For Quick Alerts
  ALLOW NOTIFICATIONS  
  For Daily Alerts

  'ತುತ್ತಾ ಮುತ್ತಾ' ಕಾರ್ಯಕ್ರಮದಲ್ಲಿ ಅರುಣ್ ಸಾಗರ್ ಮತ್ತು ಕುಟುಂಬ

  |

  ರಂಗಕರ್ಮಿಯಾಗಿ ಸೇವೆ ಸಲ್ಲಿಸುತ್ತಾ ಚಿತ್ರರಂಗದಲ್ಲಿಯೂ ಹೆಸರು ಮಾಡಿರುವ ಅರುಣ್ ಸಾಗರ್ ತನ್ನ ಕುಟುಂಬದೊಂದಿಗೆ ಕುಣಿದು ಕುಪ್ಪಳಿಸಿ ಎಲ್ಲರಿಗೂ ಮನರಂಜನೆ ನೀಡಲು 'ತುತ್ತಾ ಮುತ್ತಾ'ದಲ್ಲಿ ಈ ವಾರ ಅತಿಥಿಯಾಗಿ ಆಗಮಿಸಿದ್ದಾರೆ.

  ಆಟದಲ್ಲಿ ಭಾಗವಹಿಸುತ್ತಾ ಅರುಣ್ ಅವರ ತಾಯಿ ತನ್ನ ಮಗ ಮತ್ತು ಸೊಸೆಯ ಬಗ್ಗೆ ಹಾಡಿ ಹೊಗಳಿದರು. ಬಾಲ್ಯದಲ್ಲಿ ಕಷ್ಟಗಳನ್ನು ಅನುಭವಿಸಿದರೂ, ಎಲ್ಲವನ್ನು ಮೀರಿ ಅರುಣ್ ಒಬ್ಬ ದೊಡ್ಡ ಮನುಷ್ಯನಾಗಿದ್ದಾನೆ ಎಂದು ಹೆಮ್ಮೆ ಪಡುತ್ತಾ ಭಾವುಕರಾದರು.

  ರಾಧಾ ಮಿಸ್ ಲವ್ ಸ್ಟೋರಿ ಬಗ್ಗೆ ನಿಮಗೆಷ್ಟು ಗೊತ್ತು.?

  ಅರುಣ್ ರವರ ಪತ್ನಿಯಾದ ಮೀರಾ, ಒಂದು ಕಲಾ ಶಾಲೆಯನ್ನು ನಡೆಸುತ್ತಿದ್ದಾರೆ. ಆಟದ ಮಧ್ಯೆ ತಮ್ಮ ಹಾಗೂ ಅರುಣ್ ನಡುವೆ ಪ್ರೀತಿ ಮೂಡಿದ ಕ್ಷಣಗಳನ್ನು ಹಂಚಿಕೊಂಡರು. ಅಷ್ಟೇ ಅಲ್ಲದೇ ತಾನು ಅವರ ಪತ್ನಿಯಾಗಿ ಹೇಗೆ ಅರುಣ್ ರವರಿಗೆ ಸಹಕಾರ ನೀಡುತ್ತಾರೆ ಎಂದು ಹಂಚಿಕೊಂಡರು.

  ತಾಯಿಯ ಕರುಳನ್ನು ಕಣ್ಣಾರೆ ಕಂಡು ನಡುಗಿದ ಮೋಹನ್.!

  ತನ್ನ ಹಾಡುಗಾರಿಕೆ, ಕವನ ಮತ್ತು ನೃತ್ಯ ಪ್ರದರ್ಶನದೊಂದಿಗೆ ಪ್ರೇಕ್ಷಕರನ್ನು ಅರುಣ್ ಸಾಗರ್ ಮನರಂಜಿಸಲಿದ್ದಾರೆ. ಇವರಿಗೆ ಸಾಥ್ ನೀಡಲು ಇತ್ತೀಚೆಗಷ್ಟೇ ಚಲನಚಿತ್ರಗಳಲ್ಲಿ ಹಾಡಲು ಆರಂಭಿಸಿರುವ ಪುತ್ರಿ ಅದಿತಿಯವರು ಕೂಡ ಸೇರಿಕೊಂಡರು. ಒಂದು ಫುಲ್ ಮನರಂಜನೆ ಕೊಡುವ ಅರುಣ್ ಸಾಗರ್ ಸಂಚಿಕೆ ಇದೇ ಶನಿವಾರ ರಾತ್ರಿ 9ಕ್ಕೆ ಪ್ರಸಾರವಾಗಲಿದೆ. ವೀಕ್ಷಿಸಿ...

  English summary
  Kannada Actor Arun Sagar and family have taken part in Tutta Mutta game show.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X