ಒಂದ್ಕಡೆ ಬೆದರಿಕೆ, ಇನ್ನೊಂದು ಕಡೆ ಮೋಸಕ್ಕೆ ಸಂಚು: ಪಾಪ ಡಿಕೆ.!
ಕಿಶನ್ ಗೆ ಸಿಕ್ಕಿರುವ ಪ್ರಾಜೆಕ್ಟ್ 'ಡಿಕೆ'ದು ಎಂದು ತಿಳಿದ ಭಾವನ ಅಂಜಲಿಗೆ, "ಕಿಶನ್ ಆಫೀಸ್ ಗೆ ಹೋಗಬೇಡ, ಡಿಕೆ ಕೈಗೆ ಸಿಕ್ಕರೆ ಮತ್ತೆ ನಿನ್ನ ಜೀವನ ನರಕ ಆಗುತ್ತೆ'' ಎಂಬ ಸಲಹೆ ಕೊಡುತ್ತಾಳೆ. ಆಫೀಸ್ ಗೆ ಹೋಗದಿದ್ದರೆ ತನ್ನನ್ನ ನಂಬಿರೋ ಕಿಶನ್ ಗೆ ಬೇಸರವಾಗುತ್ತೆ, ಹೋದ್ರೆ ತನ್ನನ್ನ ಡಿಕೆ ನೋಡಿಬಿಡ್ತಾನೆ ಎಂಬ ಗೊಂದಲಕ್ಕೀಡಾಗುತ್ತಾಳೆ ಅಂಜಲಿ.
ಇತ್ತ 'ಡಿಕೆ'ಗೆ ಕರೆ ಮಾಡುವ ಅಪರಿಚಿತ ಹೆಂಗಸು, ''ಬೆಂಗಳೂರಿಗೆ ಬರಬಾರದು, ಕಾವ್ಯ ಗಾರ್ಮೆಂಟ್ಸ್ ಎಕ್ಸಿಬಿಷನ್ ನಡೆಸಬಾರದು, ಅಪ್ಪತಪ್ಪಿ ಬೆಂಗಳೂರಿಗೆ ಬಂದರೆ ತೊಂದರೆ ಅನುಭವಿಸಬೇಕಾಗುತ್ತೆ'' ಎಂದು ಅವನಿಗೆ ಎಚ್ಚರಿಕೆ ಕೊಡುತ್ತಾಳೆ. ಅದಕ್ಕೆ "ಬೆಂಗಳೂರಿಗೆ ಬಂದೇ ಬರುತ್ತೇನೆ, ಏನು ಮಾಡಿಕೊಳ್ತೀಯೋ ಮಾಡು" ಎಂದು ಸವಾಲು ಹಾಕುತ್ತಾನೆ.
ಅಕ್ಷರ ಜೊತೆ ಸೇರಿ ಭಾವ ಭಾಸ್ಕರ್ ಖಾಲಿ ಆಸ್ತಿ ಪತ್ರದ ಮೇಲೆ ಉಪಾಯವಾಗಿ ಡಿಕೆ ಸಹಿ ಮಾಡಿಸಿಕೊಂಡಿರುತ್ತಾನೆ. ಅದನ್ನ ಬಳಸಿ ಡಿಕೆಗೆ ಮೋಸ ಮಾಡೋಕೆ ಯತ್ನಿಸುತ್ತಾನೆ.

ಪದೇ ಪದೇ ತನಗೆ ಕರೆ ಮಾಡುತ್ತಿರುವ ಕಿಶನ್ ಗೆ ಏನು ಹೇಳಬೇಕು ಎಂದು ಗೊತ್ತಾಗದೇ ಇದ್ದಾಗ ಭಾವನ ಅವಳಿಗೆ ಧೈರ್ಯ ತುಂಬುತ್ತಾಳೆ. ಅದೇ ಸಮಯಕ್ಕೆ ಅಂಜಲಿ ಜೊತೆ ಕೆಲಸ ಮಾಡುವ ವ್ಯಕ್ತಿಯೊಬ್ಬ ಬಂದು ಪ್ರಾಜೆಕ್ಟ್ ನಿಂದ ತಮಗೆ ಒಳ್ಳೆಯದಾಗಿದೆ ಎಂದು ಅವಳಿಗೆ ಧನ್ಯವಾದ ಹೇಳ್ತಾನೆ. ಆಗ ಡಿಕೆ ಪ್ರಾಜೆಕ್ಟ್ ಕೈಬಿಡಬೇಕು ಅಂದುಕೊಂಡಿದ್ದ ಅಂಜಲಿಗೆ ಸಾಥ್ ಕೊಡುವ ಭಾವನ ಕಿಶನ್ ಜೊತೆ ಕೆಲಸ ಮುಂದುವರೆಸುವಂತೆ ಹೇಳ್ತಾಳೆ. ಆದ್ರೆ, ನೆಪಹೇಳಿ ಕಿಶನ್ ನಿಂದ ತಪ್ಪಿಸಿಕೊಳ್ತಾಳೆ ಅಂಜಲಿ.
ಜಗದೀಶ್ ತನ್ನ ಹೆಂಡತಿ ಡಿಕೆ ಕೊಟ್ಟ ಚೆಕ್ ನ ಇನ್ನೂ ಬ್ಯಾಂಕ್ ಗೆ ಹಾಕದೇ ಇರುವುದಕ್ಕೆ ಖುಷಿ ಪಡುತ್ತಾನೆ. ಒಂದು ವೇಳೆ ಚೆಕ್ ಬ್ಯಾಂಕ್ ಗೆ ಹಾಕಿದ್ದರೇ, ಡಿಕೆಗೆ ತನ್ನ ವಿಳಾಸ ತಿಳಿಯುತ್ತಿತ್ತು ಎಂದು ಭಯಬೀಳುತ್ತ, ಹೇಗಾದರೂ ಮಾಡಿ ಆ ಚೆಕ್ ನ ಡಿಕೆ ಆಫೀಸ್ ಗೆ ತಲುಪಿಸಬೇಕು ಎಂದು ಪ್ಲ್ಯಾನ್ ಮಾಡ್ತಾನೆ.
ಇತ್ತ ಸನ್ಯಾಸಿ ವೇಷ ಧರಿಸಿ ಡಿಕೆ ಆಫೀಸ್ ಬಳಿ ಬರುತ್ತಾನೆ. ಮುಂದೇನಾಗುತ್ತೆ.? ತಪ್ಪದೇ ವೀಕ್ಷಿಸಿ ಇವತ್ತಿನ ಕುತೂಹಲ ಭರಿತ ಸಂಚಿಕೆ. ಕಣ್ಮಣಿ ರಾತ್ರಿ 10ಕ್ಕೆ.


Click it and Unblock the Notifications











