ಊರು ಬಿಟ್ಟು ಹೋಗ್ತಾಳಾ ಅಂಜಲಿ.? ಡಿಕೆ-ಅಂಜಲಿ ಸೇರುವುದು ಯಾವಾಗ.?

By Harshitha

ಆಕ್ಸಿಡೆಂಟ್ ಆದ ಹಾಗೆ ನಟಿಸುತ್ತಿರುವ ಅಂಜಲಿ, ಆಸ್ಪತ್ರೆಯಿಂದಲೇ ಕಿಶನ್ ಗೆ ಸಹಾಯ ಮಾಡುತ್ತಾಳೆ. ಇನ್ನೂ ಎಕ್ಸಿಬಿಷನ್ ನಲ್ಲಿ ಡಿಕೆ ಹಾಗೂ ಕಿಶನ್ ಆಕಸ್ಮಿಕವಾಗಿ ಭೇಟಿ ಆಗುತ್ತಾರೆ. ಈ ವೇಳೆ ಅಂಜಲಿ ಆಸ್ಪತ್ರೆಯಲ್ಲಿ ಇರುವ ವಿಷಯ ಡಿಕೆಗೆ ಗೊತ್ತಾಗುತ್ತೆ. ಕೂಡಲೆ ಅಂಜಲಿಯನ್ನ ನೋಡಲು ಆಸ್ಪತ್ರೆಗೆ ಹೋಗುತ್ತಾನೆ ಡಿಕೆ.

ಅಂಜಲಿ ಮತ್ತು ಅವಳ ಅಕ್ಕ ಉಪಾಯ ಮಾಡಿ ಅವಳ ಜಾಗಕ್ಕೆ ಬೇರೆಯೊಬ್ಬರನ್ನ ಮಲಗಿಸಿ ಡಿಕೆ ಕಣ್ಣಿಂದ ತಪ್ಪಿಸಿಕೊಳ್ಳುತ್ತಾರೆ. ಅಂಜಲಿ ಆಸ್ಪತ್ರೆಯಿಂದ ಮನೆಗೆ ಬರುವಷ್ಟರಲ್ಲಿ ಕಿಶನ್ ತಾಯಿ ಅವಳ ಮನೆಗೆ ಬಂದು, ಮದುವೆ ಬಗ್ಗೆ ಪ್ರಸ್ತಾಪ ಮಾಡ್ತಾರೆ.

ಇತ್ತ ಅಂಜಲಿಗೆ ನಿಜ ಹೇಳಲಾಗದೇ ಕೊರಗುತ್ತಾಳೆ. ''ತನಗೆ ಮದುವೆಯಾಗಿದೆ'' ಎಂದು ಅಂಜಲಿ ಹೇಳಿದ್ರೂ, ಅದನ್ನ ಕಿಶನ್ ಕೇಳುವುದಿಲ್ಲ. "ನಿಮ್ಮ ಗಂಡನನ್ನ ನನ್ನ ಮುಂದೆ ತಂದು ನಿಲ್ಲಿಸಿ, ಆಗ ನಾನು ಒಪ್ಪುವೆ" ಎಂದು ಕಿಶನ್ ಹೇಳುತ್ತಾನೆ.

Kanmani serial: Anjali plans to leave the city

ಇತ್ತ ಸುಧಾ ಕೈಗೆ ಭಾಸ್ಕರ್ ಹಣ ಸಮೇತ ಸಿಕ್ಕಿಹಾಕಿಕೊಳ್ಳುತ್ತಾನೆ. ಆ ಹಣವನ್ನ ಡಿಕೆ ಕೈಗೆ ಒಪ್ಪಿಸುವ ಸುಧಾ ತನ್ನ ಗಂಡನ ಬಗ್ಗೆ ಸತ್ಯ ಹೇಳುವುದಿಲ್ಲ. ಅಪರಿಚಿತ ವ್ಯಕ್ತಿ ತನ್ನ ಕೋಣೆಯಲ್ಲಿ ಇಷ್ಟೊಂದು ಹಣ ಇಡೋದಕ್ಕೆ ಸಾಧ್ಯ ಇಲ್ಲ. ಇದರಲ್ಲಿ ತನ್ನ ಮನೆಯವರ ಕೈವಾಡ ಇದೆ ಎಂದು ಅವರನ್ನ ಕಂಡುಹಿಡಿಯಲು ಡಿಕೆ ಮುಂದಾಗುತ್ತಾನೆ.

ಇನ್ನೊಂದು ಕಡೆ ಕಿಶನ್ ಚಿಕ್ಕಪ್ಪ "ಡಿಕೆ ಎದುರು ಬಂದು ನಿಲ್ಲಿ, ನನ್ನ ಪ್ರಾಣ ಉಳಿಸಿ" ಎಂದು ಪದೇ ಪದೇ ಅಂಜಲಿಯನ್ನ ಕಾಡುತ್ತಾರೆ. ಕಿಶನ್ ನಿಂದ, ಅವನ ಚಿಕ್ಕಪ್ಪನಿಂದ ತಪ್ಪಿಸಿಕೊಳ್ಳಲು ಊರು ಬಿಟ್ಟು ಹೋಗಲು ನಿರ್ಧರಿಸುತ್ತಾಳೆ ಅಂಜಲಿ. ಅಷ್ಟರಲ್ಲಿ ಡಿಕೆ ಅಸ್ಸಿಸ್ಟೆಂಟ್ ಅಂಜಲಿಯನ್ನ ನೋಡಿ ಕಾವ್ಯ ಎಂದು ಗುರುತಿಸಿ, ಡಿಕೆಗೆ "ಕಾವ್ಯ ಬದುಕಿದ್ದಾರೆ" ಎಂದು ವಿಷಯ ತಿಳಿಸುತ್ತಾನೆ.

ಹಾಗಾದ್ರೆ ಸಿಕ್ಕ ಸುಳಿವು ಹಿಡಿದು ಅಂಜಲಿ ಇರೋ ಜಾಗಕ್ಕೆ ಬಂದುಬಿಡ್ತಾನಾ ಡಿಕೆ? ತಪ್ಪದೇ ವೀಕ್ಷಿಸಿ ಇವತ್ತಿನ ಕುತೂಹಲ ಭರಿತ ಸಂಚಿಕೆ. ಕಣ್ಮಣಿ ರಾತ್ರಿ 10ಕ್ಕೆ.

More from Filmibeat

English summary
Udaya TV's popular serial 'Kanmani' written update: Anjali plans to leave the city.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X