ಡಿಕೆ ಹಾಗೂ ಅಂಜಲಿ ಮುಖಾಮುಖಿ ಆಗ್ತಾರಾ.? ಇಂದಿನ 'ಕಣ್ಮಣಿ'ಯಲ್ಲಿ ಹೊಸ ತಿರುವು

By Harshitha

ತನಗೆ ಸುಳ್ಳು ಹೇಳಿ ಯಾಮಾರಿಸಿದ ಜಗದೀಶ್ ಬಗ್ಗೆ ಡಿಕೆಗೆ ಯಾವುದೇ ಸುಳಿವು ಸಿಕ್ಕಿಲ್ಲ. ತನ್ನ ಪ್ರಯತ್ನ ನಿಲ್ಲಿಸದೇ ಹುಡುಕಾಟ ಮುಂದುವರೆಸುತ್ತಿರುವ ಡಿಕೆಗೆ, ಅವನ ಅಕ್ಕ "ಸತ್ತಿರುವ ಕಾವ್ಯ ಹೇಗೆ ಡಿಸೈನ್ ಮಾಡೋಕೆ ಸಾಧ್ಯ? ಅವಳನ್ನ ಮರೆತು ಇನ್ನೊಂದು ಮದುವೆ ಆಗು" ಎಂದು ಸಲಹೆ ಕೊಡುತ್ತಾಳೆ.

ಕಿಶನ್ ಅತ್ತೆ ಮಗಳು ಕೀರ್ತಿ, ಅಂಜಲಿಯನ್ನ ಭೇಟಿಯಾಗುತ್ತಾಳೆ. ಕಿಶನ್ ಪರಿಸ್ಥಿತಿಯನ್ನ ಹೇಳಿ, ''ಅವನ ಪ್ರೀತಿಯನ್ನ ಒಪ್ಪಿಕೊಳ್ಳಿ'' ಎಂದು ಕೇಳಿಕೊಳ್ಳುತ್ತಾಳೆ. ಆದರೆ ಅದಕ್ಕೆ ಅಂಜಲಿ ನಿರಾಕರಿಸುತ್ತಾಳೆ. ಆದರೆ, ಹಠ ಬಿಡದ ಕೀರ್ತಿ ''ಇಬ್ಬರನ್ನ ಒಂದು ಮಾಡೇ ಮಾಡ್ತೀನಿ'' ಎಂದು ಅಂಜಲಿಗೆ ಸವಾಲು ಹಾಕುತ್ತಾಳೆ.

ಅಂಜಲಿಗೆ ತನ್ನ ಸಂಕಟವನ್ನ ಹೇಳಿಕೊಳ್ಳುವ ಜಗದೀಶ್, ಅವಳನ್ನ ಡಿಕೆ ಎದುರು ನಿಲ್ಲಿಸಲು ಒಪ್ಪಿಸುತ್ತಾನೆ. ಆದರೆ ಅಂಜಲಿಗೆ ಜಗದೀಶ್ ಹೇಳುತ್ತಿರುವ ವ್ಯಕ್ತಿ ಡಿಕೆ ಅನ್ನುವುದು ತಿಳಿದಿರುವುದಿಲ್ಲ.

Kanmani serial: Will Anjali meet DK.?

ಕುಡಿದ ಮತ್ತಲ್ಲಿ ಭಾಸ್ಕರ್ ಕಳ್ಳತನ ಮಾಡಲು ಹೋಗಿ ಡಿಕೆ ಕೈಗೆ ಸಿಕ್ಕಿಹಾಕಿಕೊಳ್ಳುತ್ತಾನೆ. ಗಂಡ ಮಾಡಿದ ತಪ್ಪಿಗೆ ಡಿಕೆ ಬಳಿ ಶೋಭ ಕ್ಷಮೆ ಕೇಳ್ತಾಳೆ.

ಇತ್ತ ಅಂಜಲಿ ಮನೆಗೆ ಬರುವ ಕಿಶನ್ ಮ್ಯಾನೇಜರ್, ಖಿನ್ನತೆಯಲ್ಲಿರುವ ಕಿಶನ್ ನ ಹೊರತಂದು ತಮಗೆ ಬಂದಿರುವ ಹೊಸ ಪ್ರಾಜೆಕ್ಟ್ ಕೈತಪ್ಪಿ ಹೋಗದಂತೆ ನೋಡಿಕೊಳ್ಳಿ ಎಂದು ಅವಳ ಬಳಿ ಬೇಡಿಕೊಳ್ಳುತ್ತಾರೆ. ಅವರ ಬೇಡಿಕೆಯಂತೆ ಕಿಶನ್ ಮನೆಗೆ ಬರಲು ಒಪ್ಪುತ್ತಾಳೆ ಅಂಜಲಿ. ಈ ವಿಷಯ ಕೇಳಿ ಅವಳ ಅಕ್ಕ ಖುಷಿ ಪಡುತ್ತಾಳೆ.

ಹಾಗಾದ್ರೆ ಅಂಜಲಿ ಕಿಶನ್ ಮನೆಗೆ ಹೋಗ್ತಾಳಾ? ಅವನ ಜೊತೆ ಮತ್ತೆ ಕೆಲಸ ಮಾಡ್ತಾಳಾ? ಜಗದೀಶ್ ನನ್ನ ಪಾರು ಮಾಡಲು ಡಿಕೆ ಎದುರು ಅಂಜಲಿ ಬರ್ತಾಳಾ? ವೀಕ್ಷಿಸಿ ಇವತ್ತಿನ ಕುತೂಹಲಭರಿತ ಸಂಚಿಕೆ. 'ಕಣ್ಮಣಿ' ರಾತ್ರಿ 10ಕ್ಕೆ

More from Filmibeat

English summary
Udaya TV's popular serial 'Kanmani' written update: Will Anjali meet DK.?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X