For Quick Alerts
  ALLOW NOTIFICATIONS  
  For Daily Alerts

  ಡಿಕೆ ಮುಂದೆ ಜಗದೀಶ್ ಬಣ್ಣ ಬಯಲಾಗುತ್ತಾ.? 'ಕಣ್ಮಣಿ'ಯಲ್ಲಿ ಇಂದು ಏನಾಗ್ಬಹುದು.?

  By Harshitha
  |

  ಕಾವ್ಯ ಮಹಲ್ ಕಾಂಟ್ರ್ಯಾಕ್ಟ್ ಪಡೆಯಲು, ಅಂಜಲಿ ಮಾಡಿದ ಡಿಸೈನ್‍ ನ ಬೇರೆಯವರು ಮಾಡಿದ್ದು ಎಂದು ಸುಳ್ಳು ಹೇಳಿರ್ತಾನೆ ಜಗದೀಶ್. ಅಡುಗೆ ಕಾರ್ಯಕ್ರಮದ ನಿರೂಪಕಿಯನ್ನ ಡಿಸೈನರ್ ಎಂದು ಡಿಕೆಗೆ ಪರಿಚಯಿಸಿರುತ್ತಾನೆ.

  ಡಿಕೆ ಮನೆಯ ಕೆಲಸದವನು ಟಿವಿಯಲ್ಲಿ ಅಡುಗೆ ಕಾರ್ಯಕ್ರಮವನ್ನ ನೋಡುತ್ತಿರುವಾಗ ಡಿಕೆಗೆ ಸತ್ಯ ಗೊತ್ತಾಗುತ್ತದೆ. ಹಾಗೆ ಕಾರ್ಯಕ್ರಮ ನಡೆಸಿಕೊಡುತ್ತಿದ್ದ ಆ ಹುಡುಗಿಯನ್ನ ತನ್ನ ಮನೆಗೆ ಕರೆಸಿಕೊಂಡು, ವಿಚಾರಣೆ ನಡೆಸುತ್ತಾನೆ. 'ಜಗದೀಶ್ ದುಡ್ಡು ಕೊಟ್ಟು ನಟಿಸುವಂತೆ ಹೇಳಿದರು' ಎಂದು ಆಕೆ ಬಾಯಿಬಿಡುತ್ತಾಳೆ.

  ಉದಯ ಟಿವಿಯಲ್ಲಿ ಬರಲಿದೆ ಹೊಸ ಧಾರಾವಾಹಿ 'ಕಣ್ಮಣಿ'ಉದಯ ಟಿವಿಯಲ್ಲಿ ಬರಲಿದೆ ಹೊಸ ಧಾರಾವಾಹಿ 'ಕಣ್ಮಣಿ'

  ಡಿಕೆ ಕೈಗೆ ಕುಕ್ಕು ಸಿಕ್ಕಿಹಾಕಿಕೊಂಡಿರುವುದು ಜಗದೇಶ್ ಗೆ ತಿಳಿದು ಭಯ ಬೀಳುತ್ತಾನೆ. ತನ್ನನ್ನ ಯಾಮಾರಿಸಿದ ಜಗದೀಶ್ ಮೇಲೆ ಕೆಂಡಮಂಡಲನಾಗುತ್ತಾನೆ ಡಿಕೆ. ಇತ್ತ ಡಿಕೆ ಕೈಯಿಂದ ಹೇಗೆ ತಪ್ಪಿಸಿಕೊಳ್ಳುವುದು ಎಂದು ಜಗದೀಶ್ ಯೋಚಿಸುತ್ತಾನೆ.

  ಕಾವ್ಯಳಾಗಿ ಡಿಕೆ ಜೊತೆ ಕಳೆದ ಜೀವನವನ್ನ ನೆನಪಿಸಿಕೊಂಡು ಕೊರಗುವ ಅಂಜಲಿ, ಇದಕ್ಕೆಲ್ಲ ಕಾರಣ ಕಿಶನ್ ಎಂದು ಅವನನ್ನ ಮನಸ್ಸಲ್ಲೇ ಬೈದುಕೊಳ್ಳುತ್ತಾಳೆ. ಹಾಗೆ ಅವನ ಪರವಾಗಿ ನಿಂತ ತನ್ನ ತಾಯಿ, ಅಕ್ಕನ ಮೇಲೆ ರೇಗುತ್ತಾಳೆ. ಅವರ ಜೊತೆ ಮಾತು ಬಿಡುತ್ತಾಳೆ.

  "ಜಗದೀಶ್ ಯಾಕೆ ಸುಳ್ಳು ಹೇಳಿದ, ಆ ಡಿಸೈನ್ಸ್ ಕಾವ್ಯ ಮಾಡಿದಂತೆ ಇವೆಯಲ್ಲ? ಅವನು ಸಿಕ್ಕರೇ ಎಲ್ಲ ವಿಷಯ ಗೊತ್ತಾಗುತ್ತೆ'' ಎಂದುಕೊಂಡು ಅವನನ್ನ ಹುಡುಕಲು ಮುಂದಾಗುತ್ತಾನೆ ಡಿಕೆ.

  ಡಿಕೆ ಕೈಗೆ ಜಗದೀಶ್ ಸಿಕ್ಕಿ ಹಾಕಿಕೊಳ್ತಾನಾ? ಜಗದೀಶ್, ಡಿಕೆ ಕೈಯಿಂದ ತಪ್ಪಿಸಿಕೊಳ್ಳೋಕೆ ಅಂಜಲಿಯನ್ನ ಅವನ ಎದುರು ನಿಲ್ಲಿಸ್ತಾನಾ? ಇವತ್ತಿನ ಸಂಚಿಕೆಯನ್ನ ತಪ್ಪದೇ ನೋಡಿ. 'ಕಣ್ಮಣಿ' ರಾತ್ರಿ 10 ಕ್ಕೆ.

  English summary
  Udaya TV's popular serial 'Kanmani' written update: Will Jagadeesh get caught.?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X