ಕೊರಳಲ್ಲಿ ರುದ್ರಾಕ್ಷಿ ಧರಿಸಿ ಧ್ಯಾನ ಮಾಡಿದ ಶೈನ್ ಶೆಟ್ಟಿ: ಏನಿದು ನ್ಯೂ ಲುಕ್..?

By Poorva

ಶೈನ್ ಶೆಟ್ಟಿ ನ್ಯೂ ಲುಕ್ ಇದೀಗ ರಿವೀಲ್ ಮಾಡಿದ್ದಾರೆ. ಟೆಲ್ ಉದ್ಯಮದಲ್ಲಿ ಬ್ಯುಸಿ ಆಗಿರುವ ಶೈನ್ ಶೆಟ್ಟಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಮೂರು ಹೋಟೆಲ್‌ನ 3 ಬ್ರ್ಯಾಂಚ್‌ಗಳನ್ನು ಶೈನ್ ಶೆಟ್ಟಿ ಆರಂಭಿಸಿದ್ದಾರೆ. ಬಿಗ್ ಬಾಸ್ ಸೀಸನ್ 7 ವಿನ್ನರ್ ಖ್ಯಾತಿಯ ಶೈನ್ ಶೆಟ್ಟಿ ಇದೀಗ ವಿಭಿನ್ನವಾದ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.

ಇವರನ್ನು ನೋಡಿದ ಅನೇಕ ಜನ ಫಿದಾ ಆಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಶೈನ್ ಶೆಟ್ಟಿ ಎಲ್ಲರ ಹೃದಯ ಕದ್ದಿದ್ದಾರೆ . ಹಾಗೆಯೇ ಅನೇಕ ಜನರು ಇವರು ಮಾತನಾಡುವ ಇರುವ ಸ್ಟೈಲ್ ನೋಡಿ ಇಷ್ಟಪಟ್ಟಿದ್ದಾರೆ. ಇದರ ಜೊತೆಗೆ ಸೂಪರ್ ಹಿಟ್ ಕಾಂತಾರ ಸಿನಿಮಾದಲ್ಲಿನ ನಟನೆ ನೋಡಿ ಜನರ ಪ್ರೋತ್ಸಾಹ ಮತ್ತಷ್ಟು ಸಿಗಲು ಪ್ರಾರಂಭವಾಗಿದೆ.

Kannada Actor, Bigg Bogg season 7 winner Shine Shetty New Look photoshoot

ಹಾಗೆಯೇ ಈ ಸಿನಿಮಾದಲ್ಲಿ ಶೈನ್ ಶೆಟ್ಟಿ ನಟನೆಗೆ ಪ್ರಶಸ್ತಿ ಕೂಡ ಬಂದಿದೆ. ಶೈನ್ ಶೆಟ್ಟಿ ಅವರ ಹೊಸ ಲುಕ್ ನೋಡಿ ಅಭಿಮಾನಿಗಳು ಫುಲ್ ಖುಷಿ ಆಗಿದ್ದಾರೆ . ಶೈನ್ ಶೆಟ್ಟಿ ಫೋಟೋಶೂಟ್ ನೋಡಿ ಜನ ಖುಷಿ ಆಗಿದ್ದಾರೆ ಹಾಗೆಯೇ ಹಲವರು ನೀವು ಯಾಕೆ ಶಿವಾಜಿ ಪಾತ್ರವನ್ನು ಮಾಡಬಾರದು ಎಂದು ಸಜೆಸ್ಟ್ ಮಾಡುತ್ತಾ ಇದ್ದಾರೆ.

ಶೈನ್ ಶೆಟ್ಟಿ ಲುಕ್‌ಗೆ ಹಲವರ ಕಾಮೆಂಟ್

ಇನ್ನೂ ಕೆಲವರು ಭಮ್ ಭಂ ಭೋಲೇನಾಥ್ ಎಂದು ಬರೆದು ಕಾಮೆಂಟ್ ಮಾಡಿದ್ದಾರೆ. ಶೈನ್ ಶೆಟ್ಟಿ ತಲೆಗೆ ಕೇಸರಿ ಬಣ್ಣದ ಬಟ್ಟೆಯನ್ನು ಕಟ್ಟಿಕೊಂಡು ಮೂಗಿಗೆ ಮೂಗುತಿ ಹಾಕಿ, ಕೊರಳಲ್ಲಿ ರುದ್ರಾಕ್ಷಿ ಮಾಲೆಯನ್ನು ಹಾಕಿಕೊಂಡು ಬಹಳ ಅದ್ಭುತವಾಗಿ ಕಾಣಿಸಿಕೊಡಿದ್ದಾರೆ. ಹಾಗೆಯೇ ಕಿವಿಗೆ ಒಲೆಯನ್ನು ಹಾಕಿಕೊಂಡು ಇದ್ದಾರೆ. ಇವರ ನೋಟಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಮೂಗಿಗೆ ನೋಸ್ ರಿಂಗ್ ಹಾಕಿ ಮಿಂಚಿದ ಶೈನ್

ಫೋಟೋಶೂಟ್‌ಗೆ ನೈನಾ ಕುಮಾರ್ ಸ್ಟೈಲಿಂಗ್ ಮಾಡಿದ್ದಾರೆ. ಕೀರ್ತಿ ಕೃಪಾ ಹಾಗೂ ಸುಧಾ ರಾಣಿ ಶೈನ್ ಶೆಟ್ಟಿಗೆ ಮೇಕ್‌ಅಪ್‌ ಮಾಡಿದ್ದಾರೆ. ಪೂಜಾ ಚೆನ್ನೂರ್ ಕಾಸ್ಟಿಂಗ್ ಡೈರೆಕ್ಷನ್‌ ಮಾಡಿದ್ದಾರೆ. ಒಟ್ಟಿನಲ್ಲಿ ಶೈನ್ ಶೆಟ್ಟಿ ಈ ಲುಕ್‌ಗೆ ಮಹಿಳಾ ಮಣಿಯರೆ ಕಾರಣ ಎಂದು ಹೇಳಿದರೆ ತಪ್ಪಾಗದು.

Kannada Actor, Bigg Bogg season 7 winner Shine Shetty New Look photoshoot

ಶೈನ್ ಶೆಟ್ಟಿ ಅವರು ಕಂಪನಿಯೊಂದಕ್ಕೆ ಈ ರೂಪದಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದ್ದು ಅನೇಕರು ಕಾಮೆಂಟ್ ಮೂಲಕ ತಮ್ಮ ಮನದಲ್ಲಿ ಇರುವ ಮೆಚ್ಚುಗೆಯನ್ನು ಸೂಚಿಸಿದ್ದಾರೆ.

More from Filmibeat

English summary
Bigg Bogg season 7 winner Shine Shetty New Look photoshoot.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X