ ಎಲಾ ಸ್ಮಿತ್ ಅವರ ಕುಟುಂಬದಲ್ಲಿ ಕಲಾವಿದರು ಅಂತ ಯಾರೂ ಇರಲಿಲ್ಲ. ಆದರೆ ಚಿಕ್ಕವಯಸ್ಸನಿಂದಲೂ ರಚನಾಗೆ ನಟಿಯಾಗುವ ಆಸೆಯಿತ್ತು. ಹೀಗಾಗಿ ಎಸ್ ಎಸ್ ಎಲ್ ಸಿ ಮುಗಿಸುತ್ತಿದ್ದಂತೆ ಮಾಡೆಲಿಂಗ್‌ನತ್ತ ಮುಖ ಮಾಡಿದರು. ಮಾಡೆಲಿಂಗ್ ಕ್ಷೇತ್ರದಲ್ಲಿ ಗೆದ್ದ ರಚನಾ ಅವರು ವರದನಾಯಕ ಸಿನಿಮಾಗೆ ಆಡಿಶನ್ ಕೊಟ್ಟು ಆಯ್ಕೆಯಾಗುತ್ತಾರೆ. ಇಲ್ಲಿಂದ ರಚನಾ ಅವರ ಬಣ್ಣದ ಲೋಕದ ಪಯಣ ಶುರುವಾಗುತ್ತದೆ. ಸದ್ಯ ಬಣ್ಣದ ಲೋಕದಲ್ಲಿ ಸಕ್ಸಸ್ ಕಾಣುತ್ತಿದ್ದಾರೆ.

ರಿಯಾಲಿಟಿ ಶೋನಲ್ಲಿ ಮಿಂಚಿದ ನಟಿ

ರಿಯಾಲಿಟಿ ಶೋನಲ್ಲಿ ಮಿಂಚಿದ ನಟಿ

'ವರದನಾಯಕ' ಚಿತ್ರದ ಮೂಲಕ ರಚನಾ ಅವರು ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಇಲ್ಲಿಂದ ಸಿನಿಮಾ ಪಯಣ ಶುರುವಾಯಿತು. ಮುರುಗ ಅಲಿಯಾಸ್ ಮುನಿಕೃಷ್ಣ ನಟನೆಯ ಕೊಡೆಮುರುಗ, 'ವಿಕ್ಟರಿ', 'ಗೆಸ್ಟ್ ಹೌಸ್' ಚಿತ್ರಗಳಲ್ಲಿ ನಟಿಸಿದ್ದಾರೆ. ಅಲ್ಲದೇ ತೆಲುಗು ಸಿನಿಮಾ ಇಂಡಸ್ಟ್ರಿಗೂ ಎಂಟ್ರಿ ಕೊಟ್ಟಿದ್ದರು. ತೆಲುಗಿನ ಕೆಲ ಸಿನಿಮಾಗಳಲ್ಲೂ ರಚನಾ ಅವರು ಮಿಂಚಿದ್ದಾರೆ. ಇದಷ್ಟೇ ಅಲ್ಲದೇ, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಲೈಫ್ ಸೂಪರ್ ಗುರು' ರಿಯಾಲಿಟಿ ಶೋ ನಲ್ಲೂ ಕಾಣಿಸಿಕೊಂಡಿದ್ದರು.

ಹೆಸರು ತಂದು ಕೊಟ್ಟ ಕಿರುತೆರೆ

ಹೆಸರು ತಂದು ಕೊಟ್ಟ ಕಿರುತೆರೆ

ಬೆಳ್ಳಿತೆರೆಯ ಮೂಲಕ ನಟನಾ ಪಯಣ ಶುರು ಮಾಡಿದ್ದ ರಚನಾಗೆ ಜನಪ್ರಿಯತೆ ದೊರಕಿದ್ದು ಮಾತ್ರ ಕಮಲಿಯ ಅನಿಕಾ ಆಗಿ ಬದಲಾದ ಬಳಿಕವೇ. ಕಮಲಿ ಧಾರಾವಾಹಿ ಶುರುವಾದಾಗಿನಿಂದಲೂ ಇದರಲ್ಲಿನ ಖಳನಾಯಕಿ ಸಿಕ್ಕಾಪಟ್ಟೆ ಫೇಮಸ್. ಅನಿಕಾ ಪಾತ್ರದಲ್ಲಿ ರಚನಾ ಸ್ಮಿತ್ ಅವರು ಮಿಂಚಿದ್ದು, ತಮ್ಮ ವಿಲನ್ ಪಾತ್ರವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಕಿರುತೆರೆಯಲ್ಲಿ ಹೊಸ ಹವಾ ಸೃಷ್ಟಿ ಮಾಡಿದ್ದ ರಚನಾ ಸ್ಮಿತ್ ಮನೋಜ್ಞ ನಟನೆಯ ಮೂಲಕ ಸೀರಿಯಲ್ ಲೋಕದಲ್ಲಿ ಮನೆ ಮಾತಾಗಿದ್ದಾರೆ. ಬೆಳ್ಳಿತೆರೆಯಿಂದ ಕಿರುತೆರೆಗೆ ಕಾಲಿಟ್ಟ ಮೋಹಕ ಬೆಡಗಿ ರಚನಾ ಇದೀಗ ಬೆಳ್ಳಿತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ.

ಅದ್ಧೂರಿ ರಿಸೆಪ್ಶನ್ ಮಾಡಿಕೊಂಡ ಕಿರುತೆರೆ ಜೋಡಿಗಳು

ಅದ್ಧೂರಿ ರಿಸೆಪ್ಶನ್ ಮಾಡಿಕೊಂಡ ಕಿರುತೆರೆ ಜೋಡಿಗಳು

ಕಮಲಿ ಧಾರಾವಾಹಿಯಲ್ಲಿ ಶಂಭು ಪಾತ್ರದಲ್ಲಿ ನಟಿಸುತ್ತಿರುವ ಸುಹಾಸ್‌ರನ್ನು ರಚನಾ ಸ್ಮಿತ್ ಅವರು ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದರು. ಕೆಲ ತಿಂಗಳ ಹಿಂದಷ್ಟೇ ಇನ್ ಸ್ಟಾಗ್ರಾಂನಲ್ಲಿ ಸುಹಾಸ್ ಪ್ರಪೋಸ್ ಮಾಡಿರುವ ವೀಡಿಯೋ ಅನ್ನು ಶೇರ್ ಮಾಡಿ, ವಿಚಾರವನ್ನು ಹಂಚಿಕೊಂಡಿದ್ದರು. ಇಬ್ಬರು ಎಂಗೇಜ್‌ಮೆಂಟ್ ಹಾಗೂ ಮದುವೆಯನ್ನು ಸಿಂಪಲ್ ಆಗಿ ಕುಟುಂಬಸ್ಥರ ಸಮ್ಮುಖದಲ್ಲಿ ಮಾಡಿಕೊಂಡಿದ್ದರು. ಹಾಗಾಗಿ ಈಗ ಸ್ನೇಹಿತರು, ಸೆಲಬ್ರಿಟಿಗಳಿಗಾಗಿ ರಿಸೆಪ್ಷನ್ ಅನ್ನು ಮಾಡಿಕೊಂಡಿದ್ದಾರೆ. ಅದ್ಧೂರಿಯಾಗಿ ಆರತಕ್ಷತೆಯನ್ನು ಮಾಡಿಕೊಂಡಿದ್ದಾರೆ. ಇವರ ಮದುವೆ ರಿಸೆಪ್ಷನ್‌ಗೆ ಕಿರುತೆರೆ ನಟ-ನಟಿಯರೆಲ್ಲರೂ ಆಗಮಿಸಿ ಶುಭ ಹಾರೈಸಿದ್ದಾರೆ.

More from Filmibeat

English summary
Kamali serial anika aliyas rachana smith- actor suhas's wedding reception. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X