ಅಂಜಲಿಯ 'ಆಕ್ಸಿಡೆಂಟ್' ನಾಟಕದ ಗುಟ್ಟು ರಟ್ಟಾಗುತ್ತಾ.?
ಕಿಶನ್ ಗೆ ಸಹಾಯ ಆಗಬೇಕು ಇತ್ತ ಡಿಕೆಯಿಂದಲೂ ತಪ್ಪಿಸಿಕೊಳ್ಳಬೇಕು ಎಂದು ತನಗೆ ಆಕ್ಸಿಡೆಂಟ್ ಆಗಿದೆ ಎಂದು ಅಂಜಲಿ ಅವಳ ಅಕ್ಕನ ಜೊತೆ ಸೇರಿ ನಾಟಕ ಮಾಡುತ್ತಾಳೆ. ತಾನು ಆಸ್ಪತ್ರೆಯಿಂದಲೇ ಕೆಲಸ ಮಾಡುವುದಾಗಿ ಕಿಶನ್ ಗೆ ಹೇಳ್ತಾಳೆ.
ಭಾಸ್ಕರ್ ಡಿಕೆಯಿಂದ ಸಹಿ ಹಾಕಿಸಿಕೊಂಡ ಖಾಲಿ ಪತ್ರ ಬಳಸಿಕೊಂಡು ಕೋಟ್ಯಾಂತರ ರೂಪಾಯಿಯನ್ನ ಕೊಳ್ಳೆ ಹೊಡೆಯುತ್ತಾನೆ. ಅಷ್ಟೊಂದು ಹಣವನ್ನ ಎಲ್ಲಿ ಇಡಬೇಕು ಎಂದು ತಾನು ಮತ್ತು ಅಕ್ಷರ ಯೋಚಿಸಿ, ಡಿಕೆ ಕೋಣೆಯಲ್ಲೇ ಬಚ್ಚಿಡುತ್ತಾರೆ. ಆ ಹಣವನ್ನ ಮನೆ ಕೆಲಸದವನು ನೋಡಿ, ಡಿಕೆ ಮತ್ತು ಸುಧಾಳಿಗೆ ಹೇಳಬೇಕು ಎಂದು ಯತ್ನಿಸಿ ಮತ್ತೆ ಮರೆತು ಹೋಗುತ್ತಾನೆ.
ಇತ್ತ ಜಗದೀಶ್ ಸನ್ಯಾಸಿ ವೇಷ ಧರಿಸಿ, ಡಿಕೆಯ ಕಣ್ಣು ತಪ್ಪಿಸಿ ಚೆಕ್ ನ ಅವನ ಆಫೀಸ್ ಗೆ ತಲುಪಿಸುತ್ತಾನೆ. ಅಂಜಲಿಯ ಸ್ಥಿತಿ ನೋಡಿ ಸ್ವರ ದುಃಖಿಸುತ್ತ, ಕಿಶನ್ ನ ಕರೆದು "ನೀವು ಅಂಜಲಿಯನ್ನ ಮದುವೆ ಆಗಬೇಕು ಯಾವುದೇ ಕಾರಣಕ್ಕೂ ಅವಳನ್ನ ಬಿಡಬಾರದು" ಎಂದು ಅಂಜಲಿ ಮತ್ತು ಅವನ ಕೈ ಹಿಡಿದು ಭಾಷೆ ಮಾಡಿಸಿಕೊಳ್ಳುತ್ತಾಳೆ.

ಭಾಸ್ಕರ್ ತಾನು ಡಿಕೆ ರೂಮ್ ನಲ್ಲಿ ಇಟ್ಟ ಹಣವನ್ನ ತೆಗೆದುಕೊಳ್ಳಲು ಹೋದಾಗ, ಮನೆ ಕೆಲಸದವನ ಕೈಗೆ ಸಿಕ್ಕಿಹಾಕಿಕೊಳ್ಳುತ್ತಾನೆ. ಉಪಾಯ ಮಾಡಿ ಅವನ ಕೈಯಿಂದ ತಪ್ಪಿಸಿಕೊಂಡರೂ ಹಣವನ್ನ ತೆಗೆದುಕೊಳ್ಳಲು ಆಗುವುದಿಲ್ಲ. ಅಕ್ಷರ ಮಾಡಿದ ಎಡವಟ್ಟಿನಿಂದ ಹಣದ ತೊಂದರೆಯಲ್ಲಿ ಸಿಕ್ಕಿ ಹಾಕಿಕೊಳ್ತಾನೆ ಡಿಕೆ.
ಎಕ್ಸಿ ಬಿಷನ್ ನಲ್ಲಿ ತಮಗೂ ಸಹಾಯ ಮಾಡಿ ಎಂದು ವ್ಯಕ್ತಿಯೊಬ್ಬ ಕಿಶನ್ ನ ಕೇಳಿಕೊಳ್ಳುವಾಗ ಅವನು ತಮಗೆ ಮಾಡಲಾಗುವುದಿಲ್ಲ ಎಂದು ಹೇಳ್ತಾನೆ. ಆಗ ಅಂಜಲಿ ಕಿಶನ್ ಪೋನ್ ತೆಗೆದುಕೊಂಡು ಆ ವ್ಯಕ್ತಿ ಜೊತೆ ಮಾತನಾಡುತ್ತಾಳೆ. ಅವನು ಡಿಕೆ ವಿರುದ್ಧ ತಾವು ಗೆಲ್ಲಬೇಕು ಸಹಾಯ ಮಾಡಿ ಎಂದು ಕೇಳಿದಾಗ ಅಂಜಲಿ ಡಿಕೆ ಹೆಸರು ಕೇಳಿ ಗಾಬರಿಯಾಗುತ್ತಾಳೆ.
ಡಿಕೆ ಹೆಸರು ಕೇಳಿದ್ರೇನೇ ಬೆಚ್ಚಿಬೀಳೋ ಅಂಜಲಿ ಅವನ ಪ್ರಾಜೆಕ್ಟ್ ಗೆ ಕೆಲಸ ಮಾಡ್ತಾಳಾ? ಅಂಜಲಿಯ ಆಕ್ಸಿಡೆಂಟ್ ನಾಟಕ ಕಿಶನ್ ಗೆ ಗೊತ್ತಾಗುತ್ತಾ? ತಪ್ಪದೇ ವೀಕ್ಷಿಸಿ ಇವತ್ತಿನ ಕುತೂಹಲ ಭರಿತ ಸಂಚಿಕೆ. 'ಕಣ್ಮಣಿ' ರಾತ್ರಿ 10ಕ್ಕೆ.


Click it and Unblock the Notifications











