ಪತ್ನಿ ಗಾಯತ್ರಿ ಬಗ್ಗೆ ನಟ ಅನಂತ್ ನಾಗ್ ಬಿಚ್ಚುಮಾತು
ಒಂದ್ಕಾಲದಲ್ಲಿ ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟಿಯಾಗಿದ್ದ ಗಾಯತ್ರಿ ತೆರೆ ಹಿಂದಕ್ಕೆ ಸರಿದು ದಶಕಗಳೇ ಉರುಳಿವೆ. ಚಂದನವನದ ಚಂದದ ಹೀರೋ ನಟ ಅನಂತ್ ನಾಗ್ ಕೈಹಿಡಿದ ಬಳಿಕ ಗಾಯತ್ರಿ ಬಣ್ಣ ಹಚ್ಚಲೇ ಇಲ್ಲ. ಈಗಲೂ ಅವರು ಕ್ಯಾಮರಾ ಮುಂದೆ ಕಾಣಿಸಿಕೊಳ್ಳುವುದೇ ಇಲ್ಲ.
ಇದಕ್ಕೆ ಕಾರಣ ಏನು ಅಂತ ನಟ ಅನಂತ್ ನಾಗ್ ಬಾಯ್ಬಿಟ್ಟಿದ್ದಾರೆ. 'ಬಿಗ್ ಬಾಸ್' ವೇದಿಕೆಯ ಕಿಚ್ಚ ಸುದೀಪ್ ರವರ Super Sunday with Sudeep ಕಾರ್ಯಕ್ರಮದಲ್ಲಿ ಭಾಗವಹಿಸಿದ ನಟ ಅನಂತ್ ನಾಗ್, ಪತ್ನಿ ಗಾಯತ್ರಿ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
ಗಾಯತ್ರಿ ಮತ್ತು ಅನಂತ್ ನಾಗ್ ನಡುವೆ ಲವ್ ಆಗಿದ್ದು ಹೇಗೆ ಅನ್ನುವ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ. ಅದನ್ನ ಅನಂತ್ ನಾಗ್ ಮಾತುಗಳಲ್ಲೇ ಓದಿ....ಕೆಳಗಿರುವ ಸ್ಲೈಡ್ ಗಳಲ್ಲಿ.....

ತುಂಬಾ Shy
''ನನಗೆ ತುಂಬಾ shyness. ಗಾಯತ್ರಿ ಸಿಕ್ಕಾಗ ಅವಳ ವಯಸ್ಸು 24. ನನ್ನ ವಯಸ್ಸು 38. ನನಗಿಂತ 14 ವರ್ಷ ಚಿಕ್ಕವಳು ಆಕೆ. 30 ವರ್ಷದಿಂದ ಜೊತೆಗಿದ್ದೇವೆ.'' - ಅನಂತ್ ನಾಗ್

ಪ್ರಪೋಸ್ ಮಾಡಿದ್ದು ಹೇಗೆ?
''ಐ ಲವ್ ಯು ಅನ್ನೋ ತರಹ ನಾನು ಹೇಳಲೇ ಇಲ್ಲ. I waited for a chance. ಯಾವುದೋ ಫಿಲ್ಮ್ ಶೂಟಿಂಗ್ ಇತ್ತು. ನಂದಿ ಬೆಟ್ಟಕ್ಕೆ ಹೋಗಿದ್ವಿ. ಅವಳನ್ನ ನನ್ನ ಕಾರ್ ನಲ್ಲೇ ಕೂರಿಸಿಕೊಂಡು ವಾಪಸ್ ಬರ್ತಾಯಿದ್ದೆ. ಅವಳಿಗೆ ಆಗ ಕೇಳಿದ್ದು. How about idea of you marrying me? ಅಂತ.'' - ಅನಂತ್ ನಾಗ್

ಆಮೇಲೆ ಲವ್ ಮಾಡಿದ್ದು.!
''ಲವ್-ಗಿವ್ ಅಂತ ಏನೂ ಹೇಳಲೇ ಇಲ್ಲ. ಡೈರೆಕ್ಟ್ ಆಗಿ ಮದುವೆ ವಿಚಾರನೇ ಎತ್ತುಬಿಟ್ಟೆ. Then I learnt to love her'' - ಅನಂತ್ ನಾಗ್

ಮದುವೆ ಆಗಿದ್ದು ಯಾವಾಗ?
''1987 ನಲ್ಲಿ ಮದುವೆ ಆಯ್ತು. ಮದುವೆ ಆದ್ಮೇಲೆ ನನ್ನ ಆಕ್ಟ್ ಮಾಡು ಅಂತ ಹೇಳ್ಬಾರ್ದು ಅಂತ ಹೇಳಿದ್ಲು. ನಾನು ನಟಿಸುವುದಿಲ್ಲ ಅಂತ ಹೇಳಿದ್ಲು. And she has kept her word.'' - ಅನಂತ್ ನಾಗ್

ಪತ್ನಿಯ ಪ್ರೀತಿ
''ಅವಳು ನನ್ನ ಪ್ರೀತಿಸಿದಷ್ಟು, ಅವಳು ನನಗೆ ಬೆಂಬಲವಾಗಿ ನಿಂತಷ್ಟು ನಾನು ಅವಳಿಗೆ ನಿಲ್ತೀನೋ ಇಲ್ವೋ ಅನ್ಸುತ್ತೆ.'' - ಅನಂತ್ ನಾಗ್

ಪುತ್ರಿ ಅದಿತಿ ಬಗ್ಗೆ
''ಅದಿತಿ ಮೈ ವೀಕ್ನೆಸ್. ಶೀ ಈಸ್ ಅವರ್ ಒನ್ಲೀ ಡಾಟರ್. ಮದುವೆ ಆದ್ಮೇಲೆ ನಮಗೆ ಈಗ ಅನ್ಸುತ್ತೆ ತಪ್ಪು ಮಾಡಿದ್ವಿ. ಇನ್ನೊಂದು ಮಗು ಬೇಕಿತ್ತು ಅಂತ. ಈಗ ನಾವು ವಾಪಸ್ ಹೋಗುವುದಕ್ಕೆ ಆಗಲ್ಲ.'' - ಅನಂತ್ ನಾಗ್ [ವಿವೇಕ್ ಜೊತೆ ಅನಂತ್ ನಾಗ್ ಪುತ್ರಿ ಪ್ರೇಮವಿವಾಹ]

ಸುದೀಪ್ ಸಂದರ್ಶನಕ್ಕೂ ಮುನ್ನ.....
ಏನೇನೋ ಪ್ರಶ್ನೆ ಕೇಳಿ ಸುಮ್ನೆ ಯಾಕೆ ಬೈಸಿಕೊಳ್ಳಬೇಕು ಅಂತ ಸಂದರ್ಶನಕ್ಕೂ ಮುನ್ನ ಗಾಯತ್ರಿ ಜೊತೆ ಕೂತು ಮಾತಾಡಿ ಅನಂತ್ ನಾಗ್ ಗೆ ಕೇಳಬೇಕಾದ ಪ್ರಶ್ನೆಗಳನ್ನ ಪ್ರಿಪೇರ್ ಮಾಡಿಕೊಂಡರಂತೆ ಕಿಚ್ಚ ಸುದೀಪ್.

ಸುದೀಪ್ ಗೆ ನರ್ವಸ್.!
''ಯಾರ್ ಮುಂದೆ ನರ್ವಸ್ ಆಗ್ತೀನೋ ಇಲ್ವೋ, ನಿಮ್ಮ ಮುಂದೆ ಮಾತ್ರ ನರ್ವಸ್ ಆಗ್ತೀನಿ'' ಅಂತ ಅನಂತ್ ನಾಗ್ ಗೆ ಕಿಚ್ಚ ಸುದೀಪ್ ಹೇಳಿದ್ರು.


Click it and Unblock the Notifications











