ಸೋಷಿಯಲ್ ಮೀಡಿಯಾಗೆ ಹೆದರಿ ತಮ್ಮ ಪ್ರೀತಿ ಮುಚ್ಚಿಡ್ತಿದ್ದಾರಾ ಕಮಲಿ - ರಿಷಿ?

By ಎಸ್ ಸುಮಂತ್

'ಕಮಲಿ' ಸೀರಿಯಲ್ ಮೂಲಕ ಅಮೂಲ್ಯ ಕಿರುತೆರೆ ಪ್ರಿಯರ ಮನಸ್ಸನ್ನ ಗೆದ್ದಿದ್ದರು. ಅದರಲ್ಲೂ ಈ ಸೀರಿಯಲ್ ನಲ್ಲಿ ನಟಿಸಿದ್ದ ರಿಷಿ ಕೂಡ ಮಹಿಳಾ ಮಣಿಗಳ ಫೇವರಿಟ್ ಹೀರೀ ಆಗಿದ್ದರು. ತನ್ನ ಸ್ಟುಡೆಂಟ್ ಆಗಿದ್ದ ಕಮಲಿಯನ್ನೇ ರಿಷಿ ಪ್ರೀತಿಸಿ ಮದುವೆಯಾಗಿದ್ದರು. ಈ ಜೋಡಿಯನ್ನು ಇಷ್ಟಪಡದವರೇ ಇಲ್ಲ ಎನ್ನುವಂತಿತ್ತು ಈ ಜೋಡಿ.

ಕಳೆದ ಕೆಲವು ದಿನಗಳಿಂದ ಈ ಜೋಡಿ ಬಗ್ಗೆ ಸಿಕ್ಕಾ ಪಟ್ಟೆ ಚರ್ಚೆ ಶುರುವಾಗಿದೆ. ಅದೇನೆಂದರೆ ಇಬ್ಬರು ಲವ್ವಲ್ಲಿ ಬಿದ್ದಿದ್ದಾರೆ ಎಂದು. ಇಬ್ಬರು ಬರ್ತ್ ಡೇ ಪಾರ್ಟಿಯಲ್ಲಿ ಕಾಣಿಸಿಕೊಳ್ಳುವುದು, ಸೀರಿಯಲ್ ಸೆಟ್ ನಲ್ಲಿ ತುಂಟಾಟ, ತರಲೆ ಮಾಡುವುದು ಹೀಗೆ ಹಲವು ವಿಡಿಯೋಗಳು ಹರಿದಾಡುತ್ತಿವೆ. ಇದು ಅವರ ಲವ್ ವಿಚಾರಕ್ಕೆ ಪುಷ್ಠಿ ನೀಡುತ್ತಿದೆ. ಈ ಬಗ್ಗೆ ಅಮೂಲ್ಯ ಕಂಪ್ಲೀಟ್ ಆಗಿ ಮೀಡಿಯಾ ಬಜಾರ್ ಎಂಬ ಯೂಟ್ಯೂಬ್ ಚಾನೆಲ್ ಜೊತೆಗೆ ಮಾತನಾಡಿದ್ದಾರೆ.

Kamali serial Fame Amulya Gowda hints her relationship with niranjan

ಇಬ್ಬರ ನಡುವೆ ಸಂಥಿಂಗ್ ಸಂಥಿಂಗ್

'ಕಮಲಿ' ಸಮಯದಿಂದಾನೂ ಈ ಗಾಸಿಪ್ ಇದ್ದೇ ಇದೆ. ನನ್ನದೊಂದು ಪುಟ್ಟ ಪ್ರಪಂಚ ಏನಿದೆ, ಗ್ಯಾಂಗ್ ಅದರಲ್ಲಿ ಅವರು ಇದ್ದಾರೆ. ಈಗಿನಿಂದ ಅಂತಲ್ಲ ನಾವೂ ಕಮಲಿ ಮಾಡುವ ಸಮಯದಿಂದಾನೂ ಅವರ ಫ್ಯಾಮಿಲಿಗೆ ನಾನು ಗೊತ್ತು, ನನ್ನ ಫ್ಯಾಮಿಲಿಗೆ ಅವರು ಗೊತ್ತು. ನಾವೆಲ್ಲಾ ಒಂದೇ ಫ್ಯಾಮಿಲಿ ಇದ್ದಂತೆ. ಹೀಗಾಗಿ ಆತ್ಮೀಯತೆ ಜಾಸ್ತಿ.

ಗೋಡೆ‌ ಮೇಲೆ ದೀಪವಿಟ್ಟ ಅಮೂಲ್ಯ

ಲವ್ ಮಾಡ್ತಾ ಇದ್ದೀವಿ ಅನ್ನೋದನ್ನ ಅಂದುಕೊಳ್ಳಿ.. ಇದು ನನಗೆ ಗೊತ್ತಿಲ್ಲ. ನೋಡೋಣಾ ಗೊತ್ತಿಲ್ಲ ಆದ್ರೂ ಆಗಬಹುದು. ಗೊತ್ತಿಲ್ಲ. ಈಗ ನೋ ಹೇಳಿ, ನಾಳೆ ನಾವಿಬ್ಬರೇ ಲವ್ ಮಾಡಿದ್ವಿ ಅಂತ ಅಂದುಕೊಳ್ಳಿ, ಮದುವೆ ಆದ್ವಿ ಅಂದುಕೊಳ್ಳಿ. ಈಗಿನ ಸೋಷಿಯಲ್ ಮೀಡಿಯಾ ಗೊತ್ತಲ್ಲ. ಅಂದು ನೋ ಅಂತ ಹೇಳಿಕೊಂಡು ಓಡಾಡಿದ್ರು ಅಂತೆಲ್ಲಾ ಕಮೆಂಟ್ಸ್ ಬರುತ್ತೆ. ಸೋ ಯಾಕೆ ಬೇಕು. ಆದರೆ ಆಗಲಿ. ಒಳ್ಳೆ ಹುಡುಗ. ಆದರೆ ಆಗಲಿ ಅಲ್ವಾ.

Kamali serial Fame Amulya Gowda hints her relationship with niranjan

ನಿರಂಜನ್ ಅವರನ್ನ ಏನಂತ ಕರೀತಾರೆ..?

ಅವರ ಹೆಸರು ನಿರಂಜನ್ ಆಕ್ಚುಲಿ. ನನ್ನ ಫ್ಯಾಮಿಲಿ, ಫ್ರೆಂಡ್ಸ್ ಜೊತೆಗೆ ಪರಿಚಯವಾಗುವಾಗ ರಿಷಿ ಅಂತಾನೇ ಪರಿಚಿತರಾಗಿದ್ದು. ಹೀಗಾಗಿ ಇಂದಿಗೂ ರಿಷಿ ಅಂತಾನೇ ಕರೆಯುತ್ತೇನೆ. ಇಂಡಸ್ಟ್ರಿಯಲ್ಲಿ ಫ್ರೆಂಡ್ಸ್ ಇಲ್ಲ ಅಂತಲ್ಲ. ಎಮರ್ಜೆನ್ಸಿ ಕಾಲ್ ಮಾಡ್ಬೇಕು ಅಂತ ಸಮಸ್ಯೆ ಬಂದಾಗಲೂ ನಾನು ಮೊದಲು ಕಾಲ್ ಮಾಡೋದು ರಿಷಿಗೆ ಅವರನ್ನ ನಾನು ಇಂಡಸ್ಟ್ರಿ ಅಂತ ಅಂದುಕೊಂಡೆ ಇಲ್ಲ. ಹೊರಗೆ ಹಾಕಿದ್ದೀನಿ

ಹುಡುಗ ಹೇಗಿರಬೇಕು ಗೊತ್ತಾ?

ಡ್ರೀಮ್ ಬಾಯ್ ಅದು ಇದು ಅಂತೆಲ್ಲಾ ಕನಸಿಲ್ಲ. ಒಂದು ಮ್ಯೂಚ್ಯುಯಲ್ ಅಂಡರ್ ಸ್ಟ್ಯಾಂಡಿಂಗ್ ಇರಬೇಕು. ನಾವೂ ಆಕ್ಟಿಂಗ್ ಫೀಲ್ಡ್ ನಲ್ಲಿ ಇರೋದ್ರಿಂದ ಅವರಿಗೂ ಆ ಬಗ್ಗೆ ಗೊತ್ತಿರಬೇಕು. ಸಿಂಪಲ್, ಲಾಯಲ್ ಆಗಿರಬೇಕು, ಫ್ಯಾಮಿಲಿಗೆ ಇಂಪಾರ್ಟೆನ್ಸ್ ಕೊಡಬೇಕು ಎಂದು ಹೇಳಿಕೊಂಡಿದ್ದಾರೆ. ಆದರೆ ಅಮೂಲ್ಯ ಹಾಗೂ ನಿರಂಜನ್ ನಿಜಕ್ಕೂ ಲವ್ ಮಾಡ್ತಾ ಇದಾರೆ ಅಂತಾನೇ ಫ್ಯಾನ್ಸ್ ಅಂದುಕೊಂಡಿದ್ದಾರೆ. ಅದಕ್ಕೆ ತಕ್ಕನಾಗಿ ಅಮೂಲ್ಯ, ನಿರಂಜನ್ ಹೆಸರು ಕೇಳಿದಾಗ ಫುಲ್ ನಗಾಡಿಕೊಂಡೆ ಉತ್ತರ ನೀಡಿದ್ದಾರೆ. ಇದು ಅವರಿಬ್ಬರ ಪ್ರೀತಿಗೆ ಮತ್ತಷ್ಟು ಪುಷ್ಠಿ ನೀಡಿದೆ. ಆದಷ್ಟು ಬೇಗ ಒಂದಾಗ್ಲಿ ಅಂತಾರೆ ಫ್ಯಾನ್ಸ್.

More from Filmibeat

English summary
Here is the details about Kamali serial Niranjan and Amulya gowda love story
Read more about: serial
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X