'ಕಮಲಿ' ಖ್ಯಾತಿಯ ಸೀರಿಯಲ್ ನಟಿ ಅಂಕಿತಾ ಮದುವೆ!
'ಕಮಲಿ' ಧಾರಾವಾಹಿಯಲ್ಲಿ ನಾಯಕಿ ಸ್ನೇಹಿತೆಯಾಗಿ ನಟಿಸುತ್ತಿರುವ ನಿಂಗಿ ಅಲಿಯಾಸ್ ಅಂಕಿತಾ ಅಯ್ಯರ್, ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಅವರ ನಿಶ್ಚಿತಾರ್ಥ ಕಳೆದ ವರ್ಷ ನೆರವೇರಿತ್ತು. ಇದೀಗ ಅವರ ಮದುವೆ ನಡೆದಿದೆ.
'ಕಮಲಿ' ಧಾರಾವಾಹಿ ಮೂಲಕ ನಿಂಗಿ ಎಂದೇ ಗುರುತಿಸಿಕೊಳ್ಳುತ್ತಾರೆ. ಅಂಕಿತಾ 8 ವರ್ಷಗಳ ಪ್ರೀತಿಗೆ ಈಗ ಮದುವೆಯ ಮುದ್ರೆಯನ್ನು ಒತ್ತಿದ್ದಾರೆ.
ಅಂಕಿತಾ ತೆರೆ ಮೇಲೆ ಲಂಗ ದಾವಣಿ ತೊಟ್ಟು ಹಳ್ಳಿ ಹುಡುಗಿಯಂತೆ ಮಿಂಚುವ ಇವರು, ನಿಜ ಜೀವನದಲ್ಲಿ ಪಕ್ಕಾ ಮಾಡರ್ನ್ ಹುಡುಗಿ. ಮಾಡರ್ನ್ ಆಗಿ ಡ್ರೆಸ್ ಮಾಡಿಕೊಂಡು ಫೋಟೊಶೂಟ್ ಮಾಡಿಸುತ್ತಿರುತ್ತಾರೆ.

ಪೆದ್ದು ಪೆದ್ದಾಗಿ ನಟಿಸಿರುವ ನಿಂಗಿ!
'ಕಮಲಿ' ಧಾರಾವಾಹಿಯಲ್ಲಿ ಅಂಕಿತಾ ಅಯ್ಯರ್ ಪೆದ್ದು ಪೆದ್ದಾಗಿ ನಟಿಸಿದ್ದಾರೆ. ನಿಂಗಿ ಪಾತ್ರವನ್ನು ಮಾಡುತ್ತಿರುವ ಅಂಕಿತಾ ಲಂಗ ದಾವಣಿ ಧರಿಸಿ ಹಳ್ಳಿ ಹುಡುಗಿಯಂತೆ ಮುಗ್ದಳಂತೆ ಕಾಣಿಸಿಕೊಂಡಿದ್ದಾರೆ. 2018 ರಿಂದ 'ಕಮಲಿ' ಧಾರಾವಾಹಿ ಮೂಡಿ ಬರುತ್ತಿದೆ. ಈ ಧಾರಾವಾಹಿ ಶುರುವಾದಾಗಿನಿಂದಲೂ ನಿಂಗಿ ನಟಿಸುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ದೊಡ್ಡ ತಾರಾ ಬಳಗವೇ ಇದೆ. ಇನ್ನು ತಮಿಳು ಸೇರಿದಂತೆ ಪರಭಾಷೆಗಳಲ್ಲಿ ನಟಿಸುವ ಅವಕಾಶಗಳು ಅಂಕಿತಾ ಅವರಿಗೆ ಬರುತ್ತಿದೆ. ಆದರೆ, ಕಿರುತೆರೆಯಲ್ಲೇ ಇರುವ ಆಸೆಯನ್ನು ಅಂಕಿತಾ ಅವರು ಹೊಂದಿದ್ದಾರೆ.

ಅಂಕಿತಾಗೆ ನಟನೆ ತುಂಬಾ ಇಷ್ಟ!
ಅಂಕಿತಾ ಅಯ್ಯರ್‌ಗೆ ಚಿಕ್ಕ ವಯಸ್ಸಿನಿಂದಲೂ ನಟನೆ ಎಂದರೆ, ತುಂಬಾ ಇಷ್ಟ. ನಟನೆ ಬಗ್ಗೆ ಬಹಳ ಆಸಕ್ತಿ ಹೊಂದಿದ್ದರು. ಇನ್ನು ಅಂಕಿತಾ ಅವರು ಧಾರಾವಾಹಿ ಜೊತೆಗೆ ಡ್ಯಾನ್ಸಿಂಗ್ ಚಾಂಪಿಯನ್ ಶೋನಲ್ಲೂ ಭಾಗವಹಿಸಿದ್ದರು. ಅಂಕಿತಾ ಮೂಲತಃ ತಮಿಳಿನ ಐಯ್ಯರ್ ಆಗಿದ್ದು, ಓದಿದ್ದು, ಬೆಳೆದ್ದೆಲ್ಲಾ ಬೆಂಗಳೂರಿನಲ್ಲಿ. ಬೆಂಗಳೂರಿನಲ್ಲಿ ಬಿಇ ಓದಿರುವ ಅಂಕಿತಾ ಅವರು ಮೊದಲೆರಡು ವರ್ಷಗಳ ಕಾಲ ಕೆಲಸ ಮಾಡಿದ್ದರು. ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅಂಕಿತಾ ಅವರಿಗೆ ನಟಿಸುವ ಆಸೆ ಇದ್ದಿದ್ದರಿಂದ ಫೋಟೊಶೂಟ್ ಮಾಡಿಸಿದ್ದರು. ಮೊದಲ ಬಾರಿಗೆ 'ಬಂಗಾರಿ' ಎಂಬ ಧಾರಾವಾಹಿಯಲ್ಲಿ ನೆಗೆಟಿವ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದರು. ಇನ್ನು ಉದಯ ಟಿವಿಯಲ್ಲಿ ಮೂಡಿ ಬರುತ್ತಿದ್ದ ಶ್ರೀಕ್ಷೇತ್ರ ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿದ್ದರು. ನಟನೆ, ನಿರೂಪಣೆ ಕೂಡ ಮಾಡಿದ್ದಾರೆ. ಇನ್ನು ಮಾಡೆಲಿಂಗ್ ಕ್ಷೇತ್ರದಲ್ಲೂ ಮಿಂಚಿದ್ದು, ಮಿಸ್ ಕರ್ನಾಟಕದಲ್ಲಿ ರನ್ನರ್ ಅಪ್ ಆಗಿದ್ದರು. ನಂತರ 'ಕಮಲಿ' ಸೀರಿಯಲ್‌ನಲ್ಲಿ ನಟಿಸುವ ಅವಕಾಶ ಬಂದಿತು.

ಪ್ರೀತಿಸಿ ಮದುವೆಯಾದ ಜೋಡಿ!
ಅಂಕಿತಾ ಅಯ್ಯರ್ ಕಳೆದ 9 ವರ್ಷದಿಂದ ಸುಹಾಸ್ ಕುಮಾರಸ್ವಾಮಿ ಎಂಬುವರನ್ನು ಪ್ರೀತಿಸುತ್ತಿದ್ದರು. ಸುಹಾಸ್ ರದ್ದು ವೃತ್ತಿಯಲ್ಲಿ ಛಾಯಾಗ್ರಾಹಕರಾಗಿದ್ದಾರೆ. ಸುಹಾಸ್‌ಗೆ ಬೈಕ್ ರೈಡಿಂಗ್ ಮಾಡುವ ಹವ್ಯಾಸವನ್ನೂ ಹೊಂದಿದ್ದಾರೆ. ಸುಹಾಸ್ ಪರಿಸರ ಪ್ರೇಮಿ. ಹೀಗಾಗಿ ಅವರು ವನ್ಯ ಜೀವಿಗಳ ಛಾಯಾಗ್ರಾಹಣವನ್ನು ಮಾಡುತ್ತಿದ್ದಾರೆ. ಇನ್ನು ಸುಹಾಸ್ ಫೋಟೊಗ್ರಾಫರ್ ಕೂಡ ಆಗಿದ್ದು, ಅವರು ಕೆನಡಾದಲ್ಲಿ ನೆಲೆಸಿದ್ದಾರೆ. ಅಂಕಿತಾ ಕೂಡ ಕೆನಡಾಗೆ ಹೋಗಿ ಸೆಟಲ್ ಆಗುತ್ತಾರೆ ಎನ್ನಲಾಗುತ್ತಿದೆ.

ಮದುವೆ ಮನೆಯಲ್ಲಿ 'ಕಮಲಿ' ತಂಡ!
ಕಳೆದ ವರ್ಷ ಸಿಂಪಲ್ ಆಗಿ ಈ ಜೋಡಿ ಎಂಗೇಜ್ ಮೆಂಟ್ ಮಾಡಿಕೊಂಡಿದ್ದರು. ಕೊರೊನಾ ಕಾರಣದಿಂದ ಕೇವಲ ಕುಟುಂಬಸ್ಥರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ಮದುವೆಯಾಗಿದ್ದಾರೆ. ಈ ಜೋಡಿಯ ಮದುವೆಗೆ 'ಕಮಲಿ' ಧಾರಾವಾಹಿ ತಂಡವೂ ಆಗಮಿಸಿತ್ತು. ಮದುವೆಗೆ ರಚನಾ, ಜಯಶ್ರೀ, ಮೈಕ್ ಮಂಜು ಸೇರಿದಂತೆ ಎಲ್ಲರೂ ಮದುವೆಗೆ ಬಂದು ಅಂಕಿತಾ ಹಾಗೂ ಸುಹಾಸ್‌ಗೆ ಶುಭ ಹಾರೈಸಿದರು.


Click it and Unblock the Notifications











