For Quick Alerts
  ALLOW NOTIFICATIONS  
  For Daily Alerts

  ಕಮಲಿ ವಿಲನ್ ಅನಿಕಾ- ಶಂಭು ನಿಜ ಜೀವನದಲ್ಲಿ ಮದುವೆ ಆಗ್ತಿದ್ದಾರೆ!ಬದುಕಿನಲ್ಲಿ ಆಸಕ್ತಿ ಇದ್ದರೆ ಮಾತ್ರ ಯಾವುದಾದರೂ ಕ್ಷೇತ್ರದಲ್ಲಿ ಯ

  By ಪ್ರಿಯಾ ದೊರೆ
  |

  ಬದುಕಿನಲ್ಲಿ ಆಸಕ್ತಿ ಇದ್ದರೆ ಮಾತ್ರ ಯಾವುದಾದರೂ ಕ್ಷೇತ್ರದಲ್ಲಿ ಯಶಸ್ಸು ಗಳಿಸಲು ಸಾಧ್ಯ. ಅದಕ್ಕೆ ಪ್ರಸಕ್ತ ಉದಾಹರಣೆ ರಚನಾ ಸ್ಮಿತ್. ರಚನಾ ಸ್ಮಿತ್ ಅಲಿಯಾಸ್ ಗ್ಯಾಬಿಎಲಾ ಸ್ಮಿತ್ ಎಂದ ಕೂಡಲೇ ಯಾರಪ್ಪಾ ಎಂಬ ಕುತೂಹಲ ಮೂಡುವುದು ಸಹಜ. ಯಾಕೆಂದರೆ ಆಕೆ ಅನಿಕಾ ಎಂದೇ ಫೇಮಸ್ ಆಗಿದ್ದಾರೆ.

  ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಮಲಿ ಧಾರಾವಾಹಿಯಲ್ಲಿ ಬ್ಯೂಟಿಫುಲ್ ವಿಲನ್ ಅನಿಕಾ ಆಗಿ ಅಭಿನಯಿಸಿ ವೀಕ್ಷಕರ ಮನ ಗೆದ್ದಿರುವವರೇ ಇವರು. ಮಾಡೆಲಿಂಗ್ ಮೂಲಕ ಬಣ್ಣದ ಜಗತ್ತಿಗೆ ಪರಿಚಿತರಾದ ಚೆಂದುಳ್ಳಿ ಚೆಲುವೆ, ಕಮಲಿ ಧಾರಾವಾಹಿಯಲ್ಲಿ ಖಡಕ್ ಖಳನಾಯಕಿ.

  100 ಸಂಚಿಕೆ ಪೂರೈಸಿದ 'ರಾಜಿ': ಸೊಸೆಯ ಮುಗ್ಧತೆ ಅರ್ಥ ಮಾಡಿಕೊಳ್ಳುತ್ತಾಳಾ ಸರಸ್ವತಿ?100 ಸಂಚಿಕೆ ಪೂರೈಸಿದ 'ರಾಜಿ': ಸೊಸೆಯ ಮುಗ್ಧತೆ ಅರ್ಥ ಮಾಡಿಕೊಳ್ಳುತ್ತಾಳಾ ಸರಸ್ವತಿ?

  ಅನಿಕಾ ಪಾತ್ರದಲ್ಲಿ ಮಿಂಚುತ್ತಿರುವ ರಚನಾಗೆ ಬಾಲ್ಯದಿಂದಲೂ ಮಾಡೆಲಿಂಗ್ ಎಂದರೆ ಅಪಾರ ಆಸಕ್ತಿ. ತನ್ನ ಹದಿನೇಳನೇ ವಯಸ್ಸಿಗೆ ಮಾಡೆಲಿಂಗ್ ಜಗತ್ತಿಗೆ ಕಾಲಿಟ್ಟ ರಚನಾ, ಮಾಡಲಿಂಗ್ ಸ್ಪರ್ಧೆಯಲ್ಲಿ ಬೆಂಗಳೂರಿನಿಂದ ಆಯ್ಕೆಯಾಗಿದ್ದರು. ಕನ್ನಡ ಕಿರುತೆರೆಯಲ್ಲಿ ಹೊಸ ಹವಾ ಸೃಷ್ಟಿ ಮಾಡಿದ್ದರು.

  ರಚನಾ ಸ್ಮಿತಾ ಮದುವೆ!

  ರಚನಾ ಸ್ಮಿತಾ ಮದುವೆ!

  ಕಮಲಿ ಧಾರಾವಾಹಿಯಲ್ಲಿ ಶಂಭು ಪಾತ್ರದಲ್ಲಿ ನಟಿಸುತ್ತಿರುವ ಸುಹಾಸ್ ಎನ್ನುವವರ ಜೊತೆ ರಚನಾ ಸ್ಮಿತ್ ಪ್ರೀತಿಯಲ್ಲಿ ಬಿದ್ದಿದ್ದಾರೆ. ಕಳೆದ ಮೂರು ವರ್ಷಗಳಿಂದ ಇಬ್ಬರೂ ಪ್ರೀತಿಸುತ್ತಿದ್ದರು. ಆದರೆ ಎಲ್ಲೂ ಈ ವಿಚಾರವನ್ನು ಬಹಿರಂಗ ಪಡಿಸಿರಲಿಲ್ಲ. ಇದೀಗ ತಮ್ಮ ಇನ್ ಸ್ಟಾಗ್ರಾಂನಲ್ಲಿ ಸುಹಾಸ್ ಪ್ರಪೋಸ್ ಮಾಡಿರುವ ವೀಡಿಯೋ ಅನ್ನು ಶೇರ್ ಮಾಡಿದ್ದಾರೆ. ಇಬ್ಬರ ಎಂಗೇಜ್ ಮೆಂಟ್ ಕೂಡ ಮುಗಿದಿದ್ದು. ಇನ್ನೊಂದು ವಾರದಲ್ಲಿ ಮದುವೆಯಾಗುತ್ತಿದ್ದಾರೆ. ಅಕ್ಟೋಬರ್ ತಿಂಗಳಲ್ಲಿ ಆರತಕ್ಷತೆ ಇದೆ.

  ಚಿಕ್ಕಂದಿನಿಂದಲೂ ನಟಿಯಾಗುವ ಆಸೆ!

  ಚಿಕ್ಕಂದಿನಿಂದಲೂ ನಟಿಯಾಗುವ ಆಸೆ!

  ರಚನಾ ಸ್ಮಿತ್ ಅವರ ಕುಟುಂಬದಲ್ಲಿ ಕಲಾವಿದರು ಅಂತ ಯಾರೂ ಇಲ್ಲ. ಆದರೆ ಚಿಕ್ಕ ವಯಸ್ಸನಿಂದಲೂ ರಚನಾ ಸ್ಮಿತ್‌ಗೆ ನಟಿಯಾಗುವ ಆಸೆಯಿತ್ತು. ಹೀಗಾಗಿ sslc ಮುಗಿಸುತ್ತಿದ್ದಂತೆ ಮಾಡೆಲಿಂಗ್‌ಗೆ ಎಂಟ್ರಿ ಕೊಟ್ಟರು. ಮಾಡೆಲಿಂಗ್ ಕ್ಷೇತ್ರದಲ್ಲಿ ಗೆದ್ದ ರಚನಾ ಅವರು ವರದನಾಯಕ ಸಿನಿಮಾಗೆ ಆಡಿಶನ್ ಕೊಟ್ಟು ಆಯ್ಕೆಯಾಗುತ್ತಾರೆ. ಇಲ್ಲಿಂದ ರಚನಾ ಅವರ ಬಣ್ಣದ ಲೋಕದ ಪಯಣ ಶುರುವಾಗುತ್ತದೆ. ರಚನಾ ಆಕ್ಟಿಂಗ್‌ಗೆ ತಾಯಿಯ ಸಪೋರ್ಟ್ ತುಂಬಾನೇ ಇದೆಯಂತೆ. ಹೀಗಾಗಿ ಬಣ್ಣದ ಲೋಕದಲ್ಲಿ ಸಕ್ಸಸ್ ಕಾಣುತ್ತಿರುವ ರಚನಾ ಅವರಿಗೆ ತಮ್ಮ ಶಿಕ್ಷಣವನ್ನು ಕಂಪ್ಲೀಟ್ ಮಾಡಲು ಸಾಧ್ಯವಾಗಿಲ್ಲ ಎಂಬ ಬೇಸರವಿದೆಯಂತೆ.

  ಅನಿಕಾ ಎಂದೇ ಫೇಮಸ್!

  ಅನಿಕಾ ಎಂದೇ ಫೇಮಸ್!

  ಕಮಲಿ ಧಾರಾವಾಹಿ ಶುರುವಾದಾಗಿನಿಂದಲೂ ಇದರಲ್ಲಿನ ಖಳನಾಯಕಿ ಸಿಕ್ಕಾಪಟ್ಟೆ ಫೇಮಸ್. ಅನಿಕಾ ಪಾತ್ರದಲ್ಲಿ ರಚನಾ ಸ್ಮಿತ್ ಮಿಂಚಿದ್ದು, ತಮ್ಮ ವಿಲನ್ ಪಾತ್ರವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಕಿರುತೆರೆಯಲ್ಲಿ ಹೊಸ ಹವಾ ಸೃಷ್ಟಿ ಮಾಡಿದ್ದ ರಚನಾ ಸ್ಮಿತ್ ಮನೋಜ್ಞ ನಟನೆಯ ಮೂಲಕ ಸೀರಿಯಲ್ ಲೋಕದಲ್ಲಿ ಮನೆ ಮಾತಾಗಿದ್ದಾರೆ. ಬೆಳ್ಳಿತೆರೆಯ ಮೂಲಕ ನಟನಾ ಪಯಣ ಶುರು ಮಾಡಿದ್ದ ರಚನಾಗೆ ಜನಪ್ರಿಯತೆ ದೊರಕಿದ್ದು ಕಮಲಿಯ ಅನಿಕಾ ಆಗಿ ಬದಲಾದ. ಬೆಳ್ಳಿತೆರೆಯಿಂದ ಕಿರುತೆರೆಗೆ ಕಾಲಿಟ್ಟ ಮೋಹಕ ಬೆಡಗಿ ರಚನಾ ಇದೀಗ ಬೆಳ್ಳಿತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ.

  ರಚನಾ ಸ್ಮಿತಾ ಸಿನಿಮಾಗಳಲ್ಲಿ ನಟನೆ!

  ರಚನಾ ಸ್ಮಿತಾ ಸಿನಿಮಾಗಳಲ್ಲಿ ನಟನೆ!

  ವರದನಾಯಕ ಚಿತ್ರದ ಮೂಲಕ ರಚನಾ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಇಲ್ಲಿಂದ ಸಿನಿಮಾ ಪಯಣ ಶುರುವಾಯಿತು. ಮುರುಗ ಅಲಿಯಾಸ್ ಮುನಿಕೃಷ್ಣ ನಟನೆಯ ಕೊಡೆಮುರುಗ, 'ವಿಕ್ಟರಿ', 'ಗೆಸ್ಟ್ ಹೌಸ್' ಚಿತ್ರಗಳಲ್ಲಿ ನಟಿಸಿದ್ದಾರೆ. ಅಲ್ಲದೇ ತೆಲುಗು ಸಿನಿಮಾ ಇಂಡಸ್ಟ್ರಿಗೂ ಎಂಟ್ರಿ ಕೊಟ್ಟಿದ್ದರು. ತೆಲುಗಿನ ಕೆಲ ಸಿನಿಮಾಗಳಲ್ಲೂ ರಚನಾ ಮಿಂಚಿದ್ದಾರೆ. ಇದಷ್ಟೇ ಅಲ್ಲದೇ, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಲೈಫ್ ಸೂಪರ್ ಗುರು ರಿಯಾಲಿಟಿ ಶೋನಲ್ಲೂ ಕಾಣಿಸಿಕೊಂಡಿದ್ದರು.

  English summary
  Kamali Serial Fame Actress Rachana Smith Getting Married,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X