ಕಿರುತೆರೆಯಲ್ಲಿ ದಾಖಲೆ ನಿರ್ಮಿಸಿದ ವಿಷ್ಣುವರ್ಧನ್ ಅಳಿಯ: ಎರಡನೇ ವಾರವೂ ನಂ.1

ಕನ್ನಡ ಕಿರುತೆರೆಯಲ್ಲಿ ಸದ್ಯ ಜೊತೆ ಜೊತೆಯಲಿ ಧಾರಾವಾಹಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಧಾರಾವಾಹಿ ಪ್ರಾರಂಭವಾದಾಗಿನಿಂದನೂ ನಂ.1 ಸ್ಥಾನದಲ್ಲಿಯೆ ಮುಂದುವರೆಯುತ್ತಿದೆ. ಕೆಲವೆ ಕೆಲವು ದಿನಗಳಲ್ಲಿ ಅತೀ ಹೆಚ್ಚು ಪ್ರೇಕ್ಷಕರ ಮನಗೆಲ್ಲುವ ಮೂಲಕ ಉಳಿದೆಲ್ಲ ಧಾರಾವಾಹಿಗಳನ್ನು ಹಿಂದಿಕ್ಕಿ ಟಾಪ್ ಒನ್ ಸ್ಥಾನ ಅಲಂಕರಿಸುವ ಮೂಲಕ ಜೊತೆ ಜೊತೆಯಲಿ ದಾಖಲೆ ನಿರ್ಮಿಸಿದೆ.

ಧಾರಾವಾಹಿಯ ಹೀರೋ ಸಾಹಸಸಿಂಹ ವಿಷ್ಣುವರ್ಧನ್ ಅಳಿಯ ಅನಿರುದ್ಧ ಅಭಿನಯ, ಲುಕ್ ಮತ್ತು ಸ್ಟೈಲ್ ಗೆ ಕಿರುತೆರೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಧಾರಾವಾಹಿಯ ಪ್ರತಿಯೊಂದು ಪಾತ್ರವು ಪ್ರೇಕ್ಷಕರ ಮನಗೆದ್ದಿದೆ. ಪ್ರೇಕ್ಷಕರು ತಂಬ ಇಷ್ಟಪಟ್ಟಿರುವ ಜೊತೆ ಜೊತೆಯಲಿ ಎಲ್ಲಾ ಸಿರಿಯಲ್ ಗಳನ್ನು ಹಿಂದಿಕ್ಕಿ ನಂ.1 ಸ್ಥಾನವನ್ನೆ ಕಾಪಾಡಿಕೊಂಡಿರುವುದು ವಿಶೇಷ.

ಎರಡನೇ ವಾರವು ನಂ.1

ಎರಡನೇ ವಾರವು ನಂ.1

ಧಾರಾವಾಹಿ ಪ್ರಾರಂಭವಾದಗಿನಿಂದನೂ ಭರ್ಜರಿಯಾಗಿ ಸದ್ದು ಮಾಡುತ್ತಿರುವ ಜೊತೆ ಜೊತೆಯಲಿ ಮೊದಲ ವಾರದಲ್ಲೆ ನಂ.1 ಸ್ಥಾನಕ್ಕೆ ಏರಿತ್ತು. ಮೊದಲ ವಾರದಲ್ಲೇನೊ ಟಾಪ್ ನಲ್ಲಿ ಮೆರೆದ ಧಾರಾವಾಹಿ ಎರಡನೇ ವಾರದ ಕಥೆ ಏನಾಗಬಹುದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇತ್ತು. ಆದ್ರೆ ಎರಡನೇ ವಾರದಲ್ಲೂ ನಂ.1 ಸ್ಥಾನವನ್ನು ಕಾಪಾಡಿಕೊಂಡಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಂತಸ ವ್ಯಕ್ತಪಡಿಸಿದೆ ಧಾರಾವಾಹಿತಂಡ.

ಕಿರುತೆರೆಯಲ್ಲಿ ಮಿಂಚಿದ ಅನಿರುದ್ಧ

ಕಿರುತೆರೆಯಲ್ಲಿ ಮಿಂಚಿದ ಅನಿರುದ್ಧ

ಈ ಮೊದಲು ಅನಿರುದ್ಧ ಬೆಳ್ಳಿತೆರೆ ಮೇಲೆ ಮಿಂಚುತ್ತಿದ್ದರು. ಆದ್ರೆ ಸಿನಿಮಾದಲ್ಲಿ ಅನಿರುದ್ಧ್ ಗೆ ಹೇಳಿಕೊಳ್ಳುವಷ್ಟು ಯಶಸ್ಸು ಸಿಕ್ಕಿಲ್ಲ. ಆದ್ರೆ ಕಿರುತೆರೆಯಲ್ಲಿ ಅನಿರುದ್ಧಗೆ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿದೆ. ಪ್ರೇಕ್ಷರು ಅದ್ದೂರಿ ಸ್ವಾಗತ ಮಾಡಿ ಹೃದಯದಲ್ಲಿಟ್ಟು ಆರಾದಿಸುತ್ತಿದ್ದಾರೆ. ಸಾಕಷ್ಟು ಸಿನಿಮಾಗಳನ್ನು ಮಾಡಿದ್ರು ಅನಿರುದ್ಧಗೆ ಈ ಯಶಸ್ಸು ಬೆಳ್ಳೆಪರದೆ ಮೇಲೆ ಸಿಕ್ಕಿರಲಿಲ್ಲ. ಆದ್ರೀಗ ಕಿರುತೆರೆಯಲ್ಲಿ ಒಂದೆ ವಾರದಲ್ಲೆ ದಾಖಲೆ ನಿರ್ಮಿಸಿದ್ದಾರೆ.

ಆರ್ಯವರ್ಧನ್ ಗೆ ಪ್ರೇಕ್ಷಕರು ಫಿದಾ

ಆರ್ಯವರ್ಧನ್ ಗೆ ಪ್ರೇಕ್ಷಕರು ಫಿದಾ

ಈ ಧಾರಾವಾಹಿಯಲ್ಲಿ ಅನಿರುದ್ಧ ಆರ್ಯವರ್ಧನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 45 ವರ್ಷದ ಆರ್ಯವರ್ಧನ್ ದೊಡ್ಡ ಉದ್ಯಮಿಯಾಗಿ ಮಿಂಚಿದ್ದಾರೆ. ಅನಿರುದ್ಧಗೆ ಜೋಡಿಯಾಗಿ ನಟಿ ಮೇಘನಾ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಸಿರಿಯಲ್ ನಲ್ಲಿ 20 ವರ್ಷದ ಅನು ಪಾತ್ರ ನಿಭಾಯಿಸುತ್ತಿದ್ದಾರೆ. 45 ವರ್ಷದ ಆರ್ಯವರ್ಧನ್ ಮತ್ತು 20 ವರ್ಷದ ಅನು ನಡುವಿನ ಪ್ರೀತಿ ಪ್ರೇಮದ ಕಥೆ ಈ ಧಾರಾವಾಹಿಯಲ್ಲಿದೆ.

ಆರೂರು ಜಗದೀಶ್ ನಿರ್ದೇಶನ

ಆರೂರು ಜಗದೀಶ್ ನಿರ್ದೇಶನ

ಧಾರಾವಾಹಿ ಲೋಕವೆ ನಿಬ್ಬೆರಗಾಗುವಂತೆ ಮಾಡಿರುವ ಜೊತೆ ಜೊತೆಯಲಿ ಆರೂರು ಜಗದೀಶ್ ಸಾರಥ್ಯದಲ್ಲಿ ಮೂಡಿಬರುತ್ತಿದೆ. ಶುಭವಿವಾಹ, ಜೋಡಿಹಕ್ಕಿಯಂತಹ ಧಾರಾವಾಹಿ ನಿರ್ದೇಶನ ಮಾಡಿದ್ದ ಆರೂರು ಜಗದೀಶ್ ಈಗ ಜೊತೆ ಜೊತೆಯಲಿ ಧಾರಾವಾಹಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಪ್ರೋಮೋ ಮೂಲಕವೆ ಕಿರುತೆರೆ ಪ್ರೇಕ್ಷಕರ ಮನಸೆಳೆದಿದ್ದ ಜೊತೆ ಜೊತೆಯಲಿ ಧಾರಾವಾಹಿಯನ್ನು ಅಭಿಮಾನಿಗಳು ವಿಶೇಷ ಆಸಕ್ತಿ ತೋರಿಸಿ ಮುಗಿಬಿದ್ದು ನೋಡುತ್ತಿದ್ದಾರೆ.

More from Filmibeat

English summary
Kannada actor Anirudh starrer Jote Joteyali series maintained its No. 1 position this week.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X