Kamali Serial: ರಿಯಲ್ ಲೈಫ್‌ನಲ್ಲಿ ಕಮಲಿ ಸಖತ್ ಮಾಡರ್ನ್ ಹುಡುಗಿ!

By ಪೂರ್ವ

ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ 'ಕಮಲಿ' ಧಾರಾವಾಹಿ ತುಂಬ ಜನಪ್ರಿಯತೆ ಪಡೆದಿವೆ. ಈ ಧಾರಾವಾಹಿ ಶುರುವಾಗಿ ವರ್ಷಗಳೇ ಉರುಳಿವೆ. 2018ರ ಮೇ ತಿಂಗಳಲ್ಲಿ ಈ ಧಾರಾವಾಹಿ ಮೊದಲು ಆರಂಭವಾಗಿತ್ತು. ಈ ಧಾರಾವಾಹಿಯಲ್ಲಿ ಕಮಲಿ ಪಾತ್ರವನ್ನು ನಿರ್ವಹಿಸುತ್ತಿರುವವರು ಅಮೂಲ್ಯ ಓಂಕಾರ್ ಗೌಡ.

ಈ ಹಿಂದೆ ಅಮೂಲ್ಯ 'ಅರಮನೆ' ಎಂಬ ಧಾರಾವಾಹಿಯಲ್ಲಿ ಮಾಡರ್ನ್ ಹುಡುಗಿಯಾಗಿ ಕಾಣಿಸಿಕೊಂಡಿದ್ದರು. ಆದರೆ 'ಕಮಲಿ' ಧಾರಾವಾಹಿಯಲ್ಲಿ ಪಕ್ಕಾ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಇವರ ಮಾತು, ಡ್ರೆಸ್ ಎಲ್ಲವೂ ಜನರಿಗೆ ಬಲು ಇಷ್ಟ ಆಗಿವೆ. ಕಮಲಿ ಪಾತ್ರಕ್ಕೂ ಅಮೂಲ್ಯ ರಿಯಲ್ ಲೈಫ್‌ನಲ್ಲಿ ಇರೋದಕ್ಕೂ ತುಂಬ ವ್ಯತ್ಯಾಸ ಇದೆ. ಈ ಧಾರಾವಾಹಿಗಳ ಮೂಲಕ ಮಾಡರ್ನ್ ಮತ್ತು ಟ್ರೆಡಿಷನಲ್ ಪಾತ್ರವನ್ನೂ ಕೂಡ ಸಮರ್ಥವಾಗಿ ನಿಭಾಯಿಸಬಲ್ಲೆ ಎಂದು ಅಮೂಲ್ಯ ತೋರಿಸಿಕೊಟ್ಟಿದ್ದಾರೆ.

ಒಂದು ಹಳ್ಳಿ ಹುಡುಗಿಯ ಸುತ್ತ ಹೆಣೆದಿರುವ ಕಥೆ

ಒಂದು ಹಳ್ಳಿ ಹುಡುಗಿಯ ಸುತ್ತ ಹೆಣೆದಿರುವ ಕಥೆ

ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ 'ಕಮಲಿ' ಧಾರಾವಾಹಿ ಶುರುವಾಗಿ ವರ್ಷಗಳೇ ಉರುಳಿವೆ. ಆದರೆ 'ಕಮಲಿ' ಧಾರಾವಾಹಿಯಲ್ಲಿ ಪಕ್ಕಾ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. 'ಕಮಲಿ' ಧಾರಾವಾಹಿ ಒಂದು ಹಳ್ಳಿ ಹುಡುಗಿಯ ಸುತ್ತ ಹೆಣೆದಿರುವ ಕಥೆ. ಕಮಲಿ ಪಾತ್ರಕ್ಕೆ ನಟಿ ಅಮೂಲ್ಯಾ ಓಂಕಾರ್ ಗೌಡ ಬಣ್ಣ ಹಚ್ಚಿದ್ದಾರೆ. ಸೀರಿಯಲ್‌ನಲ್ಲಿ ಹಳ್ಳಿ ಭಾಷೆಯನ್ನು ಮುದ್ದು ಮುದ್ದಾಗಿ ಮಾತನಾಡುವ ಇವರಿಗೆ ಕರ್ನಾಟಕದ ತುಂಬೆಲ್ಲ ಅಭಿಮಾನಿಗಳಿದ್ದಾರೆ. ಧಾರಾವಾಹಿ ಬಿಟ್ಟು ಹೊರಗಡೆ ಅಷ್ಟೊಂದು ಮಾತನಾಡದ, ಸೋಶಿಯಲ್ ಮೀಡಿಯಾದಲ್ಲಿಯೂ ಅಷ್ಟಾಗಿ ಕಾಣಿಸದ ಇವರ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಹಲವರಿಗಿದೆ.

ಅಮೂಲ್ಯ ಯಾಕೆ ಸಿನಿಮಾಗಳಲ್ಲಿ ನಟಿಸಬಾರದು

ಅಮೂಲ್ಯ ಯಾಕೆ ಸಿನಿಮಾಗಳಲ್ಲಿ ನಟಿಸಬಾರದು

ಸೋಶಿಯಲ್ ಮೀಡಿಯಾದಲ್ಲಿ ಇವರ ನಾರ್ಮಲ್ ಲೈಫ್ ಫೋಟೊಗಳನ್ನು ನೋಡಿದರೆ ಇವರೇನಾ ಜೀ ಕನ್ನಡದ ಕಮಲಿ? ಎಂಬ ಸಂದೇಹ ನಿಜವಾಗಲೂ ಕಾಡುವುದಕ್ಕೆ ಶುರುವಾಗುತ್ತೆ. ಟ್ರೆಡಿಷನಲ್, ಮಾಡರ್ನ್ ಪಾತ್ರಗಳನ್ನು ಕೂಡ ತುಂಬಾ ಅಚ್ಚುಕಟ್ಟಾಗಿ ನಿಭಾಯಿಸುವ ಇವರ ಸಾಮರ್ಥ್ಯವನ್ನು ಕನ್ನಡಿಗರು ನಿಜಕ್ಕೂ ಮೆಚ್ಚಿದ್ದಾರೆ. 'ಸ್ವಾತಿ ಮುತ್ತು', 'ಪುನರ್ ವಿವಾಹ', 'ಅರಮನೆ' ಧಾರಾವಾಹಿಗಳಲ್ಲಿ ಇವರು ನಟಿಸಿದ್ದಾರೆ. ಯಾವುದೇ ರೀತಿಯ ಉಡುಗೆ ಹಾಕಿದರೂ ಕೂಡ ಚೆನ್ನಾಗಿ ಕಾಣುವ ಅಮೂಲ್ಯ ಯಾಕೆ ಸಿನಿಮಾಗಳಲ್ಲಿ ನಟಿಸಬಾರದು? ಇಷ್ಟು ದಿನ ಕಳೆದರೂ ಇವರು ಯಾಕೆ ಸಿನಿಮಾ ಮಾಡ್ತಿಲ್ಲ ಎಂಬ ಪ್ರಶ್ನೆ ಹಲವರಿಗೆ ಕಾಡಿದೆ.

ಕಮಲಿ ಪಾತ್ರಕ್ಕೆ ಬಣ್ಣ ಹಚ್ಚಿರುವ ಅಮೂಲ್ಯ

ಕಮಲಿ ಪಾತ್ರಕ್ಕೆ ಬಣ್ಣ ಹಚ್ಚಿರುವ ಅಮೂಲ್ಯ

'ಕಮಲಿ' ಧಾರಾವಾಹಿಯ ಕಮಲಿ ಪಾತ್ರಕ್ಕೂ, ನಟಿ ಅಮೂಲ್ಯ ರಿಯಲ್ ಲೈಫ್‌ಗೂ ತುಂಬನೇ ವ್ಯತ್ಯಾಸವಿದೆ. ಇದಕ್ಕೆ ಉದಾಹರಣೆಯೆಂಬಂತೆ ಅಮೂಲ್ಯ ಇನ್‌ಸ್ಟಾಗ್ರಾಂನಲ್ಲಿ ಹಾಕಿರುವ ಫೋಟೊಗಳೇ ಸಾಕ್ಷಿ. 'ಕಮಲಿ' ಧಾರಾವಾಹಿಯಲ್ಲಿ ಮುದ್ದು ಮುದ್ದಾಗಿ ಮಂಡ್ಯ ಭಾಷೆ ಮಾತನಾಡುತ್ತ, ಯಾವಾಗಲೂ ಲಂಗ-ಧಾವಣಿ ಹಾಕಿಕೊಂಡು, ರಿಬ್ಬನ್ ಹಾಕಿ ಎರಡು ಜಡೆ ಕಟ್ಟಿಕೊಂಡಿರುವ ಕಮಲಿಗೂ, ಕಮಲಿ ಪಾತ್ರಕ್ಕೆ ಬಣ್ಣ ಹಚ್ಚಿರುವ ಅಮೂಲ್ಯಗೆ ಅಜಗಜಾಂತರ ವ್ಯತ್ಯಾಸ ಇದೆ. ಇದನ್ನೇ ಅಮೂಲ್ಯ ಕೂಡ ಹಲವು ಬಾರಿ ಹೇಳಿದ್ದಾರೆ. ಅವರ ಡ್ರೆಸ್ ಬಗ್ಗೆ ಕಮೆಂಟ್ ಬಂದಾಗ, ಟ್ರೋಲ್ ಆದಾಗಲೂ ಅವರು ತಲೆಕೆಡಿಸಿಕೊಂಡಿಲ್ಲ.

ಮುದ್ದು ಮುದ್ದಾಗಿ ಮಂಡ್ಯ ಭಾಷೆ ಮಾತಾಡುವ ಅಮೂಲ್ಯ

ಮುದ್ದು ಮುದ್ದಾಗಿ ಮಂಡ್ಯ ಭಾಷೆ ಮಾತಾಡುವ ಅಮೂಲ್ಯ

ಅಮೂಲ್ಯ "ನಮಗೂ ನಮ್ಮದೇ ಆದ ಲೈಫ್ ಇದೆ" ಎನ್ನುತ್ತಾರೆ . ಅಮೂಲ್ಯ ಇನ್‌ಸ್ಟಾಗ್ರಾಂನಲ್ಲಿ ಹಲವು ದಿನಗಳ ಹಿಂದೆ ಕೊಡೆ ಹಿಡಿದು ಮಾಡರ್ನ್ ಡ್ರೆಸ್ ಹಾಕಿರುವ ಫೋಟೊಗಳನ್ನು ಅಪ್‌ಲೋಡ್ ಮಾಡಿದ್ದರು. ಇದನ್ನು ಹಲವರು ಮೆಚ್ಚಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರದ ಅಮೂಲ್ಯ ತೆರೆಯ ಹಿಂದೆ ಮಾತನಾಡೋದು ಕೂಡ ತುಂಬ ಕಡಿಮೆ. ಕನ್ನಡ ಕಿರುತೆರೆಯಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿರುವ ಅಮೂಲ್ಯ ಬಗ್ಗೆ ವಾದ, ವಿವಾದ, ಗಾಸಿಪ್ ತಲೆಕೆಡಿಸಿಕೊಳ್ಳಲ್ಲ. ಸಹನಟ ರಿಷಿ ಅವರನ್ನು ಪ್ರೀತಿಸುತ್ತಿದ್ದಾರೆ ಎಂದು ಗಾಸಿಪ್ ಹರಿದಾಡುತಿತ್ತು. ಅಮೂಲ್ಯ ಇದಕ್ಕೆಲ್ಲಾ ಸಂದರ್ಶನ ಒಂದರಲ್ಲಿ ಉತ್ತರ ನೀಡಿದ್ದಾರೆ. ಇದೆಲ್ಲ ಸತ್ಯಕ್ಕೆ ದೂರವಾದ ಮಾತು ಎಂದು ಹೇಳಿದ್ದಾರೆ. ಸೆಲೆಬ್ರೆಟಿಗಳಾದ ಮೇಲೆ ಅಥವಾ ನಾವು ಸೆಟ್‌ನಲ್ಲಿ ತುಂಬ ಚೆನ್ನಾಗಿರುತ್ತೇವೆ ಎಂದ ಮೇಲೆ ಇಂತಹ ಮಾತುಗಳು ಬರೋದು ಸಹಜ ಎಂದು ಸಂದರ್ಶನ ಒಂದರಲ್ಲಿ ಹೇಳಿದ್ದಾರೆ .

More from Filmibeat

English summary
Kamali serial Fame Amulya Omkar life style. Hear is more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X