ಮಕ್ಕಳಿಲ್ಲದ ನೋವು ತೋಡಿಕೊಂಡ ನಟ ಅಶೋಕ್ ಹೆಗ್ಡೆ

By ಪ್ರಿಯಾ ದೊರೆ

ಹಲವು ವರ್ಷಗಳಿಂದ ಸಿನಿಮಾ ಮತ್ತು ಕಿರುತೆರೆ ಲೋಕದಲ್ಲಿದ್ದರೂ ವಯಕ್ತಿಕ ವಿಚಾರದ ಬಗ್ಗೆ ಯಾವ ವಿಚಾರವನ್ನೂ ಹೇಳಿಕೊಳ್ಳದ ನಟ ಅಶೋಕ್ ಹೆಗಡೆ ಮೊದಲ ಬಾರಿಗೆ ಮಾತನಾಡಿದ್ದಾರೆ. ಈಗ ಅಶೋಕ್ ಹೆಗಡೆ ಅವರ ಮಾತುಗಳು ವೈರಲ್ ಆಗಿವೆ. ತಮ್ಮ ಬದುಕಿನಲ್ಲಿರುವ ನೋವಿನ ಸಂಗತಿಯನ್ನು ಹಂಚಿಕೊಂಡಿದ್ದು, ಅಶೋಕ್ ಹೆಗಡೆ ಅವರ ಮಾತುಗಳಿಗೆ ಅಭಿಮಾನಿಗಳು ಮಿಡಿದಿದ್ದಾರೆ. ಸಮಾಧಾನದ ಮಾತುಗಳನ್ನು ಕೂಡ ಆಡಿದ್ದಾರೆ.

ಅಶೋಕ್ ಹೆಗಡೆ ಅವರು ಮೂರು ದಶಕಗಳಿಗಿಂತಲೂ ಹೆಚ್ಚು ಕಾಲದಿಂದ ಬಣ್ಣದ ಲೋಕದಲ್ಲಿದ್ದಾರೆ. ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದು, ಅಶೋಕ್ ಅವರು ನಟಿಸಿರುವ ಸೀರಿಯಲ್ ಗಳು ಲಕ್ಕವಿಲ್ಲದಷ್ಟು.

ಇಷ್ಟು ವರ್ಷಗಳಲ್ಲಿ ಅಶೋಕ್ ಒಮ್ಮೆಯೂ ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ಮಾತನಾಡದವರು. ಅವರ ಮನದಲ್ಲಿರುವ ಅತೀ ದೊಡ್ಡ ನೋವಿನ ಬಗ್ಗೆ ಮೊದಲ ಸಲ ಹೇಳಿಕೊಂಡಿದ್ದಾರೆ.

Kannada Actor Ashok hegde opens up on his wife and children personal life

ನಮ್ಮ ಮಕ್ಕಳು ಸ್ವರ್ಗದಲ್ಲಿವೆ

ಅಶ್ವವೇಗ ನ್ಯೂಸ್ 24x7 ಯೂಟ್ಯೂಬ್ ಚಾನಲ್‌ನಲ್ಲಿ ನಟ ಅಶೋಕ್ ಹೆಗಡೆ ಅವರು ಮಾತನಾಡಿದ್ದಾರೆ. ಈ ಸಂದರ್ಶನದಲ್ಲಿ ತಮ್ಮ ಪತ್ನಿ ಹಾಗೂ ಮಕ್ಕಳ ಬಗ್ಗೆ ಮೊದಲ ಸಲ ಹೇಳಿಕೊಂಡಿದ್ದಾರೆ. ಅಶ್ಷು ಎಂಬುವರನ್ನು ಮದುವೆಯಾಗಿರುವ ಅಶೋಕ್ ಅವರಿಗೆ ಮಕ್ಕಳಿಲ್ಲ. ಎರಡು ಸಲ ತಮ್ಮ ಹೆಂಡತಿ ಗರ್ಭಿಣಿಯಾಗಿ ಮಕ್ಕಳನ್ನು ಕಳೆದುಕೊಳ್ಳಬೇಕಾಯಿತಂತೆ. ಪ್ರೆಗ್ನೆಟ್ ಆದಾಗ ಪತ್ನಿಗೆ ಶುಗರ್ ಬಂದಿತ್ತಂತೆ. ಈಗ ಮಕ್ಕಳಿಲ್ಲದೇ ನನಗೆ ನೀನು. ನಿನಗೆ ನಾನು ಎಂದು ಸುಮ್ಮನಿದ್ದು ಬಿಟ್ಟಿದ್ದೇವೆ. ನಮ್ಮ ಮಕ್ಕಳು ಹರಿಶ್ಚಂದ್ರ ಘಾಟ್‌ನಲ್ಲಿ ಮಲಗಿವೆ. ಸ್ವರ್ಗದಲ್ಲಿ ನಮ್ಮ ಮಕ್ಕಳಿದ್ದಾರೆ ಎಂದು ತಮ್ಮ ಸಂಕಟವನ್ನು ತೋಡಿಕೊಂಡಿದ್ದಾರೆ.

ಪತ್ನಿ ಬಗ್ಗೆ ಮಾತು

ಮದುವೆಯಾದಾಗ ಅಸಿಸ್ಟೆಂಟ್ ಡೈರೆಕ್ಟರ್ ಆಗಿದ್ದೆ. ಆಗ ಊಟ ಮಾಡಲೂ ಕೂಡ ಹಣವಿರಲಿಲ್ಲ. ಹೀಗಾಗಿ ಮೊದಲ ಮಗುವನ್ನು ಅಬಾರ್ಟ್ ಮಾಡಿಸಿದೆವು. ಆ ಪಾಪದ ಪ್ರತಿಫಲವನ್ನು ಈಗಲೂ ಅನುಭವಿಸುವಂತಾಗಿದೆ. ನಂತರ ಎರಡೂ ಮಕ್ಕಳು ಕೈ ಸೇರದ ಬಳಿಕ ನಮಗೆ ಮಕ್ಕಳೇ ಬೇಡ ಎಂದು ತೀರ್ಮಾನ ಮಾಡಿದೆವು ಎಂದಿದ್ದಾರೆ.

ನನಗೆ ಅವಳು.. ಅವಳಿಗೆ ನಾನು.

ನಾನು ಹೇಗೋ ನನ್ನ ಕೆಲಸದಲ್ಲಿ ಬ್ಯುಸಿಯಾಗಿ ಇದ್ದು ಬಿಡುತ್ತೇನೆ. ಆದರೆ, ನನ್ನ ಹೆಂಡತಿ ಮನೆಯಲ್ಲಿ ಕೊರಗುತ್ತಾಳೆ. ಯಾರಾದರೂ ಏನಾದರೂ ಅಂದರೆ ಅದು ಅವಳ ಮನಸ್ಸಿಗೆ ಘಾಸಿ ಮಾಡುತ್ತದೆ. ಎರಡು ಸಲ ಮಗುವನ್ನು ಕಳೆದುಕೊಂಡ ಭಯಕ್ಕೆ ಬಳಿಕ ನಮಗೆ ಮಕ್ಕಳು ಬೇಡ ಎಂದು ತೀರ್ಮಾನ ಮಾಡಿ ಬಿಟ್ಟೆವು. ನನ್ನ ಹೆಂಡತಿ ನನ್ನನ್ನು ಯಾವ ಸಂದರ್ಭದಲ್ಲೂ ಕೈ ಬಿಡಲಿಲ್ಲ. ಸದ್ಯ ನನಗೆ ಅವಳು. ಅವಳಿಗೆ ನಾನು ಅಷ್ಟೇ ಎಂದು ತಮ್ಮ ಮನದಾಳದ ಮಾತುಗಳನ್ನು ಆಡಿದ್ದಾರೆ.

ಸಿನಿಮಾ, ಕಿರುತೆರೆಯಲ್ಲಿ ಸಕ್ರಿಯ

ಅಶೋಕ್ ಅವರ ಪತ್ನಿ ಮೇಕಪ್ ಆರ್ಟಿಸ್ ಆಗಿದ್ದು, ಹೆಲ್ತ್ ಆಂಡ್ ಲೈಫ್ ಸ್ಟೈಲಿಸ್ಟ್ ಕೂಡ ಆಗಿದ್ದಾರೆ. ಅವರ ಮನದಲ್ಲಿ ಇಷ್ಟು ದೊಡ್ಡ ನೋವಿದೆ ಎಂಬುದು ಈಗಷ್ಟೇ ಅಭಿಮಾನಿಗಳಿಗೆ ಗೊತ್ತಾಗಿದೆ. ನಟ ಅಶೋಕ್ ಅವರು 'ಮಾಯಾಮೃಗ'ದಂತಹ ಧಾರಾವಾಹಿಯಿಂದಲೂ ಇಂದಿನವರೆಗೂ ಒಂದಾದ ಮೇಲೆ ಒಂದರಂತೆ ಸೀರಿಯಲ್‌ಗಳಲ್ಲಿ ನಟಿಸಿಕೊಂಡೇ ಬಂದಿದ್ದಾರೆ. 'ಕ್ಷಣ ಕ್ಷಣ', 'ಕುಂಕುಮ ಭಾಗ್ಯ', 'ಗುಪ್ತಗಾಮಿನಿ', 'ಕುಲವಧು', 'ಯಾರಿವಳು', 'ಮಂಗಳ ಗೌರಿ', 'ಸೇವಂತಿ' ಸೇರಿದಂತೆ ಈಗ 'ದೃಷ್ಟಿಬೊಟ್ಟು' ಧಾರಾವಾಹಿಯಲ್ಲಿ ದೃಷ್ಟಿ ತಂದೆ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನು ಟಾಕೀಸ್ ಆಪ್‌ನಲ್ಲಿ ಕೆಲ ಸೀರೀಸ್‌ಗಳಿಗೆ ಬಣ್ಣ ಹಚ್ಚಿದ್ದು, 'ರಂಗಪಂಚಮಿ' ಸಿನಿಮಾ ಹಾಗೂ ಇತ್ತೀಚೆಗೆ 'ಮತ್ಸ್ಯಗಂಧ', 'ಧರ್ಮಂ' ಚಿತ್ರಗಳಲ್ಲಿ ನಟಿಸಿದ್ದಾರೆ.

More from Filmibeat

English summary
Kannara Tv actor Ashok hegde talks on her wife and children;
Read more about: serial actor
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X